ಉಕ್ರೇನ್​ನಲ್ಲಿ ಭಾರತ ಮೂಲದ ಲಕ್ಷ್ಮೀ ಮಿತ್ತಲ್ ಅವರ ಕಾರ್ಖಾನೆ ಮೇಲೆ ರಷ್ಯನ್ ದಾಳಿ; ಇಬ್ಬರು ಬಲಿ

ArcelorMittal Kryvyi Rih hit by Russian missiles: ರಷ್ಯಾ ಉಕ್ರೇನ್ ಯುದ್ಧದಲ್ಲಿ ಭಾರತ ಮೂಲದ ಲಕ್ಷ್ಮೀ ಮಿತ್ತಲ್ ಮಾಲಕತ್ವದ ಉಕ್ಕು ಕಾರ್ಖಾನೆಗೆ ಧಕ್ಕೆಯಾಗಿದೆ. ಉಕ್ರೇನ್​ನ ಕ್ರಿವಿ ರಿಹ್ ನಗರದಲ್ಲಿ ಆರ್ಸೆಲರ್ ಮಿತ್ತಲ್ ಘಟಕದ ಮೇಲೆ ರಷ್ಯಾ ಕ್ಷಿಪಣಿ ದಾಳಿ ಮಾಡಿ ಇಬ್ಬರನ್ನು ಬಲಿಪಡೆದಿದೆ. ಸುಮಾರು 14 ಮಂದಿ ಗಾಯಗೊಂಡಿದ್ದಾರೆ. ಆರ್ಸೆಲರ್ ಮಿತ್ತಲ್ ಉಕ್ರೇನ್​ನ ಅತಿದೊಡ್ಡ ಉಕ್ಕು ಘಟಕವಾಗಿದೆ.

ಉಕ್ರೇನ್​ನಲ್ಲಿ ಭಾರತ ಮೂಲದ ಲಕ್ಷ್ಮೀ ಮಿತ್ತಲ್ ಅವರ ಕಾರ್ಖಾನೆ ಮೇಲೆ ರಷ್ಯನ್ ದಾಳಿ; ಇಬ್ಬರು ಬಲಿ
ಆರ್ಸೆಲರ್ ಮಿತ್ತಲ್
Image Credit source: Getty Images

Updated on: Aug 17, 2026 | 11:39 AM

ಮುಖ್ಯಾಂಶಗಳು

  • ರಷ್ಯಾ ಉಕ್ರೇನ್ ಯುದ್ಧದಲ್ಲಿ ಭಾರತ ಮೂಲದ ಲಕ್ಷ್ಮೀ ಮಿತ್ತಲ್ ಮಾಲಕತ್ವದ ಉಕ್ಕು ಕಾರ್ಖಾನೆಗೆ ಧಕ್ಕೆಯಾಗಿದೆ.
  • ಆರ್ಸೆಲರ್ ಮಿತ್ತಲ್ ಘಟಕದ ಮೇಲೆ ರಷ್ಯಾ ಕ್ಷಿಪಣಿ ದಾಳಿ ಮಾಡಿ ಇಬ್ಬರನ್ನು ಬಲಿಪಡೆದಿದೆ.
  • ಸುಮಾರು 14 ಮಂದಿ ಗಾಯಗೊಂಡಿದ್ದಾರೆ. ಆರ್ಸೆಲರ್ ಮಿತ್ತಲ್ ಉಕ್ರೇನ್​ನ ಅತಿದೊಡ್ಡ ಉಕ್ಕು ಘಟಕವಾಗಿದೆ.

ಉಕ್ರೇನ್, ಆಗಸ್ಟ್ 17: ಉಕ್ರೇನ್‌ನಲ್ಲಿರುವ ಭಾರತೀಯ ಉದ್ಯಮಿ ಲಕ್ಷ್ಮಿ ಮಿತ್ತಲ್ (Lakshmi Mittal) ಅವರ ಉಕ್ಕು ಕಾರ್ಖಾನೆಯ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಕ್ರಿವಿ ರಿಹ್ (Kryvyi Rih) ನಗರದಲ್ಲಿರುವ ಆರ್ಸೆಲರ್ ಮಿತ್ತಲ್ (Arcelor Mittal) ಉಕ್ಕಿನ ಕಾರ್ಖಾನೆಯ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿರುವುದು ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, ಈ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಕಾರ್ಮಿಕರು ಮತ್ತು ಗುತ್ತಿಗೆದಾರರು ಗಾಯಗೊಂಡಿದ್ದಾರೆ.

