ಎಚ್​ಡಿಎಫ್​ಸಿ ಬ್ಯಾಂಕ್ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ; ಭಾರತದಲ್ಲಾದ ಅಪರಾಧಕ್ಕೆ ಅಮೆರಿಕದಲ್ಲಿ ಕಾನೂನು ಕ್ರಮ ಯಾಕೆ? ಇಲ್ಲಿದೆ ಮಾಹಿತಿ

Why HDFC bank facing lawsuit in US: ಎಚ್​ಡಿಎಫ್​ಸಿ ಬ್ಯಾಂಕ್ ವಿರುದ್ಧ ಸೆಕ್ಯೂರಿಟೀಸ್ ವಂಚನೆ ಎಸಗಿದ ಆರೋಪದ ಮೇಲೆ ಅಮೆರಿಕದಲ್ಲಿ ಮೊಕದ್ದಮೆ ದಾಖಲಾಗಿದೆ. ಮಹಾರಾಷ್ಟ್ರದ ರಸ್ತೆ ಅಭಿವೃದ್ಧಿ ಸಂಸ್ಥೆಯಾದ ಎಂಎಸ್​ಆರ್​ಡಿಸಿಯ ಠೇವಣಿಗಳಿಗೆ 45 ಕೋಟಿ ರೂ ಹೆಚ್ಚುವರಿ ಬಡ್ಡಿ ನೀಡಿದ ಆರೋಪ ಇದು. ಅಮೆರಿಕದಲ್ಲಿ ಡೆಪಾಸಿಟರಿ ಷೇರುಗಳನ್ನು ಖರೀದಿಸಿದವರಿಗೆ ನಷ್ಟ ಆದ ಕಾರಣ ದೂರು ದಾಖಲಾಗಿ ಮೊಕದ್ದಮೆಯೂ ದಾಖಲಾಗಿದೆ.

ಎಚ್​ಡಿಎಫ್​ಸಿ ಬ್ಯಾಂಕ್ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ; ಭಾರತದಲ್ಲಾದ ಅಪರಾಧಕ್ಕೆ ಅಮೆರಿಕದಲ್ಲಿ ಕಾನೂನು ಕ್ರಮ ಯಾಕೆ? ಇಲ್ಲಿದೆ ಮಾಹಿತಿ
ಹೆಚ್‌ಡಿಎಫ್‌ಸಿ ಬ್ಯಾಂಕ್
Image Credit source: Getty Images

Updated on: Aug 27, 2026 | 8:03 PM

ನವದೆಹಲಿ, ಆಗಸ್ಟ್ 27: ಭಾರತದ ಹೆಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಮತ್ತು ಅದರ ಉನ್ನತ ಅಧಿಕಾರಿಗಳ ವಿರುದ್ಧ ಅಮೆರಿಕದಲ್ಲಿ ಭದ್ರತಾ ವಂಚನೆ (Securities Fraud) ಆರೋಪದಡಿ ಕ್ಲಾಸ್ ಆಕ್ಷನ್ ಮೊಕದ್ದಮೆ (Class Action Lawsuit) ದಾಖಲಾಗಿದೆ. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ಸಂಸ್ಥೆಯಿಂದ (MSRDC) ಭಾರಿ ಪ್ರಮಾಣದ ಠೇವಣಿಗಳನ್ನು ಪಡೆಯಲು, ಬ್ಯಾಂಕ್ ನಿಯಮಗಳಿಗೆ ವಿರುದ್ಧವಾಗಿ 6.01% ನಷ್ಟು ಹೆಚ್ಚಿನ ಬಡ್ಡಿ ದರವನ್ನು ನೀಡಿದೆ ಎಂಬ ಆರೋಪವಿದೆ (ಸಾಮಾನ್ಯ ಉಳಿತಾಯ ಖಾತೆ ದರ 3.5%).

ಹೆಚ್ಚುವರಿಯಾಗಿ ನೀಡಿದ ಈ ಬಡ್ಡಿ ಮೊತ್ತವನ್ನು (ಸುಮಾರು ₹45 ಕೋಟಿ) ಬಡ್ಡಿ ಪಾವತಿ ಎಂದು ತೋರಿಸುವ ಬದಲಿಗೆ, MSRDCಯ ‘ರಸ್ತೆ ಸುರಕ್ಷತೆ ಜಾಗೃತಿ’ ಕಾರ್ಯಕ್ರಮದ ಮಾರ್ಕೆಟಿಂಗ್ ಮತ್ತು ಸ್ಪಾನ್ಸರ್‌ಶಿಪ್ ವೆಚ್ಚ ಎಂದು ತೋರಿಸಿ ಮುಚ್ಚಿಡಲಾಗಿತ್ತು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಚಿನ್ನ, ಬೆಳ್ಳಿಗೆ ಆಮದು ಸುಂಕ ಇಳಿಸಲು ಸರ್ಕಾರ ಸಜ್ಜು; ಗ್ರಾಮ್​ಗೆ 1,300 ರೂನಷ್ಟು ಕುಸಿಯುತ್ತಾ ಬಂಗಾರದ ದರ?

