Bengaluru: ಕನ್ನಡ ಗೊತ್ತಿಲ್ಲ ಎಂದು ಪಂಜಾಬ್ ಮೂಲದ ಮಹಿಳೆಗೆ ಥಳಿಸಿದ ಗುಂಪು

ರಸ್ತೆಯಲ್ಲಿ ಮಗುವನ್ನು ಬಿಡುವಾಗ ನೋಡಿಕೊಳ್ಳಿ ಎಂದು ಮಹಿಳೆಯೊಬ್ಬರು ಮನವಿ ಮಾಡಿದ್ದಾರೆ. ಈ ವೇಳೆ ಮಹಿಳೆಯನ್ನು ಸುತ್ತುವರಿದ ಮಹಿಳಾ ಗ್ಯಾಂಗ್, ಆಕೆಗೆ ಕನ್ನಡ ಗೊತ್ತಿಲ್ಲ ಎಂದು ಥಳಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Bengaluru: ಕನ್ನಡ ಗೊತ್ತಿಲ್ಲ ಎಂದು ಪಂಜಾಬ್ ಮೂಲದ ಮಹಿಳೆಗೆ ಥಳಿಸಿದ ಗುಂಪು
ಕನ್ನಡ ಗೊತ್ತಿಲ್ಲ ಎಂದು ಪಂಜಾಬ್ ಮೂಲದ ಮಹಿಳೆಗೆ ಥಳಿಸಿದ ಗುಂಪು
Edited By: Rakesh Nayak Manchi

Updated on: Nov 29, 2022 | 1:00 PM

ಬೆಂಗಳೂರು: ಕನ್ನಡ ಮಾತನಾಡಲು ಬರುವುದಿಲ್ಲ ಎಂದು ಆರೋಪಿಸಿ ಪಂಜಾಬ್ ಮೂಲದ ಮಹಿಳೆಯೊಬ್ಬರನ್ನು ಮಹಿಳೆಯರ ಗುಂಪೊಂದು ನಿಂದಿಸಿ ಥಳಿಸಿದ (Punjab woman assaulted) ಘಟನೆ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಬೊಮ್ಮಸಂದ್ರದ (Doddabommasandra) ಸರ್ಕಾರಿ ಶಾಲೆಯ ಬಳಿ ನಡೆದಿದೆ. ಶುಕ್ರವಾರ ರಾತ್ರಿ 10ರಿಂದ 10.15ರ ನಡುವೆ ಈ ಘಟನೆ ನಡೆದಿದೆ. ನಗರದಲ್ಲಿ ಸಲೂನ್ ಮತ್ತು ಸ್ಪಾ ಹೊಂದಿರುವ ಪಂಜಾಬ್​ನ ಲೂಧಿಯಾನದ ನೀಲಂಜಿತ್ ಕೌರ್ (46) ಹಲ್ಲೆಗೊಳಗಾದವರು. 7 ವರ್ಷದ ಮಗುವನ್ನು ಉಳಿಸುವ ಪ್ರಯತ್ನದಲ್ಲಿ ಕೌರ್ ತನ್ನ ಸ್ಕೂಟರ್‌ಗೆ ಹಠಾತ್ ಬ್ರೇಕ್ ಹಾಕಿದ್ದಾರೆ. ಅದಾಗ್ಯೂ ಕೋಪಗೊಂಡ ಮಹಿಳೆಯರ ಗುಂಪು ಕೌರ್ ಅವರನ್ನು ಸುತ್ತುವರೆದು ಥಳಿಸಿದ್ದಾರೆ.

ಮಗುವಿನ ಪಾಲಕರಿಗೆ ಮಗುವನ್ನು ರಸ್ತೆಯಲ್ಲಿ ನೋಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾಳೆ. ಇದು ವಾಗ್ವಾದಕ್ಕೆ ಕಾರಣವಾಯಿತು. ಈ ವೇಳೆ ಗುಂಪುಗೂಡಲು ಪ್ರಾರಂಭಿಸಿದ ಮಹಿಳೆಯರು ಆಕೆಗೆ ಕನ್ನಡ ಗೊತ್ತಿಲ್ಲ ಎಂದು ನಿಂದಿಸಲು ಪ್ರಾರಂಭಿಸಿದರು. ಅಲ್ಲದೆ ಕರ್ನಾಟಕದಿಂದ ಹೊರಹೋಗುವಂತೆಯೂ ಒತ್ತಾಯಿಸಿದರು. ಕೆಲವು ಮಹಿಳೆಯರು ಪ್ಲಾಸ್ಟಿಕ್ ಪೈಪ್‌ನಿಂದ ಥಳಿಸಿದ್ದು, ಕೂದಲನ್ನು ಎಳೆದಾಡಿದ್ದಾರೆ. ಏಕಾಂಗಿಯಾಗಿದ್ದ ಈಕೆ ಹತಾಶಳಾಗಿದ್ದಲ್ಲದೆ, ತನ್ನ ಮೇಲೆ ಹಲ್ಲೆ ನಡೆಸುತ್ತಿರುವ ಮಹಿಳೆಯ ವಿಡಿಯೋವನ್ನು ಮಾಡಿದ್ದಾಳೆ.

ಇದನ್ನೂ ಓದಿ: ಮಧ್ಯ ಪ್ರದೇಶ: ತನ್ನ ಪತ್ನಿ ವಿವಾಹೇತರ ಸಂಬಂಧ ಹೊಂದಿರುವ ವ್ಯಕ್ತಿಯ ಮಗಳನ್ನು ಅತ್ಯಾಚಾರ ಮಾಡಿ ಹತ್ಯೆಗೈದು ಸೇಡು ತೀರಿಸಿದ ಯುವಕ, ಆರೋಪಿ ಬಂಧನ

ಮಹಿಳೆಗೆ ಥಳಿಸಿದ್ದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ತಪ್ಪಿತಸ್ಥರೆಂದು ಕಂಡುಬಂದವರಿಗೆ ಶಿಕ್ಷೆಯಾಗುತ್ತದೆ ಎಂದು ತನಿಖೆಯ ಭಾಗವಾಗಿರುವ ಪೊಲೀಸ್ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ವಿದ್ಯಾರಣ್ಯಪುರ ಪೊಲೀಸರು ಐಪಿಸಿ 143, ಐಪಿಸಿ 323, ಐಪಿಸಿ 324 (ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Tue, 29 November 22

TV9 Web

TV9 Kannada

Read More
Loading...
Unable to load recommendations.
Follow Us