ಈ ವರ್ಷ ಭಾರತದ ಆರ್ಥಿಕ ಬೆಳವಣಿಗೆ ಶೇ. 6.9: ನಿರೀಕ್ಷೆ ಹೆಚ್ಚಿಸಿದ ವಿಶ್ವಸಂಸ್ಥೆ

UN world economic situation and prospects 2024 report: ವಿಶ್ವಸಂಸ್ಥೆಯ ‘ವರ್ಲ್ಡ್ ಎಕನಾಮಿಕ್ ಸಿಚುವೇಶನ್ ಅಂಡ್ ಪ್ರಾಸ್ಪೆಕ್ಟ್​ಸ್ 2024’ ವರದಿಯಲ್ಲಿ ದಕ್ಷಿಣ ಏಷ್ಯಾ ಪ್ರದೇಶದ ಆರ್ಥಿಕ ಬೆಳವಣಿಗೆ ಬಗ್ಗೆ ಆಶಾದಾಯಕವಾಗಿದೆ. ಜನವರಿ ಬಳಿಕ ಬಿಡುಗಡೆ ಆದ ಈ ಅಪ್​ಡೇಟೆಡ್ ವರದಿಯಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ನಿರೀಕ್ಷೆ ಹೆಚ್ಚಿಸಲಾಗಿದೆ. 2024ರಲ್ಲಿ ಭಾರತದ ಬೆಳವಣಿಗೆ ಶೇ. 6.2ರಷ್ಟಿರಬಹುದು ಎಂದು ಜನವರಿ ವರದಿಯಲ್ಲಿ ಅಂದಾಜಿಸಲಾಗಿತ್ತು. ಈಗ ಶೇ. 6.9ರಷ್ಟು ಬೆಳವಣಿಗೆ ಹೊಂದಬಹುದು ಎಂದು ನಿರೀಕ್ಷೆ ಹೆಚ್ಚಿಸಲಾಗಿದೆ.

ಈ ವರ್ಷ ಭಾರತದ ಆರ್ಥಿಕ ಬೆಳವಣಿಗೆ ಶೇ. 6.9: ನಿರೀಕ್ಷೆ ಹೆಚ್ಚಿಸಿದ ವಿಶ್ವಸಂಸ್ಥೆ
ಭಾರತದ ಆರ್ಥಿಕತೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 17, 2024 | 6:09 PM

ನವದೆಹಲಿ, ಮೇ 17: ಭಾರತ ಸಾಧಿಸುತ್ತಿರುವ ಆರ್ಥಿಕ ಬೆಳವಣಿಗೆ ಬಗ್ಗೆ ವಿಶ್ವಸಂಸ್ಥೆ (United Nations) ಹೆಚ್ಚು ಸಕಾರಾತ್ಮಕವಾಗಿದೆ. ಈ ಕ್ಯಾಲಂಡರ್ ವರ್ಷದಲ್ಲಿ ಭಾರತದ ಜಿಡಿಪಿ ದರ (India GDP) ವಿಚಾರದಲ್ಲಿ ತನ್ನ ನಿರೀಕ್ಷೆ ಹೆಚ್ಚಿಸಿದೆ. 2024ರಲ್ಲಿ ಭಾರತ ಶೇ. 6.2ರಷ್ಟು ಆರ್ಥಿಕ ವೃದ್ಧಿ ಕಾಣಬಹುದು ಎಂದು ಜನವರಿ ತಿಂಗಳಲ್ಲಿ ವಿಶ್ವಸಂಸ್ಥೆ ನಿರೀಕ್ಷಿಸಿತ್ತು. ಈಗ ನಾಲ್ಕು ತಿಂಗಳ ಬಳಿಕ ತನ್ನ ವರದಿಯಲ್ಲಿ ಅಭಿಪ್ರಾಯ ಬದಲಿಸಿದ್ದು, ಭಾರತ 2024ರ ಕ್ಯಾಲಂಡರ್ ವರ್ಷದಲ್ಲಿ ಶೇ. 6.9ರಷ್ಟು ಬೆಳೆಯುವ ಸಾಧ್ಯತೆ ಇದೆ ಎಂದು ಹೇಳಿದೆ. ಆದರೆ, 2025ರ ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.6ರಷ್ಟು ಬೆಳೆಯಬಹುದು ಎಂದು ತಾನು ಮಾಡಿದ ಅಂದಾಜಿಗೆ ವಿಶ್ವಸಂಸ್ಥೆ ಬದ್ಧವಾಗಿದೆ.

