
ನವದೆಹಲಿ, ನವೆಂಬರ್ 4: ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮೂರು ಪ್ರಮುಖ ಯೋಜನೆಗಳಿಗೆ ಅನುಮೋದನೆ ಸಿಕ್ಕಿದೆ. ನವೀಕರಣ ಇಂಧನ ಸಂಗ್ರಹಣೆ ವ್ಯವಸ್ಥೆ ಬಲಪಡಿಸುವ 14,500 ಕೋಟಿ ರೂ ಫಂಡಿಂಗ್ ಸ್ಕೀಮ್ಗೆ ಅನುಮೋದನೆ ಸಿಕ್ಕಿದೆ. ಸಂಖ್ಯೀಯ ಮತ್ತು ಡೇಟಾ ವ್ಯವಸ್ಥೆಯನ್ನು ಬಲಪಡಿಸುವ 4,371 ಕೋಟಿ ರೂ ಮೊತ್ತದ ವಿಸ್ತಾರ್ ಯೋಜನೆಗೆ ಸಮ್ಮತಿ ದೊರೆತಿದೆ. ಕ್ರಿಟಿಕಲ್ ಮಿನರಲ್ಗಳ ಪೈಕಿ ಇರುವ ನಿಕೆಲ್ ಮತ್ತು ಲಿಥಿಯಂ ಖನಿಜಗಳ ಸಂಸ್ಕರಣೆಗೆ 2,814 ಕೋಟಿ ರೂ ವ್ಯಯಿಸುವ ಯೋಜನೆಗೂ ಅನುಮೋದನೆ ಸಿಕ್ಕಿದೆ.
ನವೀಕರಿಸಬಹುದಾದ ಇಂಧನಗಳ (Renewable Energy) ಬಳಕೆಯನ್ನು ಹೆಚ್ಚಿಸುವ ಮತ್ತು ದೇಶದ ವಿದ್ಯುತ್ ಗ್ರಿಡ್‌ಗಳ ಸ್ಥಿರತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟವು ಹೊಸ ಶಕ್ತಿ ಸಂಗ್ರಹಣಾ ಯೋಜನೆಗೆ (Energy Storage Scheme) ಸಂಪುಟ ಅನುಮೋದನೆ ನೀಡಿರುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
2030-31ರೊಳಗೆ 92 GWh ಗ್ರಿಡ್ ಸ್ಕೇಲ್ ಎನರ್ಜಿ ಸ್ಟೋರೇಜ್ ಸಾಮರ್ಥ್ಯದ ಅಬಿವೃದ್ದಿಗಾಗಿ ಕ್ಯಾಬಿನೆಟ್ 14,500 ಕೋಟಿ ರೂ ವಿಜಿಎಫ್ ಫಂಡಿಂಗ್ ಸ್ಕೀಮ್ಗೆ ಅನುಮೋದನೆ ನೀಡಿರುವುದು ಇದು. ಬೇರೆ ಬೇರೆ ಸಾಮರ್ಥ್ಯಗಳ ಪಂಪ್ಡ್ ಹೈಡ್ರೋ ಸ್ಟೋರೇಜ್, ಎನರ್ಜಿ ಸ್ಟೋರೇಜ್ ಸಿಸ್ಟಮ್ಸ್, ಆಲ್ಟರ್ನೇಟಿವ್ ಸ್ಟೋರೇಜ್ ಟೆಕ್ನಾಲಜೀಸ್ ಇತ್ಯಾದಿ ಯೋಜನೆಗಳನ್ನು ಇದು ಬೆಂಬಲಿಸುತ್ತದೆ. ಇವುಗಳಲ್ಲಿ ಒಟ್ಟು ಹೂಡಿಕೆ 97,600 ಕೋಟಿ ರೂ ಇರುವ ನಿರೀಕ್ಷೆ ಇದೆ.
ಇದನ್ನೂ ಓದಿ: ಬಡತನ ನಿರ್ಮೂಲನೆಯ ಅಗಾಧ ವೇಗ: ಭಾರತದ ಯೋಜನೆಗಳಿಗೆ ವಿಶ್ವಬ್ಯಾಂಕ್ ವರದಿಯಲ್ಲಿ ಪ್ರಶಂಸೆ
ಸೌರ ಮತ್ತು ಪವನ ವಿದ್ಯುತ್‌ನಂತಹ ನವೀಕರಿಸಬಹುದಾದ ಇಂಧನ ಮೂಲಗಳಿಂದ ಉತ್ಪತ್ತಿಯಾಗುವ ಹೆಚ್ಚುವರಿ ವಿದ್ಯುತ್ ಅನ್ನು ಸುರಕ್ಷಿತವಾಗಿ ಸಂಗ್ರಹಿಸಿಟ್ಟುಕೊಂಡು, ವಿದ್ಯುತ್ ಬೇಡಿಕೆ ಹೆಚ್ಚಿರುವ ಸಂದರ್ಭದಲ್ಲಿ ಅಥವಾ ಸೂರ್ಯನ ಬೆಳಕು/ಗಾಳಿ ಲಭ್ಯವಿಲ್ಲದ ಸಮಯದಲ್ಲಿ ಸರಬರಾಜು ಮಾಡಲು ಈ ಯೋಜನೆಯು ನೆರವಾಗಲಿದೆ.
