Multibagger: ಈ ಷೇರಿನಲ್ಲಿ ಮಾಡಿದ 1 ಲಕ್ಷ ರೂಪಾಯಿ 19 ವರ್ಷಗಳಲ್ಲಿ ರೂ. 1.81 ಕೋಟಿ
ಈ ಷೇರಿನಲ್ಲಿ ಮಾಡಿದ ರೂ. 1 ಲಕ್ಷದ ಹೂಡಿಕೆಯು 19 ವರ್ಷದಲ್ಲಿ 1.81 ಕೋಟಿ ರೂಪಾಯಿ ಆಗಿದೆ. ಯಾವುದು ಆ ರಸಗೊಬ್ಬರದ ಷೇರು ಎಂಬ ವಿವರ ಇಲ್ಲಿದೆ.
ಷೇರುಗಳಲ್ಲಿ ಹೂಡಿಕೆ ಮಾಡುವುದು ಅಂದರೆ ವ್ಯವಹಾರದಲ್ಲಿ ಹೂಡಿಕೆ ಮಾಡಿದಂತೆ. ತಜ್ಞರಾದ ಚಾರ್ಲಿ ಮುಂಗರ್ ಪ್ರಕಾರ, ಒಬ್ಬರು ಎಷ್ಟು ಸಾಧ್ಯವೋ ಅಷ್ಟು ಸ್ಟಾಕ್ ಅನ್ನು ಖರೀದಿಸಬೇಕು ಮತ್ತು ಇಟ್ಟುಕೊಳ್ಳಬೇಕು. ವಾರೆನ್ ಬಫೆಟ್ (Warren Buffett) ಅವರ ವ್ಯಾಪಾರ ಪಾಲುದಾರರು ಈ ಸ್ಟಾಕ್ ಹೂಡಿಕೆ ಸಲಹೆಯಿಂದ, ಬಹುಶಃ ಹೂಡಿಕೆದಾರರಿಗೆ ಷೇರುಗಳು ಒಟ್ಟು ದೀರ್ಘಾವಧಿಯ ಹೂಡಿಕೆ ಮೇಲೆ ಹೆಚ್ಚಿನ ಲಾಭವನ್ನು ನೀಡುತ್ತವೆ ಎಂದು ಅರ್ಥ ಮಾಡಿಸಲು ಪ್ರಯತ್ನಿಸಿದರು. ಈ ದೀರ್ಘಾವಧಿಯ ಷೇರುಗಳು ಪೀರಿಯಾಡಿಕ್ ಲಾಭಾಂಶ ಪಾವತಿಯಂತಹ ಇತರ ಪ್ರಯೋಜನಗಳನ್ನು ಒಳಗೊಂಡಿದೆ. ಸ್ಟಾಕ್ ಮಾರುಕಟ್ಟೆ ತಜ್ಞರ ಪ್ರಕಾರ, ದೀರ್ಘಕಾಲೀನ ಷೇರುಗಳು ಹೂಡಿಕೆದಾರರಿಗೆ ಅಪಾಯದ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ದೀರ್ಘಾವಧಿಯ ಷೇರುಗಳಿಂದ ಷೇರುದಾರರಿಗೆ ಎಷ್ಟು ಪ್ರಯೋಜನ ಪಡೆಯಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ರಾಮಾ ಫಾಸ್ಫೇಟ್ಸ್ ಷೇರುಗಳನ್ನು ನೋಡಬೇಕು. ಈ ರಸಗೊಬ್ಬರ ತಯಾರಕ ಸ್ಟಾಕ್ 2021ರಲ್ಲಿ ಮಲ್ಟಿಬ್ಯಾಗರ್ ಸ್ಟಾಕ್‌ಗಳಲ್ಲಿ ಒಂದಾಗಿದೆ. ಏಕೆಂದರೆ ಇದು ಈ ಅವಧಿಯಲ್ಲಿ ತನ್ನ ಷೇರುದಾರರಿಗೆ ಸುಮಾರು ಶೇ 235ರಷ್ಟು ಲಾಭವನ್ನು ನೀಡಿದೆ. ಆದರೆ ಇದು ಮೊದಲ ವರ್ಷವಲ್ಲ, ಈ ಮಲ್ಟಿಬ್ಯಾಗರ್ ಸ್ಟಾಕ್ ತನ್ನ ಷೇರುದಾರರಿಗೆ ಭಾರಿ ಲಾಭವನ್ನು ನೀಡಿದೆ. ಇದು ಆಲ್ಫಾ ರಿಟರ್ನ್ ಅನ್ನು ಬಿಗ್ ಮಾರ್ಜಿನ್ ಮೂಲಕ ಕೀ ಬೆಂಚ್‌ಮಾರ್ಕ್ ರಿಟರ್ನ್ ಅನ್ನು ಉತ್ಪಾದಿಸುವ ಇತಿಹಾಸ ಹೊಂದಿದೆ. ಆದ್ದರಿಂದ ಹೂಡಿಕೆದಾರರು ಈ ಸ್ಟಾಕ್‌ನಲ್ಲಿ ದಶಕದ ಅಥವಾ ಒಂದು ದಶಕದ ಹಿಂದೆ ಹೂಡಿಕೆ ಮಾಡಿದ್ದರೆ ಅದರ ಹಣವು ಅನೇಕ ಪಟ್ಟು ಬೆಳೆದಿರುತ್ತದೆ.
