ಬದಲಾಗಿದೆಯಾ ಭಾರತ? ಐಐಟಿ ಪದವೀಧರರು ವಿದೇಶಕ್ಕೆ ಗುಳೆ ಹೋಗುವ ಪರ್ವ ಮುಗಿಯಿತಾ?

India @ 77th Independence Day: ದಶಕಗಳ ಹಿಂದೆ ಭಾರತದಿಂದ ಆದ ಬ್ರೈನ್ ಡ್ರೈನ್ ಬಹಳ ಮುಖ್ಯವಾಗಿ ಐಐಟಿ ಎಂಜಿನಿಯರುಗಳದ್ದಾಗಿತ್ತು. ಅವರ ಸಾಮರ್ಥ್ಯಕ್ಕೆ ತಕ್ಕಂತಹ ಉದ್ಯೋಗಾವಕಾಶ ಭಾರತದಲ್ಲಿ ಇಲ್ಲದ್ದರಿಂದ ಅಮೆರಿಕಕ್ಕೆ ವಲಸೆ ಹೋಗುತ್ತಿದ್ದರು. ಈಗ ಭಾರತ ಬದಲಾಗಿದೆ. ಐಐಟಿ ಪದವೀಧರರ ಡೆಸ್ಟಿನೇಶನ್ ಕೂಡ ಬದಲಾಗಿದೆ.

ಬದಲಾಗಿದೆಯಾ ಭಾರತ? ಐಐಟಿ ಪದವೀಧರರು ವಿದೇಶಕ್ಕೆ ಗುಳೆ ಹೋಗುವ ಪರ್ವ ಮುಗಿಯಿತಾ?
ಭಾರತದ ಆರ್ಥಿಕತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 13, 2023 | 6:21 PM

ಭಾರತ 77ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ. ಬ್ರಿಟಿಷರು ಬಿಟ್ಟುಹೋದ ಬಡತನ, ದುರ್ಗತಿಯಿಂದ ಭಾರತ ಫೀನಿಕ್ಸ್​ನಂತೆ ಮೇಲೇರಿ ನಿಂತಿದೆ. ಇತ್ತೀಚಿನ ಕೆಲ ದಶಕಗಳಲ್ಲಿ ಭಾರತದ ಆರ್ಥಿಕತೆ ಅಗಾಧವಾಗಿ ಬೆಳೆದಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತ ಜಾಗತಿಕ ದೈತ್ಯನಾಗಿ ಶಕ್ತಿ ಬೆಳೆಸಿಕೊಂಡಿದೆ. ಈ ಸಂದರ್ಭದಲ್ಲಿ ಹಲವು ಗಮನಾರ್ಹ ಸಂಗತಿಗಳು ನಮ್ಮ ಕಣ್ಮುಂದೆ ಬರುತ್ತವೆ. ಇದರಲ್ಲಿ ಒಂದು ನಮ್ಮ ಬ್ರೈನ್ ಡ್ರೈನ್ ಕಡಿಮೆ ಆಗಿರುವುದು. ವಿದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಕಡಿಮೆ ಆಗಿಲ್ಲವಾದರೂ ಉನ್ನತ ಶಿಕ್ಷಣದ ಮೇಲ್ಪದರ ಎಂದು ಪರಿಗಣಿಸಲಾದ ಐಐಟಿಯಂತಹ ಉತ್ಕೃಷ್ಟ ಶಿಕ್ಷಣ ಸಂಸ್ಥೆಗಳಿಂದ (IITs) ತೇರ್ಗಡೆಯಾಗಿ ಹೊರಬರುವ ಪ್ರತಿಭಾನ್ವಿತರು ವಿದೇಶಕ್ಕೆ ಹೋಗುವುದು ಬಹಳ ಕಡಿಮೆ ಆಗಿದೆಯಂತೆ. ಹಾಗಂತ ಸ್ವತಂತ್ರ ಬರಹಗಾರ ಸಂದೀಪ್ ದೇಬ್ ಹೇಳುತ್ತಾರೆ.

