AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2040ರಲ್ಲಿ ಅಮೆರಿಕ, ಯೂರೋಪ್​ಗಿಂತ ದಕ್ಷಿಣ ಏಷ್ಯಾದಲ್ಲಿ ಕಡಿಮೆ ಬಡವರು?; ವಿಶ್ವಬ್ಯಾಂಕ್ ದತ್ತಾಂಶ ಅಚ್ಚರಿ ಎನಿಸಿದರೂ ಸತ್ಯ

World Bank data extreme poverty projection from 1990-2040: ವಿಶ್ವದಲ್ಲಿ ಕಡುಬಡವರ ಸಂಖ್ಯೆ ಎಲ್ಲೆಲ್ಲಿ ಎಷ್ಟಿದೆ ಎಂದು ತೋರಿಸುವ ವರದಿಯೊಂದನ್ನು ವಿಶ್ವಬ್ಯಾಂಕ್ ಬಿಡುಗಡೆ ಮಾಡಿದೆ. 1990ರಿಂದ ಹಿಡಿದು ಇಲ್ಲಿಯವರೆಗೆ ಹಾಗೂ 2040ರವರೆಗೆ ಕಡುಬಡತನವನ್ನು ಟ್ರ್ಯಾಕ್ ಮಾಡುತ್ತದೆ ಈ ವರದಿ. ಇದರ ಪ್ರಕಾರ, ಹಿಂದೊಮ್ಮೆ ಬಹಳ ಅಧಿಕ ಕಡುಬಡವರಿದ್ದ ದಕ್ಷಿಣ ಏಷ್ಯ 2040ಕ್ಕೆ ಅಮೆರಿಕಕ್ಕಿಂತ ಕಡಿಮೆ ಕಡುಬಡವರನ್ನು ಹೊಂದಿರಲಿದೆಯಂತೆ.

2040ರಲ್ಲಿ ಅಮೆರಿಕ, ಯೂರೋಪ್​ಗಿಂತ ದಕ್ಷಿಣ ಏಷ್ಯಾದಲ್ಲಿ ಕಡಿಮೆ ಬಡವರು?; ವಿಶ್ವಬ್ಯಾಂಕ್ ದತ್ತಾಂಶ ಅಚ್ಚರಿ ಎನಿಸಿದರೂ ಸತ್ಯ
ಆಫ್ರಿಕಾದ ಲೈಬೀರಿಯಾದ ಒಂದು ಸ್ಲಂ ಚಿತ್ರImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 16, 2026 | 8:26 PM

Share

ನವದೆಹಲಿ, ಆಗಸ್ಟ್ 16: ಭಾರತ ಎಂದರೆ ಬಡವರ ನಾಡು ಎಂದು ಪಾಶ್ಚಿಮಾತ್ಯ ದೇಶಗಳಲ್ಲಿ ಮೂಗು ಮುರಿಯುವವರು ಈಗಲೂ ಇದ್ದಾರೆ. ಆದರೆ, ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಭಾರತದಲ್ಲಿ ಅತೀ ಬಡತನದಲ್ಲಿರುವ ಜನಸಂಖ್ಯೆ ಗಣನೀಯವಾಗಿ ತಗ್ಗಿದೆ. ವಿಶ್ವಬ್ಯಾಂಕ್ (World Bank) ಬಿಡುಗಡೆ ಮಾಡಿದ ಇತ್ತೀಚಿನ ದತ್ತಾಂಶವು ಅಚ್ಚರಿಯ ಸಂಗತಿಯೊಂದನ್ನು ತೋರಿಸಿದೆ. ಅದರ ಪ್ರಕಾರ 2040ರಲ್ಲಿ ಭಾರತ, ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಒಳಗೊಂಡ ದಕ್ಷಿಣ ಏಷ್ಯಾದಲ್ಲಿ ಕಡುಬಡವರ ಸಂಖ್ಯೆಯು (People with extreme Poverty) ಉತ್ತರ ಅಮೆರಿಕ ಮತ್ತು ಯೂರೋಪ್​ಗಳಲ್ಲಿರುವ ಕಡುಬಡವರಿಗಿಂತ ಕಡಿಮೆ ಇರಲಿದೆಯಂತೆ.

