AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Richest Person: ಈ ಯೂಟ್ಯೂಬರ್ ವಿಶ್ವದ ಅತಿ ಶ್ರೀಮಂತ ಆಗಿ ಕಾಣಿಸಿಕೊಂಡಿದ್ದು ಆ 7 ನಿಮಿಷಗಳು ಮಾತ್ರ

ಈ ಯೂಟ್ಯೂಬರ್ ತನ್ನನ್ನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಹೇಳಿಕೊಂಡಿದ್ದು, ಆದರೆ ಅದು 7 ನಿಮಿಷಗಳ ಅವಧಿಗೆ ಮಾತ್ರ. ಆ ಇಂಟರೆಸ್ಟಿಂಗ್ ಸ್ಟೋರಿ ಇಲ್ಲಿದೆ.

World Richest Person: ಈ ಯೂಟ್ಯೂಬರ್ ವಿಶ್ವದ ಅತಿ ಶ್ರೀಮಂತ ಆಗಿ ಕಾಣಿಸಿಕೊಂಡಿದ್ದು ಆ 7 ನಿಮಿಷಗಳು ಮಾತ್ರ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Feb 19, 2022 | 10:29 PM

Share

ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್‌ಗಿಂತ (Elon Musk) ಸುಮಾರು ಎರಡು ಪಟ್ಟು ನಿವ್ವಳ ಮೌಲ್ಯದೊಂದಿಗೆ ತಾನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾಗಿ ಯೂಟ್ಯೂಬರ್​ವೊಬ್ಬರು ಹೇಳಿಕೊಂಡಿದ್ದು, ಆದರೆ ಇದು ಕಾಗದದ ಮೇಲೆ ಕೇವಲ 7 ನಿಮಿಷಗಳ ಕಾಲ ಮಾತ್ರ ಇತ್ತು. ಆರು ಲಕ್ಷಕ್ಕೂ ಹೆಚ್ಚು ಫಾಲೋವರ್​ಗಳನ್ನು ಹೊಂದಿರುವ ಯೂಟ್ಯೂಬರ್ ಮ್ಯಾಕ್ಸ್ ಫೋಶ್ ಅವರು ಅದನ್ನು ಹೇಗೆ ಮಾಡಿದರು ಎಂಬುದನ್ನು ವಿವರಿಸುವ ಸಂಪೂರ್ಣ ವಿಡಿಯೋವನ್ನು ಮಾಡಿದ್ದು, ಅದನ್ನು ತಮ್ಮ ಚಾನೆಲ್‌ನಲ್ಲಿ ಡಿಸ್ಕ್ರಿಪ್ಟರ್‌ನೊಂದಿಗೆ ಹಂಚಿಕೊಂಡಿದ್ದಾರೆ: ನನ್ನ ಬಳಿ ಬನ್ನಿ ಎಲಾನ್ (ಕಮ್ ಅಟ್ ಮಿ ಎಲೋನ್) ಎಂಬ ಒಕ್ಕಣೆ ಇದೆ. ಮಾರುಕಟ್ಟೆ ಬಂಡವಾಳ ಮೌಲ್ಯದ ಲೋಪದೋಷವನ್ನು ದುರ್ಬಳಕೆ ಮಾಡಿಕೊಂಡಿರುವ ಫೋಶ್, ಯುನೈಟೆಡ್ ಕಿಂಗ್​ಡಮ್​ನಲ್ಲಿನ ಅಧಿಕಾರಿಗಳಿಂದ ವಂಚನೆ ಆರೋಪವನ್ನು ಎದುರಿಸುತ್ತಿರುವ ಕಾರಣ ತಕ್ಷಣವೇ ತಮ್ಮ ಕಂಪೆನಿಯನ್ನು ವಿಸರ್ಜಿಸಬೇಕೆಂದು ಗೊತ್ತಾಗಿದೆ. ಕಂಪೆನಿಯನ್ನು ಅವರು ಹೇಗೆ ಸ್ಥಾಪಿಸಿದರು ಎಂಬುದರ ಕುರಿತು ಮಾತನಾಡುವುದನ್ನು ವಿಡಿಯೋ ತೋರಿಸುತ್ತದೆ.