ಹಿಂದೆಲ್ಲಾ ಐಐಟಿಯಿಂದ ಪದವಿ ಪಡೆದ ಕೂಡಲೇ ಅಥವಾ ಕೆಲ ವರ್ಷಗಳಲ್ಲಿ ಅಮೆರಿಕಕ್ಕೆ ಹಾರಿ ಹೋಗುವುದು ವಾಡಿಕೆಯಾಗಿ ಹೋಗಿತ್ತು. ಅವರ ಪೈಕಿ ಶೇ. 95 ಮಂದಿ ವಾಪಸ್ ಬರುತ್ತಲೇ ಇರಲಿಲ್ಲ. ಇದೇ ಐಐಟಿ ಪದವೀಧರರ ವಲಸೆ ಕಾರಣದಿಂದ ಬ್ರೇನ್ ಡ್ರೈನ್ ಪದಪ್ರಯೋಗ ಜನಪ್ರಿಯವಾಗಿಬಿಟ್ಟಿತ್ತು. ಈಗ ಐಐಟಿಯನ್ನರಿಗೆ ಭಾರತ ವಿಭಿನ್ನವಾಗಿ ಕಾಣುತ್ತದೆ ಎಂದು ಸಂದೀಪ್ ದೇಬ್ ಅಭಿಪ್ರಾಯಪಟ್ಟಿದ್ದಾರೆ.

ಸೋಷಿಯಲಿಸ್ಟ್ ಸರ್ಕಾರ, ಭ್ರಷ್ಟಾಚಾರದಿಂದ ಬ್ರೈನ್ ಡ್ರೈನ್

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸೋಷಿಯಲಿಸ್ಟ್ ಶೈಲಿಯ ಆರ್ಥಿಕ ನೀತಿ ಹೆಚ್ಚು ಅಳವಡಿಕೆಯಾಗಿತ್ತು. ಅದರಲ್ಲೂ ಇಂದಿರಾ ಗಾಂಧಿ ಮೊದಲ ಬಾರಿಗೆ ಪ್ರಧಾನಿಯಾಗಿದ್ದಾಗ (1966ರಿಂದ) ಸೋಷಿಯಲಿಸ್ಟ್ ಸಿದ್ಧಾಂತದ ಆರ್ಥಿಕ ನೀತಿ ಹೆಚ್ಚು ತೀಕ್ಷ್ಣವಾಗಿತ್ತು. ಸಂದೀಪನ್ ದೇಬ್ ಪ್ರಕಾರ, ಆಗಲೇ ಐಐಟಿಯನ್ನರ ವಲಸೆಗೆ ನಾಂದಿ ಹಾಡಲಾಗಿದ್ದು. ಖಾಸಗಿ ವಲಯ ಸಂಸ್ಥೆಗಳು ಲಾಭ ಮಾಡಿದರೆ ದಂಡ ಹೇರಲಾಗುತ್ತಿತ್ತು. ಉತ್ತಮ ಲಾಭದ ಸರ್ಕಾರಿ ಉದ್ದಿಮೆಗಳ ಛೇರ್ಮನ್ ಸ್ಥಾನಕ್ಕೆ ರಾಜಕೀಯ ಲಾಬಿ ಬೇಕಾಗಿತ್ತು. ಭ್ರಷ್ಟಾಚಾರ ತಾಂಡವವಾಡುತ್ತಿತ್ತಂತೆ. ಸುಶಿಕ್ಷಿತರಲ್ಲಿ ನಿರುದ್ಯೋಗ ಬಹಳ ಹೆಚ್ಚಿತ್ತು ಎಂದು ದೇಬ್ ತಿಳಿಸುತ್ತಾರೆ.

ಇದನ್ನೂ ಓದಿ: Vijaypat Singhania: ಬೀದಿಗೆ ಬಿದ್ಧ ಶ್ರೀಮಂತ; 13 ಲಕ್ಷ ಕೋಟಿ ರೂ ಮೌಲ್ಯದ ರೇಮಂಡ್ಸ್ ಕಂಪನಿ ಮಾಜಿ ಛೇರ್ಮನ್​ನ ಕರುಣಾಜನಕ ಕಥೆ