2024ರಲ್ಲಿ ಭಾರತದ ಆರ್ಥಿಕತೆ ತನ್ನ ನಿರೀಕ್ಷೆಮೀರಿ ಬೆಳೆಯಲು ಏನು ಕಾರಣ ಎಂಬುದನ್ನು ವಿಶ್ವಸಂಸ್ಥೆ ತನ್ನ ‘ವರ್ಲ್ಡ್ ಎಕನಾಮಿಕ್ ಸಿಚುವೇಶನ್ ಅಂಡ್ ಪ್ರಾಸ್ಪೆಕ್ಟ್​ಸ್ 2024’ ವರದಿಯಲ್ಲಿ ವಿವರಿಸಿದೆ. ಅದರ ಪ್ರಕಾರ ಭಾರತದಲ್ಲಿ ಸಾರ್ವಜನಿಕ ಹೂಡಿಕೆ ಪ್ರಬಲವಾಗಿದೆ. ಖಾಸಗಿ ಅನುಭೋಗ ಕೂಡ ಉತ್ತಮವಾಗಿದೆ. ಜಾಗತಿಕವಾಗಿ ರಫ್ತು ಮಾರುಕಟ್ಟೆ ಕಳೆಗುಂದಿರುವುದಾದರೂ ಭಾರತದ ಫಾರ್ಮಾ ಮತ್ತು ರಾಸಾಯನಿಕ ಕ್ಷೇತ್ರಗಳು ರಫ್ತು ಮಾಡುವ ಪ್ರಮಾಣ ಸಾಕಷ್ಟು ಹೆಚ್ಚಾಗಲಿದೆ ಎಂದು ವಿಶ್ವಸಂಸ್ಥೆಯ ಈ ವರದಿಯಲ್ಲಿ ವಿವರಣೆ ಕೊಡಲಾಗಿದೆ.

ಗ್ರಾಹಕ ಬೆಲೆ ಅಥವಾ ರೀಟೇಲ್ ಹಣದುಬ್ಬರ 2024ರಲ್ಲಿ ಕಡಿಮೆ ಆಗಲಿದೆ ಎಂದು ಈ ವರದಿ ಹೇಳಿದೆ. 2023ರಲ್ಲಿ ಹಣದುಬ್ಬರ ಶೇ. 5.6 ಇತ್ತು. ಈ ವರ್ಷ ಅದು ಶೇ. 4.5ಕ್ಕೆ ಇಳಿಯಲಿದೆ ಎಂದು ಅದು ಅಂದಾಜು ಮಾಡಿದೆ. ಭಾರತ ಮಾತ್ರವಲ್ಲ ದಕ್ಷಿಣ ಏಷ್ಯಾದ ಇತರ ದೇಶಗಳಲ್ಲೂ ಹಣದುಬ್ಬರ ಇಳಿಮುಖವಾಗುವ ನಿರೀಕ್ಷೆ ಇದೆಯಂತೆ. ಆದರೆ, ಭಾರತ ಮತ್ತು ಬಾಂಗ್ಲಾದೇಶಗಳಿಗೆ ಆಹಾರ ವಸ್ತುಗಳ ಬೆಲೆ ಏರಿಕೆಯೇ ಪ್ರಮುಖ ತಲೆಬೇನೆಯಾಗಿ ಉಳಿಯಬಹುದು. ಹಣದುಬ್ಬರವು ಶೇ. 4ಕ್ಕೆ ಕಟ್ಟಿಹಾಕಲು ಈ ಆಹಾರ ಬೆಲೆ ಹಣದುಬ್ಬರ ಕಾರಣವಾಗಬಹುದು ಎಂದು ವಿವಿಧ ಆರ್ಥಿಕ ತಜ್ಞರೂ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಸರಿಯಾಗಿ ಮೀಸೆ ಮೂಡದ ಭಾರತೀಯ ಹುಡುಗರಿಂದ ಎಐ ಉದ್ಯಮದಲ್ಲಿ ಸಂಚಲನ; ಫೋರ್ಬ್ಸ್ ಪಟ್ಟಿಯಲ್ಲಿ 19 ವರ್ಷದ ಆಯುಷ್, ಆರ್ಯನ್

ಜಿಡಿಪಿ ವಿಚಾರದಲ್ಲಿ ಭಾರತದ ಪರಿಸ್ಥಿತಿ ಉತ್ತಮವಾಗಿದೆ. ಹಾಗೆಯೇ, ಆರ್ಥಿಕ ಅಧಃಪತನದತ್ತ ಕುಸಿಯುತ್ತಿದ್ದ ಪಾಕಿಸ್ತಾನ ಮತ್ತು ಶ್ರೀಲಂಕಾ ದೇಶಗಳು ಚೇತರಿಸಿಕೊಳ್ಳುವ ಸೂಚನೆ ನೀಡಿವೆ. 2024ರ ವರ್ಷದಲ್ಲಿ ದಕ್ಷಿಣ ಏಷ್ಯಾ ಪ್ರದೇಶದ ಜಿಡಿಪಿ ಶೇ. 5.8ರಷ್ಟು ಬೆಳೆಯಬಹುದು ಎಂದು ವಿಶ್ವಸಂಸ್ಥೆ ಹೇಳಿದೆ. ಶೇ. 5.2ರಷ್ಟು ಬೆಳೆಯಬಹುದು ಎಂದು ಜನವರಿ ವರದಿಯಲ್ಲಿ ಅಂದಾಜಿಸಲಾಗಿತ್ತು. 2025ರಲ್ಲಿ ಈ ಭಾಗದ ಜಿಡಿಪಿ ಶೇ. 5.7ರಷ್ಟು ಇರಬಹುದು ಎಂದು ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