Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುತ್ರಿ ಮೇಲೆ ತಂದೆಯಿಂದಲೇ ಅತ್ಯಾಚಾರ ಆರೋಪ: ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲು

17 ವರ್ಷದ ಪುತ್ರಿ ಮೇಲೆ ತಂದೆಯಿಂದಲೇ ಅತ್ಯಾಚಾರ ಆರೋಪ ಕೇಳಿಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಇನ್​ಸ್ಟಾಗ್ರಾಂನಲ್ಲಿ ಗೆಳೆಯನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿಯಲ್ಲಿ ನಡೆದಿದೆ.

ಪುತ್ರಿ ಮೇಲೆ ತಂದೆಯಿಂದಲೇ ಅತ್ಯಾಚಾರ ಆರೋಪ: ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲು
ನೆಲಮಂಗಲ ಟೌನ್ ಪೊಲೀಸ್ ಠಾಣೆ
Follow us
ಬಿ ಮೂರ್ತಿ, ನೆಲಮಂಗಲ
| Updated By: ಗಂಗಾಧರ​ ಬ. ಸಾಬೋಜಿ

Updated on: Oct 25, 2023 | 9:51 PM

ನೆಲಮಂಗಲ, ಅಕ್ಟೋಬರ್​​​​​ 25: 17 ವರ್ಷದ ಪುತ್ರಿ ಮೇಲೆ ತಂದೆ (Father) ಯಿಂದಲೇ ಅತ್ಯಾಚಾರ ಆರೋಪ ಕೇಳಿಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನಲ್ಲಿ ಹಾಸ್ಟೆಲ್​ನಲ್ಲಿದ್ದುಕೊಂಡು ದ್ವಿತೀಯ PU ವಿದ್ಯಾರ್ಥಿನಿ ಓದುತ್ತಿದ್ದು, ದಸರಾ ರಜೆ ಹಿನ್ನೆಲೆ ಊರಿಗೆ ಬಂದಿದ್ದಳು. ಈ ವೇಳೆ ಮಗಳ ಮೇಲೆ ತಂದೆಯಿಂದ ಅತ್ಯಾಚಾರ ಆರೋಪ ಮಾಡಿದ್ದು, ಸದ್ಯ ತಂದೆಯನ್ನು ಪೊಲೀಸರು ಬಂಧಿಸಿದ್ದು, ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲು ಮಾಡಲಾಗಿದೆ.

ಮುರ್ಡೇಶ್ವರದ ಕಡಲತೀರದಲ್ಲಿ ಮುಳುಗುತ್ತಿದ್ದ ಇಬ್ಬರು ಯುವಕರ ರಕ್ಷಣೆ

ಕಾರವಾರ: ಸಮುದ್ರದ ಅಲೆಗೆ ಸಿಲುಕಿ ಮುಳುಗುತ್ತಿದ್ದ ಪ್ರವಾಸಿಗರ ರಕ್ಷಣೆ ಮಾಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆ ಮುರುಡೇಶ್ವರದಲ್ಲಿ ನಡೆದಿದೆ. ಲೈಪ್ ಗಾಡ್೯ ಸಿಬ್ಬಂದಿಗಳು ಇಬ್ಬರು ಪ್ರವಾಸಿಗರ ರಕ್ಷಣೆ‌ ಮಾಡಿದ್ದಾರೆ. ಮನೋಜ್ (24), ರವಿ (28) ಅಲೆಗೆ ಸಿಲುಕಿದ್ದ ಪ್ರವಾಸಿಗರು. ಲೈಪ್ ಗಾಡ್೯ ಮಾತು ಧಿಕ್ಕರಿಸಿ ಸಮುದ್ರಕ್ಕೆ ಇಳಿದು ಹುಚ್ಚಾಟ ಮಾಡಿದ್ದರು. ಸದ್ಯ ಪ್ರವಾಸಿಗರ ರಕ್ಷಣೆ ಮಾಡಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಇನ್​ಸ್ಟಾಗ್ರಾಂನಲ್ಲಿ ಗೆಳೆಯನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ

ಇನ್​ಸ್ಟಾಗ್ರಾಂನಲ್ಲಿ ಗೆಳೆಯನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿಯಲ್ಲಿ ನಡೆದಿದೆ. ನೇಣುಬಿಗಿದುಕೊಂಡು ನೇತ್ರಾ ಮುತ್ತಯ್ಯ ಗೋವಾಳಿ(26) ಆತ್ಮಹತ್ಯೆ ಮಾಡಿಕೊಳ್ಳಲಾಗಿದೆ. ಯುವತಿಗೆ ಮಂಡಳ್ಳಿ ಗೋವರ್ಧನ ಎಂಬಾತನಿಂದ ಕಿರುಕುಳ ಆರೋಪ ಕೇಳಿಬಂದೆ. ಭಟ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮಹಿಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ

ತುಮಕೂರು: ವಿವಾಹಿತ ಮಹಿಳೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದುಂಡ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಿರೀಶ್ ಎಂಬುವವರ ಪತ್ನಿ ಕಾವ್ಯಾ (23) ಮೃತ ದುರ್ದೈವಿ. ಸಂಜೆ ಜಮೀನಿನಿಂದ ದನಗಳನ್ನು ಹೊಡೆದುಕೊಂಡು ಬರುವ ವೇಳೆ ಕೃತ್ಯವೆಸಗಲಾಗಿದೆ.

ಇದನ್ನೂ ಓದಿ: ದೊಡ್ಡಬಳ್ಳಾಪುರ: ಅತ್ತಿಗೆ ಜೊತೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗ್ತಿದ್ದಾನೆಂದು ಅಣ್ಣನನ್ನೇ ಕೊಂದು ಪರಾರಿಯಾದ!

ಕೊಲೆಗೈದಿರುವವನು ಅದೇ ಗ್ರಾಮದ ಯುವಕ ಎಂಬ ಮಾಹಿತಿ ಇದೆ. ಘಟನೆಗೆ ಖಚಿತ ಮಾಹಿತಿ ತಿಳಿದುಬಂದಿಲ್ಲ. ಘಟನೆ ಸ್ಥಳಕ್ಕೆ ಸಿ.ಪಿ.ಐ ಲೋಹಿತ್.ಬಿ.ಎನ್, ಪಿ.ಎಸ್.ಐ.ರಾಮಚಂದ್ರಪ್ಪ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ದಂಡಿನಶಿವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿ ಮೇಲೆ ಸರ್ಕಾರಿ ಶಾಲೆ HM ಆ್ಯಸಿಡ್ ದಾಳಿ ಆರೋಪ

ಚಿತ್ರದುರ್ಗ: ವಿದ್ಯಾರ್ಥಿನಿ ಮೇಲೆ ಸರ್ಕಾರಿ ಶಾಲೆ ಹೆಚ್​ಎಂ ಆ್ಯಸಿಡ್ ದಾಳಿ ಆರೋಪ ಕೇಳಿಬಂದಿದೆ. ಚಿತ್ರದುರ್ಗ ತಾಲೂಕಿನ ಜೋಡಿಚಿಕ್ಕೇನಹಳ್ಳಿ ಶಾಲೆ ಶೌಚಾಲಯ ತೊಳೆಯುವ ಪೌಡರ್​ ಪಾಕೆಟ್ ತೆರೆಯುವಾಗ ಘಟನೆ ಸಂಭವಿಸಿದೆ. ಈ ಕುರಿತಾಗಿ ಹೆಚ್​ಎಂ ಹೇಳಿಕೆ ನೀಡಿದ್ದು, ಇದು ಆಕಸ್ಮಿಕವಾಗಿ ನಡೆದ ಘಟನೆ, ದುರುದ್ದೇಶದಿಂದ ಪೌಡರ್ ಎರಚಿಲ್ಲ ಎಂದಿದ್ದಾರೆ.

2ನೇ ತರಗತಿ ವಿದ್ಯಾರ್ಥಿನಿ ಮೇಲೆ ಹೆಚ್​ಎಂ ಆ್ಯಸಿಡ್ ದಾಳಿ ಆರೋಪ ಮಾಡಲಾಗಿದೆ. ಬೆನ್ನಿಗೆ ಗಂಭೀರ ಗಾಯವಾಗಿ ಜಿಲ್ಲಾಸ್ಪತ್ರೆಗೆ ವಿದ್ಯಾರ್ಥಿನಿ ದಾಖಲಾಗಿದ್ದಾಳೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.