AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೋಕ್ಸ್‌ವ್ಯಾಗನ್ ಶಾಕ್; ಒಂದು ಲಕ್ಷ ಉದ್ಯೋಗ ಕಡಿತ; ಪ್ರಮುಖ ಕಾರ್ಖಾನೆಗಳನ್ನೇ ಮುಚ್ಚಲುಹೊರಟ ವಾಹನ ತಯಾರಕ ಸಂಸ್ಥೆ

Volkswagen to layoff 1 lakh employees, close 4 factories: ಜರ್ಮನಿಯ ವೋಕ್ಸ್‌ವ್ಯಾಗನ್ ಸಂಸ್ಥೆ ತನ್ನ ಆರ್ಥಿಕ ಸಂಕಷ್ಟದಿಂದ ಪಾರಾಗಲು ಲೇ ಆಫ್ ಮಾರ್ಗ ಅವಲೋಕಿಸಿದೆ. ಒಂದು ಲಕ್ಷ ಮಂದಿಯನ್ನು ಕೆಲಸದಿಂದ ತೆಗೆದುಹಾಕಲು ಯೋಜಿಸಿದೆ. ಕೆಲ ಫ್ಯಾಕ್ಟರಿಗಳನ್ನೂ ಬಂದ್ ಮಾಡಿ ಕಂಪನಿಯ ರೀಸ್ಟ್ರಕ್ಚರಿಂಗ್ ಮಾಡುವ ಪ್ರಯತ್ವಾಗಲಿದೆ. ಅಮೆರಿಕದ ಟ್ಯಾರಿಫ್, ಚೀನೀ ಪೈಪೋಟಿಯು ಜರ್ಮನ್ ಆಟೊ ದೈತ್ಯನ ಪರದಾಟಕ್ಕೆ ಕಾರಣ ಎನ್ನಲಾಗಿದೆ.

ವೋಕ್ಸ್‌ವ್ಯಾಗನ್ ಶಾಕ್; ಒಂದು ಲಕ್ಷ ಉದ್ಯೋಗ ಕಡಿತ; ಪ್ರಮುಖ ಕಾರ್ಖಾನೆಗಳನ್ನೇ ಮುಚ್ಚಲುಹೊರಟ ವಾಹನ ತಯಾರಕ ಸಂಸ್ಥೆ
ವೋಕ್ಸ್‌ವ್ಯಾಗನ್Image Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 26, 2026 | 4:36 PM

Share

ಮುಖ್ಯಾಂಶಗಳು

  • ಜರ್ಮನಿಯ ವೋಕ್ಸ್‌ವ್ಯಾಗನ್ ಸಂಸ್ಥೆ ತನ್ನ ಆರ್ಥಿಕ ಸಂಕಷ್ಟದಿಂದ ಪಾರಾಗಲು ಲೇ ಆಫ್ ಮಾರ್ಗ ಅವಲೋಕಿಸಿದೆ.
  • ಒಂದು ಲಕ್ಷ ಮಂದಿಯನ್ನು ಕೆಲಸದಿಂದ ತೆಗೆದುಹಾಕಲು ಯೋಜಿಸಿದೆ. ಕೆಲ ಫ್ಯಾಕ್ಟರಿಗಳನ್ನೂ ಬಂದ್ ಮಾಡಲಿದೆ.
  • ಅಮೆರಿಕದ ಟ್ಯಾರಿಫ್, ಚೀನೀ ಪೈಪೋಟಿಯು ಜರ್ಮನ್ ಆಟೊ ದೈತ್ಯನ ಪರದಾಟಕ್ಕೆ ಕಾರಣ ಎನ್ನಲಾಗಿದೆ.

ನವದೆಹಲಿ, ಜೂನ್ 26: ಜರ್ಮನಿಯ ಪ್ರಸಿದ್ಧ ವಾಹನ ತಯಾರಿಕಾ ದೈತ್ಯ ಸಂಸ್ಥೆಯಾದ ವೋಕ್ಸ್‌ವ್ಯಾಗನ್ (Volkswagen AG) ಜಾಗತಿಕ ಮಟ್ಟದಲ್ಲಿ ಭಾರಿ ಪ್ರಮಾಣದ ಉದ್ಯೋಗ ಕಡಿತ ಮತ್ತು ಕಾರ್ಖಾನೆಗಳ ಮುಚ್ಚುವಿಕೆಗೆ ಮುಂದಾಗಿದೆ ಎಂದು ಜರ್ಮನ್ ಮೂಲದ ಪ್ರಮುಖ ವರದಿಗಳು ತಿಳಿಸಿವೆ. ಜಾಗತಿಕ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಉಂಟಾಗಿರುವ ತೀವ್ರ ಪೈಪೋಟಿ ಮತ್ತು ಲಾಭದಲ್ಲಿನ ಕುಸಿತದ ಹಿನ್ನೆಲೆಯಲ್ಲಿ, ವೋಕ್ಸ್‌ವ್ಯಾಗನ್ ಸಂಸ್ಥೆಯ ಸಿಇಒ ಆಲಿವರ್ ಬ್ಲೂಮ್ (Oliver Blume) ಅವರು ಕಂಪನಿಯನ್ನು ಸಂಪೂರ್ಣವಾಗಿ ಪುನರ್ರಚಿಸಲು (Company Restructuring) ಮುಂದಾಗಿದ್ದಾರೆ. ಇದರ ಭಾಗವಾಗಿ ಒಂದು ಲಕ್ಷ ಉದ್ಯೋಗಿಗಳನ್ನು ಲೇ ಆಫ್ ಮಾಡುವ ಯೋಜನೆ ಹಾಕಿದ್ದಾರೆ ಎಂದು ಮ್ಯಾನೇಜರ್ ಮ್ಯಾಗಝಿನ್ (Manager Magazin) ವರದಿ ಮಾಡಿದೆ.

