AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಿಎಂ ಜನ್ ಧನ್ ಯೋಜನೆಗೆ 12 ವರ್ಷ; ಸರ್ವರಿಗೂ ಬ್ಯಾಂಕಿಂಗ್ ಶಕ್ತಿ, ಸರ್ವರ ಸಬಲೀಕರಣ

12 Years of PM Jan Dhan Yojana, Banking for All, Empowerment for All: ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯು ದೇಶದಲ್ಲಿ ಪ್ರತಿಯೊಬ್ಬರನ್ನೂ ಬ್ಯಾಂಕಿಂಗ್ ವ್ಯಾಪ್ತಿಗೆ ತರುವ ಉದ್ದೇಶದಿಂದ 2014ರಲ್ಲಿ ಆರಂಭವಾಗಿದೆ. ಈ ಯೋಜನೆ ಅಡಿಯಲ್ಲಿ ಇಲ್ಲಿಯವರೆಗೆ 59 ಕೋಟಿಗೂ ಅಧಿಕ ಬ್ಯಾಂಕ್ ಅಕೌಂಟ್​ಗಳು ತೆರೆಯಲ್ಪಟ್ಟಿವೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಖಾತೆಗಳು ಮಹಿಳೆಯರದ್ಧಾಗಿದೆ.

ಪಿಎಂ ಜನ್ ಧನ್ ಯೋಜನೆಗೆ 12 ವರ್ಷ; ಸರ್ವರಿಗೂ ಬ್ಯಾಂಕಿಂಗ್ ಶಕ್ತಿ, ಸರ್ವರ ಸಬಲೀಕರಣ
ಬ್ಯಾಂಕ್ ಖಾತೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 27, 2026 | 5:31 PM

Share

ಪ್ರಧಾನಮಂತ್ರಿ ಜನ್‌ಧನ್‌ ಯೋಜನೆ (PM-JDY) ಆರಂಭವಾಗಿ 12 ವರ್ಷ ಪೂರ್ಣಗೊಂಡಿದೆ. 2014ರಲ್ಲಿ ಚಾಲನೆಗೊಂಡ ಈ ಪಿಎಂ ಜನ್ ಧನ್ ಯೋಜನೆಯು ಪ್ರತಿಯೊಬ್ಬರಿಗೂ ಬ್ಯಾಂಕಿಂಗ್ ಸೇವೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಲ್ಲಿ ಫಲಾನುಭವಿಗಳಿಗೆ ನೇರವಾಗಿ ಹಣ ತಲುಪಿಸುವ ಡಿಬಿಟಿಯಲ್ಲಿ ಇರುವ ಎರಡು ಪ್ರಮುಖ ಅಂಶಗಳಲ್ಲಿ ಜನ್ ಧನ್ ಖಾತೆಯೂ ಒಂದು. ಜನ್ ಧನ್ ಯೋಜನೆಯ ಬ್ಯಾಂಕ್ ಅಕೌಂಟ್, ಆಧಾರ್ ಕಾರ್ಡ್ ಮೂಲಕ ಡೈರೆಕ್ಟ್ ಬೆನಿಫಿಶಿಯರಿ ಟ್ರಾನ್ಸ್​ಫರ್ (DBT) ತಂತ್ರಜ್ಞಾನದ ಅಡಿಯಲ್ಲಿ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗುತ್ತಿದೆ. ಇದು ವಿಶ್ವದಲ್ಲೇ ಬೇರಾವ ದೇಶದಲ್ಲೂ ಇಷ್ಟು ವ್ಯಾಪಕವಾಗಿ ಹಣ ವರ್ಗಾವಣೆ ಆಗುವುದಿಲ್ಲ.

