AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Truecaller Office: ಬೆಂಗಳೂರಿಗೆ ಮತ್ತೊಂದು ದೊಡ್ಡ ಕಂಪನಿ; ಉದ್ಯಾನನಗರಿಯಲ್ಲಿ ಟ್ರ್ಯೂಕಾಲರ್​ನ ವಿಶಾಲ ಕಚೇರಿ ಉದ್ಘಾಟನೆ

Truecaller Bangalore Office: ಸ್ವೀಡನ್​ನಲ್ಲಿ ಮುಖ್ಯಕಚೇರಿ ಹೊಂದಿರುವ ಟ್ರ್ಯೂಕಾಲರ್ ಸಂಸ್ಥೆ ಬೆಂಗಳೂರಿನಲ್ಲಿ ವಿಶಾಲವಾದ ಕಚೇರಿ ತೆರೆದಿದೆ. ಭಾರತದಲ್ಲಿ ಇದು ಟ್ರ್ಯೂಕಾಲರ್​ನ ಮೊದಲ ಕಚೇರಿ. ಸ್ವೀಡನ್ ಅಚೆ ಅದರ ಅತಿದೊಡ್ಡ ಕಚೇರಿ ಇದು.

Truecaller Office: ಬೆಂಗಳೂರಿಗೆ ಮತ್ತೊಂದು ದೊಡ್ಡ ಕಂಪನಿ; ಉದ್ಯಾನನಗರಿಯಲ್ಲಿ ಟ್ರ್ಯೂಕಾಲರ್​ನ ವಿಶಾಲ ಕಚೇರಿ ಉದ್ಘಾಟನೆ
ಟ್ರ್ಯೂಕಾಲರ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 16, 2023 | 7:04 PM

Share

ಬೆಂಗಳೂರು: ಜನಪ್ರಿಯ ಮತ್ತು ಅತಿಹೆಚ್ಚು ಬಳಕೆಯಲ್ಲಿರುವ ಕಾಲರ್ ಐಡಿ ಪ್ಲಾಟ್​ಫಾರ್ಮ್ ಟ್ರ್ಯೂಕಾಲರ್ (Caller ID App Truecaller) ಸಂಸ್ಥೆ ಬೆಂಗಳೂರಿನಲ್ಲಿ ಕಚೇರಿ ತೆರೆದಿದೆ. ಸ್ವೀಡನ್​ನ ಕಚೇರಿ ಬಿಟ್ಟರೆ ಬೆಂಗಳೂರಿನದ್ದು ಟ್ರ್ಯೂಕಾಲರ್​ನ ಅತಿದೊಡ್ಡ ಆಫೀಸ್ ಸ್ಪೇಸ್ ಆಗಿದೆ. ಭಾರತದಲ್ಲಿ ಟ್ರ್ಯೂಕಾಲರ್ ಕಚೇರಿ ತೆರೆದಿರುವುದು ಇದೇ ಮೊದಲು. ಮಾರ್ಚ್ 16, ಗುರುವಾರ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ (Union Minister Rajeev Chandrashekhar) ಅವರು ವರ್ಚುವಲ್ ಆಗಿ ಟ್ರ್ಯೂಕಾಲರ್ ಕಚೇರಿಯ ಉದ್ಘಾಟನೆ ಮಾಡಿದ್ದಾರೆ. ಬೆಂಗಳೂರಿನ ಟ್ರ್ಯೂಕಾಲರ್ ಕಚೇರಿ ಸುಮಾರು 30,000 ಚದರ ಅಡಿಯಷ್ಟು ವಿಶಾಲವಾಗಿದೆ. ಲೀಸ್​ಗೆ ಪಡೆಯಲಾಗಿರುವ ಈ ಕಚೇರಿಯಲ್ಲಿ ಸುಮಾರು 250 ಮಂದಿ ಉದ್ಯೋಗಿಗಳು ಕೆಲಸ ಮಾಡಲು ಸ್ಥಳಾವಕಾಶ ಇದೆ.

