Crime News: ಗೆಳತಿಗೆ ಗುಂಡು ಹಾರಿಸಿ, ಆತ್ಮಹತ್ಯೆಗೆ ಯತ್ನಿಸಿದ ವಿವಾಹಿತ ವ್ಯಕ್ತಿ

38 ವರ್ಷದ ವಿವಾಹಿತ ವ್ಯಕ್ತಿಯೊಬ್ಬ ತನ್ನ ಗೆಳತಿಗೆ ಗುಂಡು ಹಾರಿಸಿರುವ ಘಟನೆ ದೆಹಲಿಯ ನರೇಲಾದ ಓಯೋ ಹೋಟೆಲ್‌ನಲ್ಲಿ ನಡೆದಿದೆ. ಓಯೋ ಹೋಟೆಲ್‌ ಕೋಣೆಯಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ, ಕೋಪಗೊಂಡು ತನ್ನ ಗೆಳತಿಗೆ ಗುಂಡು ಹಾರಿಸಿದ್ದಾನೆ. ಆರೋಪಿಯನ್ನು ಪ್ರವೀಣ್ ಅಲಿಯಾಸ್ ಸಿತು ಎಂದು ಹೇಳಲಾಗಿದೆ.

Crime News: ಗೆಳತಿಗೆ ಗುಂಡು ಹಾರಿಸಿ, ಆತ್ಮಹತ್ಯೆಗೆ ಯತ್ನಿಸಿದ ವಿವಾಹಿತ ವ್ಯಕ್ತಿ
ಸಾಂದರ್ಭಿಕ ಚಿತ್ರ
Edited By:

Updated on: Nov 23, 2022 | 2:50 PM

ದೆಹಲಿ: 38 ವರ್ಷದ ವಿವಾಹಿತ ವ್ಯಕ್ತಿಯೊಬ್ಬ ತನ್ನ ಗೆಳತಿಗೆ ಗುಂಡು ಹಾರಿಸಿರುವ ಘಟನೆ ದೆಹಲಿಯ (delhi) ನರೇಲಾದ ಓಯೋ (oyo) ಹೋಟೆಲ್‌ನಲ್ಲಿ ನಡೆದಿದೆ. ಓಯೋ ಹೋಟೆಲ್‌ ಕೋಣೆಯಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ, ಕೋಪಗೊಂಡು ತನ್ನ ಗೆಳತಿಗೆ ಗುಂಡು ಹಾರಿಸಿದ್ದಾನೆ. ಆರೋಪಿಯನ್ನು ಪ್ರವೀಣ್ ಅಲಿಯಾಸ್ ಸಿತು ಎಂದು ಗುರುತಿಸಲಾಗಿದ್ದು, ಗೆಳತಿಗೆ ಗುಂಡು ಹಾರಿಸಿದ ನಂತರ ತನ್ನ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ. ಆದರೆ ಪ್ರವೀಣ್ ಬದುಕುಳಿದಿದ್ದಾನೆ, ಆತ ಈಗ ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಆರೋಪಿ ಮತ್ತು ಆತನ ಗೆಳತಿ ಗೀತಾ ಮಂಗಳವಾರ ಹೋಟೆಲ್​ನಲ್ಲಿ ಉಳಿದುಕೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹೋಟೆಲ್ ಸಿಬ್ಬಂದಿ ಇಂಡಿಯಾ ಟುಡೇ ನೀಡಿದ ಮಾಹಿತಿ ಪ್ರಕಾರ, ಇವರಿಬ್ಬರು ತುಂಬಾ ಜಗಳ ಮಾಡಿಕೊಂಡಿದ್ದರೆ, ಪ್ರವೀಣ್ ಎಂಬ ವ್ಯಕ್ತಿ ಕೋಪದ ಭರದಲ್ಲಿ ತನ್ನ ಗೆಳತಿಯ ಎದೆಗೆ ಗುಂಡು ಹಾರಿಸಿದ್ದಾನೆ. ಆಕೆಯನ್ನು ಕೊಂದ ಬಳಿಕ ತಾನೂ ಕೂಡ ಗಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಆರೋಪಿಯ ವಿರುದ್ಧ ಸೆಪ್ಟೆಂಬರ್ 21 ರಂದು ಮತ್ತೊಂದು ಕೊಲೆ ಪ್ರಕರಣದ ಆರೋಪ ಹೊರಿಸಲಾಯಿತು ಆದರೆ ನಂತರ ಜಾಮೀನು ನೀಡಲಾಯಿತು. ಗೌರವ್ ಎಂಬ ವ್ಯಕ್ತಿಗೆ ಗುಂಡು ಹಾರಿಸಿದ್ದು, ಆತನ ತಂದೆ ಪ್ರವೀಣ್ ವಿರುದ್ಧ ದೂರು ನೀಡಿದ ಕಾರಣ ಬಂಧಿಸಲಾಗಿತ್ತು.

ಇದನ್ನು ಓದಿ:ಮತ್ತೆ ಬೆಚ್ಚಿಬಿದ್ದ ದೆಹಲಿ, ಡ್ರಗ್ಸ್ ಸೇವಿಸಿ ತನ್ನ ಮನೆಯ 4 ಮಂದಿಯನ್ನು ಕೊಂದ ಯುವಕ

ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿದ ನಂತರ ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಬಂದಿದ್ದಾರೆ. ಗೀತಾಳನ್ನು ಆಸ್ಪತ್ರೆಗೆ ದಾಖಲಿಸಿದರು ಆಕೆಯನ್ನು ಬದುಕಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಪ್ರವೀಣ್‌ಗೆ ಸುಶೀಲ ಎಂಬ ಪತ್ನಿ ಇದ್ದು, ಹಳ್ಳಿಯೊಂದರಲ್ಲಿ ಮಕ್ಕಳೊಂದಿಗೆ ವಾಸವಾಗಿದ್ದಾಳೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

TV9 Web

TV9 Kannada

Read More
Loading...
Unable to load recommendations.
Follow Us