ಪಿಎಂ ಜನ್ ಧನ್ ಯೋಜನೆಯ ಪ್ರಮುಖ ಅಂಕಿ-ಅಂಶಗಳು (2026ರ ಆಗಸ್ಟ್ 19 ರಂತೆ)

  • ಒಟ್ಟು ಜನ್‌ಧನ್‌ ಖಾತೆಗಳು: 59.09 ಕೋಟಿ
  • ಮಹಿಳಾ ಫಲಾನುಭವಿಗಳು: 32.92 ಕೋಟಿ (ಶೇ. 55.7)
  • ಗ್ರಾಮೀಣ ಮತ್ತು ಅರೆ-ನಗರ ಪ್ರದೇಶದ ಖಾತೆಗಳು: 45.95 ಕೋಟಿ (ಶೇ. 77.8)
  • ಒಟ್ಟು ಡೆಪಾಸಿಟ್ (ಠೇವಣಿ) ಮೊತ್ತ: ₹3,16,514 ಕೋಟಿ
  • ರೀಟೇಲ್ ರುಪೇ ಡೆಬಿಟ್ ಕಾರ್ಡ್ ವಿತರಣೆ: 41.29 ಕೋಟಿ
  • ಸರಾಸರಿ ಠೇವಣಿ ಮೊತ್ತ (ಪ್ರತಿ ಖಾತೆಗೆ): ₹5,356

ಇದನ್ನೂ ಓದಿ: ಮೆಟಾದ ಈ ಪ್ರಯೋಗ ಯಶಸ್ವಿಯಾಗಿದ್ದರೆ ಅಲ್ಲೋಲಕಲ್ಲೋಲವಾಗುತ್ತಿತ್ತಾ ಜಗತ್ತು?; ಏನಿದು ಪ್ರಾಜೆಕ್ಟ್ ಓಟಿ?

ಪಿಎಂ ಜನ್​ದನ್ ಯೋಜನೆಯ ಪ್ರಮುಖ ಸೌಲಭ್ಯಗಳು ಮತ್ತು ಲಾಭಗಳು

  • ಶೂನ್ಯ ಬ್ಯಾಲೆನ್ಸ್ ಖಾತೆ: ಯಾವುದೇ ಕನಿಷ್ಠ ಬ್ಯಾಲೆನ್ಸ್ ಇಡುವ ಅಗತ್ಯವಿಲ್ಲದೆ ಬ್ಯಾಂಕ್ ಖಾತೆ ತೆರೆಯುವ ಅವಕಾಶ.
  • ಅಪಘಾತ ವಿಮೆ: ರುಪೇ (RuPay) ಡೆಬಿಟ್ ಕಾರ್ಡ್‌ನೊಂದಿಗೆ ₹2 ಲಕ್ಷದವರೆಗೆ ಉಚಿತ ಅಪಘಾತ ವಿಮಾ ರಕ್ಷಣೆ (2018ರ ನಂತರ ತೆರೆದ ಖಾತೆಗಳಿಗೆ) ನೀಡಲಾಗುತ್ತದೆ.
  • ಓವರ್‌ಡ್ರಾಫ್ಟ್ (OD) ಸೌಲಭ್ಯ: ಅರ್ಹ ಖಾತೆದಾರರಿಗೆ ₹10,000 ವರೆಗೆ ಓವರ್‌ಡ್ರಾಫ್ಟ್ ಪಡೆಯುವ ಸೌಲಭ್ಯವಿದೆ.
  • ನೇರ ಹಣ ವರ್ಗಾವಣೆ (DBT): JAM (ಜನ್‌ಧನ್-ಆಧಾರ್-ಮೊಬೈಲ್) ತ್ರಿವಳಿ ತಂತ್ರಜ್ಞಾನದ ಮೂಲಕ ಸರ್ಕಾರದ ಕಲ್ಯಾಣ ಯೋಜನೆಗಳ ಹಣ ನೇರವಾಗಿ ಖಾತೆಗೆ ತಲುಪುತ್ತಿದೆ.

ಇದನ್ನೂ ಓದಿ: ಇರಾನ್​ನ ಕರೆನ್ಸಿ ಮಹಾಕುಸಿತ; ಒಂದು ಡಾಲರ್​ಗೆ 20 ಲಕ್ಷ ರಿಯಾಲ್; ಇರಾನ್ ಆರ್ಥಿಕತೆ ತತ್ತರ

ಜನ್ ಧನ್ ಯೋಜನೆಯಲ್ಲಿ ಬ್ಯಾಂಕ್ ಖಾತೆ ತೆರೆಯುವುದು ಹೇಗೆ?

