ಹಗಲು ಹೊತ್ತಲ್ಲೇ ಮಹಿಳೆಯ ಕೈ ಕಾಲು ಕಟ್ಟಿ ಹಾಕಿ ದರೋಡೆ; ಐವರು ಆರೋಪಿಗಳು ಅರೆಸ್ಟ್

ಮಾಡಿದ್ದ ಸಾಲ ತೀರಿಸಲು ಅಡ್ಡದಾರಿ ಹಿಡಿದಿದ್ದ ಪ್ರಭಾವತಿ ಎಂಬ ಮಹಿಳೆ ತನ್ನ ಗ್ಯಾಂಗ್​ನೊಂದಿಗೆ ಜನವರಿ‌ 14ರ ಬೆಳಗ್ಗೆ 9.20 ಗಂಟೆ ಸುಮಾರಿಗೆ ಕೊಡಿಗೆಹಳ್ಳಿ ಸಮೀಪದ ತಿಂಡ್ಲು ಸರ್ಕಲ್​ನಲ್ಲಿ ಇರುವ ಗಂಗಾ ಆಯುರ್ವೇದಿಕ್ ಮಸಾಜ್ ಸೆಂಟರ್​ಗೆ ನುಗ್ಗಿ ದರೋಡೆ ಮಾಡಿದ್ದರು. ಸದ್ಯ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಹಗಲು ಹೊತ್ತಲ್ಲೇ ಮಹಿಳೆಯ ಕೈ ಕಾಲು ಕಟ್ಟಿ ಹಾಕಿ ದರೋಡೆ; ಐವರು ಆರೋಪಿಗಳು ಅರೆಸ್ಟ್
ಪ್ರಾತಿನಿಧಿಕ ಚಿತ್ರ
Edited By: ಆಯೇಷಾ ಬಾನು

Updated on: Jan 17, 2024 | 8:40 AM

ಬೆಂಗಳೂರು, ಜ.17: ಹಗಲು ಹೊತ್ತಲ್ಲೇ ಮಹಿಳೆಯ ಕೈ ಕಾಲು ಕಟ್ಟಿ ಹಾಕಿ ರಾಬರಿ (Robbery) ಮಾಡಿದ್ದ ಖತರ್ನಾಕ್ ಗ್ಯಾಂಗನ್ನು ಕೊಡಿಗೆಹಳ್ಳಿ ಪೊಲೀಸರು (Kodigehalli Police) ಬಂಧಿಸಿದ್ದಾರೆ. ಗುರು, ರುದ್ರೇಶ್, ಸಂದೀಪ್, ಪ್ರಭಾವತಿ, ರೇಣುಕಾ ಬಂಧಿತರು. ಆರೋಪಿಗಳಾದ ಗುರು ಮತ್ತು ರೇಣುಕಾ ಇಬ್ಬರು ಪತಿ-ಪತ್ನಿ. ರೇಣುಕಾ ಹಣದ ಆಸೆಗೆ ಬಿದ್ದು ತನ್ನ ಸ್ನೇಹಿತೆ ಬಳಿಯೇ ಹಣ ದೋಚಲು ಸಂಚು ರೂಪಿಸಿ ಕೆಮಿಕಲ್ ಇದ್ದ ಕರ್ಚಿಫ್ ಮುಖಕ್ಕೆ ಇಟ್ಟು ಬಳಿಕ ಕೈ-ಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದರು. ಸದ್ಯ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಮಾಡಿದ್ದ ಸಾಲ ತೀರಿಸಲು ಅಡ್ಡದಾರಿ ಹಿಡಿದಿದ್ದ ಪ್ರಭಾವತಿ ಎಂಬ ಮಹಿಳೆ ತನ್ನ ಗ್ಯಾಂಗ್​ನೊಂದಿಗೆ ಜನವರಿ‌ 14ರ ಬೆಳಗ್ಗೆ 9.20 ಗಂಟೆ ಸುಮಾರಿಗೆ ಕೊಡಿಗೆಹಳ್ಳಿ ಸಮೀಪದ ತಿಂಡ್ಲು ಸರ್ಕಲ್​ನಲ್ಲಿ ಇರುವ ಗಂಗಾ ಆಯುರ್ವೇದಿಕ್ ಮಸಾಜ್ ಸೆಂಟರ್​ಗೆ ನುಗ್ಗಿ ಅಟ್ಟಹಾಸ ಮೆರೆದಿದ್ದಳು. ಅನುಶ್ರೀ ಎಂಬ ಮಹಿಳೆಯ ಕೈ ಕಾಲು ಕಟ್ಟಿ ಹಾಕಿ ಮಾಂಗಲ್ಯ ಸರ ಸೇರಿದಂತೆ ಚಿನ್ನಾಭರಣ ಕಸಿದು ಪರಾರಿಯಾಗಿದ್ದರು. ಘಟನೆ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ:  ಸಿಎಂ, ಡಿಸಿಎಂ ವಿರುದ್ಧ ಅವಹೇಳನಕಾರಿ ವಿಡಿಯೋ ಹರಿಬಿಟ್ಟ ಯುವಕ ಅರೆಸ್ಟ್

ಆರೋಪಿಗಳು ಆಯುರ್ವೇದಿಕ್​ಗೆ ಸೆಂಟರ್​ಗೆ ಮಸಾಜ್ ಥೆರಪಿಗೆಂದು ಬಂದು ದರೋಡೆ ಮಾಡಿದ್ದರು. ಅಲ್ಲದೆ ಆರೋಪಿಗಳು ಆಯುರ್ವೇದಿಕ್ ಮಸಾಜ್ ಮಾಡಿಸೋ ಮಾಹಿತಿ ಕೇಳಲು ಹಿಂದಿನ ದಿನವೇ ಬಂದು ದರೋಡೆಗೆ ಪ್ಲಾನ್ ಮಾಡಿ ಹೋಗಿದ್ದರು. ರೇಣುಕಾ ಮತ್ತು ಅವಳ ಗಂಡ ಗುರು ಪ್ಲಾನ್ ಮಾಡಿ ದರೋಡೆಗೆ ಸ್ಕೆಚ್ ಹಾಕಿದ್ರು. ಥೆರಫಿಸ್ಟ್ ಒಬ್ಬಳೇ ಇದ್ದಾಗ ದರೋಡೆ ಮಾಡಲು ಬೆಳಗ್ಗೆ 8:30ರ ಸುಮಾರಿಗೆ ಈ ಗ್ಯಾಂಗ್ ಎಂಟ್ರಿ ಕೊಟ್ಟಿತ್ತು. ಎರಡು ಪಲ್ಸರ್ ಬೈಕ್ ನಲ್ಲಿ ಬಂದಿದ್ದ ಗುರು, ಪ್ರಭಾವತಿ, ರುದ್ರೇಶ್, ಸಂದೀಪ್ ಗಂಗಾ ಆಯುರ್ವೇದಿಕ್ ಮಸಾಜ್ ಸೆಂಟರ್ ಬಳಿ ಗಾಡಿ ನಿಲ್ಲಿಸಿದರು. ಬಳಿಕ ಥೆರಫಿಸ್ಟ್ ಅನುಶ್ರೀ ಒಬ್ಬರೇ ಇದ್ದದನ್ನು ಗಮನಿಸಿ ಒಳಗೆ ಬಂದು ದರದ ಬಗ್ಗೆ ಚರ್ಚಿಸಿದ್ದಾರೆ.

ಇನ್ನು ದರೋಡೆ ಮಾಡಲು ಬಂದಾಗ ಗುರು ಜೊತೆಗೆ ಪತ್ನಿ ರೇಣುಕಾ ಬಂದಿರಲಿಲ್ಲ. ಪ್ರಭಾವತಿ ಮಸಾಜ್ ಬಗ್ಗೆ ಮಾಹಿತಿ ಪಡೆದು ನನ್ನ ಗಂಡ ಬಂದು ಹಣ ನೀಡ್ತಾರೆ ಎಂದು ಗುರುನನ್ನ ಒಳಗೆ ಕರೆಸಿಕೊಂಡಿದ್ಲು. ಒಳಗೆ ಬಂದ ಗುರು ಅನ್ಲೈನ್ ಪೇಮೆಂಟ್ ಮಾಡೋದಾಗಿ ಹೇಳಿದ. ಜೇಬಿನಿಂದ ಮೊಬೈಲ್ ಎತ್ತುವಂತೆ ಮಾಡಿ ತಕ್ಷಣ ಕೆಮಿಕಲ್ ಇದ್ದ ಕರ್ಚಿಫ್ ಅನ್ನು ಅನುಶ್ರೀ ಮುಖಕ್ಕೆ ಇಟ್ಟು ಆಕೆಯ ಕೈ ಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ.

ಅನುಶ್ರೀ ಮೈ ಮೇಲಿದ್ದ ಚಿನ್ನದ ಸರ ದೋಚಿದ್ದಾರೆ. ಕೋಡಿಗೆಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡು ಐವರನ್ನ ಬಂಧಿಸಿದ್ದಾರೆ. ಆರೋಪಿಗಳನ್ನ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಅನುಶ್ರೀ ಮತ್ತು ರೇಣುಕಾ ಇಬ್ಬರು ಪರಿಚಯಸ್ಥರೇ ಅನ್ನೋದು ಬಯಲಾಗಿದೆ. ರೇಣುಕಾ ಕೂಡ ಥೆರಪಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದಳು. ಹಣಕ್ಕಾಗಿ ಅನುಶ್ರೀ ಚಿನ್ನಾಭರಣ ದೋಚಲು ಸಂಚು ರೂಪಿಸಿದ್ದು ಬಯಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Loading...
Unable to load recommendations.
Follow Us