ಸುಂಕದಕಟ್ಟೆಯಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಯುವತಿಗೆ ಇಂದಿನಿಂದ ಚರ್ಮ ಜೋಡಣೆ ಕಾರ್ಯ
ವೈದ್ಯರು ಬೆಳಗ್ಗೆ 9.30ಕ್ಕೆ ಆಪರೇಷನ್ ಥಿಯೇಟರ್ಗೆಗೆ ಕರೆದೊಯ್ದಿದ್ದಾರೆ. ಸದ್ಯ ಯುವತಿಯ ಸ್ಥಿತಿ ಸಹಜವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಪರಾರಿಯಾಗಿರುವ ಆರೋಪಿ ನಾಗೇಶ್ಗಾಗಿ ಶೋಧಕಾರ್ಯ ಮುಂದುವರಿದಿದೆ.
ಬೆಂಗಳೂರು: ಸುಂಕದಕಟ್ಟೆಯಲ್ಲಿ ಆ್ಯಸಿಡ್ (Acid) ದಾಳಿಗೆ ಒಳಗಾಗಿದ್ದ ಸಂತ್ರಸ್ತೆಗೆ ಇಂದಿನಿಂದ (ಮೇ 2) ಚರ್ಮ ಜೋಡಣೆ ಕಾರ್ಯ ಆರಂಭವಾಗಿದೆ. ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಸಂತ್ರಸ್ತೆ ಯುವತಿಗೆ ಚಿಕಿತ್ಸೆ ಮುಂದುವರಿದಿದೆ. ನುರಿತ ವೈದ್ಯರ ತಂಡದಿಂದ ಸುಟ್ಟ ಭಾಗಕ್ಕೆ ಚರ್ಮ (Skin) ಜೋಡಣೆ ಮಾಡುತ್ತಿದ್ದಾರೆ. ವೈದ್ಯರು ಬೆಳಗ್ಗೆ 9.30ಕ್ಕೆ ಆಪರೇಷನ್ ಥಿಯೇಟರ್ಗೆ ಕರೆದೊಯ್ದಿದ್ದಾರೆ. ಸದ್ಯ ಯುವತಿಯ ಸ್ಥಿತಿ ಸಹಜವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಪರಾರಿಯಾಗಿರುವ ಆರೋಪಿ ನಾಗೇಶ್ಗಾಗಿ ಶೋಧಕಾರ್ಯ ಮುಂದುವರಿದಿದೆ. ಐದು ಪ್ರತ್ಯೇಕ ತಂಡಗಳಿಂದ ಹುಡುಕಾಟ ನಡೆಯುತ್ತಿದೆ.
ನಾಗೇಶ್ಗೆ ಕಠಿಣ ಶಿಕ್ಷೆ ಆಗಲೇಬೇಕೆಂದು ಯುವತಿ ಕುಟುಂಬಸ್ಥರು ಒತ್ತಾಯಿಸುತ್ತಿದ್ದಾರೆ. ಸಂತ್ರಸ್ತೆಯ ಚಿಕ್ಕಪ್ಪ ಸುಂದರೇಶ್ ಎಂಬುವವರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆ್ಯಸಿಡ್ ಎರಚಿದ ತಪ್ಪಿಗೆ ಆತನಿಗೆ ತಕ್ಕ ಶಾಸ್ತಿಯಾಗಲೇಬೇಕು. ರಾಜ್ಯಸರ್ಕಾರ ಹಾಗೂ ಪೊಲೀಸ್ ಇಲಾಖೆ ಮೇಲೆ ನಂಬಿಕೆ ಇದೆ ಅಂತ ಬೆಂಗಳೂರಿನಲ್ಲಿ ಟಿವಿ9ಗೆ ಹೇಳಿಕೆ ನೀಡಿದ್ದಾರೆ.
ಆರೋಪಿ ನಾಗೇಶ್ಗೆ ಅತಿಯಾದ ದೈವ ಭಕ್ತಿ ಇತ್ತಂತೆ. ಹಣೆ ಮೇಲೆ ಯಾವಾಗಲು ಕೆಂಪು ಬಣ್ಣದ ತಿಲಕ ಇಟ್ಕೊತಿದ್ದನಂತೆ. ಪ್ರತಿ ದಿನ ತಪ್ಪದೇ ಸೂರ್ಯ ನಮಸ್ಕಾರ ಮಾಡುತ್ತಿದ್ದ. ಸೂರ್ಯ ನಮಸ್ಕಾರ ಮಾಡಿದ ಬಳಿಕವೇ ಕೆಲಸಕ್ಕೆ ತೆರಳುತ್ತಿದ್ದ. ತಾನಾಯ್ತು ತನ್ನ ಕೆಲಸ ಆಯ್ತು ಅಂತಾ ಇರುತ್ತಿದ್ದ. ಹೆಚ್ಚಿನ ಸ್ನೇಹ ಬಳಗ ಹೊಂದಿರಲಿಲ್ಲ. ಏರಿಯಾದಲ್ಲಿ ಎದುರಿಗೆ ಸಿಕ್ಕವರ ಜೊತೆಗಷ್ಟೇ ಮಾತನಾಡುತ್ತಿದ್ದ ಎಂದು ಹೇಳಲಾಗುತ್ತಿದೆ.
ಆರೋಪಿ ನಾಗೇಶ್ ಲಕ್ಷ ಲಕ್ಷ ಹಣದ ಜೊತೆಗೆ ಪರಾರಿಯಾಗಿದ್ದಾನೆ. ಗಾರ್ಮೆಂರ್ಟ್ನಲ್ಲಿದ್ದ ವಸ್ತುಗಳನ್ನ ಮಾರಾಟ ಮಾಡಿದ್ದ. ಅದರಿಂದ ಬಂದ ಹಣವನ್ನು ಸಂಗ್ರಹಿಸಿ ಇಟ್ಟುಕೊಂಡಿದ್ದ. ಅಷ್ಟು ಹಣದ ಜೊತೆಗೆ ಎಸ್ಕೇಪ್ ಆಗಿದ್ದಾನೆ.
ಬೇರೆ ರಾಜ್ಯಕ್ಕೆ ಪರಾರಿಯಾಗಿರುವ ಶಂಕೆ: ತಮಿಳುನಾಡು ಅಥವಾ ಆಂಧ್ರದತ್ತ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ದೇವಸ್ಥಾನ, ಮಠಗಳಿಗೆ ಸೇರಿರುವ ಬಗ್ಗೆ ಅನುಮಾನ ಇದೆ. ಪ್ರತಿಯೊಂದು ಮಠ, ದೇವಸ್ಥಾನಗಳಲ್ಲಿ ಹುಡುಕಾಟ ನಡೆಯುತ್ತಿದೆ. ಪೊಲೀಸರು ಈಗಾಗಲೇ ಕರಪತ್ರಗಳನ್ನು ಸಿದ್ಧಪಡಿಸಿದ್ದಾರೆ. ಅದನ್ನು ನೆರೆ ರಾಜ್ಯಗಳಲ್ಲಿಯೂ ಹಂಚಲು ಸಿದ್ಧತೆ ಮಾಡಿದ್ದಾರೆ.
ಇದನ್ನೂ ಓದಿ
ಬಿಡುಗಡೆಗೂ ಮುನ್ನವೇ ಲೀಕ್ ಆಯ್ತು ಮಹೇಶ್ ಬಾಬು ಹೊಸ ಸಿನಿಮಾದ ದೃಶ್ಯಗಳು; ಫ್ಯಾನ್ಸ್ ಗರಂ
Published On - 12:34 pm, Mon, 2 May 22