
ಇಂದಿನ ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ (Smartphones) ಎರಡು ಸಿಮ್‌ಗಳನ್ನು ಬಳಸುವ ಸೌಲಭ್ಯವಿದೆ. ಕೆಲವರು ಒಂದು ಸಿಮ್ ಅನ್ನು ಕರೆಗಳಿಗೆ, ಮತ್ತೊಂದನ್ನು ಮೊಬೈಲ್ ಡೇಟಾ ಅಥವಾ ಕೆಲಸಕ್ಕೆ ಸಂಬಂಧಿಸಿದ ಸಂಖ್ಯೆಗಾಗಿ ಬಳಸುತ್ತಾರೆ. ಆದರೆ ಒಂದೇ ಫೋನ್‌ನಲ್ಲಿ ಎರಡು ಸಿಮ್‌ಗಳನ್ನು ಬಳಸುವುದರಿಂದ ಬ್ಯಾಟರಿ ಬೇಗ ಖಾಲಿಯಾಗುತ್ತದೆಯೇ ಎಂಬ ಅನುಮಾನ ಹಲವರಲ್ಲಿದೆ. ಅದರಲ್ಲೂ ಎರಡೂ ಸಿಮ್‌ಗಳು 5G ನೆಟ್‌ವರ್ಕ್‌ಗೆ ಸಂಪರ್ಕಗೊಂಡಿದ್ದರೆ ಬ್ಯಾಟರಿ ಬಳಕೆ ಮತ್ತಷ್ಟು ಹೆಚ್ಚಾಗುತ್ತದೆಯೇ ಎಂಬ ಪ್ರಶ್ನೆಯೂ ಇದೆ.
ಎರಡು ಸಿಮ್‌ಗಳನ್ನು ಸಕ್ರಿಯವಾಗಿ ಬಳಸುವುದರಿಂದ ಬ್ಯಾಟರಿ ಬಳಕೆ ಸ್ವಲ್ಪ ಹೆಚ್ಚಾಗಬಹುದು. ಆದರೆ ಎರಡು ಸಿಮ್ ಹಾಕಿದ ತಕ್ಷಣವೇ ಫೋನ್‌ನ ಬ್ಯಾಟರಿ ತುಂಬಾ ವೇಗವಾಗಿ ಖಾಲಿಯಾಗುತ್ತದೆ ಎಂದಲ್ಲ. ಇದು ಸಿಮ್‌ಗಳು ಯಾವ ರೀತಿಯ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿವೆ ಮತ್ತು ಆ ಸಮಯದಲ್ಲಿ ಸಿಗ್ನಲ್ ಎಷ್ಟು ಪ್ರಬಲವಾಗಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
ಎರಡು ಸಿಮ್‌ಗಳು ಸಕ್ರಿಯವಾಗಿರುವಾಗ ಫೋನ್ ಎರಡೂ ನೆಟ್‌ವರ್ಕ್‌ಗಳ ಸಂಪರ್ಕವನ್ನು ನಿರ್ವಹಿಸಬೇಕಾಗುತ್ತದೆ. ನೆಟ್‌ವರ್ಕ್ ಲಭ್ಯತೆ, ಸಿಗ್ನಲ್ ಮತ್ತು ಸಂಪರ್ಕವನ್ನು ನಿರಂತರವಾಗಿ ನಿರ್ವಹಿಸುವ ಈ ಪ್ರಕ್ರಿಯೆಗೆ ಒಂದೇ ಸಿಮ್ ಬಳಸುವುದಕ್ಕಿಂತ ಸ್ವಲ್ಪ ಹೆಚ್ಚುವರಿ ವಿದ್ಯುತ್ ಬೇಕಾಗಬಹುದು.