ಲಕ್ಷ ಉದ್ಯೋಗ ಕಡಿತ, ಹಲವು ಫ್ಯಾಕ್ಟರಿಗಳೂ ಬಂದ್

ವೋಕ್ಸ್‌ವ್ಯಾಗನ್ ಕಂಪನಿಯು ಈ ಹಿಂದೆ ಯೋಜಿಸಿದ್ದ 50,000 ಉದ್ಯೋಗ ಕಡಿತದ ಗುರಿಯನ್ನು ಈಗ ದುಪ್ಪಟ್ಟುಗೊಳಿಸಿದೆ. ಮುಂದಿನ ಕೆಲವು ವರ್ಷಗಳಲ್ಲಿ ಜಾಗತಿಕವಾಗಿ ಸುಮಾರು 1,00,000 ಉದ್ಯೋಗಗಳನ್ನು ಕಡಿತಗೊಳಿಸಲು ಸಿಇಒ ಯೋಜಿಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಜರ್ಮನಿಯಲ್ಲಿರುವ ನಾಲ್ಕು ಪ್ರಮುಖ ವಾಹನ ತಯಾರಕ ಘಟಕಗಳನ್ನು ಮುಚ್ಚಲೂ ಕೂಡ ಕಂಪನಿ ಆಲೋಚಿಸುತ್ತಿದೆ. ಹ್ಯಾನೋವರ್ (Hanover), ಜ್ವಿಕಾವೊ (Zwickau) ಮತ್ತು ಎಮಡೆನ್​ನಲ್ಲಿರುವ (Emden) ವೋಕ್ಸ್‌ವ್ಯಾಗನ್ ಘಟಕಗಳು, ಹಾಗು ನೆಕಾರ್ಸಲ್ಮ್‌ನಲ್ಲಿರುವ (Neckarsulm) ಆಡಿ (Audi) ಘಟಕ, ಈ ನಾಲ್ಕು ಫ್ಯಾಕ್ಟರಿಗಳನ್ನು ಮುಚ್ಚಲಾಗುತ್ತಿದೆ.

ಇದನ್ನೂ ಓದಿ: ಆಫ್ರಿಕಾ ಮಾರುಕಟ್ಟೆಯಲ್ಲಿ ಭಾರತೀಯ ಕಂಪನಿಗಳ ಅಬ್ಬರ; ಸ್ಥಳೀಯ ಉತ್ಪಾದನೆಗೂ ಮುಂದು

ಪ್ರಸ್ತುತ ಈ ಕಾರ್ಖಾನೆಗಳಲ್ಲಿ ತಯಾರಾಗುತ್ತಿರುವ ವಾಹನಗಳ ಮಾಡೆಲ್‌ಗಳ ಉತ್ಪಾದನೆ ಮುಗಿದ ತಕ್ಷಣ, ಈ ಘಟಕಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಆಡಿ, ಪೋರ್ಷೆ, ಲಂಬೋರ್ಗಿನಿ ಮೊದಲಾದ ವಾಹನಗಳ ತಯಾರಕರು

ಜರ್ಮನಿಯ ವೋಕ್ಸ್‌ವ್ಯಾಗನ್ ಎಜಿ ವಿಶ್ವದ ಅತಿದೊಡ್ಡ ವಾಹನ ತಯಾರಕ ಸಂಸ್ಥೆಗಳಲ್ಲಿ ಒಂದು. ಇದು ಕಾರು, ಬಸ್ಸು, ಬೈಕುಗಳನ್ನು ತಯಾರಿಸುತ್ತದೆ. ಆಡಿ, ಪೋರ್ಷೆ, ಬೆಂಟ್ಲೀ, ಕುಪ್ರಾ, ಜೆಟ್ಟಾ, ಸೀಟ್, ಸ್ಕೋಡಾ, ವೋಕ್ಸ್‌ವ್ಯಾಗನ್, ಡುಕಾಟಿನಂತಹ ಜನಪ್ರಿಯ ಬ್ರ್ಯಾಂಡ್​ಗಳ ವಾಹನಳನ್ನು ಇದು ಮ್ಯಾನುಫ್ಯಾಕ್ಚರ್ ಮಾಡುತ್ತದೆ.