“ಯುನೈಟೆಡ್​ ಕಿಂಗ್​ಡಮ್​ನಲ್ಲಿ ಕಂಪೆನಿಯನ್ನು ಸ್ಥಾಪಿಸುವುದು ತುಂಬ ಸುಲಭ. ಕಂಪೆನಿ ಹೌಸ್ ಎಂದು ಕರೆಯಲಾಗುವ ಕಡೆ ನೀವು ಮೂಲಭೂತವಾಗಿ ಫಾರ್ಮ್ ಅನ್ನು ಭರ್ತಿ ಮಾಡಿ,” ಎಂದು ಫೋಶ್ ವಿಡಿಯೋದಲ್ಲಿ ಹೇಳಿದ್ದಾರೆ. ಎಂಟೂವರೆ ನಿಮಿಷದ ವಿಡಿಯೋದಲ್ಲಿ, ಅವರು ಆರಂಭದ ಬಿಂದುವಿನಿಂದಲೂ ಕಂಪೆನಿಯನ್ನು ಕಟ್ಟಿದ್ದಾರೆ – ಅನ್​ಲಿಮಿಟೆಡ್ ಮನಿ ಲಿಮಿಟೆಡ್. ಮ್ಯಾಕರೋನಿ, ನೂಡಲ್ಸ್, ಕೂಸ್ ಕೂಸ್ ಮತ್ತು ಅಂತಹುದೇ ಫ್ಯಾರಿನೇಷಿಯಸ್ (ಸ್ಟ್ರಾಚ್​ ಹೆಚ್ಚಿನ ಪ್ರಮಾಣದಲ್ಲಿ ಇರುವಂಥದ್ದು) ಉತ್ಪನ್ನಗಳನ್ನು ತಯಾರಿಸುವ ಕಂಪೆನಿ ಇವುಗಳಲ್ಲಿ ಯಾವುದು ಎಂದು ಅವರು ನಿರ್ಧರಿಸಬೇಕಾಗಿತ್ತು. ಫ್ಯಾರಿನೇಶಿಯಸ್ ಎಂದರೆ ಏನು ಎಂದು ತನಗೆ ತಿಳಿದಿಲ್ಲ, ಆದರೆ ಕಂಪೆನಿಯು ಅದನ್ನೇ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. “ಕಂಪೆನಿಯು ಏನು ಮಾಡುತ್ತಿದೆ?” ಎಂಬ ಶೀರ್ಷಿಕೆಯ ಅಡಿಯಲ್ಲಿ “ಹಣ ಸಂಪಾದಿಸುವುದು” ಎಂದು ಪಟ್ಟಿ ಮಾಡುವುದರಿಂದ ನೋಂದಣಿ ಪ್ರಕ್ರಿಯೆಯಲ್ಲಿ ಫೋಶ್ ಸಾಕಷ್ಟು ಮುಂದಿದ್ದಾರೆ.

ಷೇರುಗಳ ವಿಷಯಕ್ಕೆ ಬಂದಾಗ, ಯೂಟ್ಯೂಬರ್ 10 ಬಿಲಿಯನ್‌ಗೆ ನಿರ್ಧರಿಸಿದ್ದಾರೆ. ಅವರು ಮಾತನಾಡಿ, “ನಾನು 10 ಬಿಲಿಯನ್ ಷೇರುಗಳನ್ನು ಹೊಂದಿರುವ ಕಂಪೆನಿಯನ್ನು ರಚಿಸಿದರೆ ಮತ್ತು ನೋಂದಾಯಿಸಿದರೆ, ಮತ್ತು ಆ ಷೇರುಗಳಲ್ಲಿ ಒಂದನ್ನು 50 ಪೌಂಡ್‌ಗಳಿಗೆ ಮಾರಾಟ ಮಾಡಿದರೆ, ಅದು ನನ್ನ ಕಂಪೆನಿಯನ್ನು ಕಾನೂನುಬದ್ಧವಾಗಿ 500 ಬಿಲಿಯನ್ ಪೌಂಡ್‌ಗಳಿಗೆ ಮೌಲ್ಯಮಾಪನ ಮಾಡುತ್ತದೆ. ಹೀಗಾಗಿ ನನ್ನನ್ನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಮಾಡಿದ್ದು, ನನ್ನ ಹತ್ತಿರದ ಪ್ರತಿಸ್ಪರ್ಧಿ ಎಲಾನ್ ಮಸ್ಕ್​ರನ್ನು ಸಂಪೂರ್ಣವಾಗಿ ಇಲ್ಲದಂತಾಗಿಸುತ್ತೇನೆ,” ಎಂದು ಹೇಳಿದ್ದಾರೆ.

