AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ವ್ಯಕ್ತಿಯನ್ನು ನಗ್ನಗೊಳಿಸಿ ಹಲ್ಲೆ ಮಾಡಿದ್ದ ಆರೋಪಿಗೆ ಗುಂಡೇಟು

ವ್ಯಕ್ತಿಯೋರ್ವನನ್ನು ನಗ್ನಗೊಳಿಸಿ ಹಲ್ಲೆ ಮಾಡಿ ತುಮಕೂರಿನಲ್ಲಿ ತಲೆ ಮರಿಸಿಕೊಂಡಿದ್ದ ಆರೋಪಿ ಪವನ್​ ಅಲಿಯಾಸ್​ ಕಡುಬು ಕಾಲಿಗೆ ಗೋವಿಂದರಾಜನಗರ ಇನ್ಸ್​ಪೆಕ್ಟರ್​ ಸುಬ್ರಮಣ್ಯ ಅವರು ಗುಂಡು ಹಾರಿಸಿದ್ದಾರೆ. ಆರೋಪಿ ವಿರುದ್ಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು: ವ್ಯಕ್ತಿಯನ್ನು ನಗ್ನಗೊಳಿಸಿ ಹಲ್ಲೆ ಮಾಡಿದ್ದ ಆರೋಪಿಗೆ ಗುಂಡೇಟು
ಆರೋಪಿ ಪವನ್​
Jagadisha B
| Edited By: |

Updated on:Sep 17, 2024 | 8:53 AM

Share

ಬೆಂಗಳೂರು, ಸೆಪ್ಟೆಂಬರ್​ 17: ವ್ಯಕ್ತಿಯೋರ್ವನನ್ನು ನಗ್ನಗೊಳಿಸಿ ಹಲ್ಲೆ ಮಾಡಿದ್ದ ಆರೋಪಿಯ ಕಾಲಿಗೆ ಗುಂಡು ಹೊಡೆದು ಪೊಲೀಸರು (Police) ಬಂಧಿಸಿದ್ದಾರೆ ಪಡೆದಿದ್ದಾರೆ. ಬೆಂಗಳೂರಿನ (Bengaluru) ಜ್ಞಾನಭಾರತಿಯ ಉಳ್ಳಾಲ ಬಳಿ ರೌಡಿಶೀಟರ್​ ಪವನ್​ ಅಲಿಯಾಸ್ ಕಡುಬು ಮೇಲೆ ಫೈರಿಂಗ್ ಮಾಡಲಾಗಿದೆ. ನಗ್ನಗೊಳಿಸಿ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೊವಿಂದರಾಜನಗರ ಇನ್ಸ್​ಪೆಕ್ಟರ್​ ಸುಬ್ರಮಣ್ಯ ಮತ್ತು ಸಿಬ್ಬಂದಿ ಆರೋಪಿ ಪವನ್​ನನ್ನು ತುಮಕೂರಿನಲ್ಲಿ ಬಂಧಿಸಿ ಕರೆತರುತ್ತಿದ್ದರು.

ಆರೋಪಿ ಪವನ್ ಉಳ್ಳಾಲ ಬಳಿ ಅಡಗಿಕೊಂಡಿದ್ದನು. ಹಣ ಇಲ್ಲದೆ ರಾಬರಿ ಮಾಡಲು ಮುಂದಾಗಿದ್ದನು. ಕತ್ತಲಲ್ಲಿ ಬಂದವರ ಹಣ ಕಿತ್ತಿಕೊಳ್ಳುವ ಸ್ಕೆಚ್ ಹಾಕಿ ಅಡಗಿಕೊಂಡಿದ್ದನು. ಇದಕ್ಕಾಗಿ ನಸುಕಿನ ಜಾವ 3:30ರ ಸುಮಾರಿಗೆ ಮೊಬೈಲ್ ಆನ್ ಮಾಡಿದ್ದಾನೆ. ಆರೋಪಿ ಪವನ್​ ಮೊಬೈಲ್ ಆನ್​ ಆಗುತ್ತಿದ್ದಂತೆ, ನೆಟ್ವರ್ಕ್ ಆಧರಿಸಿ ಗೊವಿಂದರಾಜನಗರ ಇನ್ಸ್​ಪೆಕ್ಟರ್​ ಸುಬ್ರಮಣ್ಯ ಮತ್ತು ಸಿಬ್ಬಂದಿ ಆರೋಪಿ ಪವನ್​ನನ್ನು ಬಂಧಿಸಲು ತೆರಳಿದ್ದರು.

