AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರೋಧದ ಬಳಿಕ ಪ್ಯೂರ್ ವೆಜ್ ಡೆಲಿವರಿ ಹಿಂಪಡೆಯಲು ಜೊಮಾಟೋ ನಿರ್ಧಾರ; ಪ್ರತ್ಯೇಕ ಹಸಿರು ಸಮವಸ್ತ್ರವೂ ಇಲ್ಲ

Zomato Rolls Back 2 Pure Veg Services: ಜೊಮಾಟೊ ತನ್ನ ಎರಡು ಪ್ಯೂರ್ ವೆಜ್ ಸೇವೆಗಳನ್ನು ಹಿಂಪಡೆದುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಹೆಜ್ಜೆ ಹಿಂದಿರಿಸಿದೆ. ಪ್ಯೂರ್ ವೆಜ್ ಮೋಡ್ ಮತ್ತು ಪ್ಯೂರ್ ವೆಜ್ ಫ್ಲೀಟ್ ಸೇವೆಗಳನ್ನು ಆರಂಭಿಸಿರುವುದಾಗಿ ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ನಿನ್ನೆ ಮಂಗಳವಾರ ಹೇಳಿದ್ದರು. ಪ್ಯೂರ್ ವೆಜ್ ಎಂದರೆ ಅದು ಜಾತೀಯತೆ ಆಗುತ್ತದೆ ಎಂದು ವಿರೋಧ ಬಂದಿತ್ತು. ಪ್ಯೂರ್ ವೆಜ್ ಫ್ಲೀಟ್​ನಲ್ಲಿ ಸಸ್ಯಾಹಾರಗಳನ್ನು ಡೆಲಿವರಿ ಕೊಡಲೇ ಪ್ರತ್ಯೇಕ ತಂಡವನ್ನು ಇಡುವ ಪ್ರಸ್ತಾಪ ಇತ್ತು.

ವಿರೋಧದ ಬಳಿಕ ಪ್ಯೂರ್ ವೆಜ್ ಡೆಲಿವರಿ ಹಿಂಪಡೆಯಲು ಜೊಮಾಟೋ ನಿರ್ಧಾರ; ಪ್ರತ್ಯೇಕ ಹಸಿರು ಸಮವಸ್ತ್ರವೂ ಇಲ್ಲ
ಜೊಮಾಟೊ ಸಿಇಒ ದೀಪಿಂದರ್ ಗೋಯಲ್ (ಎಡಗಡೆ ಇರುವವರು).
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 20, 2024 | 10:26 AM

Share

ನವದೆಹಲಿ, ಮಾರ್ಚ್ 20: ಜೊಮಾಟೋ ಆಫರ್ ಮಾಡಿರುವ ಪ್ಯೂರ್ ವೆಜ್ ಮೋಡ್ ಮತ್ತು ಪ್ಯೂರ್ ವೆಜ್ ಫ್ಲೀಟ್ ಸರ್ವಿಸ್​​ಗೆ (Zomato Pure Veg services) ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ ಈ ಸೇವೆಗಳನ್ನು ಹಿಂಪಡೆಯಲು ನಿರ್ಧರಿಸಿರುವುದಾಗಿ ಜೊಮಾಟೋ ಸಿಇಒ ದೀಪಿಂದರ್ ಗೋಯಲ್ (Deepinder Goyal) ನಿನ್ನೆ ಮಂಗಳವಾರ ರಾತ್ರಿ ಹೇಳಿದ್ದಾರೆ. ದೀಪಿಂದರ್ ಗೋಯಲ್ ನಿನ್ನೆ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಪ್ಯೂರ್ ವೆಜ್ ಮೋಡ್ ಮತ್ತು ಪ್ಯೂರ್ ವೆಜ್ ಫ್ಲೀಟ್ ಸರ್ವಿಸ್ ಆರಂಭಿಸುತ್ತಿರುವುದಾಗಿ ತಿಳಿಸಿದ್ದರು. ಜೊಮಾಟೊದ ಈ ಸೇವೆಯು ಜಾತೀಯತೆಯನ್ನು (castiesm) ಸೃಷ್ಟಿಸುತ್ತದೆ ಎಂಬುದು ಹೆಚ್ಚಿನ ಆಕ್ಷೇಪ. ಹೀಗಾಗಿ, ಜೊಮಾಟೊ ಈ ಎರಡು ಸೇವೆಗಳನ್ನು ಸದ್ಯಕ್ಕೆ ಹಿಂತೆಗೆದುಕೊಂಡಿದೆ.