ದಾಳಿಯಿಂದಾಗಿ ಕಾರ್ಖಾನೆಯ ಕಾರ್ಯಾಚರಣೆಯನ್ನು ಭಾಗಶಃ ಸ್ಥಗಿತಗೊಳಿಸಲಾಗಿದೆ. ಈ ಕಾರ್ಖಾನೆಯು ಉಕ್ರೇನ್‌ನ ಅತಿದೊಡ್ಡ ಉಕ್ಕು ಉತ್ಪಾದನಾ ಘಟಕವಾಗಿದೆ. ರಷ್ಯಾದ ಈ ದಾಳಿಯು ಉಕ್ರೇನ್‌ನ ವಿವಿಧ ಭಾಗಗಳಲ್ಲಿ ನಡೆಸಿರುವ ಸರಣಿ ದಾಳಿಗಳ ಭಾಗವಾಗಿದೆ ಎಂದು ವರದಿಯಾಗಿದೆ. ಕ್ರಿವಿ ರಿಹ್ ನಗರವು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅವರ ತವರು ಪ್ರದೇಶವಾಗಿದೆ.

ಇದನ್ನೂ ಓದಿ: 2040ರಲ್ಲಿ ಅಮೆರಿಕ, ಯೂರೋಪ್​ಗಿಂತ ದಕ್ಷಿಣ ಏಷ್ಯಾದಲ್ಲಿ ಕಡಿಮೆ ಬಡವರು?; ವಿಶ್ವಬ್ಯಾಂಕ್ ದತ್ತಾಂಶ ಅಚ್ಚರಿ ಎನಿಸಿದರೂ ಸತ್ಯ

ಲಂಡನ್​ನಲ್ಲಿ ನೆಲಸಿರುವ ಭಾರತೀಯ ಮೂಲದ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಆರ್ಸೆಲರ್ ಮಿತ್ತಲ್ ಸಂಸ್ಥೆಯು ವಿಶ್ವದ ಎರಡನೇ ಅತಿದೊಡ್ಡ ಉಕ್ಕು ತಯಾರಿಕಾ ಸಂಸ್ಥೆ ಎನಿಸಿದೆ. ಉಕ್ರೇನ್​ನ ಅದರ ಘಟಕದಲ್ಲಿ ಮೈನಿಂಗ್ ಮತ್ತು ಮೆಟಲರ್ಜಿ ಕಾರ್ಯಗಳನ್ನು ನಡೆಸಲಾಗುತ್ತದೆ. ರಷ್ಯನ್ ದಾಳಿ ಬಳಿಕ ಸದ್ಯ ಅಲ್ಲಿ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ.

ಇದೇ ವೇಳೆ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ದಾಳಿಗಳು ಎಡೆಬಿಡದೆ ಮುಂದುವರಿದಿವೆ. ಕ್ರಿವಿ ರಿಹ್​ನ ಮಿತ್ತಲ್ ಘಟಕದಲ್ಲಿ ಇಬ್ಬರು ಬಲಿಯಾಗಿದ್ದರೆ, ಬೇರೆಡೆಯೂ ದಾಳಿಗಳಿಂದ ಪ್ರಾಣನಷ್ಟವಾಗಿದೆ.

ಇದನ್ನೂ ಓದಿ: ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್​ಗಳೇ ಗಮನಿಸಿ; ಮಾನಿಟೈಸಿಂಗ್ ನಿಯಮಗಳಲ್ಲಿ ಆಗಿದೆ ಪ್ರಮುಖ ಬದಲಾವಣೆ

ಉಕ್ರೇನ್ ಮಿಲಿಟರಿಗೆ ನೆರವಾಗುವ ಉದ್ಯಮಗಳನ್ನು ರಷ್ಯನ್ ಪಡೆಗಳು ಗುರಿ ಮಾಡಿದಂತಿದೆ. ಉಕ್ರೇನ್ ಮಿಲಿಟರಿ ಬಳಸುವ ಫ್ಲಾಮಿಂಗೋ ಕ್ಷಿಪಣಿಯನ್ನು ತಯಾರಿಸುವ ಘಟಕ ಸೇರಿದಂತೆ ರಾಜಧಾನಿ ಕಿಯಿವ್ ನಗರದ ಹಲವು ಮಿಲಿಟರಿ ಕೈಗಾರಿಕೆಗಳ ಮೇಲೆ ರಷ್ಯಾ ದಾಳಿ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:35 am, Mon, 17 August 26

Loading...
Unable to load recommendations.
Follow Us