ಆಗ ಭಾರತದಲ್ಲಿ ಕೆಲಸ ಗಿಟ್ಟಿಸುವುದಕ್ಕಿಂತ ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕೆ ಸ್ಕಾಲರ್​ಶಿಪ್ ಪಡೆಯುವುದು ಹೆಚ್ಚು ಸುಲಭವಾಗಿತ್ತು. ಅಮೆರಿಕಕ್ಕೆ ಹೋದವರು ಅಲ್ಲಿಯ ಖಾಸಗಿ ಬದುಕು ಮತ್ತು ವೃತ್ತಿಪರ ಬದುಕಿನ ಗುಣಮಟ್ಟದ ಕಾರಣಕ್ಕೆ ಮತ್ತೆಂದೂ ತವರಿನ ಕಡೆ ಮುಖ ಮಾಡುತ್ತಿರಲಿಲ್ಲ. ಅಮೆರಿಕಕ್ಕೆ ಹೋಗದೇ ಭಾರತದಲ್ಲೇ ಉಳಿದ ಐಐಟಿ ಎಂಜಿನಿಯರುಗಳ ಮುಂದೆ ಇದ್ದ ವೃತ್ತಿ ಆಯ್ಕೆ ಬಹಳ ಸೀಮಿತವಾಗಿತ್ತು. ಅವರ ಸಾಮರ್ಥ್ಯಕ್ಕೆ ತಕ್ಕುದಾದ ಕೆಲಸಗಳು ವಿರಳವಾಗಿದ್ದವು ಎಂದು ಸಂದೀಪನ್ ದೇಬ್ ವಿವರಿಸುತ್ತಾರೆ.

ಬದಲಾಗುತ್ತಿದೆ ಭಾರತ

ಭಾರತ ಈಗ ಸಾಕಷ್ಟು ಬದಲಾಗಿದೆ. ವಿವಿಧ ಉದ್ಯಮ ವಲಯಗಳು ಅಗಾಧವಾಗಿ ಬೆಳೆದಿವೆ. ಉದ್ಯೋಗಾವಕಾಶಗಳು ಗಣನೀಯವಾಗಿ ಹೆಚ್ಚಿವೆ. ಸಂಬಳವೂ ಬಹಳಷ್ಟು ಏರಿಕೆಯಾಗಿದೆ. ಭಾರತ ಈಗ ಜಾಗತಿಕ ವ್ಯವಹಾರ ವ್ಯವಸ್ಥೆಯ ಭಾಗವಾಗುತ್ತಿದೆ. ಭಾರತದ ಮಾರುಕಟ್ಟೆಯೂ ಬಹಳ ದೊಡ್ಡ ಮಟ್ಟದಲ್ಲಿದ್ದು ಯಾರೂ ಕೂಡ ಭಾರತವನ್ನು ನಿರ್ಲಕ್ಷಿಸಲು ಅಸಾಧ್ಯವಾಗಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಶೇ. 30ರ ಗಡಿದಾಟಿದ ಹಣದುಬ್ಬರ; ಅತಿಹೆಚ್ಚು ಇನ್​ಫ್ಲೇಷನ್ ಇರುವ ದೇಶಗಳ ಟಾಪ್10 ಪಟ್ಟಿ

ಉತ್ಕೃಷ್ಟ ಎಂಜಿನಿಯರುಗಳಿಗೆ ತಕ್ಕುದಾದ ಉದ್ಯೋಗಾವಕಾಶ ಭಾರತದಲ್ಲಿ ಇದೆ. ನವೋದ್ಯಮಗಳ ಬೆಳವಣಿಗೆಗೆ ಪೂರಕ ವಾತಾವರಣ ಇದೆ. ಸಂಬಳ ಇತ್ಯಾದಿಗಳು ಪಶ್ಚಿಮ ದೇಶಗಳಿಗೆ ಪೈಪೋಟಿ ನೀಡುವಂತೆ ಇವೆ. ಅಮೆರಿಕದಲ್ಲಿ ಎಂಜಿನಿಯರ್ ಪಡೆಯುವುದಷ್ಟೇ ಸಂಬಳವನ್ನು ಭಾರತದಲ್ಲೂ ಎಂಜಿನಿಯರ್ ಪಡೆಯಬಹುದು. ಅಮೆರಿಕಕ್ಕೆ ಹೋಲಿಸಿದರೆ ಕಡಿಮೆ ವೆಚ್ಚದಲ್ಲಿ ಹೆಚ್ಚಿ ಸೌಲಭ್ಯ ಪಡೆಯಬಹುದು. ಇದರಿಂದ, ಅಮೆರಿಕಕ್ಕೆ ವಲಸೆ ಹೋದ ಐಐಟಿ ಎಂಜಿನಿಯರುಗಳು ಭಾರತಕ್ಕೆ ವಾಪಸ್ ಬರಲು ಆಲೋಚಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸ್ವತಂತ್ರ ಬರಹಗಾರ ಸಂದೀಪ್ ದೇಬ್ ಈ ಅಭಿಪ್ರಾಯ ಅನುಮೋದಿಸುತ್ತಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