5G ವೇಗದ ಇಂಟರ್‌ನೆಟ್ ನೀಡುತ್ತದೆ. ಆದರೆ ಕೆಲವು ಪ್ರದೇಶಗಳಲ್ಲಿ 5G ಸಿಗ್ನಲ್ ದುರ್ಬಲವಾಗಿದ್ದರೆ ಫೋನ್ ಸಂಪರ್ಕವನ್ನು ಉಳಿಸಿಕೊಳ್ಳಲು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಫೋನ್ ಪದೇಪದೆ 5G, 4G ಅಥವಾ ಇತರ ನೆಟ್‌ವರ್ಕ್‌ಗಳ ನಡುವೆ ಬದಲಾಗುತ್ತಿದ್ದರೆ ಬ್ಯಾಟರಿ ಬಳಕೆ ಮತ್ತಷ್ಟು ಹೆಚ್ಚಾಗಬಹುದು. ಎರಡು ಸಿಮ್‌ಗಳು ಸಕ್ರಿಯವಾಗಿದ್ದು, ಅವುಗಳಲ್ಲಿ ಒಂದು ಸಿಮ್‌ಗೆ ಸಿಗ್ನಲ್ ತುಂಬಾ ದುರ್ಬಲವಾಗಿದ್ದರೂ ಫೋನ್ ಉತ್ತಮ ನೆಟ್‌ವರ್ಕ್‌ಗಾಗಿ ಹುಡುಕಾಟ ನಡೆಸುತ್ತಿರಬಹುದು. ಈ ಸಂದರ್ಭದಲ್ಲಿ ಹೆಚ್ಚುವರಿ ಬ್ಯಾಟರಿ ಬಳಕೆ ಗಮನಕ್ಕೆ ಬರಬಹುದು.
ಮದುವೆಯಾದ ತಕ್ಷಣವೇ ನಿಮ್ಮ ಫೋನ್‌ನಿಂದ ಈ ವಿಷಯಗಳನ್ನು ಡಿಲೀಟ್ ಮಾಡಿ: ಸಣ್ಣ ನಿರ್ಲಕ್ಷ್ಯವೂ ಮುರಿಯಬಹುದು ದಾಂಪತ್ಯ ಜೀವನ
ಫೋನ್‌ನ ಬ್ಯಾಟರಿ ವೇಗವಾಗಿ ಖಾಲಿಯಾಗುವುದಕ್ಕೆ ಎರಡು ಸಿಮ್‌ಗಳಿರುವುದೇ ಪ್ರಮುಖ ಕಾರಣವಲ್ಲ. ದುರ್ಬಲ ನೆಟ್‌ವರ್ಕ್, ನಿರಂತರ ಮೊಬೈಲ್ ಡೇಟಾ ಬಳಕೆ, 5Gನಲ್ಲಿ ಹೆಚ್ಚು ಸಮಯ ವೀಡಿಯೊ ವೀಕ್ಷಣೆ ಅಥವಾ ಡೌನ್‌ಲೋಡ್ ಮಾಡುವುದು ಮತ್ತು ಪದೇಪದೆ ನೆಟ್‌ವರ್ಕ್ ಬದಲಾಗುವುದು ಬ್ಯಾಟರಿಯ ಮೇಲೆ ಹೆಚ್ಚು ಪರಿಣಾಮ ಬೀರಬಹುದು.
ನೀವು ಎರಡನೇ ಸಿಮ್ ಅನ್ನು ಬಳಸುತ್ತಿಲ್ಲ ಮತ್ತು ಅದಕ್ಕೆ ನಿರಂತರವಾಗಿ ದುರ್ಬಲ ಸಿಗ್ನಲ್ ಸಿಗುತ್ತಿದ್ದರೆ, ಆ ಸಿಮ್ ಅನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸುವುದರಿಂದ ಸ್ವಲ್ಪ ಬ್ಯಾಟರಿ ಉಳಿಸಬಹುದು. ಬಹುತೇಕ ಆಂಡ್ರಾಯ್ಡ್ ಫೋನ್‌ಗಳಲ್ಲಿ ಸಿಮ್ ಸೆಟ್ಟಿಂಗ್ಸ್ ಅಥವಾ ಸಿಮ್ ಮ್ಯಾನೇಜರ್ ಮೂಲಕ ಒಂದು ಸಿಮ್ ಅನ್ನು ಆಫ್ ಮಾಡುವ ಆಯ್ಕೆ ಇರುತ್ತದೆ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