ಏನಿದು ಪ್ಯೂರ್ ವೆಜ್ ಮೋಡ್ ಮತ್ತು ಫ್ಲೀಟ್?

ಪರಿಪೂರ್ಣ ಸಸ್ಯಾಹಾರಿಗಳಿಗಾಗಿ ಜೊಮಾಟೊ ಈ ಎರಡು ಸೇವೆ ಆರಂಭಿಸಿತ್ತು. ಪ್ಯೂರ್ ವೆಜ್ ಮೋಡ್​ನಲ್ಲಿ ಬುಕ್ ಮಾಡಲಾಗುವ ಆಹಾರವನ್ನು ವೆಜ್ ಹೋಟೆಲ್​ಗಳಿಂದ ಮಾತ್ರವೇ ಪಿಕಪ್ ಮಾಡಿ, ಗ್ರಾಹಕರಿಗೆ ಡೆಲಿವರಿ ಕೊಡಲಾಗುತ್ತದೆ.

ಇದನ್ನೂ ಓದಿ: ಸಣ್ಣ ಜಗಳಕ್ಕೆ ವಿಚ್ಛೇದನ ಪಡೆದು, 3ವರ್ಷಗಳ ಬಳಿಕ ಮಾಜಿ ಪತಿಯೊಂದಿಗೆ ಮರು ಮದುವೆ

ಪ್ಯೂರ್ ವೆಜ್ ಫ್ಲೀಟ್​ನಲ್ಲಿ, ಸಸ್ಯಾಹಾರದ ಡೆಲಿವರಿಗೆ ಪ್ರತ್ಯೇಕ ತಂಡವನ್ನು ಇಡಲಾಗುತ್ತದೆ. ಮಾಮೂಲಿಯ ಜೊಮಾಟೋ ಡೆಲಿವರಿ ಬಾಯ್ಸ್ ಕೆಂಪು ಸಮವಸ್ತ್ರ ಧರಿಸಿದರೆ, ಪ್ಯೂರ್ ವೆಜ್ ಫ್ಲೀಟ್​ನ ತಂಡದವರ ಯೂನಿಫಾರ್ಮ್ ಹಸಿರು ಬಣ್ಣದ್ದಾಗಿರುತ್ತದೆ. ಅಲ್ಲದೇ ಈ ತಂಡ ಕೇವಲ ಪ್ಯೂರ್ ವೆಜ್ ಆಹಾರವನ್ನು ಮಾತ್ರ ಡೆಲಿವರಿ ಮಾಡುತ್ತದೆ.

ಯಾಕೆ ಬೇಕಿತ್ತು ಪ್ಯೂರ್ ವೆಜ್ ಫ್ಲೀಟ್?

ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ನೀಡಿರುವ ಸ್ಪಷ್ಟನೆ ಪ್ರಕಾರ, ಆಹಾರ ಡೆಲಿವರಿಗೆ ಹೋಗುವಾಗ ಪ್ಯಾಕ್​ನಿಂದ ಆಹಾರ ಚೆಲ್ಲುವ ಸಾಧ್ಯತೆ ಇರುತ್ತದೆ. ಒಂದೇ ಡೆಲವರಿ ವೇಳೆ ಮಾಂಸಾಹಾರ ಮತ್ತು ಸಸ್ಯಾಹಾರ ಎರಡೂ ಇದ್ದರೆ ಒಂದರ ಮೇಲೊಂದು ಚೆಲ್ಲುವ ಸಾಧ್ಯತೆ ಇರುತ್ತದೆ. ಸಂಪೂರ್ಣ ಸಸ್ಯಾಹಾರಿಗಳಾದವರಿಗೆ ಇದರಿಂದ ಮುಜುಗರ ಆಗಬಹುದು. ಈ ಬಗ್ಗೆ ಬಹಳಷ್ಟು ಜನರ ಸಲಹೆ ಮೇರೆಗೆ ಪ್ಯೂರ್ ವೆಜ್ ಫ್ಲೀಟ್ ಆರಂಭಿಸಿದ್ದಾಗಿ ಗೋಯಲ್ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಉಜ್ಜೀವನ್ ಬ್ಯಾಂಕ್​ನಲ್ಲಿ ಎಫ್​ಡಿಗೆ ಬಡ್ಡಿದರ ಬರೋಬ್ಬರಿ ಶೇ. 9; ಉಳಿತಾಯ ಹಣದ ಹೂಡಿಕೆಗೆ ಒಳ್ಳೆಯ ಪ್ಲಾನ್

