ಭೋಪಾಲ್: ಸಾರ್ವಜನಿಕರ ಮುಂದೆಯೇ ಪತ್ನಿಯ ಮೇಲೆ ಪೆಟ್ರೋಲ್​​ ಸುರಿದು ಬೆಂಕಿ ಹಚ್ಚಿದ ವ್ಯಕ್ತಿ

22ರ ಮಹಿಳೆ ದೇಹಕ್ಕೆ ಬೆಂಕಿ ಹೊತ್ತಿಕೊಂಡಾಗ ಸಹಾಯಕ್ಕಾಗಿ ಅಂಗಲಾಚುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಕೆಯನ್ನು ಕಾಪಾಡುವುದಕ್ಕಾಗಿ ಜನರು ಆಕೆಯ ಮೈಮೇಲೆ ನೀರು ಸುರಿದಿದ್ದಾರೆ

ಭೋಪಾಲ್: ಸಾರ್ವಜನಿಕರ ಮುಂದೆಯೇ ಪತ್ನಿಯ ಮೇಲೆ ಪೆಟ್ರೋಲ್​​ ಸುರಿದು ಬೆಂಕಿ ಹಚ್ಚಿದ ವ್ಯಕ್ತಿ
ಸಾಂಕೇತಿಕ ಚಿತ್ರ
TV9kannada Web Team

| Edited By: Rashmi Kallakatta

Jul 07, 2022 | 4:41 PM

ಭೋಪಾಲ್: ಭೋಪಾಲ್​​ನಲ್ಲಿ (Bhopal) ಎಲ್ಲರೂ ನೋಡುತ್ತಿದ್ದಂತೆಯೇ ವ್ಯಕ್ತಿಯೊಬ್ಬ ತನ್ನ ಪತ್ನಿಯ ಮೇಲೆ ಪೆಟ್ರೋಲ್ (petrol) ಸುರಿದು ಬೆಂಕಿ ಹಚ್ಚಿದ ಘಟನೆ ಮಂಗಳವಾರ ನಡೆದಿದೆ. ಆ ಕೃತ್ಯವೆಸಗಿದ ಆರೋಪಿಯನ್ನು ರಯೀಸ್ ಖಾನ್ ಎಂದು ಗುರುತಿಸಲಾಗಿದೆ. ಸಂಶಯದಿಂದ ನೋಡುತ್ತಾ, ದಿನನಿತ್ಯ ಹಲ್ಲೆ ಮಾಡುವ ಪತಿಯಿಂದ ರೋಸಿಹೋಗಿದ್ದ ಪತ್ನಿ ವಿವಾಹ ವಿಚ್ಛೇದನ ಕೇಳಿದ್ದಳು ಎಂದು ಕೋಪಗೊಂಡ ಖಾನ್ ಈ ಕೃತ್ಯವೆಸಗಿದ್ದಾನೆ. 22ರ ಮಹಿಳೆ ದೇಹಕ್ಕೆ ಬೆಂಕಿ ಹೊತ್ತಿಕೊಂಡಾಗ ಸಹಾಯಕ್ಕಾಗಿ ಅಂಗಲಾಚುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಕೆಯನ್ನು ಕಾಪಾಡುವುದಕ್ಕಾಗಿ ಜನರು ಆಕೆಯ ಮೈಮೇಲೆ ನೀರು ಸುರಿದಿದ್ದಾರೆ. ಇನ್ನು ಕೆಲವರು ತಮ್ಮ ಮನೆಯಿಂದ ಬಕೆಟ್ ನೀರು ಹೊತ್ತು ತಂದು ಬೆಂಕಿ ನಂದಿಸುತ್ತಿರುವುದು ವಿಡಿಯೊದಲ್ಲಿದೆ.  ರಯೀಸ್ ಖಾನ್ ಅಲ್ಲಿಂದ ಕಾಲ್ಕಿತ್ತಿದ್ದು ಇನ್ನೂ ಈತನನ್ನು ಬಂಧಿಸಿಲ್ಲ.

ರಾಜಸ್ಥಾನದ ಅಲೀಗಂಜ್ ಛಬ್ದಾ ನಿವಾಸಿಯಾಗಿರುವ ರಯೀಸ್, ಭೋಪಾಲದ ಮುಸ್ಕಾನ್ ಖಾನ್​​ನ್ನು 2019 ಏಪ್ರಿಲ್ 4ರಂದು ವಿವಾಹವಾಗಿದ್ದನು. ಮುಸ್ಕಾನ್ ಆಕೆಯ ಕುಟುಂಬದವರಿಗೆ ಕರೆ ಮಾಡಿದರೂ ರಯೀಸ್ ಆಕೆ ಮೇಲೆ ಸಂಶಯ ವ್ಯಕ್ತಪಡಿಸಿ ಹಲ್ಲೆ ಮಾಡುತ್ತಿದ್ದ ಎಂದು ಕೊಟ್ವಾಲಿ ಎಸಿಪಿ ನಾಗೇಂದ್ರ ಪಟೇರಿಯಾ ಹೇಳಿದ್ದಾರೆ.

ಈತನ ದೌರ್ಜನ್ಯ ಸಹಿಸಲಾರದೆ ಆಕೆ ಮಾರ್ಚ್ 18ರಂದು ಭೋಪಾಲಕ್ಕೆ ಮರಳಿ ಆಕೆಯ ಸಹೋದರಿಯೊಂದಿಗೆ ವಾಸಿಸುತ್ತಿದ್ದಳು. ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದ ಆಕೆ ಕೇರ್ ಟೇಕರ್ ಆಗಿ ಹೊಸ ಬದುಕು ಆರಂಭಿಸಿದ್ದಳು. ಹತ್ಯೆಗೆ ಯತ್ನ ನಡೆಸಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು ರಯೀಸ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada