ಬೆಂಗಳೂರು: ಸಿಸಿಬಿ ಎಚ್ಚರಿಕೆ ನೀಡಿದ ಮೇಲೂ ಬಾಲ ಬಿಚ್ಚಿದ ರೌಡಿಶೀಟರ್ಸ್​​​​​​​ ಸೈಕಲ್​ ರವಿ, ಬೇಕರಿ ರಘು; ಪ್ರಕರಣ ದಾಖಲು

ನಟೋರಿಯಸ್ ರೌಡಿಶೀಟರ್ಸ್​​​​ಗಳಾದ ಬೇಕರಿ ರಘು ಮತ್ತು ಸೈಕಲ್ ರವಿ ಮತ್ತೆ ಬಾಲ ಬಿಚ್ಚಿದ್ದು, ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಅಪಹರಿಸಿ ಕೊಲೆ ಮಾಡಲು ಯತ್ನಿಸಿದ ಅರೋಪದಡಿ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೆಂಗಳೂರು: ಸಿಸಿಬಿ ಎಚ್ಚರಿಕೆ ನೀಡಿದ ಮೇಲೂ ಬಾಲ ಬಿಚ್ಚಿದ ರೌಡಿಶೀಟರ್ಸ್​​​​​​​ ಸೈಕಲ್​ ರವಿ, ಬೇಕರಿ ರಘು; ಪ್ರಕರಣ ದಾಖಲು
ಸಯಭ್ರಮಣ್ಯ ಪೊಲೀಸ್​ ಠಾಣೆ
Edited By: ವಿವೇಕ ಬಿರಾದಾರ

Updated on: Aug 23, 2023 | 3:08 PM

ಬೆಂಗಳೂರು: ನಗರದಲ್ಲಿ ರೌಡಿಗಳ ಅಟ್ಟಹಾಸ ಮಿತಿ ಮೀರಿದೆ. ಇವರಿಗೆ ಪೊಲೀಸರ (Police) ಭಯವೇ ಇಲ್ಲದಂತಾಗಿದೆ. ಇತ್ತೀಚಿಗೆ ಸಿಸಿಬಿ (CCB) ಅಧಿಕಾರಿಗಳು ರೌಡಿ ಬೇಕರಿ ರಘು ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಾಲ ಬಿಚ್ಚಿದರೇ ಕಟ್​ ಮಾಡುವುದಾಗಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಇದೀಗ ಮತ್ತೆ ನಟೋರಿಯಸ್ ರೌಡಿಶೀಟರ್ಸ್​​​​ಗಳಾದ ಬೇಕರಿ ರಘು ಮತ್ತು ಸೈಕಲ್ ರವಿ ಬಾಲ ಬಿಚ್ಚಿದ್ದು, ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಅಪಹರಿಸಿ ಕೊಲೆ ಮಾಡಲು ಯತ್ನಿಸಿದ ಅರೋಪದಡಿ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಮಚಂದ್ರಪುರ ಪಾರ್ಕ್ ಕಡೆಯಿಂದ ಮನೆಗೆ ಹೋಗುತ್ತಿದ್ದ ಉದ್ಯಮಿಯ ಕಾರನ್ನು ಮಾರಕಾಸ್ತ್ರ ಜೊತೆಗೆ ಬಂದಿದ್ದ ಸುಮಾರು ಹತ್ತು ಜನ ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ಮಾಡಿ ಕೊಲೆಗೆ ಯತ್ನಸಿದ್ದಾರೆ. ಈ ವೇಳೆ ಸೈಕಲ್ ರವಿ ಮತ್ತು ಬೇಕರಿ ರಘು ಕಾರಿನಲ್ಲಿದ್ದರು. ಅವರೇ ಕೆಲಸವನ್ನು ಮಾಡಿಸಿದ್ದು ಎಂದು ದೂರು ನೀಡಿದ್ದಾರೆ. ಕೊಲೆಯತ್ನ. ಮತ್ತು ಖಾಸಗಿ ವ್ಯಕ್ತಿಯ ಆಸ್ತಿಪಾಸ್ತಿ ಹಾಳುಮಾಡಿದ್ದಕ್ಕೆ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಗ್ರಾಹಕರ ರೀತಿ ಎಂಟ್ರಿಕೊಟ್ಟು ಲಕ್ಷಾಂತರ ಮೌಲ್ಯದ ಸೀರೆ ಕಳುವು ಮಾಡುತ್ತಿದ್ದ ಆರೋಪಿಗಳ ಬಂಧನ

ಸೈಕಲ್​ ರವಿ ಮತ್ತು ಬೇಕರಿ ರಘು ಸಿಸಿಬಿ ಬಂದು ವಿಚಾರಣೆಗೆ ಬಂದು ಹೋದ ನಂತರ ಈ ಕೃತ್ಯ ಎಸಗಿದ್ದಾರೆ. ಕೆಲ ದಿನಗಳ ಹಿಂದೆ ಸಿಸಿಬಿ ಅಧಿಕಾರಿಗಳು ಬೇಕರಿ ರಘು ಅನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ರೌಡಿ ಚಟುವಟಿಕೆಯಲ್ಲಿ ಭಾಗ ಯಾಗದಂತೆ ವಾರ್ನ್ ಮಾಡಿ ಕಳಿಹಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಪ್ರಜ್ವಲ್​ ಕುಮಾರ್ ಎನ್​ ವೈ

2017 ಜೂನ್​ನಿಂದ ಟಿವಿ9 ಕನ್ನಡ ವಾಹಿನಿಯಲ್ಲಿ ಕ್ರೈಮ್ ವರದಿಗಾರನಾಗಿ ವೃತ್ತಿ. ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿ ಮಾಡುತಿದ್ದೇನೆ. ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನವನಾಗಿದ್ದು ಹಾಸನ ಮತ್ತು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ ಒಂದು ವರ್ಷ ಜನಶ್ರೀ ಸುದ್ದಿ ವಾಹಿನಿಯಲ್ಲಿ ಕ್ರೈಮ್ ರಿಪೋರ್ಟರ್ ಆಗಿ ಕೆಲಸ ಮಾಡಿ ನಂತರ 2017 ರಿಂದ ಇಲ್ಲಿಯವರೆಗೆ ಟಿವಿ9 ನಲ್ಲಿ ಕೆಲಸ ಮಾಡುತಿದ್ದೇನೆ.

Read More
Loading...
Unable to load recommendations.
Follow Us