ಭಾರತದ ಕಂಪನಿ, ಭಾರತದಲ್ಲಿ ಪ್ರಕರಣ, ಆದರೆ ಅಮೆರಿಕದಲ್ಲಿ ಕೇಸ್ ಏಕೆ?

ಹೆಚ್‌ಡಿಎಫ್‌ಸಿ ಬ್ಯಾಂಕ್ ಭಾರತದ ಕಂಪನಿಯಾಗಿದೆ. ಅದರ ವಿರುದ್ಧ ಆರೋಪ ಬಂದಿರುವ ಪ್ರಕರಣ ಕೂಡ ಭಾರತದಲ್ಲೇ ಇರುವುದು. ಆದರೆ, ಎಚ್​ಡಿಎಫ್​ಸಿ ಬ್ಯಾಂಕ್​ನ ಯುಎಸ್ ಸೆಕ್ಯೂರಿಟೀಸ್​ಗಳಲ್ಲಿ ಅಮೆರಿಕನ್ನರು ಹೂಡಿಕೆ ಮಾಡಿದ್ದಾರೆ. ಹೀಗಾಗಿ, ಅಮೆರಿಕದಲ್ಲಿ ಕಾನೂನು ಮೊಕದ್ದಮೆ ಹಾಕಲು ಅವಕಾಶ ಇರುತ್ತದೆ. ಅಮೆರಿಕನ್ ಡೆಪಾಸಿಟರಿ ಷೇರುಗಳನ್ನು (ADS) ಹೊಂದಿರುವ ಹೂಡಿಕೆದಾರರು ಈ ದೂರು ನೀಡಿದ್ದಾರೆ. ಬ್ಯಾಂಕ್ ತನ್ನ ಹಣಕಾಸು ವರದಿಗಳಲ್ಲಿ ನೈಜ ಮಾಹಿತಿಯನ್ನು ಮರೆಮಾಚಿ, ಹೂಡಿಕೆದಾರರಿಗೆ ದಾರಿ ತಪ್ಪಿಸುವಂತಹ ಹೇಳಿಕೆಗಳನ್ನು ನೀಡಿದೆ ಮತ್ತು ಇದರಿಂದ ಷೇರು ಬೆಲೆ ಕುಸಿದು ತಮಗೆ ನಷ್ಟವಾಗಿದೆ ಎಂದು ಅವರು ವಾದಿಸಿದ್ದಾರೆ.

ಪ್ರಮುಖ ಆರೋಪಿಗಳು: ಬ್ಯಾಂಕ್‌ ಜೊತೆಗೆ ಅದರ ಸಿಇಒ ಶಶಿಧರ್ ಜಗದೀಶನ್ ಮತ್ತು ಸಿಎಫ್‌ಒ ಶ್ರೀನಿವಾಸನ್ ವೈದ್ಯನಾಥನ್ ಅವರ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಪಿಎಂ ಜನ್ ಧನ್ ಯೋಜನೆಗೆ 12 ವರ್ಷ; ಸರ್ವರಿಗೂ ಬ್ಯಾಂಕಿಂಗ್ ಶಕ್ತಿ, ಸರ್ವರ ಸಬಲೀಕರಣ

ಬ್ಯಾಂಕ್‌ನ ಸ್ಪಷ್ಟನೆ: ಈ ಮೊಕದ್ದಮೆಯಲ್ಲಿ ಯಾವುದೇ ಆಧಾರವಿಲ್ಲ ಮತ್ತು ಅಮೆರಿಕದಲ್ಲಿ ಷೇರು ಬೆಲೆ ಕುಸಿದಾಗ ಇಂತಹ ಹೂಡಿಕೆದಾರರ ಮೊಕದ್ದಮೆಗಳು ಸಾಮಾನ್ಯವಾಗಿದ್ದು, ಇದನ್ನು ಕಾನೂನಾತ್ಮಕವಾಗಿ ಎದುರಿಸುವುದಾಗಿ ಹೆಚ್‌ಡಿಎಫ್‌ಸಿ ಬ್ಯಾಂಕ್ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us