ಆಫ್ರಿಕಾ ಪ್ರಜೆಗಳ ಗಲಾಟೆ ಪ್ರಕರಣ: ಘಟನೆಯ ಮಾಹಿತಿ ಪಡೆಯಲು ಆಗಮಿಸಿದ ಆಫ್ರಿಕಾ ಅಧಿಕಾರಿಗಳು
ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವು ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟನೆ ನೀಡಿದ್ದಾರೆ. ಆಫ್ರಿಕಾ ಪ್ರಜೆ ಸಾವು ಲಾಕಪ್ ಡೆತ್ ಅಲ್ಲವೆಂದು ಕಮಲ್ ಪಂತ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ನಗರದ ಜೆ.ಸಿ. ನಗರ ಠಾಣೆ ಬಳಿ ಆಫ್ರಿಕಾ ಪ್ರಜೆಗಳ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆಯಲು ಆಫ್ರಿಕಾ ಅಧಿಕಾರಿಗಳು ದೆಹಲಿಯಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಜೆ.ಸಿ.ನಗರ ಪೊಲೀಸರ ವಶದಲ್ಲಿದ್ದ ಆಫ್ರಿಕಾ ಪ್ರಜೆ ಸಾವು ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ (ಆಗಸ್ಟ್ 2) ಠಾಣೆ ಬಳಿ ಗಲಾಟೆ, ಲಾಠಿಚಾರ್ಜ್ ನಡೆದಿತ್ತು. ಈ ಬಗ್ಗೆ ವಿವರ ಪಡೆಯಲು ಆಫ್ರಿಕಾ ಅಧಿಕಾರಿಗಳ ತಂಡ ಆಗಮಿಸಿದೆ. ಕೆಐಎಬಿಯಿಂದ ಬೆಂಗಳೂರಿನತ್ತ ಅಧಿಕಾರಿಗಳ ತಂಡ ತೆರಳಿದೆ.
ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವು ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟನೆ ನೀಡಿದ್ದಾರೆ. ಆಫ್ರಿಕಾ ಪ್ರಜೆ ಸಾವು ಲಾಕಪ್ ಡೆತ್ ಅಲ್ಲವೆಂದು ಕಮಲ್ ಪಂತ್ ಸ್ಪಷ್ಟನೆ ನೀಡಿದ್ದಾರೆ. ನಿಯಮಾನುಸಾರವೇ ಪ್ರಕರಣದ ತನಿಖೆ ನಡೆಸಲಾಗಿದೆ. ಪೊಲೀಸರ ವಿರುದ್ಧ ಮಾಡುತ್ತಿರುವ ಆರೋಪಗಳು ಸುಳ್ಳು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.
ಈ ಪ್ರಕರಣವನ್ನು ಎನ್ಹೆಚ್ಆರ್ಸಿ ಗೈಡ್ ಲೆನ್ಸ್ ಪ್ರಕಾರ ತನಿಖೆ ನಡೆಸಲಾಗಿದೆ. ಈಗಾಗಲೆ ಸಿಐಡಿಗೆ ಒಪ್ಪಿಸಲಾಗಿದೆ. ಈಗಾಗಲೆ ಸಂಪೂರ್ಣ ಘಟನೆಯ ವಿವರವನ್ನ ಕಾಂಗೋ ದೇಶಕ್ಕೆ ಕಳಿಸದ್ದೇವೆ. ಅವರು ಮಾಡಿರುವ ಆರೋಪ ಎಲ್ಲಾವೂ ಸುಳ್ಳು. ಲಾಕಪ್ ಡೆತ್ ಆರೋಪ ಸುಳ್ಳು. ಪೊಲೀಸರು ಆಫ್ರಿಕಾ ಪ್ರಜೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದೇವೆ ಎಂದು ಕಮಲ್ ಪಂತ್ ಹೇಳಿದ್ದಾರೆ.
