ಬೆಂಗಳೂರು: ನಡುರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಲಾಂಗ್ ಬೀಸಿ ಹಲ್ಲೆ, ಆರೋಪಿಗಳ ಬಂಧನ

ಆರೋಪಿಗಳು ಅಟ್ಯಾಕ್ ಮಾಡುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ರೆಕಾರ್ಡ್ ಆಗಿತ್ತು. ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು, ಇದೀಗ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಕಾಮಾಕ್ಷಿಪಾಳ್ಯದ ಅಮ್ಮ ಮಹೇಶ್ವರಿ ದೇವಾಲಯದ ಮುಂದೆ ಸ್ನೇಹಿತರ ಜೊತೆ ರೋಹಿತ್ ಬರುತ್ತಿದ್ದ ವೇಳೆ ಈ ಅಟ್ಯಾಕ್ ಮಾಡಲಾಗಿತ್ತು.

ಬೆಂಗಳೂರು: ನಡುರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಲಾಂಗ್ ಬೀಸಿ ಹಲ್ಲೆ, ಆರೋಪಿಗಳ ಬಂಧನ
ಬಂಧಿತ ಆರೋಪಿಗಳು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 12, 2023 | 3:08 PM

ಬೆಂಗಳೂರು, ಸೆ.12: ನಡುರಸ್ತೆಯಲ್ಲಿ ಮಾರಕಾಸ್ತ್ರ ಬೀಸಿದ್ದ ಆರೋಪಿಗಳನ್ನು ಕಾಮಾಕ್ಷಿಪಾಳ್ಯ (Kamakshipalya) ಸಬ್ ಪೊಲೀಸರು ಬಂಧಿಸಿದ್ದಾರೆ. ರಾಜು, ಧನುಷ್, ಗುರುಪ್ರಸಾದ್ ಸೇರಿ ಆರು ಆರೋಪಿಗಳ ಬಂಧನ. ಇವರು ಬಾರ್​ನಲ್ಲಿ ಅವಾಜ್ ಹಾಕಿದ್ದಕ್ಕೆ ಈ ಗ್ಯಾಂಗ್ ಮಚ್ಚು, ಲಾಂಗ್ ಬೀಸಿ ರೋಹಿತ್ ಗೌಡ ಎಂಬಾತನ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದರು. ಹೌದು, ಕಳೆದ ವಾರ ಗಾಯಾಳು ರೋಹಿತ್, ಆರೋಪಿಗಳಾದ ರಾಜು, ಧನುಷ್, ಗುರುಪ್ರಸಾದ್​ಗೆ ಅವಾಜ್ ಹಾಕಿದ್ದ. ಈ ಹಿನ್ನಲೆ ಸೆಪ್ಟೆಂಬರ್ 9 ರಂದು ಸಿನಿಮೀಯ ರೀತಿಯಲ್ಲಿ ನಡುರಸ್ತೆಯಲ್ಲಿ ಲಾಂಗ್ ಬೀಸುತ್ತಾ ಅಟ್ಟಾಡಿಸಿದ್ದರು.

ಮರ್ಡರ್​ಗೆ ಸ್ಕೆಚ್ ಹಾಕಿದ್ದ ಆರೋಪಿಗಳು

ಗಾಯಾಳು ರೋಹಿತ್​ನನ್ನ ಹೀಗೆ ಬಿಟ್ಟರೇ ನಮ್ಮನ್ನೆ ಮುಗಿಸ್ತಾನೆಂದು ಮರ್ಡರ್​ಗೆ ಸ್ಕೆಚ್ ಹಾಕಿದ್ದ ಆರೋಪಿಗಳು, ಕಾಮಾಕ್ಷಿಪಾಳ್ಯ ರಸ್ತೆಯಲ್ಲೇ ಅಟ್ಯಾಕ್ ಮಾಡಿದ್ದರು. ಈ ವೇಳೆ ಗಾಯಾಳು ರೋಹಿತ್ ಬೆನ್ನು ಮೂಳೆ ಕಟ್ ಆಗುವಂತೆ ಲಾಂಗ್ ಬೀಸಿದ್ದರು. ಇದೀಗ ರೋಹಿತ್ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ:ಕೌಟುಂಬಿಕ ಕಲಹ, ಪತಿಗೆ ಹಣದ ದಾಹ; ಮಾರಕಾಸ್ತ್ರದಿಂದ ಹೊಡೆದು ಪತ್ನಿಯ ಕೊಲೆ, ಕತ್ತು ಹಿಸುಕಿ ಮಗುವಿನ ಹತ್ಯೆಗೆ ಯತ್ನ

ಸಿಸಿ ಕ್ಯಾಮರಾ ಆಧರಿಸಿ ಆರೋಪಿಗಳ ಬಂಧನ

ಇನ್ನು ಆರೋಪಿಗಳು ಅಟ್ಯಾಕ್ ಮಾಡುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ರೆಕಾರ್ಡ್ ಆಗಿತ್ತು. ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ತನಿಖೆ ಆರಂಭಿಸಿದ ಪೊಲೀಸರು, ಇದೀಗ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಕಾಮಾಕ್ಷಿಪಾಳ್ಯದ ಅಮ್ಮ ಮಹೇಶ್ವರಿ ದೇವಾಲಯದ ಮುಂದೆ ಸ್ನೇಹಿತರ ಜೊತೆ ರೋಹಿತ್ ಬರುತ್ತಿದ್ದ ವೇಳೆ ಬೈಕ್​ನಲ್ಲಿ ಎದುರಿಗೆ ಬಂದ ರಾಜು, ಧನುಷ್, ಗುರುಪ್ರಸಾದ್ ದಾಳಿ ನಡೆಸಿದ್ದರು. ಏರಿಯಾ ಪೂರ್ತಿ ಲಾಂಗ್ ಬೀಸಿ ಮತ್ತೆ ಬಾರ್ ಸೇರಿದ್ದರು. ಈ ಕುರಿತು ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಆರೋಪಿಗಳ ವಿರುದ್ದ ಕೇಸ್ ದಾಖಲಾಗಿತ್ತು. ಇದೀಗ ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಸೋನಲ್​-ತರುಣ್​ ಸುಧೀರ್​ ಮದುವೆ? ಮೊದಲ ಬಾರಿ ಮಾತನಾಡಿದ ಮಾಲತಿ ಸುಧೀರ್​
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
‘ರೇಣುಕಾ ಸ್ವಾಮಿ ಮಾಡಿದ್ದು ದೊಡ್ಡ ತಪ್ಪು, ಅದನ್ನು ಯಾರೂ ಗಮನಿಸ್ತಿಲ್ಲ’
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಚಿತ್ರೀಕರಣದ ಸಮಯದಲ್ಲಿ ಪವಿತ್ರಾ ಗೌಡರ ವರ್ತನೆ ಹೇಗಿರುತ್ತಿತ್ತು: ನಿರ್ದೇಶಕಿ
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