AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಟ್ರಂಕ್​​​ನಲ್ಲಿ ಪತ್ತೆ: ಹಣ ವರ್ಗಾವಣೆಯಿಂದಲೇ ಕೊಲೆ ರಹಸ್ಯ ಬಯಲು

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೂವನೂರು ಗ್ರಾಮದಲ್ಲಿ 65 ವರ್ಷದ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್​​ ಟ್ವಿಸ್ಟ್ ಸಿಕ್ಕಿದೆ. ಆಶ್ರಯ ಕೊಟ್ಟ ಮನೆ ಮಾಲೀಕನನ್ನೇ ಕೊಲೆ ಮಾಡಿ, ಎರಡು ಟ್ರಂಕ್​​ಗಳಲ್ಲಿ ಹಾಕಿ ಬಾವಿಗೆ ಎಸೆಯಲಾಗಿದ್ದು, ಇದೀಗ ಶವ ಪತ್ತೆ ಆಗಿದೆ.

ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಟ್ರಂಕ್​​​ನಲ್ಲಿ ಪತ್ತೆ: ಹಣ ವರ್ಗಾವಣೆಯಿಂದಲೇ ಕೊಲೆ ರಹಸ್ಯ ಬಯಲು
ಕೊಲೆಯಾದ ವ್ಯಕ್ತಿ, ಬಂಧಿತರು,
ರವಿ ಹೆಚ್ ಮೂಕಿ, ಕಲಘಟಗಿ
| Edited By: |

Updated on: Nov 19, 2026 | 3:31 PM

Share

ಮುಖ್ಯಾಂಶಗಳು

  • 65 ವರ್ಷದ ವ್ಯಕ್ತಿ ನಾಪತ್ತೆ ಕೇಸ್​ಗೆ ಟ್ವಿಸ್ಟ್
  • ವ್ಯಕ್ತಿಯ ಮೃತದೇಹ ಟ್ರಂಕ್​​​ನಲ್ಲಿ ಪತ್ತೆ
  • ಕೊಲೆಯಾದವನ ಮನೆಯಲ್ಲೇ ದೀಪಾವಳಿ ಮಾಡಿದ್ದ ಆರೋಪಿಗಳ ಬಂಧನ

ಬಾಗಲಕೋಟೆ, ನವೆಂಬರ್​​ 19: ನಗರದಲ್ಲಿ 65 ವರ್ಷದ ವ್ಯಕ್ತಿ ನಾಪತ್ತೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆಯಾದ ಸ್ಥಿತಿಯಲ್ಲಿ ಎರಡು ಟ್ರಂಕ್​​ನಲ್ಲಿ ವ್ಯಕ್ತಿಯ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಸಾಲದ ಹಣ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿ, ದೇಹವನ್ನು ಮೂರು ಭಾಗಗಳಾಗಿ ತುಂಡರಿಸಿ ಟ್ರಂಕ್‌ಗಳಲ್ಲಿ ತುಂಬಿ ಬಾವಿಗೆ ಎಸೆದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ನಡೆದಿದ್ದೇನು?

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೂವನೂರು ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ಮಾರ್ಚ್ 12ರಿಂದ ಅಶೋಕ ಅಂಗಡಿ ನಾಪತ್ತೆಯಾಗಿದ್ದರು. ಮಾರ್ಚ್ 14ರಂದು ಕಾಣೆಯಾದ ಬಗ್ಗೆ ಹುನಗುಂದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಇದೀಗ ಕೊಲೆಯಾದ ಸ್ಥಿತಿಯಲ್ಲಿ ಅಶೋಕ ಶವ ಪತ್ತೆ ಆಗಿದೆ. ಹಾಗಾದರೆ ಮಾರ್ಚ್ 12ರಂದೇ ಕೊಲೆ ನಡೆದಿದೆ.

ಇದನ್ನೂ ಓದಿ: 7 ಜನರ ಹತ್ಯೆ ಕೇಸ್​​: ತಂದೆ-ಮಗಳಿಗೆ ಖಾಕಿ ಗ್ರಿಲ್​​; ಕೃತ್ಯದ ಪ್ರತಿಯೊಂದು ದೃಶ್ಯವೂ ರಿಕ್ರಿಯೇಟ್

