ನಾನೂ ವಿಜ್ಞಾನ ಮಾಡಬಲ್ಲೆ ಅಂತ ಜನರು ಭಾವಿಸಲ್ಲ, ನನ್ನನ್ನು ಜೊಮಾಟೊದೊಂದಿಗೆ ಜೋಡಿಸ್ತಾರೆ: ದೀಪಿಂದರ್ ಗೋಯಲ್

ಜೊಮಾಟೊ ಸಂಸ್ಥಾಪಕ ದೀಪಿಂದರ್ ಗೋಯಲ್ ತಮ್ಮ ಹೊಸ ಟೆಕ್ ಕಂಪನಿ 'ಟೆಂಪಲ್' ಮತ್ತು ಅದರ ದುಬಾರಿ ವೇರಬಲ್ ಸಾಧನ ಯಶಸ್ಸು ಕಂಡುಕೊಳ್ಳಲು ಶ್ರಮಿಸುತ್ತಿದ್ದಾರೆ. 85,000 ರೂ. ಬೆಲೆಯ ಈ ಮಿದುಳು ರಕ್ತ ಹರಿವು ಮಾನಿಟರ್ ಸವಾಲು ಎದುರಿಸುತ್ತಿದೆ. 'ಜೊಮಾಟೊ ಹುಡುಗ' ಎಂಬ ಪಟ್ಟದಿಂದಾಗಿ ಜನರು ತನ್ನ ತಂತ್ರಜ್ಞಾನ ಸಾಮರ್ಥ್ಯದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿರುವುದಾಗಿ ಗೋಯಲ್ ಬೇಸರ ಹೊರಹಾಕಿದ್ದಾರೆ. ಹೊಸ ಉತ್ಪನ್ನದ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನದಲ್ಲಿದ್ದಾರೆ.

ನಾನೂ ವಿಜ್ಞಾನ ಮಾಡಬಲ್ಲೆ ಅಂತ ಜನರು ಭಾವಿಸಲ್ಲ, ನನ್ನನ್ನು ಜೊಮಾಟೊದೊಂದಿಗೆ ಜೋಡಿಸ್ತಾರೆ: ದೀಪಿಂದರ್ ಗೋಯಲ್
ಟೆಂಪಲ್ ಸಾಧನ
Image Credit source: X user @deepigoyal

Updated on: Nov 02, 2026 | 3:00 PM

ನವದೆಹಲಿ, ಅಕ್ಟೋಬರ್ 2: ಫುಡ್ ಡೆಲಿವರಿ ಕ್ಷೇತ್ರದಲ್ಲಿ ಜೊಮಾಟೊವನ್ನು ನಂಬರ್ ಒನ್ ಸ್ಥಾನಕ್ಕೆ ತಂದಿದ್ದ ಅದರ ಸಂಸ್ಥಾಪಕ ದೀಪಿಂದರ್ ಗೋಯಲ್ ಅವರು ಇದೀಗ ‘ಟೆಂಪಲ್’ ಎನ್ನುವ ತಮ್ಮ ಹೊಸ ತಂತ್ರಜ್ಞಾನ ಸಂಸ್ಥೆಯನ್ನು ಯಶಸ್ಸಿನ ಹಳಿಗೆ ತರಲು ಬಹಳ ಪ್ರಯಾಸ ಪಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ಟೆಂಪಲ್ ಎನ್ನುವ ವೇರಬಲ್ ಸಾಧನ ಮಾರುಕಟ್ಟೆಗೆ ಬಿಡುಗಡೆ ಆಗಿದೆ. ಈ ಉತ್ಪನ್ನದ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಒಂದು ಸಣ್ಣ ಟಾಕ್ ಶುರುವಾಗಿದ್ದು, ಈ ವೇಳೆ ಗೋಯಲ್ ಅವರು ತಮ್ಮ ಸಂದಿಗ್ಧತೆಯನ್ನು ಹೊರಹಾಕಿದ್ದಾರೆ.

ತಾನು ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರಿತ ಉತ್ಪನ್ನಗಳನ್ನು ನಿರ್ಮಿಸಬಲ್ಲೆನೇ ಎನ್ನುವ ಬಗ್ಗೆ ಜನರಿಗೆ ಸಂದೇಹ ಇತ್ತು ಎಂದು ದೀಪಿಂದರ್ ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ: ರಿಲಯನ್ಸ್ ಇಂಡಸ್ಟ್ರೀಸ್ ದಾಖಲೆ ಆದಾಯ, ಲಾಭ; ಷೇರುಬೆಲೆ ಶೇ. 7ರಷ್ಟು ಜಿಗಿತ