ಈಗ ಸೋಷಿಯಲ್ ಮೀಡಿಯಾದಲ್ಲಿ ಈ ಎರಡು ಸೇವೆಯನ್ನು ಜಾತೀಯತೆ ಎಂದು ಟ್ರೋಲ್ ಮಾಡಲಾಗುತ್ತಿದೆ. ಇವನ್ನು ಸದ್ಯಕ್ಕೆ ಹಿಂಪಡೆಯಲಾಗಿದೆ. ಎಲ್ಲಾ ಜೊಮಾಟೊ ಡೆಲಿವರಿ ಬಾಯ್​ಗಳೂ ಕೆಂಪು ಬಣ್ಣದ ಸಮವಸ್ತ್ರವನ್ನೇ ಧರಿಸಲಿದ್ದಾರೆ. ಪ್ರತ್ಯೇಕ ಹಸಿರು ಸಮವಸ್ತ್ರ ಇರುವುದಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
CLP Meeting: ಡಿಕೆಶಿ ಹೆಸರು ಘೋಷಿಸಿದ ಸಿದ್ರಾಮಯ್ಯ Exclusive ವಿಡಿಯೋ
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಸಿದ್ದರಾಮಯ್ಯ ಪದತ್ಯಾಗಕ್ಕೆ ಪುತ್ರನಿಗೆ ಹೈಕಮಾಂಡ್ ಬಂಪರ್: ಗುಟ್ಟು ರಟ್ಟು
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಡಿಕೆಶಿ ಪ್ರಮಾಣವಚನ ಯಾವಾಗ-ಎಲ್ಲಿ, ಎಷ್ಟು ಗಂಟೆಗೆ? ಇಲ್ಲಿದೆ ಅಧಿಕೃತ ವಿವರ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
ಶಾಸಕಾಂಗ ಸಭೆಯಲ್ಲಿ ಅಚ್ಚರಿ: ಡಿಕೆಶಿ, ಹೈಕಮಾಂಡ್ ನಾಯಕರು ಕಕ್ಕಾಬಿಕ್ಕಿ
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
‘ಇಂದು ನಮಗೆ ಅತ್ಯಂತ ಭಾವುಕ ದಿನ’: ವೇಣುಗೋಪಾಲ್ ಭಾವುಕ ಮಾತು
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
17 ವರ್ಷಗಳ ಬಳಿಕ ಮಹತ್ವದ ಸ್ಥಾನ ಬಿಟ್ಟುಕೊಟ್ಟ ಸಿದ್ದರಾಮಯ್ಯ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
ಸಿಎಲ್​​​ಪಿ ಸಭೆಗೂ ಮುನ್ನವೇ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
CLP ಸಭೆಗೆ ತೆರಳುವ ಮುನ್ನ ವಿಧಾನಸೌಧದ ಬಾಗಿಲಿಗೆ ನಮಿಸಿದ ಡಿಕೆಶಿ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
RCB ಅಭಿಮಾನಿಗಳಿಗೆ ಬಿಗ್ ಶಾಕ್: ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡಿದ್ರೆ ಕ್ರಮ
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!
ಏಕಾಏಕಿ ಸಲೂನ್​​ ಒಳಗೆ ನುಗ್ಗಿದ ಹೋರಿ; ಸಿಸಿಟಿವಿ ದೃಶ್ಯ ವೈರಲ್!