ಇದನ್ನೂ ಓದಿ: ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸ್​ ಹೆಸರಿನಲ್ಲಿ ವಿಜಯಪುರದ ಯುವಕನಿಗೆ ವಿಡಿಯೋ ಕಾಲ್​: ವಂಚನೆಗೆ ಯತ್ನ

ಇಂದು (ಸೆ.17) ನಸುಕಿನ ಜಾವ 5 ಗಂಟೆ ಸುಮಾರಿಗೆ ಪೊಲೀಸರು​ ಬಂಧಿಸುವ ವೇಳೆ ಆರೋಪಿ ಪವನ್​ ಕಾನ್ಸ್​ಟೇಬಲ್​ ವೆಂಕಟೇಶ್ ಅವರ ಮೇಲೆ ಹಲ್ಲೆ ಮಾಡಿ, ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಹಿಡಿಯಲು ಹೋದ ಇನ್ಸ್​ಪೆಕ್ಟರ್​ ಸುಬ್ರಮಣ್ಯ ಅವರ ಮೇಲೂ ಹಲ್ಲೆ ಮಾಡಲು ಮುಂದಾದನು. ಆಗ, ಇನ್ಸ್​ಪೆಕ್ಟರ್​ ಸುಬ್ರಮಣ್ಯ ಅವರು ಆತ್ಮರಕ್ಷಣೆಗೆ ಆರೋಪಿ ಪವನ್​ ಕಾಲಿಗೆ ಗುಂಡು ಹಾರಿಸಿದ್ದಾರೆ.

ಏನಿದು ಪ್ರಕರಣ

ರಾಜಗೋಪಾಲ ನಗರದ ರೌಡಿಶೀಟರ್ ಪವನ್ ಅಲಿಯಾಸ್ ಕಡಬು ಮೂಲತಃ ತುಮಕೂರಿನವನು. ಈತ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನ ವಿರುದ್ಧ ರಾಜಗೋಪಾಲನಗರ ಪೊಲೀಸರಿಗೆ ಮಾಹಿತಿ ನೀಡುತಿದ್ದ ವಿಶ್ವಾಸ್ ಎಂಬಾತನ ಮೇಲೆ ಸೋಮವಾರ ಆರೋಪಿ ಪವನ್ ಹಲ್ಲೆ ಮಾಡಿದ್ದಾನೆ.

ತನ್ನ ಮೇಲೆ ನಡೆದ ಹಲ್ಲೆಯ ಬಗ್ಗೆ ವಿಶ್ವಾಸ್​ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿ ಮಾಹಿತಿ ಪಡೆಯಲು ಮುಂದಾದ ಪೊಲೀಸರಿಗೆ ಕಳೆದ 12 ದಿನಗಳ ಹಿಂದೆ ನಡೆದಿರುವ ಮತ್ತೊಂದು ಹಲ್ಲೆಯ ಸಂಗತಿ ದೃಶ್ಯ ಸಮೇತ ಲಭ್ಯವಾಗಿದೆ. ಓರ್ವನ ಬಟ್ಟೆ ಬಿಚ್ಚಿಸಿ ನಗ್ನಗೊಳಿಸಿ ಹಲ್ಲೆ ಮಾಡಿದ್ದಲ್ಲದೆ, ಅದನ್ನು ವಿಡಿಯೋ ರೆಕಾರ್ಡ್ ಮಾಡಿರುವುದು ತಿಳಿದಿದೆ.

ಈ ಎಲ್ಲ ಪ್ರಕರಣ ಸಂಬಂಧ ಆರೋಪಿ ಪವನ್​ನನ್ನು ಬಂಧಿಸಿ ಪೊಲೀಸರು ಕರೆತರುತ್ತಿದ್ದರು. ಈ ವೇಳೆ ಆರೋಪಿ ಪವನ್​ ಪರಾರಿಯಾಗಲು ಯತ್ನಿಸಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:09 am, Tue, 17 September 24