‘ಜೊಮಾಟೊ ಹುಡುಗ ಎನ್ನುವ ಪಟ್ಟವು ಟೆಂಪಲ್​ಗೆ ವಿರುದ್ಧವಾಗಿ ಕೆಲಸ ಮಾಡುತ್ತದೆ. ನಾನು ಹಾರ್ಡ್​ವೇರ್ ಮತ್ತು ಸೈನ್ಸ್ ಮಾಡಬಲ್ಲೆನೆಂಬುದನ್ನು ಜನರು ಗಂಭೀರವಾಗಿ ಪರಿಗಣಿಸುವುದಿಲ್ಲ’ ಎಂದು ಎಕ್ಸ್ ಪೋಸ್ಟ್​ವೊಂದಕ್ಕೆ ಉತ್ತರಿಸುತ್ತಾ ದೀಪಿಂದರ್ ಗೋಯಲ್ ಬೇಸರ ಹೊರಹಾಕಿದ್ದಾರೆ.

85,000 ರೂಗಳ ದುಬಾರಿ ಬೆಲೆಗೆ ಈ ಸಾಧನ ಅರ್ಹವಾಗಿದೆಯಾ? ಜೊಮಾಟೊ ಮನುಷ್ಯನಿಂದ ನಿರ್ಮಿಸಿದ್ದು ಎನ್ನುವ ವಿಚಾರ ಬಿಟ್ಟರೆ ಈ ಸಾಧನ ಹೇಗೆ ಕೆಲಸ ಮಾಡುತ್ತದೆ ಎಂದು ಹೇಗೆ ಮಾಪನ ಮಾಡುತ್ತೀರಿ ಎಂದು ಎಕ್ಸ್ ಬಳಕೆದಾರರೊಬ್ಬರು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ದೀಪಿಂದರ್ ಗೋಯಲ್ ತಮ್ಮ ಸಂದಿಗ್ಧತೆ ವ್ಯಕ್ತಪಡಿಸಿದ್ದು.

ಎಕ್ಸ್ ಬಳಕೆದಾರರೊಬ್ಬರ ಪೋಸ್ಟ್

ದೀಪಿಂದರ್ ಗೋಯಲ್ ಅವರು ತಮ್ಮ ಟೆಂಪಲ್ ಸಾಧನದ ಪ್ರಚಾರಕ್ಕೆ ಯಾವುದೇ ಪಿಆರ್ ಬಳಸುವುದಿಲ್ಲ, ಯಾರನ್ನೂ ಬ್ರಾಂಡ್ ಅಂಬಾಸಡ್ ಮಾಡುವುದಿಲ್ಲ. ಟೆಂಪಲ್ ಧರಿಸುತ್ತಿರುವವರೆಲ್ಲಾ ಅವರ ಇಚ್ಛೆಯಿಂದೇ ಧರಿಸಿರುವುದು ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ: ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ಜಿಎಸ್​ಟಿ ಕಲೆಕ್ಷನ್ಸ್; 2 ಲಕ್ಷ ಕೋಟಿ ರೂ ದಾಟಿದ ನಿವ್ವಳ ತೆರಿಗೆ ಸಂಗ್ರಹ

ಏನಿದು ಟೆಂಪಲ್ ಸಾಧನ?

ಇದು ಮಿದುಳಿಗೆ ರಕ್ತದ ಹರಿವನ್ನು ಮಾನಿಟರ್ ಮಾಡುವಂತಹ ಸಾಧನ. ಹಣೆ ಮತ್ತು ಕಣ್ಣಿನ ನಡುವೆ ಇರುವ ಶಂಖ ಪ್ರದೇಶದಲ್ಲಿ (Temple region) ಈ ಸಾಧನವನ್ನು ಅಂಟಿಸಿದರೆ ಸಾಕು. ನಾಡಿಮಿಡಿತ, ಎದೆಬಡಿತ, ಪಲ್ಸ್ ರೇಟ್ ಇತ್ಯಾದಿಯನ್ನು ಪರಿಶೀಲಿಸುತ್ತಿರುತ್ತದೆ. ವಿವಿಧ ಸ್ಮಾರ್ಟ್​ವಾಚ್​ಗಳಿಗೆ ಪರ್ಯಾಯವಾಗಿ ಇದನ್ನು ಪ್ರಚುರಪಡಿಸಲಾಗಿದೆ. ಮಾರುಕಟ್ಟೆಯಲ್ಲಿ ಲಭ್ಯ ಇರುವ ಸಂಬಂಧಿತ ಉತ್ಪನ್ನಗಳಿಗಿಂತ ಟೆಂಪಲ್ ಭಿನ್ನವಾಗಿದೆ. ಆದರೆ, ಎಲ್ಲಕ್ಕಿಂತ ಹೆಚ್ಚು ದುಬಾರಿ ಎನಿಸಿದೆ. ಇದರ ಬೆಲೆ 85,000 ರೂ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:20 pm, Mon, 2 November 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us