ಇತ್ತೀಚೆಗೆ, ಆದಾಯ ಮತ್ತು ಸಬ್​ಸ್ಕ್ರಿಪ್ಚನ್ ಹೆಚ್ಚಿಸಿಕೊಳ್ಳುತ್ತಿರುವ ಟ್ರ್ಯೂಕಾಲರ್​ಗೆ ಭಾರತವೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಮುಂದಿನ ಮೂರು ವರ್ಷಗಳಲ್ಲಿ ಅದರ ಯೂಸರ್ ಬೇಸ್ ಎರಡು ಪಟ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. 24.8 ಕೋಟಿಯಷ್ಟಿರುವ ಅದರ ಬಳಕೆದಾರರ ಸಂಖ್ಯೆ 2026ರಷ್ಟರಲ್ಲಿ 50 ಕೋಟಿಗೆ ಹೆಚ್ಚಾಗಬಹುದು. ಈ ಹಿನ್ನೆಲೆಯಲ್ಲಿ ಟ್ರ್ಯೂಕಾಲರ್ ವಿಶಾಲ ಕಚೆರಿಯನ್ನು ಆರಂಭಿಸಿದೆ ಎನ್ನಲಾಗಿದೆ.

ಭಾರತದಲ್ಲಿರುವ ಸ್ಮಾರ್ಟ್​ಫೋನ್​ಗಳಲ್ಲಿ ಶೇ. 55ರಷ್ಟು ಫೋನ್​ಗಳಲ್ಲಿ ಟ್ರ್ಯೂಕಾಲರ್ ಸೇವೆ ಬಳಕೆಯಾಗುತ್ತಿದೆ. ಇದೇ ವೇಗದಲ್ಲಿ ಸಾಗಿದರೆ 2026ರಷ್ಟರಲ್ಲಿ 70ರಿಂದ 80 ಕೋಟಿ ಸ್ಮಾರ್ಟ್​ಫೋನ್​ಗಳಲ್ಲಿ ಟ್ರ್ಯೂಕಾಲರ್ ಬಳಕೆಯನ್ನು ಕಾಣಬಹುದು ಎಂದು ಟ್ರ್ಯೂಕಾಲರ್​ನ ಸಹಸಂಸ್ಥಾಪಕ ಮತ್ತು ಸಿಇಒ ಅಲನ್ ಮಮೇಡಿ ಹೇಳಿದ್ದಾರೆ.

ಇದನ್ನೂ ಓದಿInnovation: ಇನ್ನೋವೇಶನ್ ಇಂಡೆಕ್ಸ್​ನಲ್ಲಿ ಭಾರತ ಹೈಜಂಪ್; ಕ್ರಿಯಾಶೀಲತೆಯ ವಾತಾವರಣ ಇರುವ ಟಾಪ್ 10 ಕಂಪನಿಗಳಿವು

ಟ್ರ್ಯೂಕಾಲರ್​ಗೆ ಭಾರತ ಬಹಳ ದೊಡ್ಡ ಮಾರುಕಟ್ಟೆ. ಮುಂದಿನ ದಿನಗಳಲ್ಲಿ ಲಾಭದಾಯಕ ಮಾರುಕಟ್ಟೆಯೂ ಆಗಬಹುದು. ಜಾಗತಿಕವಾಗಿ ಟ್ರ್ಯೂಕಾಲರ್​ಗೆ ಮಾಸಿಕ ಸಕ್ರಿಯ ಬಳಕೆದಾರರ ಸಂಖ್ಯೆ 33.8 ಕೋಟಿ ಇದೆ. ಭಾರತವೊಂದರಲ್ಲೇ 24.8 ಕೋಟಿ ಮಂದಿ ಆ್ಯಕ್ಟಿವ್ ಯೂಸರ್ಸ್ ಇದ್ದಾರೆ.

ಟ್ರ್ಯೂಕಾಲರ್​ಗೆ ಹೇಗೆ ಆದಾಯ?

