ರಿಲಯನ್ಸ್ ಇಂಡಸ್ಟ್ರೀಸ್ ದಾಖಲೆ ಆದಾಯ, ಲಾಭ; ಷೇರುಬೆಲೆ ಶೇ. 7ರಷ್ಟು ಜಿಗಿತ
ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ನ ಎರಡನೇ ಕ್ವಾರ್ಟರ್ ವರದಿ ಬಹಳ ಸಕಾರಾತ್ಮಕವಾಗಿದೆ. ಸಂಸ್ಥೆಯು ದಾಖಲೆಯ ಆದಾಯ ಮತ್ತು ಲಾಭ ತೋರಿಸಿದೆ. ಇದರ ಬೆನ್ನಲ್ಲೇ ಇವತ್ತು ಆರ್ಐಎಲ್ನ ಷೇರುಬೆಲೆ ಶೇ. 7ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಗೋಲ್ಡ್ಮನ್ ಸ್ಯಾಕ್ಸ್, ನೊಮುರಾ ಮೊದಲಾದ ರೇಟಿಂಗ್ ಏಜೆನ್ಸಿಗಳು ರಿಲಯನ್ಸ್ ಷೇರಿಗೆ ‘ಬಯ್’ ರೇಟಿಂಗ್ ನೀಡಿವೆ.

ನವದೆಹಲಿ, ನವೆಂಬರ್ 2: ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಆದಾಯ ಗಳಿಕೆ ಈ ಎರಡನೇ ಕ್ವಾರ್ಟರ್ನಲ್ಲಿ ಅಮೋಘವಾಗಿ ದಾಖಲಾಗಿದೆ. ಇದರ ಬೆನ್ನಲ್ಲೇ ಇವತ್ತು ರಿಲಯನ್ಸ್ನ ಷೇರುಬೆಲೆ ಸಖತ್ ಏರಿದೆ. ಬೆಳಗಿನ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಬೆಲೆ ಶೇ. ಕ್ಕಿಂತಲೂ ಅಧಿಕ ಜಿಗಿದಿದೆ. ಎನ್ಎಸ್ಇ ಮತ್ತು ಬಿಎಸ್ಇ ಎರಡೂ ವಿನಿಮಯ ಕೇಂದ್ರಗಳಲ್ಲೂ ರಿಲಯನ್ಸ್ ಷೇರುಗಳಿಗೆ ಇವತ್ತು ಬೇಡಿಕೆ ಬಂದಿದೆ. ಬಹಳಷ್ಟು ಸಂಖ್ಯೆಯಲ್ಲಿ ವಹಿವಾಟುಗಳಾಗುತ್ತಿವೆ.
ಆರ್ಐಎಲ್ನ ಆದಾಯ ವರದಿ: ಉತ್ತಮ ಲಾಭ ದಾಖಲು
ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ ಆದ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಉತ್ತಮ ಆದಾಯ ದಾಖಲಿಸಿರುವುದು ಅದರ ತ್ರೈಮಾಸಿಕ ವರದಿಯಿಂದ ತಿಳಿದುಬಂದಿದೆ. ತೈಲ ಸಂಸ್ಕರಣೆ, ರಾಸಾಯನಿಕ ಇತ್ಯಾದಿ ಹತ್ತು ಹಲವು ಬ್ಯುಸಿನೆಸ್ಗಳನ್ನು ಒಳಗೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಒಟ್ಟಾರೆ ಆದಾಯವು 3.62 ಲಕ್ಷ ಕೋಟಿ ರೂ ದಾಖಲಾಗಿದೆ. ಇದು ಅದರ ಈವರೆಗಿನ ಅತ್ಯುತ್ತಮ ಕ್ವಾರ್ಟರ್ ರಿಸಲ್ಟ್ ಎನಿಸಿದೆ.
ಇದನ್ನೂ ಓದಿ: ಅಕ್ಟೋಬರ್ ತಿಂಗಳಲ್ಲಿ ಭರ್ಜರಿ ಜಿಎಸ್ಟಿ ಕಲೆಕ್ಷನ್ಸ್; 2 ಲಕ್ಷ ಕೋಟಿ ರೂ ದಾಟಿದ ನಿವ್ವಳ ತೆರಿಗೆ ಸಂಗ್ರಹ
ತೆರಿಗೆ ಇತ್ಯಾದಿ ವೆಚ್ಚವನ್ನು ಕಳೆದು ಉಳಿಯುವ ನಿವ್ವಳ ಲಾಭ 29,550 ಕೋಟಿ ರೂ ಇದೆ. ಇದೂ ಕೂಡ ಈವರೆಗಿನ ಗರಿಷ್ಠ ಲಾಭ ಎನಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ನ ಅಂಗಸಂಸ್ಥೆಯಾದ ಜಿಯೋ ಪ್ಲಾಟ್ಫಾರ್ಮ್ಸ್ನ ಆದಾಯವು ಶೇ. 11.3ರಷ್ಟು ಹೆಚ್ಚಿದೆ. ಅದರ ಷೇರುಬೆಲೆಯೂ ಸತತವಾಗಿ ಏರುತ್ತಿದೆ.
ಇದನ್ನೂ ಓದಿ: ಯುಪಿಐ ಹೊಸ ಮೈಲಿಗಲ್ಲು; ಅಕ್ಟೋಬರ್ನಲ್ಲಿ 1 ಲಕ್ಷ ಕೋಟಿ ರೂ ದಾಟಿದ ದೈನಂದಿನ ಸರಾಸರಿ ಪೇಮೆಂಟ್ ಮೌಲ್ಯ
ಆರ್ಐಎಲ್ ಷೇರಿಗೆ ಪಾಸಿಟಿವ್ ರೇಟಿಂಗ್ ಕೊಟ್ಟ ಬ್ರೋಕರೇಜ್ ಸಂಸ್ಥೆಗಳು
ದಾಖಲೆಯ ಆದಾಯ ಮತ್ತು ಲಾಭ ಪಡೆದ ರಿಲಯನ್ಸ್ ಇಂಡಸ್ಟ್ರೀಸ್ನ ಷೇರಿಗೆ ‘ಖರೀದಿ’ ರೇಟಿಂಗ್ ಅನ್ನು ಬ್ರೋಕರೇಜ್ ಸಂಸ್ಥೆಗಳು ನೀಡಿವೆ. ಗೋಲ್ಡ್ಮನ್ ಸ್ಯಾಕ್ಸ್ ಕಂಪನಿಯು ಆರ್ಐಎಲ್ ಷೇರಿಗೆ 1,840 ರೂ ಟಾರ್ಗೆಟ್ ಪ್ರೈಸ್ ನೀಡಿದೆ. ಸದ್ಯ ಇದರ ಷೇರು ಬೆಲೆ 1,256 ರೂನಲ್ಲಿದೆ. ನೊಮುರಾ ಕೂಡ ರಿಲಯನ್ಸ್ ಷೇರಿಗೆ ಥಂಬ್ಸ್ ಅಪ್ ಕೊಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




