ಪೆಟ್ರೋಲ್ ಟ್ಯಾಂಕರ್‌ಗೆ ಬಸ್ ಡಿಕ್ಕಿ: 21 ಜನ ದುರ್ಮರಣ, 38 ಜನರಿಗೆ ಗಾಯ
ಅಫ್ಘಾನಿಸ್ತಾನ ದಲ್ಲಿ ಪೆಟ್ರೋಲ್ ಟ್ಯಾಂಕರ್, ಬಸ್ ಮತ್ತು ಬೈಕ್ ಮಧ್ಯೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಬಸ್ನಲ್ಲಿದ್ದ 21 ಜನ ದುರ್ಮರಣ ಹೊಂದಿದ್ದಾರೆ. 38 ಜನರಿಗೆ ಗಾಯಗಳಾಗಿರುವಂತಹ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ 38 ಗಾಯಾಳುಗಳನ್ನು ತಕ್ಷಣವೇ ಗ್ರಿಷ್ಕ್ ಜಿಲ್ಲೆಯ ಹೆಲ್ಮಂಡ್, ಲಷ್ಕರ್ಗಾ ನಗರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕಾಬೂಲ್, ಮಾರ್ಚ್ 17: ಅಫ್ಘಾನಿಸ್ತಾನ (Afghanistan) ದಲ್ಲಿ ಪೆಟ್ರೋಲ್ ಟ್ಯಾಂಕರ್, ಬಸ್ ಮತ್ತು ಬೈಕ್ ಮಧ್ಯೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದ್ದು, ಬಸ್ನಲ್ಲಿದ್ದ 21 ಜನ ದುರ್ಮರಣ ಹೊಂದಿದ್ದಾರೆ. 38 ಜನರಿಗೆ ಗಾಯಗಳಾಗಿರುವಂತಹ ಘಟನೆ ನಡೆದಿದೆ. ಬೈಕ್ಗೆ ಡಿಕ್ಕಿಯಾದ ನಂತರ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಹಾರ್‌ನಿಂದ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದ ಪೆಟ್ರೋಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ವರದಿ ಆಗಿದೆ. ಹೆಲ್ಮಂಡ್‌ನ ಗ್ರಿಷ್ಕ್ ಜಿಲ್ಲೆಯ ರಾಜಧಾನಿ ಕಾಬೂಲ್ ಮತ್ತು ಉತ್ತರದ ಹೆರಾತ್ ನಗರದ ನಡುವಿನ ಮುಖ್ಯ ಹೆದ್ದಾರಿಯಲ್ಲಿ ಭಾನುವಾರ ಅಪಘಾತ ಸಂಭವಿಸಿದೆ.
‘ಇಂದು ಮುಂಜಾನೆ, ನಮಗೆ ಇದುವರೆಗೆ ಬಂದ ಮಾಹಿತಿಯ ಪ್ರಕಾರ, ಬಸ್, ಟ್ಯಾಂಕರ್ ಮತ್ತು ಮೋಟಾರ್ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 21 ಜನರು ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ವಕ್ತಾರ ಮೊಹಮ್ಮದ್ ಖಾಸಿಮ್ ರಿಯಾಜ್’ ತಿಳಿಸಿದ್ದಾರೆ.
ಎಎನ್ಐ ಟ್ವೀಟ್
21 killed, 38 injured as bus collides with oil tanker in Afghanistan’s Helmand
Read @ANI Story | https://t.co/q4UMtPvnoT#Afghanistan #Helmand #Accident pic.twitter.com/nXvIpXypR1
— ANI Digital (@ani_digital) March 17, 2024
ಸದ್ಯ ಘಟನೆಯಲ್ಲಿ ಗಾಯಗೊಂಡ 38 ಗಾಯಾಳುಗಳನ್ನು ತಕ್ಷಣವೇ ಗ್ರಿಷ್ಕ್ ಜಿಲ್ಲೆಯ ಹೆಲ್ಮಂಡ್, ಲಷ್ಕರ್ಗಾ ನಗರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಗಾಯಗೊಂಡವರಲ್ಲಿ 11 ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಆಗಿದೆ. ಇನ್ನು ಅಪಘಾತದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೆಲ್ಮಂಡ್‌ನಲ್ಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಗೋವಾದಲ್ಲಿ ಟ್ರಕ್ ಕಂದಕಕ್ಕೆ ಉರುಳಿ ಓರ್ವ ಸಾವು, 13 ಮಂದಿಗೆ ಗಾಯ, ತಕ್ಷಣವೇ ನೆರವಿಗೆ ಧಾವಿಸಿದ ಸಿಎಂ
ಕಳಪೆ ರಸ್ತೆಗಳು, ಅಪಾಯಕಾರಿ ಚಾಲನೆ ಮತ್ತು ಹೆದ್ದಾರಿ ನಿಯಂತ್ರಣದ ಕೊರತೆಯಿಂದಾಗಿ ಅಫ್ಘಾನಿಸ್ತಾನದಲ್ಲಿ ಇಂತಹ ಭೀಕರ ಟ್ರಾಫಿಕ್ ಅಪಘಾತಗಳು ಸಾಮಾನ್ಯವಾಗಿವೆ ಎನ್ನಲಾಗುತ್ತಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:54 pm, Sun, 17 March 24