ನಮ್ಮ ಮೊಬೈಲ್​ಗೆ ಬರುವ ಕರೆಗಳು ಯಾರಿಂದ ಬರುತ್ತಿವೆ ಎಂಬುದನ್ನು ತೋರಿಸುವ ಟ್ರ್ಯೂಕಾಲರ್ ಭಾರತದಲ್ಲಿ ಬಹಳ ಜನಪ್ರಿಯವಾಗಿರುವ ಕಾಲರ್ ಐಡಿ ಆ್ಯಪ್ ಆಗಿದೆ. ಇದು ಹೇಗೆ ಆದಾಯ ಮಾಡುತ್ತದೆ ಎಂಬುದು ಮೊದಲಿಂದಲೂ ಎಲ್ಲರಿಗೂ ಇರುವ ಕುತೂಹಲ. ವಾಸ್ತವವಾಗಿ ಟ್ರ್ಯೂಕಾಲರ್​ಗೆ ಈಗ ಬರುತ್ತಿರುವ ಆದಾಯದಲ್ಲಿ ಹೆಚ್ಚಿನವು ಜಾಹೀರಾತುಗಳ ಮೂಲಕ ಬರುವಂಥವು. ಕರೆ ಬಂದಾಗ ಕಾಣುವ ಟ್ರ್ಯೂಕಾಲರ್ ಪಾಪ್ ಅಪ್​ನಲ್ಲಿ ಜಾಹೀರಾತುಗಳಿರುತ್ತವೆ. ಇವುಗಳು ಟ್ರ್ಯೂಕಾಲರ್​ಗೆ ಪ್ರಮುಖ ಆದಾಯ ಮೂಲವಾಗಿದೆ. ಆದರೆ, ಸಬ್​ಸ್ಕ್ರಿಪ್ಷನ್ ಸೇವೆಯಿಂದ ಟ್ರ್ಯೂಕಾಲರ್ ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದೆ. ಆದರೆ, ಸದ್ಯ ಇಂಥ ಸಬ್​ಸ್ಕ್ರಿಪ್ಚನ್​ಗಳಿಂದ ಕಂಪನಿಗೆ ಬರುತ್ತಿರುವುದು ಶೇ. 10ರಷ್ಟು ಆದಾಯ ಮಾತ್ರ. ಶೇ. 80ರಷ್ಟು ಆದಾಯ ಜಾಹೀರಾತುಗಳಿಂದಲೇ ಬರುತ್ತಿದೆ.

ಇದನ್ನೂ ಓದಿFoxconn: ತೆಲಂಗಾಣಕ್ಕೆ ಹೋಯ್ತು ಫಾಕ್ಸ್​ಕಾನ್; 200 ಎಕರೆ ಜಾಗದಲ್ಲಿ ಆ್ಯಪಲ್ ಏರ್​ಪಾಡ್ ತಯಾರಿಕೆ; ಕರ್ನಾಟಕಕ್ಕೆ ಕೈಕೊಟ್ಟಿತಾ ತೈವಾನೀ ಕಂಪನಿ?

ಟ್ರ್ಯೂಕಾಲರ್ ಅನ್ನು ಸಬ್​ಸ್ಕ್ರೈಬ್ ಆದರೆ ಹಲವು ವಿಶೇಷ ಸೌಲಭ್ಯಗಳು ಸಿಗುತ್ತವೆ. ಸ್ಪ್ಯಾಮ್ ಕಾಲ್​ಗಳನ್ನು ತಡೆಗಟ್ಟುವುದು ಇತ್ಯಾದಿ ಹಲವು ಸೇವೆಗಳು ಸಬ್​ಸ್ಕ್ರಿಪ್ಷನ್​ನಲ್ಲಿ ಲಭ್ಯ ಇವೆ. ಭಾರತದಲ್ಲಿ ಮುಂದಿನ ದಿನಗಳಲ್ಲಿ ಸಬ್​ಸ್ಕ್ರಿಪ್ಚನ್ ಸೇವೆ ಹೆಚ್ಚಬಹುದು ಎಂಬ ನಿರೀಕ್ಷೆಯಲ್ಲಿ ಟ್ರ್ಯೂಕಾಲರ್ ಇದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:04 pm, Thu, 16 March 23

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್