ವಿಶ್ವಬ್ಯಂಕ್​ನ ಈ ವರದಿಯು ತೊಂಬತ್ತರ ದಶಕದಿಂದ ಒಳಗೊಂಡು, ವಿಶ್ವದ ವಿವಿಧ ಪ್ರದೇಶಗಳಲ್ಲಿ ಬಡುಬಡತನ ಹೇಗೆಲ್ಲಾ ವ್ಯತ್ಯಾಸ ಆಗುತ್ತಾ ಬಂದಿದೆ ಎಂಬುದನ್ನು ತೋರಿಸಿದೆ. ಹಾಗೆಯೇ, 2040ರವರೆಗೂ ಕಡುಬಡತನ ಹೇಗೆ ಬದಲಾಗುತ್ತದೆ ಎನ್ನುವ ಪ್ರೊಜೆಕ್ಷನ್ ಕೂಡ ನೀಡಿದೆ. ಈ ವರದಿಯು ವಿಶ್ವವನ್ನು ಏಳು ಭೂಪ್ರದೇಶಗಳಾಗಿ ವಿಂಗಡಿಸಿದೆ:

  1. ದಕ್ಷಿಣ ಏಷ್ಯಾ: ಭಾರತ, ಬಾಂಗ್ಲಾದೇಶ, ನೇಪಾಳ ಮತ್ತು ಶ್ರೀಲಂಕಾ
  2. ಪೂರ್ವ ಏಷ್ಯಾ ಮತ್ತು ಪೆಸಿಫಿಕ್: ಚೀನಾ ಒಳಗೊಂಡು ಪೂರ್ವ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶಗಳು
  3. ಸಹಾರಾ ಆಫ್ರಿಕಾ: ಸಹಾರಾ ಮರುಭೂಮಿಯಿಂದ ಈಚೆಗಿನ ಆಫ್ರಿಕನ್ ದೇಶಗಳು. ಬಹುತೇಕ ಆಫ್ರಿಕಾ ಖಂಡ
  4. ಮಧ್ಯಪ್ರಾಚ್ಯ, ಅಫ್ಘನ್, ಪಾಕಿಸ್ತಾನ
  5. ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳು: ಮೆಕ್ಸಿಕೋ, ದಕ್ಷಿಣ ಅಮೆರಿಕನ್ ದೇಶಗಳು
  6. ಯೂರೋಪ್ ಮತ್ತು ಮಧ್ಯ ಏಷ್ಯಾ: ಯೂರೋಪಿಯನ್ ದೇಶಗಳು ಹಾಗೂ ರಷ್ಯಾ, ಟರ್ಕಿ, ಕಜಕಸ್ತಾನ್ ಇತ್ಯಾದಿ ದೇಶಗಳು
  7. ನಾರ್ಥ್ ಅಮೆರಿಕ: ಯುಎಸ್​ಎ, ಕೆನಡಾ ದೇಶಗಳು

ಇದನ್ನೂ ಓದಿ: ಯೂಟ್ಯೂಬ್ ಕಂಟೆಂಟ್ ಕ್ರಿಯೇಟರ್​ಗಳೇ ಗಮನಿಸಿ; ಮಾನಿಟೈಸಿಂಗ್ ನಿಯಮಗಳಲ್ಲಿ ಆಗಿದೆ ಪ್ರಮುಖ ಬದಲಾವಣೆ

1990ರಲ್ಲಿ ವಿವಿಧ ಪ್ರದೇಶಗಳಲ್ಲಿದ್ದ ಕಡುಬಡವರು

  • ದಕ್ಷಿಣ ಏಷ್ಯಾ: 503 ಮಿಲಿಯನ್
  • ಪೂರ್ವ ಏಷ್ಯಾ, ಪೆಸಿಫಿಕ್: 1.22 ಬಿಲಿಯನ್
  • ಸಹಾರಾ ಆಫ್ರಿಕಾ: 321 ಮಿಲಿಯನ್
  • ಮಧ್ಯಪ್ರಾಚ್ಯ, ಉ.ಆಫ್ರಿಕಾ, ಅಫ್ಗನ್, ಪಾಕಿಸ್ತಾನ್: 131 ಮಿಲಿಯನ್
  • ಲ್ಯಾಟಿನ್ ಅಮೆರಿಕ, ಕೆರಿಬಿಯನ್: 91.4 ಮಿಲಿಯನ್
  • ಯೂರೋಪ್, ಸೆಂಟ್ರಲ್ ಏಷ್ಯಾ: 34.2 ಮಿಲಿಯನ್
  • ಉತ್ತರ ಅಮೆರಿಕ: 1.51 ಮಿಲಿಯನ್