ಹೂಡಿಕೆಯಲ್ಲಿ 15% ಕಡಿತಗೊಳಿಸಲಿರುವ ವೋಕ್ಸ್‌ವ್ಯಾಗನ್

ವೋಕ್ಸ್‌ವ್ಯಾಗನ್ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ತನ್ನ ಒಟ್ಟು ಹೂಡಿಕೆಯನ್ನು ಶೇ. 15 ರಷ್ಟು ಕಡಿಮೆ ಮಾಡಲು ನಿರ್ಧರಿಸಿದ್ದು, ಹೂಡಿಕೆಯನ್ನು ಅಂದಾಜು €130 ಬಿಲಿಯನ್​ಗೆ (ಸುಮಾರು 1.40 ಲಕ್ಷ ಕೋಟಿ ರೂಪಾಯಿ) ಸೀಮಿತಗೊಳಿಸಲಿದೆ.

ಇದನ್ನೂ ಓದಿ: ರಾಜ್ಯಗಳ ಆರ್ಥಿಕ ಆರೋಗ್ಯಕ್ಕೆ ಉರುಳಾಗುತ್ತಿರುವ ಉಚಿತ ಕೊಡುಗೆಗಳು; ಕರ್ನಾಟಕಕ್ಕೆ ಅತಿಹೆಚ್ಚು ಬಾಧೆ; ಬೆಚ್ಚಿಬೀಳಿಸಿದೆ ಸಿಎಜಿ ವರದಿ

ವೋಕ್ಸ್‌ವ್ಯಾಗನ್​ನ ಇಷ್ಟೊಂದು ದೊಡ್ಡ ನಿರ್ಧಾರಕ್ಕೆ ಕಾರಣವೇನು?

ಯೂರೋಪಿನ ಅತಿ ದೊಡ್ಡ ವಾಹನ ತಯಾರಿಕಾ ಸಂಸ್ಥೆಯಾದ ವೋಕ್ಸ್‌ವ್ಯಾಗನ್ ಇತ್ತೀಚಿನ ದಿನಗಳಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದೆ:

  • ಚೀನಾದ ಪೈಪೋಟಿ: ಇವಿ (ಎಲೆಕ್ಟ್ರಿಕ್ ವೆಹಿಕಲ್) ಮಾರುಕಟ್ಟೆಯಲ್ಲಿ ಚೀನಾದ ಬಿವೈಡಿ (BYD) ನಂತಹ ಕಂಪನಿಗಳಿಂದ ಜಾಗತಿಕವಾಗಿ ತೀವ್ರ ಪೈಪೋಟಿ ಎದುರಾಗಿದೆ. ದಶಕಗಳಿಂದ ಚೀನಾದ ಮಾರುಕಟ್ಟೆಯಲ್ಲಿ ವಿಜೃಂಬಿಸಿದ್ದ ವೋಕ್ಸ್‌ವ್ಯಾಗನ್ ಕಳೆದ ಕೆಲ ವರ್ಷಗಳಿಂದ ಹಿನ್ನಡೆ ಅನುಭವಿಸುತ್ತಿದೆ.
  • ದುಬಾರಿ ಇವಿ ಬದಲಾವಣೆ: ಸಾಂಪ್ರದಾಯಿಕ ಇಂಧನ ವಾಹನಗಳಿಂದ ಎಲೆಕ್ಟ್ರಿಕ್ ವಾಹನ ತಂತ್ರಜ್ಞಾನಕ್ಕೆ ಬದಲಾಗಲು ಕಂಪನಿಗೆ ಭಾರಿ ವೆಚ್ಚವಾಗುತ್ತಿದೆ.
  • ತೆರಿಗೆ ಮತ್ತು ಸುಂಕಗಳು: ಅಮೆರಿಕ ಮತ್ತು ಇತರ ದೇಶಗಳು ವಿಧಿಸುತ್ತಿರುವ ಹೊಸ ಆಮದು ಸುಂಕಗಳು ಕಂಪನಿಯ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:28 pm, Fri, 26 June 26

Follow Us
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಬರೋಬ್ಬರಿ 6 ಕಿ.ಮೀ. ಓಡಿದ ದಳಪತಿ ವಿಜಯ್
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಮಂತ್ರಾಲಯಕ್ಕೆ ಭಕ್ತ ಸಾಗರ: 21 ದಿನಗಳಲ್ಲೇ ಬಂತು ಕೋಟಿ ಕೋಟಿ ಕಾಣಿಕೆ!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಚಲಿಸುತ್ತಿದ್ದ ಓಮಿನಿ ಕಾರಿನಿಂದ ಕೆಳಗೆ ಬಿದ್ದ ಐವರು ಮಕ್ಕಳು!
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ
ಎಣ್ಣೆ ಕಿಕ್​ನಲ್ಲಿ ಮಹಿಳಾ PSIಗೇ ಕಾಲಿನಿಂದ ಒದ್ದು ನಿಂದಿಸಿದ ಯುವತಿ