ಆರೋಪಿಗಳು ಅಶೋಕ ಅಂಗಡಿಯವರಿಂದ ಸುಮಾರು ಒಂದೂವರೆ ಲಕ್ಷ ರೂ ಸಾಲ ಪಡೆದಿದ್ದರು. ಸಾಲದ ಹಣ ಮರಳಿ ನೀಡುವಂತೆ ಕೇಳಿದ್ದಲ್ಲದೆ, ಆಸ್ಪತ್ರೆ ಮತ್ತು ಮನೆ ಬಾಡಿಗೆ ಪಾವತಿಸುವಂತೆ ಒತ್ತಾಯಿಸಿದ್ದಕ್ಕೆ ಆಕ್ರೋಶಗೊಂಡು ಕೊಲೆ ಮಾಡಿದ್ದಾರೆ. ಆರ್‌ಎಂಪಿ ವೈದ್ಯ ಸುದೀಪ್ (24), ಆತನ ಸಹೋದರ ಸಂದೀಪ್ (25), ರಮೇಶ್, ಸಂಗನಗೌಡ ಹಾಗೂ ಇತರರು ಸೇರಿ ಅಶೋಕ ಅಂಗಡಿಯನ್ನು ರಾಡ್‌ನಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ಮೂರು ಭಾಗಗಳಾಗಿ ತುಂಡರಿಸಿದ್ದಾರೆ. ತಲೆ ಮತ್ತು ಕಾಲುಗಳನ್ನು ಒಂದು ಟ್ರಂಕ್‌ನಲ್ಲಿ, ಕೈ ಹಾಗೂ ದೇಹದ ಇತರ ಭಾಗಗಳನ್ನು ಮತ್ತೊಂದು ಟ್ರಂಕ್‌ನಲ್ಲಿ ತುಂಬಿದ್ದಾರೆ. ನಂತರ ಟ್ರಂಕ್​​ಗೆ ಕಲ್ಲು ಕಟ್ಟಿ ವಿಜಯಪುರ ನಗರದ ಬಾವಿಯೊಂದಕ್ಕೆ ಎಸೆದಿದ್ದಾರೆ.

LIVE TV

ಕೊಲೆ‌ ಮಾಡಿದ‌ ಮನೆಯಲ್ಲೇ ದೀಪಾವಳಿ ಆಚರಿಸಿದ್ದ ಆರೋಪಿಗಳು

ಅಶೋಕ ಅಂಗಡಿಯವರ ಕಾಂಪ್ಲೆಕ್ಸ್‌ನಲ್ಲಿ ಸುದೀಪ್ ಮತ್ತು ಸಂದೀಪ್ ಬಾಡಿಗೆಗೆ ಮನೆ ಪಡೆದು ಆಸ್ಪತ್ರೆ ಹಾಗೂ ಬಟ್ಟೆ ಅಂಗಡಿ ನಡೆಸುತ್ತಿದ್ದರು. ಇತ್ತೀಚೆಗೆ ಅವರು ಬಾಡಿಗೆ ಮನೆಯನ್ನು ಖಾಲಿ ಮಾಡಿದ್ದರು. ಕೊಲೆ ಮಾಡಿದ ಬಳಿಕ ಆರೋಪಿಗಳು ಅಶೋಕ ಅಂಗಡಿಯವರ ಕುಟುಂಬಸ್ಥರೊಂದಿಗೆ ಸೇರಿಕೊಂಡು ಅವರಿಗಾಗಿ ಹುಡುಕಾಟ ನಡೆಸುವ ನಾಟಕವಾಡಿದ್ದರು. ಅಷ್ಟೇ ಅಲ್ಲದೆ, ತಮಗೆ ಆಶ್ರಯ ನೀಡಿದ್ದ ಅಶೋಕ ಅಂಗಡಿಯವರ ಮನೆಯಲ್ಲಿಯೇ ದೀಪಾವಳಿ ಆಚರಿಸಿ, ಊಟವನ್ನೂ ಮಾಡಿದ್ದರು.

ಮೊಬೈಲ್‌ನಿಂದ ವರ್ಗಾವಣೆಯಾದ 150 ರೂ.ಯಿಂದ ಕೊಲೆ ರಹಸ್ಯ ಬಯಲು

ಅಶೋಕ ಅಂಗಡಿಯವರ ಮೊಬೈಲ್‌ನಿಂದ ಕೇವಲ 150 ರೂ ವರ್ಗಾವಣೆಯಾಗಿರುವ ಸುಳಿವು ಪ್ರಕರಣದ ತನಿಖೆಯಲ್ಲಿ ಮಹತ್ವದ ತಿರುವು ನೀಡಿದೆ. ಇತ್ತ ಪೊಲೀಸರಿಗೆ ಸಹೋದರರ ಮೇಲೆ ಅನುಮಾನ ಮೂಡಿತ್ತು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.

