ಮೈತುಂಬ ಬಂಗಾರ ಧರಿಸಿ ವೈರಲ್ ಆಗಿದ್ದ ದಾಸನ ಮೇಲೆ ರೌಡಿ ಶೀಟ್ ತೆರೆದ ಚಿಕ್ಕಜಾಲ ಪೊಲೀಸ್​​

ಸೋಷಿಯಲ್ ಮೀಡಿಯಾದಲ್ಲಿ ಮೈ ತುಂಬ ಬಂಗಾರ ಧರಿಸಿ ವೈರಲ್ ಆಗಿದ್ದ ದಾಸ ಕಿಂಗ್ ಮೇಕರ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟ್ ತೆರೆಯಲಾಗಿದೆ. ಯಲಹಂಕ ಹಾಗೂ ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಸಾಲು ಸಾಲು ದೂರು ಕೇಳಿ ಬಂದ ಹಿನ್ನೆಲೆ ಚಿಕ್ಕಜಾಲ ಪೊಲೀಸರು ಕ್ರಮಕೈಗೊಂಡಿದ್ದಾರೆ.

ಮೈತುಂಬ ಬಂಗಾರ ಧರಿಸಿ ವೈರಲ್ ಆಗಿದ್ದ ದಾಸನ ಮೇಲೆ ರೌಡಿ ಶೀಟ್ ತೆರೆದ ಚಿಕ್ಕಜಾಲ ಪೊಲೀಸ್​​
ಚಿಕ್ಕಜಾಲ ಪೊಲೀಸ್​ ಠಾಣೆ
Follow us
Jagadisha B
| Updated By: ಗಂಗಾಧರ​ ಬ. ಸಾಬೋಜಿ

Updated on: Dec 20, 2023 | 4:28 PM

ಬೆಂಗಳೂರು, ಡಿಸೆಂಬರ್​​​ 20: ಸೋಷಿಯಲ್ ಮೀಡಿಯಾದಲ್ಲಿ ಮೈ ತುಂಬ ಬಂಗಾರ ಧರಿಸಿ ವೈರಲ್ ಆಗಿದ್ದ ದಾಸ ಕಿಂಗ್ ಮೇಕರ್​ ವಿರುದ್ಧ ಇದೀಗ ರೌಡಿ ಶೀಟ್ (rowdy sheet) ತೆರೆಯಲಾಗಿದೆ. ಯಲಹಂಕ ಹಾಗೂ ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಸಾಲು ಸಾಲು ದೂರು ಕೇಳಿ ಬಂದ ಹಿನ್ನೆಲೆ ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ದಾಸನ ಮೇಲೆ ನಾನ್ ಲೋಕಲ್ ರೌಡಿ ಶೀಟ್​ ತೆರೆಯಲಾಗಿದೆ.

ಎಂಎಲ್ಎ ಸಂಬಂಧಿ ರಾಮಮೂರ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿತ್ತು. ಮಹಿಳೆಯ ಜಮೀನಿನ ವಿಚಾರವಾಗಿ ಧಮ್ಕಿ ಹಾಕಲು ಸುಪಾರಿ ಪಡೆದಿದ್ದ ದಾಸ, ಹುಡುಗರನ್ನು ಕಳುಹಿಸಿ ಮಹಿಳೆ ಮೇಲೆ‌ ಹಲ್ಲೆ ಮಾಡಿಸಿ ಜಾತಿ ನಿಂದನೆ ಮಾಡಿದ್ದ ಆರೋಪ ಕೇಳಿಬಂದಿತ್ತು. ಈ ಕುರಿತು‌ ಮಹಿಳೆ ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಇದೇ ಪ್ರಕರಣದಲ್ಲಿ ದಾಸ ಎ2 ಆರೋಪಿಯಾಗಿದ್ದ.