ಹಸಿರು ಇಂಧನ ಗುರಿಗಳಿಗೆ ಉತ್ತೇಜನ: ಭಾರತವು ನಿಗದಿಪಡಿಸಿಕೊಂಡಿರುವ ಇಳಿಕೆ ಮತ್ತು ಶುದ್ಧ ಇಂಧನ ಬಳಕೆಯ ಗುರಿಗಳನ್ನು ತಲುಪಲು ಈ ಇಂಧನ ಸಂಗ್ರಹಣಾ ವ್ಯವಸ್ಥೆಯು ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದೆ. ಇದು ಕೈಗಾರಿಕೆಗಳು ಮತ್ತು ಸಾರ್ವಜನಿಕರಿಗೆ ನಿರಂತರ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸುತ್ತದೆ.
2026-27 ರಿಂದ 2030-31 ರ ಅವಧಿಗಾಗಿ ‘ವಿಸ್ತಾರ್’ (VISTAR) ಕೇಂದ್ರ ವಲಯದ ಯೋಜನೆಗೆ ಅನುಮೋದನೆ ನೀಡಿದೆ. ಸಂಖ್ಯೀಯ ಮತ್ತು ಡೇಟಾ ಸಿಸ್ಟಂಗಳನ್ನು ಬಲಪಡಿಸುವ ನಿಟ್ಟಿನಲ್ಲಿ ರೂಪಿಸಲಾಗಿರುವ ‘VISTAR’ (Viksit Bharat Initiative for Statistical Transformation, Analytics & Research) ಯೋಜನೆಯು 2026-27 ನೇ ಸಾಲಿನಿಂದ 2030-31 ರವರೆಗೆ ಜಾರಿಯಲ್ಲಿರಲಿದೆ.
ಯೋಜನೆಯ ಮೂರು ಪ್ರಮುಖ ಘಟಕಗಳು:
ಇದನ್ನೂ ಓದಿ: ನೂರು ಕೋಟಿ ರೂ ಸ್ಟಾಕಲ್ ಹಗರಣ; ಹೂಡಿಕೆದಾರರಿಗೆ ಗೊತ್ತಿಲ್ಲದೇ ಆಪಲ್, ಎನ್ವಿಡಿಯೋ ಷೇರು ಮಾರಿ ನಷ್ಟ ತಂದಿತ್ತ ಆರೋಪ
ಯೋಜನೆಯ ಪ್ರಮುಖ ಉಪಯೋಗಗಳು: ಈ ಆರ್ಥಿಕ ಗಣತಿ ಮತ್ತು ಸಂಖ್ಯಾಶಾಸ್ತ್ರೀಯ ದತ್ತಾಂಶಗಳು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಮಟ್ಟದ ಯೋಜನೆ ರೂಪಿಸುವವರಿಗೆ ಅತ್ಯಂತ ಉಪಯುಕ್ತವಾಗಲಿವೆ. ವಿಶೇಷವಾಗಿ ಜಿಡಿಪಿಗೆ (GDP) ಅಸಂಘಟಿತ ವಲಯದ ಕೊಡುಗೆಯನ್ನು ನಿಖರವಾಗಿ ಅಂದೇಯಿಸಲು ಇದು ದಾರಿ ಮಾಡಿಕೊಡಲಿದೆ.
ಪ್ರಮುಖ ಖನಿಜಗಳ ಸಂಸ್ಕರಣೆಗೆ ಪ್ರೋತ್ಸಾಹಿಸುವ ಬಂಡವಾಳ ಹೂಡಿಕೆ ನೆರವು ಯೋಜನೆಗೆ ಸಂಪುಟದ ಅನುಮೋದನೆ ಸಿಕ್ಕಿದೆ. ಮುಂದಿನ ಐದು ವರ್ಷಗಳವರೆಗೆ 2,814 ಕೋಟಿ ರೂ ವ್ಯಯದ ನಿರೀಕ್ಷೆ ಇದೆ. ಎಲೆಕ್ಟ್ರಾನಿಕ್ಸ್ ಮತ್ತು ಬ್ಯಾಟರಿಗಳ ತಯಾರಿಕೆಗೆ ಬಹಳ ಅಗತ್ಯವಾಗಿರುವ ನಿಕೆಲ್ ಮತ್ತು ಲಿಥಿಯಮ್ ಖನಿಜಗಳನ್ನು ಸಂಸ್ಕರಣೆ ಮಾಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:26 pm, Wed, 4 November 26