ನಾಲ್ವರು ಆರೋಪಿಗಳ ಬಂಧನ

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಸುದೀಪ್, ಸಂದೀಪ್, ರಮೇಶ್ ಮತ್ತು ಸಂಗನಗೌಡರನ್ನು ಪೊಲೀಸರು ಬಂಧಿಸಿದ್ದಾರೆ. ಸಾಲದ ಹಣ ಮರಳಿ ಕೇಳಿದ್ದಕ್ಕೆ ನಡೆದ ಈ ಬರ್ಬರ ಕೊಲೆ ಪ್ರಕರಣ ಹೂವನೂರು ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಬೆಚ್ಚಿಬೀಳಿಸಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ರವಿ ಹೆಚ್ ಮೂಕಿ, ಕಲಘಟಗಿ
ರವಿ ಹೆಚ್ ಮೂಕಿ, ಕಲಘಟಗಿ

ರವಿ ಹೆಚ್ ಮೂಕಿ. ಮೂಲತಃ ಧಾರವಾಡ ಜಿಲ್ಲೆ ಕಲಘಟಗಿ ತಾಲ್ಲೂಕಿನ ಪರಸಾಪುರ ಗ್ರಾಮದವರು.ರವಿ ಮೂಕಿ ಪ್ರಸ್ತುತ ಟಿವಿ9 ನ್ಯೂಜ್ ಚಾನಲ್‌ ನಲ್ಲಿ ಬಾಗಲಕೋಟೆ ವರದಿಗಾರರು.ಪದವಿ ಮುಗಿಸಿ ಕೆಲ ತಿಂಗಳು ರಿಲಯನ್ಸ್ ಕಂಪನಿಯಲ್ಲಿ ಕೆಲಸ, ನಂತರ ಜನಶ್ರೀ ನ್ಯೂಜ್‌ ಹಾವೇರಿ ಜಿಲ್ಲಾ ವರದಿಗಾರರಾಗಿ ೨೦೧೦ ರಿಂದ ೨೦೧೫ ರವರೆಗೆ ಕೆಲಸ ಮಾಡಿದ್ದಾರೆ.೨೦೧೫ ರಿಂದ‌ ಟಿವಿ ೯ ಬಾಗಲಕೋಟೆ ಜಿಲ್ಲಾ ವರದಿಗಾರರಾಗಿ ‌ಕೆಲಸ ಮುಂದುವರೆಸಿದ್ದಾರೆ.ಮಾದ್ಯಮದಲ್ಲಿ ಸಕ್ರಿಯರಾಗಿದ್ದು,ಹಾವೇರಿ ಬಾಗಲಕೋಟೆ ಜಿಲ್ಲೆ ಸೇರಿ ಒಟ್ಟು.೧೪ ವರ್ಷ ಮಾದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ.ರಾಜಕೀಯ,ಕೃಷಿ,ಗ್ರಾಮೀಣ ಕ್ರೀಡೆ,ಮಾನವೀಯ ಸ್ಟೋರಿಗಳ ವರದಿ ಮಾಡಲು ಹೆಚ್ಚು ಆಸಕ್ತಿ.ಸಿನಿಮಾ ನೋಡುವುದು,ಸಂಗೀತ ಕೇಳೋದು ಹಾಡೋದು ಇಷ್ಟ. ಟಿರ್ವಿ ಬಾಗಲಕೋಟೆ ಜಿಲ್ಲಾ ವರದಿಗಾರನಾಗಿ ಉತ್ತರಕರ್ನಾಟಕ ದಲ್ಲಿನ ಪ್ರವಾಹ ಸಂಕಷ್ಟ ಕವರೇಜ್. ,ಬಾದಾಮಿ ಸಿದ್ದರಾಮಯ್ಯ- ರಾಮುಲು ಹೈವೋಲ್ಟೇಜ್ ಚುನಾವಣೆ ಕವರೇಜ್,ಅದೇ ಚುನಾವಣೆಯಲ್ಲಿ ಜೆಪಿ ಕೇಂದ್ರ ನಾಯಕ ಅಮಿತ್ ಷಾ ಇಂಟರ್ ವ್ಯೂ ಮಾಡೋಕೆ ಸಂಸ್ಥೆಯಲ್ಲಿ ಅವಕಾಶ ಸಿಕ್ಕಿದ್ದು ಖುಷಿ ಹೆಮ್ಮೆ.

Read More