ಇದನ್ನೂ ಓದಿ: ಮೈತುಂಬ ಬಂಗಾರ ಹಾಕಿಕೊಂಡು, ಗ್ಯಾಂಗ್ ಕಟ್ಟಿಕೊಂಡು ಹವಾ ಮಾಡುತ್ತಿದ್ದ ದಾಸ ಅರೆಸ್ಟ್

ಇದೇ ರೀತಿ ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲೂ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಚಿಕ್ಕಜಾಲ ಪೊಲೀಸರು ದಾಸ ಮೇಲೆ ರೌಡಿಶೀಟ್ ತೆರೆದಿದ್ದಾರೆ.

ಮೈ ತುಂಬ ಬಂಗಾರ ಧರಿಸಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ದಾಸ, ಮೈತುಂಬ ಗೋಲ್ಡು ಸುತ್ತಲೂ ಹುಡುಗರು, ದೊಡ್ಡ ದೊಡ್ಡವರ ಜೊತೆ ಫೋಟೋದಲ್ಲಿ ಫಾಲೋವರ್ಸ್ ಬೆಳೆಸಿಕೊಂಡಿದ್ದ. ಬೇರೆಯವರ ಪ್ರಾಪರ್ಟಿ ಗಲಾಟೆ ನಡುವೆ ಯುವಕರ ಕಳುಹಿಸಿಕೊಟ್ಟ ಆರೋಪ ಹಿನ್ನಲೆ ಬಂಧನವಾಗಿದ್ದ. ಸದ್ಯ ಈತನ ಪೂರ್ವ ಪರ ಹಾಗೂ ಆತನ ಬಗ್ಗೆ ಯಲಹಂಕ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ: ಕೊಳ್ಳೆಗಾಲ ಒಂಟಿ ಮಹಿಳೆ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್, ಕೊಲೆ ಹಿಂದಿನ ದಿನ ಮಗಳನ್ನು ಬಾಲಮಂದಿರಕ್ಕೆ ಸೇರಿಸಿದ್ದ ತಾಯಿ, ಯಾಕೆ?

ಈ ಹಿಂದೆ ಸಹ ಸಾಕಷ್ಟು ಜನರಿಗೆ ಬೆದರಿಕೆ ಹೊಡ್ಡಿ ಆಕ್ರಮವಾಗಿ ಹಣ ಗಳಿಸಿರುವ ಶಂಕೆ ವ್ಯಂಕ್ತವಾಗಿದೆ. ಯಲಹಂಕ ಸುತ್ತ ಮುತ್ತ ರಿಯಲ್ ಎಸ್ಟೇಟ್ ಬಿಲ್ಡಿರ್​ಗಳನ್ನು ಬೆದರಿಸಿರುವ ಆರೋಪ‌ ಮಾಡಲಾಗಿದೆ. ಹೀಗಾಗಿ ದಾಸನ ಮೊಬೈಲ್ ಫೋನ್​​ನ್ನು ಮಿರರ್ ಸ್ಕ್ರೀನ್ ಮಾಡಲು ಸಿಐಡಿಗೆ ರವಾನೆ ಮಾಡಲಾಗಿದೆ.

ಮೊದಲಿಗೆ ತನ್ನ ಮೊಬೈಲ್ ಪೊಲೀಸರಿಗೆ ನೀಡಲು ಒಪ್ಪದ ದಾಸ, ನಂತರ ತನಿಖೆಗೆ ಅವಶ್ಯಕತೆ ಹಿನ್ನೆಲೆ ಮೊಬೈಲ್ ಸೀಜ್ ಮಾಡಿದ್ದಾರೆ. ಸದ್ಯ ಯಲಹಂಕ ಪೊಲೀಸರಿಂದ ತನಿಖೆಯಲ್ಲಿ ಮೊಬೈಲ್​ನಲ್ಲಿ‌ ದೊಡ್ಡ ಬಿಲ್ಡರ್​ಗಳ ಸಂಪರ್ಕ ನಂಬರ್​ಗಳು ಪತ್ತೆ ಆಗಿವೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