2025ರಲ್ಲಿ ಇರುವ ಕಡುಬಡವರು

  • ದಕ್ಷಿಣ ಏಷ್ಯಾ: 52.2 ಮಿಲಿಯನ್
  • ಪೂರ್ವ ಏಷ್ಯಾ, ಪೆಸಿಫಿಕ್: 42.5 ಮಿಲಿಯನ್
  • ಸಹಾರಾ ಆಫ್ರಿಕಾ: 585 ಮಿಲಿಯನ್
  • ಮಧ್ಯಪ್ರಾಚ್ಯ, ಉ.ಆಫ್ರಿಕಾ, ಅಫ್ಗನ್, ಪಾಕಿಸ್ತಾನ್: 121 ಮಿಲಿಯನ್
  • ಲ್ಯಾಟಿನ್ ಅಮೆರಿಕ, ಕೆರಿಬಿಯನ್: 27.4 ಮಿಲಿಯನ್
  • ಯೂರೋಪ್, ಸೆಂಟ್ರಲ್ ಏಷ್ಯಾ: 4.92 ಮಿಲಿಯನ್
  • ಉತ್ತರ ಅಮೆರಿಕ: 3.58 ಮಿಲಿಯನ್

2040ರಲ್ಲಿ ಇರಬಹುದಾದ ಕಡುಬಡವರು

  • ದಕ್ಷಿಣ ಏಷ್ಯಾ: 2.76 ಮಿಲಿಯನ್
  • ಪೂರ್ವ ಏಷ್ಯಾ, ಪೆಸಿಫಿಕ್: 24.1 ಮಿಲಿಯನ್
  • ಸಹಾರಾ ಆಫ್ರಿಕಾ: 673 ಮಿಲಿಯನ್
  • ಮಧ್ಯಪ್ರಾಚ್ಯ, ಉ.ಆಫ್ರಿಕಾ, ಅಫ್ಗನ್, ಪಾಕಿಸ್ತಾನ್: 158 ಮಿಲಿಯನ್
  • ಲ್ಯಾಟಿನ್ ಅಮೆರಿಕ, ಕೆರಿಬಿಯನ್: 24.1 ಮಿಲಿಯನ್
  • ಯೂರೋಪ್, ಸೆಂಟ್ರಲ್ ಏಷ್ಯಾ: 2.89 ಮಿಲಿಯನ್
  • ಉತ್ತರ ಅಮೆರಿಕ: 3.35 ಮಿಲಿಯನ್

ವಿಶ್ವಬ್ಯಾಂಕ್​ನ ಈ ಚಾರ್ಟ್ ಗಮನಿಸಿ…

2040ರಲ್ಲಿ ದಕ್ಷಿಣ ಏಷ್ಯದಲ್ಲಿ ಕಡುಬಡವರ ಸಂಖ್ಯೆ ಕೇವಲ 27 ಲಕ್ಷ ಇರಲಿದ್ದಾರೆ. ಉತ್ತರ ಅಮೆರಿಕನ್ ದೇಶಗಳಲ್ಲಿ 33 ಲಕ್ಷಕ್ಕೂ ಹೆಚ್ಚು ಕಡುಬಡವರಿರಲಿದ್ದಾರೆ. ಯೂರೋಪ್ ಮತ್ತು ಸೆಂಟ್ರಲ್ ಏಷ್ಯನ್ ದೇಶಗಳಲ್ಲೂ 29 ಲಕ್ಷದಷ್ಟು ಕಡುಬಡವರು ಇರಲಿದ್ದಾರೆ. 1990ರಲ್ಲಿ 50 ಕೋಟಿಗೂ ಅಧಿಕ ಕಡುಬಡವರನ್ನು ಹೊಂದಿದ್ದ ದಕ್ಷಿಣ ಏಷ್ಯಾದಲ್ಲಿ 2040ಕ್ಕೆ ಆ ಸಂಖ್ಯೆ ಕೇವಲ 27 ಲಕ್ಷಕ್ಕೆ ಇಳಿಯುತ್ತಾರೆ ಎನ್ನುವುದು ಸಾಮಾನ್ಯ ಸಂಗತಿಯಲ್ಲ.

ಇದನ್ನೂ ಓದಿ: ಕರ್ನಾಟಕಕ್ಕೆ 2047ಕ್ಕೆ 3 ಟ್ರಿಲಿಯನ್ ಆರ್ಥಿಕತೆ ಗುರಿ; ಉದ್ಯೋಗ ಸಂಕಲ್ಪ, ಉದ್ಯೋಗ ನಿಧಿ, ಶಿಕ್ಷಣದಲ್ಲಿ ಎಐ ಇತ್ಯಾದಿ ಯೋಜನೆ ಪ್ರಕಟ