ಯಾವುದೇ ಬ್ಯಾಂಕ್​ನ ಯಾವುದೇ ಬ್ರ್ಯಾಂಚ್​ಗೆ ಹೋಗಿ ಅಲ್ಲಿ ಪಿಎಂ ಜನ್ ಧನ್ ಯೋಜನೆ ಅಡಿ ಬ್ಯಾಂಕ್ ಅಕೌಂಟ್ ಅನ್ನು ತೆರೆಯಬಹುದು. ಕೆವೈಸಿ ದಾಖಲೆಗಳಿದ್ದರೆ ಸಾಕು.

ಕೆವೈಸಿ ದಾಖಲೆಗಳೆಂದರೆ ಆಧಾರ್ ಕಾರ್ಡ್, ಐಡಿ ಪ್ರೂಫ್, ಅಡ್ರೆಸ್ ಪ್ರೂಫ್, ಫೋಟೋ. ಇಲ್ಲಿ ಐಡಿ ಪ್ರೂಫ್ ಎಂದರೆ ವೋಟರ್ ಐಡಿ, ಪ್ಯಾನ್ ಕಾರ್ಡ್ ಅಥವಾ ರೇಶನ್ ಕಾರ್ಡ್ ಆಗಬಹುದು. ಅಡ್ರೆಸ್ ಪ್ರೂಫ್ ದಾಖಲೆಯಾಗಿ ಪಾಸ್​ಪೋರ್ಟ್, ಡಿಎಲ್, ಯುಟಿಲಿಟಿ ಬಿಲ್​ಗಳಲ್ಲಿ ಒಂದನ್ನು ನೀಡಬಹುದು. ಹೆಚ್ಚಿನ ಸಂದರ್ಭದಲ್ಲಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಇದ್ದರೆ ಬ್ಯಾಂಕ್ ಅಕೌಂಟ್ ತೆರೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
KPSC ಹಗರಣ: ಅಕ್ರಮದ ಹಣದಲ್ಲಿ ಆರೋಪಿಗಳಿಂದ ಪ್ಲೈಟ್ ಟಿಕೆಟ್​ ಬುಕ್ಕಿಂಗ್
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಜಂಬೂಸವಾರಿ: ಮಹೇಂದ್ರ ಆನೆಯನ್ನು ಕ್ಯಾಪ್ಟನ್ ರೇಸ್​ನಿಂದ ಹೊರಗಿಟ್ಟಿದ್ದೇಕೆ?
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ಮೈಸೂರು ದಸರಾ 2026: ಗಜಪಡೆಗೆ ಸಿಡಿಮದ್ದು ತರಬೇತಿ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ದಾವಣಗೆರೆ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ಭ್ರೂಣ ಲಿಂಗ ಪತ್ತೆ ಶಂಕೆ
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಧರೆಗುರುಳಿದ ಬೃಹತ್ ಮರ, ಹೊಯ್ಸಳ ಪೊಲೀಸ್ ಕಾರು ಜಸ್ಟ್ ಮಿಸ್
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಸ್ಟಿಂಗ್ ಆಪರೇಷನ್​​: ಪೆನ್‌ಡ್ರೈವ್​ ಪ್ರದರ್ಶಿಸಿ ಗಣಿಗ ರವಿ ಸ್ಫೋಟಕ ಆರೋಪ
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಪಿಜಿಸಿಇಟಿ ಕೌನ್ಸಿಲಿಂಗ್ ವಿಳಂಬ: ಕೆಇಎ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ!
ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್
ಗಾನವಿ ಕೊಟ್ಟ ಕೌಂಟರ್​​ಗೆ ಸೈಲೆಂಟ್ ಆದ ತಾಂಡವ್ ರಾಮ್
ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!
ಬೆಂಗಳೂರಿನಲ್ಲಿ ಭಕ್ತರ ಗಮನ ಸೆಳೆಯುತ್ತಿದೆ ಮಂತ್ರಾಲಯದ ಮಾದರಿಯ ಗಣೇಶ ಮಂಟಪ!
ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ
ಸಂಕೇಶ್ವರ: ಟಿಪ್ಪರ್​ಗೆ KSRTC ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