ಬೆಂಗಳೂರು: ಡಿಕ್ಕಿ ಹೊಡೆದು ವ್ಯಕ್ತಿಯನ್ನು ಹಲವು ಮೀಟರ್ ದೂರ ಎಳೆದೊಯ್ದ ಕಾರು ಚಾಲಕ
ಬೆಂಗಳೂರು ನಗರದಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್ ಪ್ರಕರಣ ನಡೆದಿದೆ. ಡಿಕ್ಕಿಯ ರಭಸಕ್ಕೆ ಬ್ಯಾನೆಟ್ ಮೇಲೆ ಬಿದ್ದ ವ್ಯಕ್ತಿಯನ್ನು ಕಾರು ಚಾಲಕ ಹಲವು ಮೀಟರ್ಗಳಷ್ಟು ದೂರಕ್ಕೆ ಎಳೆದೊಯ್ದ ಘಟನೆ ಬೆಂಗಳೂರು ನಗರದ ಮಲ್ಲೇಶ್ವರಂ ಬಳಿ ನಡೆದಿದೆ. ಘಟನೆಯ ದೃಶ್ಯವಾಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.
ಬೆಂಗಳೂರು, ಜ.24: ನಗರದಲ್ಲಿ ಮತ್ತೊಂದು ಹಿಟ್ ಆ್ಯಂಡ್ ರನ್ (Hit And Run) ಪ್ರಕರಣ ನಡೆದಿದೆ. ಡಿಕ್ಕಿಯ ರಭಸಕ್ಕೆ ಬ್ಯಾನೆಟ್ ಮೇಲೆ ಬಿದ್ದ ವ್ಯಕ್ತಿಯನ್ನು ಕಾರು ಚಾಲಕ ಹಲವು ಮೀಟರ್ಗಳಷ್ಟು ದೂರಕ್ಕೆ ಎಳೆದೊಯ್ದ ಘಟನೆ ಬೆಂಗಳೂರು (Bengaluru) ನಗರದ ಮಲ್ಲೇಶ್ವರಂ ಬಳಿ ನಡೆದಿದೆ. ಘಟನೆಯ ದೃಶ್ಯವಾಳಿ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗುತ್ತಿದೆ.
ಮಲ್ಲೇಶ್ವರಂನ ಮಾರಮ್ಮ ದೇವಸ್ಥಾನದ ವೃತ್ತದಲ್ಲಿ ಜನವರಿ 15 ರಂದು ನಡೆದ ಘಟನೆ ಇದಾಗಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಬೆಚ್ಚಿಬೀಳಿಸುವ ದೃಶ್ಯಾವಳಿಗಳು ಸೆರೆಯಾಗಿವೆ. ಕಾರಿನ ಬಾನೆಟ್ ಮೇಲೆ ಬಿದ್ದ ವ್ಯಕ್ತಿಯನ್ನು ಕಾರು ಚಾಲಕ ಹಲವು ಮೀಟರ್ಗಳಷ್ಟು ದೂರಕ್ಕೆ ಕೊಂಡೊಯ್ಯವುದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೆ, ಇತರ ವಾಹನಗಳು ಮತ್ತು ಮತ್ತಿಬ್ಬರು ವ್ಯಕ್ತಿಗಳು ಕ್ಯಾಬ್ ಅನ್ನು ಬೆನ್ನಟ್ಟುತ್ತಿರುವುದನ್ನು ನೋಡಬಹುದು.
VIDEO | A man was reportedly dragged for several meters on the bonnet of a cab in #Bengaluru. The CCTV visuals of the incident, which happened on January 15 at Maramma Temple Circle, have now gone viral.
(Source: Third Party) pic.twitter.com/uFZYTtKqI0
— Press Trust of India (@PTI_News) January 23, 2024
ಬೆಂಗಳೂರು ನಗರದಲ್ಲಿ ಈ ಹಿಂದೆ ಅನೇಕ ಹಿಟ್ ಆ್ಯಂಡ್ ರನ್ ಪ್ರಕರಣಗಳು ನಡೆದಿವೆ. ಘಟನೆಯಲ್ಲಿ ಕೆಲವರು ಸಾವನ್ನಪ್ಪಿದ್ದು, ಇನ್ನೂ ಕೆಲವರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲೂ ವ್ಯಕ್ತಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಅಹ್ಮದ್ನಗರ-ಕಲ್ಯಾಣ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ, 6 ಮಂದಿ ಸಾವು
ಇಂತಹ ಹಿಟ್ ಆ್ಯಂಡ್ ರನ್ ಪ್ರಕರಣಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರವು ಮಹತ್ವದ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ. ಈ ಕಾಯ್ದೆಯಲ್ಲಿ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಘಟನೆಯಲ್ಲಿ ಯಾರಾದರು ಮೃತಪಟ್ಟರೆ ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸುವ ಅವಕಾಶ ಈಗಾಗಲೇ ಇದೆ. ಹೊಸ ಕಾಯ್ದೆಯಲ್ಲಿ 10 ವರ್ಷ ಜೈಲು ಶಿಕ್ಷೆ ಸೇರಿದಂತೆ 7 ಲಕ್ಷದವರೆಗೆ ದಂಡ ವಿಧಿಸುವ ಪ್ರಸ್ತಾಪ ಇದೆ.
ಈ ಹೊಸ ಕಾಯ್ದೆಯನ್ನು ಲಾರಿ ಚಾಲಕರು ವಿರೋಧಿಸಿದ್ದು, ಕಾಯ್ದೆ ಜಾರಿ ಖಂಡಿಸಿ ಇತ್ತೀಚೆಗೆ ದೇಶಾದ್ಯಂತ ಮುಷ್ಕರ ನಡೆಸಿದ್ದರು. ಲಾರಿ ಮಾಲೀಕರನ್ನಾಗಲೀ ಅಥವಾ ಈ ಉದ್ಯಮದಲ್ಲಿ ಇರುವ ಯಾರನ್ನೂ ಸಂಪರ್ಕಿಸದೇ ಸರ್ಕಾರ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಅಂತಾ ಆಕ್ರೋಶ ಹೊರಹಾಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