Bank Holidays: ಈ ವಾರದಲ್ಲಿ 7 ದಿನಗಳ ಪೈಕಿ 5 ದಿನ ಬ್ಯಾಂಕ್​ ರಜಾ; ದೇಶದಾದ್ಯಂತ ಇರುವ ರಜಾ ವಿವರ ಹೀಗಿದೆ

ಈ ವಾರ ಏಳು ದಿನಗಳ ಪೈಕಿ 5 ದಿನಗಳ ಕಾಲ ಬ್ಯಾಂಕ್​ಗಳಿಗೆ ದೇಶದಾದ್ಯಂತ ರಜಾ ಇರುತ್ತದೆ. ಯಾವ ಭಾಗದಲ್ಲಿ ರಜಾ ಇರುತ್ತದೆ ಎಂಬ ಮಾಹಿತಿ ಇದ್ದು, ಅದಕ್ಕೆ ತಕ್ಕಂತೆ ವ್ಯವಹಾರದ ಯೋಜನೆ ಹಾಕಿಕೊಳ್ಳಬಹುದು.

Bank Holidays: ಈ ವಾರದಲ್ಲಿ 7 ದಿನಗಳ ಪೈಕಿ 5 ದಿನ ಬ್ಯಾಂಕ್​ ರಜಾ; ದೇಶದಾದ್ಯಂತ ಇರುವ ರಜಾ ವಿವರ ಹೀಗಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 19, 2021 | 11:35 AM

ಬ್ಯಾಂಕ್ ರಜಾ ದಿನಗಳು ಅಂದರರೆ ಕೆಲವು ಸಾರ್ವತ್ರಿಕ ಹಾಗೂ ಹಲವು ಆಯಾ ನಿರ್ದಿಷ್ಟ ರಾಜ್ಯಗಳಿಗೆ ಮಾತ್ರ ಅನ್ವಯ ಆಗುವಂಥವು. ಭಾನುವಾರ, ಎರಡು ಮತ್ತು ನಾಲ್ಕನೇ ಶನಿವಾರ, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ಇತರ ರಾಷ್ಟ್ರೀಯ ಆಚರಣೆಗಳ ರಜಾ ಇಡೀ ದೇಶದಲ್ಲಿನ ಎಲ್ಲ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್​ಗಳಿಗೆ ಅನ್ವಯ ಆಗುತ್ತದೆ. ಆದರೆ ಕನ್ನಡ ರಾಜ್ಯೋತ್ಸವ ಸೇರಿದಂತೆ ಇತರ ಆಚರಣೆಗಳಿಗೆ ಆಯಾ ರಾಜ್ಯದಲ್ಲಿನ ಬ್ಯಾಂಕ್​ಗಳಿಗೆ ಮಾತ್ರ ರಜಾ ಇರುತ್ತದೆ. ದೇಶದಾದ್ಯಂತ ಇರುವ ವಿವಿಧ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್​ಗಳಿಗೆ ಈ ವಾರದ ಏಳು ದಿನಗಳಳ ಪೈಕಿ 5 ದಿನ ರಜಾ ಇರುತ್ತದೆ ಎಂಬ ಸಂಗತಿ ನಿಮ್ಮ ಗಮನದಲ್ಲಿ ಇರಲಿ. ಈ ತಿಂಗಳಲ್ಲೇ ದುರ್ಗಾ ಪೂಜೆ, ನವರಾತ್ರಿ, ದಸರಾ ಹೀಗೆ ಬ್ಯಾಂಕ್​ಗಳಿಗೆ ಒಟ್ಟು 21 ದಿನ ರಜಾ ಸಿಗುತ್ತದೆ. ಬ್ಯಾಂಕ್​ ಶಾಖೆಗೆ ಹೋಗಿ ಯಾವುದಾದಾದರೂ ಕೆಲಸ ಮಾಡಿಕೊಳ್ಳಬೇಕು ಅಂತಾದಲ್ಲಿ ಈ ರಜಾ ದಿನಗಳ ಬಗ್ಗೆ ಗಮನ ಇರಲಿ.

ಆರ್‌ಬಿಐನ ರಜಾದಿನಗಳ ಪಟ್ಟಿ ರಾಜ್ಯವಾರು ಆಚರಣೆಗಳು, ಧಾರ್ಮಿಕ ರಜಾದಿನಗಳು ಮತ್ತು ಹಬ್ಬದ ಆಚರಣೆಗಳ ವರ್ಗಕ್ಕೆ ಬರುತ್ತದೆ. ಆದರೂ ಅಧಿಕೃತ ವರ್ಗೀಕರಣಗಳನ್ನು ಪರಿಗಣಿಸಬೇಕಾದರೆ, ರಜಾದಿನಗಳ ಪಟ್ಟಿಯನ್ನು ಸಾಮಾನ್ಯವಾಗಿ ‘ನೆಗೋಷಿಯಬಲ್ ಇನ್​ಸ್ಟ್ರುಮೆಂಟ್ಸ್ ಕಾಯ್ದೆ ಅಡಿಯಲ್ಲಿ ರಜಾದಿನಗಳು’, ‘ನೆಗೋಷಿಯಬಲ್ ಇನ್​ಸ್ಟ್ರುಮೆಂಟ್ಸ್ ಕಾಯ್ದೆ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟಲ್​ಮೆಂಟ್ ರಜಾದಿನಗಳು’ ಮತ್ತು ‘ಬ್ಯಾಂಕುಗಳ’ ಖಾತೆಗಳ ಕ್ಲೋಸಿಂಗ್ ಎಂಬ ಶೀರ್ಷಿಕೆಗಳ ಅಡಿಯಲ್ಲಿ ವಿಭಾಗದ ಅಡಿಯಲ್ಲಿ ಮಾಡಲಾಗುತ್ತದೆ.

ಅಕ್ಟೋಬರ್​ 11, 2021ರಿಂದ ರಜಾ ದಿನಗಳ ಪಟ್ಟಿ ಹೀಗಿದೆ: 1) ಅಕ್ಟೋಬರ್ 19: ಈದ್-ಇ-ಮಿಲಾದ್/ಈದ್-ಇ-ಮಿಲಾದ್​ಉನ್ನಾಬಿ/ಮಿಲದ್-ಇ-ಶೆರಿಫ್ (ಪ್ರವಾದಿ ಮೊಹಮ್ಮದ್​ರ ಜನ್ಮದಿನ)/ಬರವ್​ಫತ್/ (ಅಹ್ಮದಾಬಾದ್​, ಬೆಲಾಪುರ್, ಭೋಪಾಲ್, ಚೆನ್ನೈ, ಡೆಹ್ರಾಡೂನ್, ಹೈದರಾಬಾದ್, ಇಂಫಾಲ್, ಜಮ್ಮು, ಕಾನ್ಪುರ್, ಕೊಚ್ಚಿ, ಲಖನೌ, ಮುಂಬೈ, ನಾಗ್ಪುರ್, ನವದೆಹಲಿ, ರಾಯ್​ಪುರ್, ಶ್ರೀನಗರ್​, ತಿರುವನಂತಪುರಂ)

2) ಅಕ್ಟೋಬರ್ 20: ಮಹರ್ಷಿ ವಾಲ್ಮೀಕಿ ಜಯಂತಿ/ಲಕ್ಷ್ಮೀಪೂಜೆ/ಈದ್​-ಇ-ಮಿಲಾದ್ (ಅಗರ್ತಲಾ, ಬೆಂಗಳೂರು, ಚಂಡೀಗಢ, ಕೋಲ್ಕತ್ತಾ, ಶಿಮ್ಲಾ)

3) ಅಕ್ಟೋಬರ್ 22: ಈದ್-ಇ-ಮಿಲಾದ್​-ಉಲ್-ನಬಿ ನಂತರದ ಶುಕ್ರವಾರ (ಜಮ್ಮು, ಶ್ರೀನಗರ್)

4) ಅಕ್ಟೋಬರ್ 23: ನಾಲ್ಕನೇ ಶನಿವಾರ

5) ಅಕ್ಟೋಬರ್ 24: ಭಾನುವಾರ

6) ಅಕ್ಟೋಬರ್ 26: ಆಕ್ಸೆಷನ್ ದಿನ (ಜಮ್ಮು, ಶ್ರೀನಗರ್)

7) ಅಕ್ಟೋಬರ್ 31: ಭಾನುವಾರ

ಆದ್ದರಿಂದ ಬ್ಯಾಂಕ್​ಗೆ ಸಂಬಂಧಿಸಿದ ಯಾವುದೇ ಕೆಲಸಗಳು ಬಾಕಿ ಇದ್ದರೆ ಅಥವಾ ಹಬ್ಬದ ಸೀಸನ್ ಪ್ರಯುಕ್ತ ಹಣದ ವಿಥ್​ಡ್ರಾ ಮಾಡಬೇಕು ಅಂದರೆ ಶೀಘ್ರದಲ್ಲೇ ಹತ್ತಿರದ ಬ್ಯಾಂಕ್​ ಶಾಖೆಗೆ ತೆರಳಬೇಕು. ಆದರೆ ಎಟಿಎಂ ಸೇವೆಗಳಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ. ಉಳಿದಂತೆ NEFT, RTGS ಸೇರಿದಂತೆ ಇತರ ಸೇವೆಗಳನ್ನು ಪಡೆಯುವುದಕ್ಕೆ ಸಮಸ್ಯೆಗಳಾಗುವುದಿಲ್ಲ.

ಇದನ್ನೂ ಓದಿ: Bank Holidays in October 2021: ಅಕ್ಟೋಬರ್​ನಲ್ಲಿ ವಿವಿಧ ರಾಜ್ಯಗಳೆಲ್ಲ ಸೇರಿ 21 ಬ್ಯಾಂಕ್ ರಜಾ ದಿನಗಳು

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್