AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್ ಆಗುತ್ತಿದೆ ಈ ಚಿತ್ರ..! ಸೋಷಿಯಲ್ ಮೀಡಿಯಾದಲ್ಲಿ ಕುತೂಹಲ ಕೆರಳಿಸಿರುವ ಈ ಫೋಟೋದ ಹಿಂದಿನ ಕಥೆ ಏನು?

Who's behind this viral photo on the social media: ಚಂದ್ರ ಹಾಗೂ ಸಾಹಸಿ ವ್ಯಕ್ತಿಯನ್ನು ಬೆರೆತಿರುವ ಚಿತ್ರವೊಂದು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಬಹಳ ಆಕರ್ಷಕವಾಗಿರುವ ಈ ಚಿತ್ರ ವೈರಲ್ ಆಗಿದೆ. ಯಾರೂ ಸುಮ್ಮನೆ ಮಾಡಿದ ಪೋಸ್ಟಾ ಅದು, ಅಥವಾ ದೊಡ್ಡ ಬ್ರ್ಯಾಂಡ್​ನಿಂದ ಹೊರ ಬಂದಿರುವ ವಿನೂತನ ತಂತ್ರವಾ?

ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 26, 2026 | 5:40 PM

Share

ಬೆಂಗಳೂರು, ಮೇ 26: ಇಲ್ಲಿ ನೋಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ (Social Media) ಬಹು ಚರ್ಚೆಯ ವಿಷಯವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಸಿಂಪಲ್ ಆಗಿ ಈ ಫೋಟೋ ಹರಿಬಿಟ್ಟಿದ್ದಾರೆ. ಆದರೆ, ಈ ವೈರಲ್ ಇಮೇಜ್ (Viral photo) ಅಷ್ಟು ಸಿಂಪಲ್ ಇದ್ದಂತಿಲ್ಲ. ಇಂಟರ್ನೆಟ್​ನಲ್ಲಿ ಸಾಕಷ್ಟು ಕುತೂಹಲ ಕೆರಳಿಸಿ, ತಕ್ಕಮಟ್ಟಿಗೆ ಹೈಪ್ ಕ್ರಿಯೇಟ್ ಮಾಡಿದೆ. ಇದು ಸುಖಾಸುಮ್ಮನೆ ಅಪ್​ಲೋಡ್ ಮಾಡಿರುವ ಫೋಟೋವಾ? ಅಥವಾ ಯಾವುದೋ ಬ್ರ್ಯಾಂಡ್​ನ ತಂತ್ರವಾ?

ಇದು ಚಂದಿರನ ಚಂದದ ಚಿತ್ರ. ಚಂದ್ರ ತನ್ನ ಅರ್ಧ ಭಾಗವನ್ನು ಬೆಳಕಾಗಿಸಿ ಕಾಯುತ್ತಿದ್ದಾನೆ. ಆದರೆ ಆ ಚಂದ್ರನ ವಕ್ರರೇಖೆ ಕೇವಲ ಒಂದು ಬೆಳಕಿನ ಗೆರೆಯಲ್ಲ. ಅದು ಒಂದು ಅಸಾಧ್ಯವಾದ ಸಾಹಸಕ್ಕೆ ಸಿದ್ಧವಾಗಿರುವ ರಂಗಭೂಮಿ! ಒಬ್ಬ ಅಪ್ರತಿಮ ಸಾಹಸಿ, ಗುರುತ್ವಾಕರ್ಷಣೆಯನ್ನೇ ಸವಾಲಿಗೆ ಕರೆದು, ಆಕಾಶದ ಅಂಚಿನಿಂದ ಧುಮುಕುತ್ತಿದ್ದಾನೆ. ಅವನ ದೇಹದ ಆ ವಾಲುವಿಕೆ, ಚಂದ್ರನ ಅರ್ಧವೃತ್ತಕ್ಕೆ ಸಂಪೂರ್ಣವಾಗಿ ಹೊಂದಿಕೆಯಾಗಿ ಒಂದು ಅದ್ಭುತವಾದ ವೃತ್ತವನ್ನು ಸೃಷ್ಟಿಸುತ್ತಿದೆ.

ಇದು ಕೇವಲ ಕಲ್ಪನೆಯಲ್ಲ, ನಿಮ್ಮ ಕಣ್ಣುಗಳು ಕಾಣುತ್ತಿರುವುದು ಒಂದು ಜಾಗತಿಕ ಕ್ರಾಂತಿಯ ಮುನ್ನುಡಿ! ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ…

ಪ್ರಕಾಶಮಾನವಾದ ಆ ಬಿಳಿ ಚಂದ್ರ… ಕಡು ನೀಲಿ ಬಣ್ಣದ ನಿಗೂಢ ಆಕಾಶ… ಆ ಸಾಹಸಿಯ ಕೈಗಳಲ್ಲಿ ಮಿನುಗುತ್ತಿರುವ ಕೆಂಪು ಛಾಯೆಯ ಶಕ್ತಿ…

ಈ ಮೂರು ಬಣ್ಣಗಳು ಸೇರಿದರೆ ಜಗತ್ತನ್ನೇ ಆಳುವ, ಯುವ ಪೀಳಿಗೆಯ ನೆಚ್ಚಿನ ಯಾವ ಬ್ರ್ಯಾಂಡ್ ನೆನಪಿಗೆ ಬರುತ್ತದೆ? “ಲೈಫ್‌ನಲ್ಲಿ ಏನಾದರೂ ಹೊಸದಾಗಿ ಟ್ರೈ ಮಾಡಬೇಕು, ಗಡಿಗಳನ್ನು ಮೀರಿ ಬೆಳೆಯಬೇಕು!” ಆಕಾಶದ ಚಂದ್ರನನ್ನೂ ತನ್ನ ಲೋಗೋ ಆಗಿ ಬದಲಾಯಿಸಿಕೊಳ್ಳಬಲ್ಲ ಧೈರ್ಯ ಇರುವುದು ಕೇವಲ ಒಂದೇ ಬ್ರ್ಯಾಂಡ್‌ಗೆ ಎನ್ನುತ್ತಿದ್ದಾರೆ ನೆಟ್ಟಿಗರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