ಈಗ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯ ಒಂದು ಭಾಗವನ್ನು ನೋಡುವ ಸಮಯ. ಫೋಶ್ ತುಂಬ ಚೆಂದವಾಗಿ ಕಾಣುವ ತನ್ನ ಸೂಟ್, ಟೈ, ಗ್ಲಾಸ್‌ಗಳಲ್ಲಿ ಟೇಬಲ್, ಕುರ್ಚಿ ಮತ್ತು ಟೇಬಲ್ ಅನ್ನು ಮುಚ್ಚಲು ಕವರ್​ನೊಂದಿಗೆ ಹಣಕಾಸು ಜಿಲ್ಲೆಗೆ ತೆರಳುತ್ತಿದ್ದಾರೆ. ನಂತರ ಅವರ ಪ್ರಯತ್ನ ಪ್ರಾರಂಭವಾಗುತ್ತದೆ. ಇತರರನ್ನು ನಿಲ್ಲಿಸಲು ಪ್ರಯತ್ನಿಸುತ್ತಾರೆ – “ಹೂಡಿಕೆ ಅವಕಾಶ”ದ ಮೂಲಕ ಅವರನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ಆದರೆ ಅವರ ಪ್ರಯತ್ನಗಳಲ್ಲಿಯೂ ಸಹ ನಿರೀಕ್ಷಿತ ಹೂಡಿಕೆದಾರರನ್ನು ಎಚ್ಚರಿಸುವುದರಿಂದ ಅವರು ನೈತಿಕವಾಗಿರುತ್ತಾರೆ: “ಇದು ಆರ್ಥಿಕವಾಗಿ ಅತ್ಯಂತ ಸುರಕ್ಷಿತ ಹೂಡಿಕೆಯಲ್ಲ.”

ಅನೇಕ “ಇಲ್ಲ”ಗಳ ನಂತರ, ಅವರು ಅದೃಷ್ಟವನ್ನು ಕಂಡುಕೊಂಡಿದ್ದಾರೆ. ಮಹಿಳೆಯೊಬ್ಬರು ಅಂತಿಮವಾಗಿ 50 ಪೌಂಡ್‌ಗಳಿಗೆ ಷೇರು ಖರೀದಿಸಲು ಒಪ್ಪಿಕೊಂಡಿದ್ದಾರೆ. ಫೋಶ್ ಆಕೆಯನ್ನು ಕೇಳಿದ್ದು, “ನೀವು ಈ ಕಂಪೆನಿಯಲ್ಲಿ ಏಕೆ ಹೂಡಿಕೆ ಮಾಡಲು ಬಯಸುತ್ತೀರಿ?” ಅವರು ಉತ್ತರಿಸಿದ್ದು, “ಒಂದು ಬಗೆಯಲ್ಲಿ, ಅದು ಹೀಗಿರಬೇಕು ಎಂದು ನನಗೆ ಅನಿಸುತ್ತದೆ. ಮತ್ತು ನಾನು ಅಂತಿಮವಾಗಿ ಅದರಿಂದ ಏನನ್ನಾದರೂ ಪಡೆಯುತ್ತೇನೆ,” ಎಂದಿದ್ದಾರೆ. ದಾಖಲೆಗಳೊಂದಿಗೆ ಮೌಲ್ಯಮಾಪನಕ್ಕಾಗಿ ಸಲಹೆಗಾರರ ​​ಬಳಿಗೆ ಹೋಗಲು ಇದು ಸಮಯವಾಗಿದೆ. ಮರುದಿನ ಅವರು “ಭವಿಷ್ಯವನ್ನು ನಿರ್ಧರಿಸಲು” ದಾಖಲೆಗಳನ್ನು ರವಾನಿಸಿದ್ದಾರೆ.