ರಾಮಾ ಫಾಸ್ಫೇಟ್ಸ್ ಷೇರು ಬೆಲೆ ಇತಿಹಾಸ ಕಳೆದ ಒಂದು ತಿಂಗಳಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್ ಮಾರಾಟದ ಒತ್ತಡದಲ್ಲಿದೆ. ರಾಮಾ ಫಾಸ್ಫೇಟ್ಸ್ ಷೇರಿನ ಬೆಲೆ ರೂ. 400ರ ಸಮೀಪದಿಂದ ರೂ. 361 ಮಟ್ಟಕ್ಕೆ ಕುಸಿದಿದ್ದು, ಈ ಅವಧಿಯಲ್ಲಿ ಸುಮಾರು ಶೇ 10ರಷ್ಟು ಕುಸಿದಿದೆ. ಈ ಸ್ಟಾಕ್ ಕಳೆದ 6 ತಿಂಗಳಿಂದ ಅದರ ಷೇರುದಾರರಿಗೆ ಕೇವಲ 8ರಷ್ಟು ಲಾಭವನ್ನು ನೀಡುತ್ತದೆ. ಆದರೆ ಕಳೆದ ಒಂದು ವರ್ಷದಲ್ಲಿ, ಈ ಮಲ್ಟಿಬ್ಯಾಗರ್ ಸ್ಟಾಕ್ ರೂ. 108 ರಿಂದ ರೂ. 361ಕ್ಕೆ ಏರಿದ ನಂತರ ಶೇ 235ರಷ್ಟು ಆಲ್ಫಾ ಆದಾಯವನ್ನು ಗಳಿಸಿದೆ. ಅಂತೆಯೇ, ಕಳೆದ 5 ವರ್ಷಗಳಲ್ಲಿ, ರಾಮಾ ಫಾಸ್ಫೇಟ್ಸ್ ಷೇರಿನ ಬೆಲೆಯು ರೂ. 75.95 ರಿಂದ ರೂ. 362ಕ್ಕೆ ಏರಿದ್ದು, ಈ ಅವಧಿಯಲ್ಲಿ ಶೇ 380ರಷ್ಟು ಏರಿಕೆಯಾಗಿದೆ. ಕಳೆದ 10 ವರ್ಷಗಳಲ್ಲಿ ಈ ಷೇರಿನ ಬೆಲೆಯು ಸುಮಾರು ರೂ. 51 ರಿಂದ ರೂ 362ಕ್ಕೆ ಏರಿದ್ದು, ಈ ಅವಧಿಯಲ್ಲಿ ಶೇ 610ರಷ್ಟು ಏರಿಕೆಯಾಗಿದೆ. ಕಳೆದ 19 ವರ್ಷಗಳಲ್ಲಿ ಈ ಸ್ಟಾಕ್ ರೂ. 2ರಿಂದ (13 ಮಾರ್ಚ್ 2003 ರಂದು ಬಿಎಸ್ಇ ಬೆಲೆ) ಇಂದು ರೂ. 362 ಮಟ್ಟಕ್ಕೆ ಏರಿದ್ದು, ಈ ಅವಧಿಯಲ್ಲಿ ಶೇ 18,000ರಷ್ಟು ಹೆಚ್ಚಳವಾಗಿದೆ.
ರೂ.1 ಲಕ್ಷದಿಂದ ರೂ. 1.81 ಕೋಟಿಗೆ ರಾಮಾ ಫಾಸ್ಫೇಟ್ಸ್ ಷೇರು ಬೆಲೆ ಇತಿಹಾಸ ನೋಡುವುದಾದರೆ ಒಂದು ವರ್ಷದ ಹಿಂದೆ ಹೂಡಿಕೆದಾರರು ರೂ. 1 ಲಕ್ಷ ಹೂಡಿಕೆ ಮಾಡಿದ್ದರೆ ಅದು ರೂ. 3.35 ಲಕ್ಷ ಆಗಿರುತ್ತಿತ್ತು. ಇನ್ನು 5 ವರ್ಷಗಳಲ್ಲಿ ರೂ. 4.80 ಲಕ್ಷ ಆಗುತ್ತಿತ್ತು. ಹೂಡಿಕೆದಾರರು 10 ವರ್ಷಗಳ ಹಿಂದೆ ಈ ಷೇರುಗಳಲ್ಲಿ ಹೂಡಿಕೆ ಮಾಡಿದ್ದರೆ ಆ 1 ಲಕ್ಷ 7.10 ಲಕ್ಷಕ್ಕೆ ಬದಲಾಗುತ್ತಿತ್ತು. ಅದೇ ರೀತಿ, ಹೂಡಿಕೆದಾರರು 19 ವರ್ಷಗಳ ಹಿಂದೆ ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್‌ನಲ್ಲಿ ಹೂಡಿಕೆ ಮಾಡಿದ್ದರೆ ಆ 1 ಲಕ್ಷ ರೂಪಾಯಿ ಇಂದು ರೂ. 1.81 ಕೋಟಿಗೆ ಬದಲಾಗುತ್ತಿತ್ತು.
ಇದನ್ನೂ ಓದಿ: Multibagger: ಈ ಬ್ಯಾಂಕಿಂಗ್ ಸ್ಟಾಕ್ ಮೇಲೆ 23 ವರ್ಷದ ಹಿಂದೆ ಮಾಡಿದ 1 ಲಕ್ಷ ರೂ. ಹೂಡಿಕೆ ಈಗ 2.68 ಕೋಟಿ ರೂ.