ಪೊಲೀಸರ ವಶದಲ್ಲಿದ್ದ ಕಾಂಗೋ ದೇಶದ ಪ್ರಜೆ ಸಾವು ಪ್ರಕರಣದ ಸಲುವಾಗಿ ಕಾಂಗೋ ದೇಶದ ರಾಯಭಾರ ಕಚೇರಿ ಅಧಿಕಾರಿಗಳ ತಂಡ ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಅಧಿಕಾರಿಗಳ ಭೇಟಿ ನೀಡಿದ್ದಾರೆ. ಇಬ್ಬರು ಅಧಿಕಾರಿಗಳು ಕಮಿಷನರ್ ಕಮಲ್ ಪಂತ್ ಭೇಟಿಯಾಗಿದ್ದಾರೆ.
ಜೆ.ಸಿ. ನಗರ ಠಾಣೆ ಎದುರು ಆಫ್ರಿಕಾ ಪ್ರಜೆಗಳ ಗಲಾಟೆ ಪ್ರಕರಣದ ಬಗ್ಗೆ ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿಕೆ ನೀಡಿದ್ದಾರೆ. ಘಟನೆ ಸಂಬಂಧ 2 ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಪಿಎಸ್ಐ ಲತಾ ಅವರ ದೂರಿನ ಮೇಲೆ 1 ಕೇಸ್ ದಾಖಲು ಮಾಡಲಾಗಿದೆ. ಆಫ್ರಿಕನ್ ಪ್ರಜೆಗಳ ಗಲಾಟೆ ವೇಳೆ ಒಬ್ಬ ಬಾಲಕನಿಗೂ ಗಾಯವಾಗಿದೆ. ಈ 2 ಪ್ರಕರಣಗಳ ಬಗ್ಗೆ ಈಗಾಗಲೇ ತನಿಖೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ನಿನ್ನೆ ಪ್ರತಿಭಟನೆಯಲ್ಲಿ ಭಾಗಿಯಾದವರ ವಿಡಿಯೋ ಇದೆ. ವಿಡಿಯೋ ನೋಡಿ ಆರೋಪಿಗಳ ಪತ್ತೆ ಹಚ್ಚಲಾಗುವುದು. NDPS ಮತ್ತು ಫಾರಿನರ್ಸ್ ಆ್ಯಕ್ಟ್ ಅಡಿಯಲ್ಲೂ ಕೇಸ್ ಹಾಕ್ತೀವಿ. ಈಗಾಗಲೇ ಐವರ ಯೂರಿನ್ ಸ್ಯಾಂಪಲ್ ಸಂಗ್ರಹಿಸಲಾಗಿದೆ. ಓರ್ವನ ಡ್ರಗ್ಸ್ ಸೇವನೆ ರಿಪೋರ್ಟ್ ಪಾಸಿಟಿವ್ ಬಂದಿದೆ. ಒಂದು ವರ್ಷದಿಂದ ಉತ್ತರ ವಿಭಾಗದಲ್ಲಿ 154 ಜನರ ಪತ್ತೆಯಾಗಿದೆ. ವೀಸಾ ಅವಧಿ ಮುಗಿದರೂ ಇಲ್ಲೇ ಇರೋದು ಪತ್ತೆಯಾಗಿದೆ ಎಂದು ಉತ್ತರ ವಿಭಾಗ ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ಹೇಳಿದ್ದಾರೆ.
ಇದನ್ನೂ ಓದಿ: ಆಫ್ರಿಕಾ ಪ್ರಜೆಗಳಿಂದ ದಾಂಧಲೆ ಪ್ರಕರಣ: ಗಲಭೆಗೆ ಪ್ರಚೋದನೆ ನೀಡಿದ್ದ ಮಹಿಳೆಗಾಗಿ ಹುಡುಕಾಟ
ಪೊಲೀಸರ ವಶದಲ್ಲಿದ್ದ ಆಫ್ರಿಕನ್ ಪ್ರಜೆ ಸಾವು ಪ್ರಕರಣ ಸಿಐಡಿ ತನಿಖೆಗೆ ವರ್ಗಾವಣೆ
(African Officials from Delhi visits to Bengaluru on African Citizen Death Case)
Published On - 6:30 pm, Tue, 3 August 21