AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಡಾನೆ ದಾಳಿಯಿಂದ ಕಾವೇರಿ ಸಾಕಾನೆ ಶಿಬಿರದಲ್ಲಿದ್ದ ರಾಮಯ್ಯ ಸಾವು

ಮೈಸೂರಿನ ದೊಡ್ಡಹರವೆ ಸಾಕಾನೆ ಶಿಬಿರದಲ್ಲಿ 'ರಾಮಯ್ಯ' ಎಂಬ ಸಾಕಾನೆ ಕಾಡಾನೆ ದಾಳಿಗೆ ಬಲಿಯಾಗಿದೆ. ಬಿಗಿ ಭದ್ರತೆಯ ನಡುವೆಯೂ ಕಾಡಾನೆ ನುಗ್ಗಿದ್ದು ಹೇಗೆ ಎಂಬುದು ಅನುಮಾನ ಹುಟ್ಟಿಸಿದೆ. ಅರಣ್ಯಾಧಿಕಾರಿಗಳು ಸೂಕ್ತ ಮಾಹಿತಿ ನೀಡದಿರುವುದು ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ. ಮಾನವ-ವನ್ಯಜೀವಿ ಸಂಘರ್ಷದ ಜೊತೆ ಆನೆಗಳ ನಡುವಿನ ಕಾಳಗವೂ ಹೆಚ್ಚಿದೆ. ಇದು ಆನೆಗಳ ಸುರಕ್ಷತೆ ಬಗ್ಗೆ ಚಿಂತೆ ಹೆಚ್ಚಿಸಿದೆ.

ಕಾಡಾನೆ ದಾಳಿಯಿಂದ ಕಾವೇರಿ ಸಾಕಾನೆ ಶಿಬಿರದಲ್ಲಿದ್ದ ರಾಮಯ್ಯ ಸಾವು
ರಾಮ್​, ಮೈಸೂರು
| Edited By: |

Updated on: Nov 19, 2026 | 1:39 PM

Share

ಮೈಸೂರು, ನ,19: ಚಿಕ್ಕಮಗಳೂರು, ಹಾಸನದಲ್ಲಿಮಾನವ ಹಾಗೂ ಆನೆಗಳ ನಡುವೆ ಕಾಳಗದಿಂದ ಸಾವು-ನೋವು ಸಂಭವಿಸಿದೆ. ಅರಣ್ಯಾಧಿಕಾರಿಗಳು ಹಾಗೂ ಸರ್ಕಾರ ವಿರೋಧ ಜನ ಆಕ್ರೋಶಗೊಂಡಿರುವ ಸಮಯದಲ್ಲೇ ಆನೆಗಳ ನಡುವೆ ಸಂಘರ್ಷ ನಡೆದು ಸಾಕಾನೆಯೊಂದು ಸಾವನ್ನಪ್ಪಿದೆ. ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹುಣಸೂರು ಅರಣ್ಯ ವಲಯಕ್ಕೆ ಸೇರಿದ ದೊಡ್ಡಹರವೆ ಕಾವೇರಿ ಸಾಕಾನೆ ಶಿಬಿರದಲ್ಲಿ ಗಂಡು ಸಾಕಾನೆಯೊಂದು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಶಿಬಿರದಲ್ಲಿದ್ದ ‘ರಾಮಯ್ಯ’ ಎಂಬ ಹೆಸರಿನ ಸಾಕಾನೆ ಬುಧವಾರ (ನವೆಂಬರ್ 18) ರಾತ್ರಿ ಕಾಡಾನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಆದರೆ, ಬಿಗಿ ಭದ್ರತೆ ಇರುವ ಶಿಬಿರದೊಳಕ್ಕೆ ಕಾಡಾನೆ ನುಗ್ಗಿದ್ದು ಹೇಗೆ ಎಂಬ ಬಗ್ಗೆ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ದೊಡ್ಡಹರವೆ ಕಾವೇರಿ ಸಾಕಾನೆ ಶಿಬಿರದಲ್ಲಿ ಬೀಡುಬಿಟ್ಟಿದ್ದ ಗಂಡು ಸಾಕಾನೆ ರಾಮಯ್ಯನ ಮೇಲೆ ಬುಧವಾರ (ನ.18) ರಾತ್ರಿ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ ಎನ್ನಲಾಗಿದೆ. ಕಾಡಾನೆ ದಾಳಿ ನಡೆಸುತ್ತಿದ್ದಂತೆಯೇ ಶಿಬಿರದಲ್ಲಿದ್ದ ಅರಣ್ಯ ಸಿಬ್ಬಂದಿ ಹಾಗೂ ಮಾವುತರು ಕಾಡಾನೆಯನ್ನು ಹಿಮ್ಮೆಟ್ಟಿಸಿ ರಾಮಯ್ಯನನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ. ಆದರೆ ಸಿಬ್ಬಂದಿಗಳ ಪ್ರಯತ್ನದ ನಡುವೆಯೂ ಗಂಭೀರವಾಗಿ ಗಾಯಗೊಂಡ ಸಾಕಾನೆ ರಾಮಯ್ಯ ಕೊನೆಯುಸಿರೆಳೆದಿದೆ.

ಘಟನೆಯ ಬಳಿಕ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಹಿರಿಯ ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಪಶುವೈದ್ಯಾಧಿಕಾರಿಗಳು ರಾಮಯ್ಯನ ಮರಣೋತ್ತರ ಪರೀಕ್ಷೆನಡೆಸಿದರು. ಬಳಿಕ ಅರಣ್ಯ ಇಲಾಖೆಯ ನಿಯಮಾವಳಿಗಳ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ಇದನ್ನೂ ಓದಿ; ಇತಿಹಾಸ ಪುಟ ಸೇರಿದ ಸಿಸಿಬಿ ಹೆಸರು: ‘ಆ್ಯಂಟಿ ರೌಡಿ ಸ್ಕ್ವಾಡ್’ ಆಗಿ ಮರುನಾಮಕರಣ ಮಾಡಿದ ರಾಜ್ಯ ಸರ್ಕಾರ

ಸಾಮಾನ್ಯವಾಗಿ ಸಾಕಾನೆ ಶಿಬಿರಗಳಲ್ಲಿ ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಸಿಬ್ಬಂದಿ ದಿನದ 24 ಗಂಟೆಯೂ ಕಾವಲು ಕಾಯುತ್ತಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಡಾನೆಯೊಂದು ಶಿಬಿರದೊಳಗೆ ಬಂದು ಸಾಕಾನೆಯ ಮೇಲೆ ದಾಳಿ ನಡೆಸಿ ಕೊಲ್ಲುವವರೆಗೂ ಏನಾಯಿತು ಹಾಗೂ ಕಾಡಾನೆ ಶಿಬಿರದೊಳಗೆ ನುಗ್ಗಿದ್ದು ಹೇಗೆ ಎಂಬ ಬಗ್ಗೆ ಅರಣ್ಯಾಧಿಕಾರಿಗಳು ಸ್ಪಷ್ಟ ಮತ್ತು ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಸಾಕಾನೆ ರಾಮಯ್ಯನ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More