ಜೊಮಾಟೊದಲ್ಲಿ ‘ಅನಲಾಗ್ ಡೈರಿ’ ಆಹಾರ ಪದಾರ್ಥಗಳಿಗೆ ನಿಷೇಧ: ಗ್ರಾಹಕರು ಮತ್ತು ರೆಸ್ಟೋರೆಂಟ್‌ಗಳ ಮೇಲಾಗುವ ಪರಿಣಾಮಗಳು

Zomato Bans ‘Analogue Dairy’ Dishes: ಕೃತಕವಾಗಿ ತಯಾರಿಸಲಾದ ಡೈರಿ ಉತ್ಪನ್ನಗಳಿಗೆ ಕಡಿವಾಣ ಹಾಕಲು ಜೊಮಾಟೊ ತನ್ನ ಪ್ಲಾಟ್​ಫಾರ್ಮ್​ನಲ್ಲಿ ಅನಲಾಗ್ ಡೈರಿ ಬಳಕೆ ನಿಷೇಧಿಸಿದೆ. ಜೊಮಾಟೊದ ರೆಸ್ಟೋರೆಂಟ್ ಪಾರ್ಟ್ನರ್​ಗಳು ಅನಲಾಗ್ ಡೈರಿ ಉತ್ಪನ್ನಗಳನ್ನು ಬಳಸುವಂತಿಲ್ಲ, ಅಥವಾ ಆ ಆಹಾರ ವಸ್ತುಗಳನ್ನು ಲಿಸ್ಟ್​ನಲ್ಲಿ ಇಡುವಂತಿಲ್ಲ.

ಜೊಮಾಟೊದಲ್ಲಿ ಅನಲಾಗ್ ಡೈರಿ ಆಹಾರ ಪದಾರ್ಥಗಳಿಗೆ ನಿಷೇಧ: ಗ್ರಾಹಕರು ಮತ್ತು ರೆಸ್ಟೋರೆಂಟ್‌ಗಳ ಮೇಲಾಗುವ ಪರಿಣಾಮಗಳು
ಜೊಮಾಟೊ ಡೆಲಿವರಿ ಪಾರ್ಟ್ನರ್
Image Credit source: Getty Images

Updated on: Aug 31, 2026 | 4:06 PM

ನವದೆಹಲಿ, ಆಗಸ್ಟ್ 31: ಫುಡ್ ಡೆಲಿವರಿ ಪ್ಲಾಟ್​ಫಾರ್ಮ್ ಆದ ಜೊಮಾಟೊ (Zomato) ತನ್ನಲ್ಲಿ ‘ಅನಲಾಗ್ ಡೈರಿ’ (Analogue Dairy) ಉತ್ಪನ್ನಗಳನ್ನು ಬಳಸಿ ತಯಾರಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ರೆಸ್ಟೋರೆಂಟ್​ಗಳು ತಾವು ಬಳಸುವ ಪದಾರ್ಥಗಳ ಬಗ್ಗೆ ಜೊಮಾಟೋ ಪ್ಲಾಟ್​ಫಾರ್ಮ್​ನಲ್ಲಿ ಸ್ಪಷ್ಟ ವಿವರಣೆ ನೀಡಬೇಕು. ಅನಲಾಗ್ ಡೈರಿ ಪದಾರ್ಥಗಳ ಬಳಕೆಯಾಗಿದ್ದರೆ ಅದರ ಮಾಹಿತಿ ಇರಬೇಕು. ಇಲ್ಲವಾದರೆ, ಆ ಪದಾರ್ಥವನ್ನೇ ಪಟ್ಟಿಯಲ್ಲಿ ಇಡುವಂತಿಲ್ಲ ಎಂದು ಜೊಮಾಟೊ ಕಟ್ಟಪ್ಪಣೆ ಮಾಡಿದೆ.

ಒಂದು ವೇಳೆ, ಯಾವುದೇ ರೆಸ್ಟೋರೆಂಟ್​ಗಳು ಅನಲಾಗ್ ಡೈರಿ ಪದಾರ್ಥಗಳನ್ನು ತಮ್ಮ ಆಹಾರ ಉತ್ಪನ್ನಗಳಲ್ಲಿ ಬಳಕೆ ಮಾಡಿರುವುದು ಕಂಡು ಬಂದಲ್ಲಿ ಅಂಥ ರೆಸ್ಟೋರೆಂಟ್​ಗಳನ್ನು ಪ್ಲಾಟ್​ಫಾರ್ಮ್​ನಲ್ಲಿ ಡೀಲಿಸ್ಟ್ ಮಾಡಲಾಗುತ್ತದೆ ಎಂದು ಜೊಮಾಟೊ ಎಚ್ಚರಿಸಿದೆ.