ಎರಡು ವಾರಗಳ ನಂತರ, ಅವರು ಮೌಲ್ಯಮಾಪನ ಸಲಹೆಗಾರರಿಂದ ಮತ್ತೆ ಕೇಳುತ್ತಾರೆ. “ನಮಗೆ ಒದಗಿಸಿದ ಮಾಹಿತಿಯ ಶ್ರೇಣಿಯನ್ನು ನೀಡಿದರೆ ಅನ್​ಲಿಮಿಟೆಡ್ ಮನಿ ಲಿಮಿಟೆಡ್​ನ ಮಾರುಕಟ್ಟೆ ಬಂಡವಾಳ ಮೌಲ್ಯವನ್ನು 500 ಶತಕೋಟಿ ಪೌಂಡ್‌ ಎಂಬುದಾಗಿ ನಿರ್ಣಯಿಸಲಾಗಿದೆ,” ಎಂದು ಅವರು ಸಲಹೆಗಾರರ ​​​​ಪತ್ರವನ್ನು ಉತ್ಸಾಹದಿಂದ ಓದಿದ್ದಾರೆ. ಆದರೆ ಅವರ ಸಂಭ್ರಮವು ಅಲ್ಪಕಾಲಿಕವಾಗಿದೆ. “ಕಂದಾಯ ಚಟುವಟಿಕೆ ಕೊರತೆಯಿಂದಾಗಿ ನಿಮ್ಮ ಮೇಲೆ ಮೋಸದ ಚಟುವಟಿಕೆ ಆರೋಪ ಹೊರಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ಕಾರಣಕ್ಕಾಗಿಯೇ ಅನ್‌ಲಿಮಿಟೆಡ್ ಮನಿ ಲಿಮಿಟೆಡ್ ಅನ್ನು ತುರ್ತು ವಿಷಯವಾಗಿ ವಿಸರ್ಜಿಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ,” ಎಂದು ಪತ್ರದಲ್ಲಿ ಸೇರಿಸಲಾಗಿದೆ.

ಈಗ, ಮೌಲ್ಯಮಾಪನ ಸಲಹೆಗಾರರು ಸೂಚಿಸಿದಂತೆ ಕಂಪೆನಿಯನ್ನು ವಿಸರ್ಜಿಸಲು ತನಗಾಗಿ ಷೇರನ್ನು ಖರೀದಿಸಿದ ಒಬ್ಬ ಮಹಿಳೆಯನ್ನು ಹುಡುಕುವ ಕಠಿಣ ಕೆಲಸವನ್ನು ಅವರು ಎದುರಿಸುತ್ತಿದ್ದಾರೆ. ಅವರು ಕಾಗದದ ಮೇಲೆ ಆಕೆಯ ಇಮೇಲ್ ಅನ್ನು ಕಂಡುಕೊಂಡಿದ್ದು, ತಲುಪಿದ್ದಾರೆ. ಅಂತಿಮವಾಗಿ, ಆಕೆಯ ಅನುಮತಿಯೊಂದಿಗೆ ಸಭೆಯನ್ನು ವಿಸರ್ಜಿಸುತ್ತಾರೆ. ಈ ವಿಡಿಯೋಗೆ 61,000 ಕ್ಕಿಂತ ಹೆಚ್ಚು “ಲೈಕ್​ಗಳು” ಮತ್ತು ಶೂನ್ಯ “ಡಿಸ್​ಲೈಕ್” ಬಂದಿವೆ.

ಇದನ್ನೂ ಓದಿ: Gautam Adani: ಗೌತಮ್ ಅದಾನಿ ಆಸ್ತಿ 6,61,453.87 ಕೋಟಿ ರೂಪಾಯಿ; ಅಂಬಾನಿಯನ್ನೂ ಮೀರಿಸಿ ಏಷ್ಯಾದ ನಂಬರ್ 1 ಶ್ರೀಮಂತ

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!