ಸಿಆರ್450: ಪ್ರಚಂಡ ವೇಗದ ಚೀನಾ ರೈಲು; 896 ಕಿಮೀ ಟಾಪ್ ಸ್ಪೀಡ್; 450 ಕಿಮೀ ಆಪರೇಟಿಂಗ್ ಸ್ಪೀಡ್
China unveils CR450, world's fastest train: ಚೀನಾ ಅತಿವೇಗದ ರೈಲನ್ನು ನಿರ್ಮಿಸಿದೆ. ಸಿಆರ್450 ಎಂದು ಕೋಡ್ನೇಮ್ ಹಾಕಿರುವ ಈ ರೈಲು 896 ಕಿಮೀ ವೇಗ ದಾಖಲಿಸಿದೆ. ನೈಜ ರೈಲು ಹಳಿಯಲ್ಲಿ 450 ಕಿಮೀ ವೇಗವನ್ನು ದಾಖಲಿಸಿದೆ. ಈ ಮೂಲಕ ತನ್ನ ದಾಖಲೆಯನ್ನು ಇದು ಮುರಿದಿದೆ. ಈ ಪ್ರೋಟೋಟೈಪ್ ಟ್ರೈನ್ನ ಆಪರೇಟಿಂಗ್ ಟೆಸ್ಟಿಂಗ್ 6 ಲಕ್ಷ ಕಿಮೀವರೆಗೂ ಮುಂದುವರಿಯಲಿದೆ. ಮುಂದಿನ ವರ್ಷ ಇದರ ಕಮರ್ಷಿಯಲ್ ಸೇವೆ ಶುರುವಾಗಬಹುದು.

ಬೀಜಿಂಗ್, ಅಕ್ಟೋಬರ್ 27: ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿಯುತ್ತಿರುವ ಚೀನಾ (China) ದೇಶ ಇದೀಗ ವಿಶ್ವದ ಅತೀ ವೇಗದ ಟ್ರೈನ್ ಅನ್ನು ನಿರ್ಮಿಸಿದೆ. ಸಿಆರ್450 ಎಂದು ಕೋಡ್ನಿಂದ ಕರೆಯಲಾಗಿರುವ ಈ ಟ್ರೈನ್ನ ಟ್ರಯಲ್ ರನ್ ನಡೆಯುತ್ತಿದೆ. ಈ ಟ್ರಯಲ್ನಲ್ಲಿ ಅದು ಗಂಟೆಗೆ 896 ಕಿಮೀ ವೇಗ ಮುಟ್ಟಿದೆ. ಆದರೆ, ವಾಸ್ತವಿಕ ರೈಲು ಹಳಿಯಲ್ಲಿ ನಡೆದ ಪ್ರಯೋಗದಲ್ಲಿ ಈ ಟ್ರೈನು ಗಂಟೆಗೆ 450 ಕಿಮೀ ವೇಗದಲ್ಲಿ ಓಡಿದ್ದು ದಾಖಲಾಗಿದೆ. ಇದು ಹೊಸ ವಿಶ್ವದಾಖಲೆಯಾಗಿದೆ.
2024ರ ನವೆಂಬರ್ನಲ್ಲಿ ಸಿಆರ್450 ಟ್ರೈನ್ ಪ್ರೋಟೋಟೈಪ್ ನಿರ್ಮಿಸಲಾಗಿದೆ. ಸಾಕಷ್ಟು ಪರೀಕ್ಷೆಗಳನ್ನು ಇದಕ್ಕೆ ಒಡ್ಡಲಾಗಿದೆ. ಇದೀಗ ಅಂತಿಮ ಹಂತದ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಶಾಂಘೈ ಚಾಂಗ್ಕಿಂಗ್ ಚೆಂಗ್ಡು ಹೈಸ್ಪೀಡ್ ರೈಲ್ವೆ ಲೈನ್ನಲ್ಲಿ ಈ ಪ್ರೋಟೋಟೈಪ್ ಟ್ರೈನ್ನ ಟ್ರಯಲ್ ರನ್ ನಡೆಸಲಾಯಿತು. ಸಮಾಧಾನಕರ ಫಲಿತಾಂಶ ಸಿಕ್ಕಿದೆ.