1990 ರಿಂದ ಭಾರತದಲ್ಲಿ ಭಾರಿ ಸುಧಾರಣೆ

1990ರ ದಶಕದಲ್ಲಿ ದಕ್ಷಿಣ ಏಷ್ಯಾದಲ್ಲಿ ಕೋಟ್ಯಂತರ ಜನರು ತೀವ್ರ ಬಡತನದಲ್ಲಿದ್ದರು (ದಿನಕ್ಕೆ $3 ಕ್ಕಿಂತ ಕಡಿಮೆ ಆದಾಯದಲ್ಲಿ ಜೀವಿಸುವುದು). ಆದರೆ ಕಳೆದ ಮೂರು ದಶಕಗಳ ಶರವೇಗದ ಆರ್ಥಿಕ ಬೆಳವಣಿಗೆ, ಡಿಜಿಟಲೀಕರಣ, ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಭದ್ರತಾ ಯೋಜನೆಗಳ ಫಲವಾಗಿ ಈ ಸಂಖ್ಯೆ ಸತತವಾಗಿ ಇಳಿಕೆಯಾಗುತ್ತಾ ಬಂದಿದೆ. ಅದರಲ್ಲೂ 2014ರ ಬಳಿಕ ಭಾರತದಲ್ಲಿ ಡಿಜಿಟಲೀಕರಣದ ಅಪಾರ ಬೆಳವಣಿಗೆಯು ಬಡತನ ನಿವಾರಣೆಗೆ ಬಹಳ ಸಹಕಾರಿಯಾಗಿವೆ.

ದಕ್ಷಿಣ ಏಷ್ಯಾದಲ್ಲಿ ತೀವ್ರ ಬಡತನ ತಗ್ಗಲು ಭಾರತ ಕೈಗೊಂಡ ಕಲ್ಯಾಣ ಯೋಜನೆಗಳು, ಆರ್ಥಿಕ ಪ್ರಗತಿ ಮತ್ತು ಬಡತನ ರೇಖೆಗಿಂತ ಕೆಳಗಿರುವವರನ್ನು ಮೇಲಕ್ಕೆತ್ತುವ ಕಾರ್ಯಕ್ರಮಗಳು ಪ್ರಮುಖ ಕಾರಣವಾಗಿವೆ ಎಂದು ವರದಿ ಬೆಟ್ಟುಮಾಡುತ್ತದೆ. ಈ ವಿಶ್ವಬ್ಯಾಂಕ್ ದತ್ತಾಂಶವು ದಕ್ಷಿಣ ಏಷ್ಯಾದ ಆರ್ಥಿಕ ಚೇತರಿಕೆ ಮತ್ತು ಕಳೆದ ಕೆಲವು ದಶಕಗಳಲ್ಲಿ ಕೈಗೊಂಡ ಬಡತನ ನಿರ್ಮೂಲನಾ ಕಾರ್ಯಕ್ರಮಗಳ ಯಶಸ್ಸನ್ನು ಎತ್ತಿಹಿಡಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:22 pm, Sun, 16 August 26

Follow Us
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ವಂದೇ ಮಾತರಂಗೆ ಅವಮಾನಿಸಿದ ಆರೋಪ: ಸೋನಿಯಾ ಗಾಂಧಿ ವಿರುದ್ಧ ಕೇಸ್ ಬುಕ್!
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಮತ್ತೆ ಮುನ್ನೆಲೆಗೆ ಬಂದ ನೈಸ್ ರಸ್ತೆ ಟೋಲ್:ಸಿಡಿದೆದ್ದ ಪ್ರತಿಪಕ್ಷಗಳು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ಹಾನೂರು ಶೂಟೌಟ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹೇಳಿದ್ದಿಷ್ಟು
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ತಿಪಟೂರು​ ಶಾಸಕನಿಂದ ಪ್ರತ್ಯೇಕ ಜಿಲ್ಲೆಯ ಕೂಗು!
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮೊಳಕಾಲ್ಮೂರು ಕ್ಷೇತ್ರವನ್ನು ಆಂಧ್ರಕ್ಕೆ ಸೇರಿಸಿ: ಎನ್​.ವೈ. ಗೋಪಾಲಕೃಷ್ಣ
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಮಹಿಳೆ ಜೊತೆ ಅಸಭ್ಯ ವರ್ತನೆ; ತಮ್ಮೇನಹಳ್ಳಿ ಸ್ವಾಮೀಜಿಗೆ ಜನರಿಂದ ಗೂಸಾ!
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಬೆಳೆ ವಿಮೆ ವಿಚಾರಕ್ಕೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಲಿಂಗೇಗೌಡ ಗರಂ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ಆಗಸ್ಟ್ 17ರಿಂದ 23ರ ವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿ ತಿಳಿದುಕೊಳ್ಳಿ
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ರವಿಚಂದ್ರನ್ ಮನೆ ಮಾರಿದ್ದು ನಿಜವೇ? ಅಸಲಿ ವಿಷಯ ತೆರೆದಿಟ್ಟ ದಿಲ್ ಸೇ ದಿಲೀಪ್
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!
ಅರಣ್ಯ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ; ಯಾರ ಹೆಸರೂ ಉಲ್ಲೇಖವಿಲ್ಲ!