ಇದನ್ನೂ ಓದಿ: ಪೆಟ್ರೋಲ್ ಪಂಪ್‌ಗಳಲ್ಲಿ ಈ ಸೇವೆಗಳು ಉಚಿತ! ಆದರೆ ಹೆಚ್ಚಿನ ಜನರಿಗೆ ತಿಳಿದಿಲ್ಲ

ಅನಲಾಗ್ ಡೈರಿ ಎಂದರೇನು?

ಚೀಜ್ (Cheese) ಅಥವಾ ಪನ್ನೀರ್ ಅನ್ನು ನೈಜ ಹಾಲಿನಿಂದ ತಯಾರಿಸಲಾಗುತ್ತದೆ. ಆದರೆ, ಇವನ್ನು ವೆಜಿಟೇಬಲ್ ಆಯಿಲ್ (ಸಸ್ಯಜನ್ಯ ಎಣ್ಣೆ), ಪಿಷ್ಟ (Starch) ಮತ್ತು ರಾಸಾಯನಿಕಗಳನ್ನು ಬಳಸಿ ಅದನ್ನೇ ಹೋಲುವಂತಹ ಕೃತಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಇಂಥ ನೈಜವಲ್ಲದ ಡೈರಿ ಉತ್ಪನ್ನಗಳನ್ನು ‘ಅನಲಾಗ್ ಡೈರಿ’ ಎನ್ನಲಾಗುತ್ತದೆ. ಇವು ಕಮ್ಮಿ ವೆಚ್ಚದಲ್ಲಿ ಸಿಗುವುದರಿಂದ ಹಲವು ರೆಸ್ಟೋರೆಂಟ್‌ಗಳು ಇವುಗಳನ್ನು ಬಳಸುತ್ತವೆ.

ಶುದ್ಧತೆಗೆ ಆದ್ಯತೆ: ನಕಲಿ ಅಥವಾ ಕೃತಕ ಪನ್ನೀರ್ ಮತ್ತು ಚೀಸ್ ಬಳಸಿ ತಯಾರಿಸಿದ ಪಜ್ಜಾ, ಬರ್ಗರ್ ಹಾಗೂ ಪನ್ನೀರ್ ಖಾದ್ಯಗಳನ್ನು ಅಸಲಿ ಡೈರಿ ಉತ್ಪನ್ನಗಳ ಹೆಸರಿನಲ್ಲಿ ಮಾರಾಟ ಮಾಡುವುದನ್ನು ತಡೆಯಲು ಜೊಮಾಟೊ ಈ ಕಠಿಣ ಕ್ರಮ ಕೈಗೊಂಡಿದೆ.

ಇದನ್ನೂ ಓದಿ: ಪದೇ ಪದೇ ಆಕ್ಸಿಲರೇಟರ್ ಒತ್ತುವುದರಿಂದ EV ಬ್ಯಾಟರಿ ಬೇಗ ಹಾಳಾಗುತ್ತದೆಯೇ? ಹೊಸ ಅಧ್ಯಯನ ಹೇಳುವುದೇನು?

ಗ್ರಾಹಕರಿಗೆ ಲಾಭ: ಜೊಮಾಟೊದ ಈ ನಿರ್ಧಾರದಿಂದಾಗಿ ಗ್ರಾಹಕರಿಗೆ ತಾವು ಆರ್ಡರ್ ಮಾಡುವ ಆಹಾರದಲ್ಲಿ ಅಸಲಿ ಮತ್ತು ಆರೋಗ್ಯಕರ ಡೈರಿ ಉತ್ಪನ್ನಗಳೇ ಇವೆ ಎಂಬ ಭರವಸೆ ಸಿಗಲಿದ್ದು, ಆಹಾರ ವ್ಯತ್ಯಾಸದ ಮೋಸ ತಪ್ಪಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us