ಇದನ್ನೂ ಓದಿ: ಭಾರತದ ದೂರಗಾಮಿ ಯೋಜನೆ; 5ಜಿಗಿಂತ 1,000 ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ನೀಡುವ 6ಜಿ ಅಭಿವೃದ್ಧಿಗೆ ಹೆಜ್ಜೆ
ಈ ಟ್ರೈನ್ನ ಆಪರೇಷನಲ್ ಟೆಸ್ಟಿಂಗ್ ಮುಂದುವರಿಯುತ್ತಿರುತ್ತದೆ. 6 ಲಕ್ಷ ಕಿಮೀ ಓಡುವವರೆಗೂ ಇದರ ಕಾರ್ಯಸಾಧನೆ ಮೇಲೆ ನಿಗಾ ಇಡಲಾಗಿರುತ್ತದೆ. 2026ರಲ್ಲಿ ಈ ಟ್ರೈನ್ನ ಕಮರ್ಷಿಯಲ್ ಸರ್ವಿಸ್ ಆರಂಭವಾಗಬಹುದು.
ಈ ಟ್ರೈನ್ನ ಕೋಡ್ನೇಮ್ನಲ್ಲಿರುವ ಸಿಆರ್ ಎಂದರೆ ಚೈನಾ ರೈಲ್ವೆ. ಇದೇ ಚೈನಾ ರೈಲ್ವೆಯ ಸಿಆರ್400 ಟ್ರೈನು ಈವರೆಗೆ ಅತಿವೇಗದ ಟ್ರೈನ್ ಎನ್ನುವ ದಾಖಲೆ ಹೊಂದಿತ್ತು. ಈಗ ಸಿಆರ್450 ಆ ದಾಖಲೆಯನ್ನು ಮುರಿದಿದೆ. ಜಪಾನ್ನ ಮ್ಯಾಗ್ಲೆವ್ ಟ್ರೈನ್ಗಿಂತಲೂ ಸಿಆರ್450 ಹೆಚ್ಚು ವೇಗದಲ್ಲಿ ಓಡಬಲ್ಲುದು.
ಸಿಆರ್400 ಟ್ರೈನ್ನ ರಚನೆ ಮತ್ತು ಸ್ವರೂಪದಲ್ಲಿ ಒಂದಷ್ಟು ಬದಲಾವಣೆ ತರಲಾಗಿದೆ. ಹೆಚ್ಚು ವೇಗದಲ್ಲಿ ಚಲಿಸಲು ಸಾಧ್ಯವಾಗುವ ರೀತಿಯಲ್ಲಿ ಈ ಬದಲಾವಣೆ ಮಾಡಲಾಗಿದೆ. ತೂಕವನ್ನೂ ಕಡಿಮೆ ಮಾಡಲಾಗಿದೆ.
ಇದನ್ನೂ ಓದಿ: ಕರೆನ್ಸಿ ಇಲ್ಲ, ದೊಡ್ಡ ಸೇನೆ ಇಲ್ಲ, ಕಳ್ಳಕಾಕರಿಲ್ಲ; ರಾತ್ರಿ ಮನೆಗಳಿಗೆ ಬೀಗ ಹಾಕಲ್ಲ; ಜಗತ್ತಿನಲ್ಲಿದೆ ಇಂಥದ್ದೂ ಒಂದು ದೇಶ
ಜಗತ್ತಿನ ಅತಿವೇಗದ ರೈಲುಗಳು
- ಚೀನಾದ ಸಿಆರ್450: 800 ಕಿಮೀಗೂ ಹೆಚ್ಚು ವೇಗ
- ಚೀನಾದ ಶಾಂಘೈ ಮ್ಯಾಗ್ಲೆವ್: 501 ಕಿಮೀ ವೇಗ
- ಚೀನಾದ ಸಿಆರ್380: 486 ಕಿಮೀ ವೇಗ
- ಚೀನಾದ ಸಿಆರ್ ಫಕ್ಸಿಂಗ್: 420 ಕಿಮೀ ವೇಗ
- ಜರ್ಮನಿಯ ಡಿಬಿ ಐಸಿಇ: 350 ಕಿಮೀ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




