ಲಾಹೋರ್: ಪಾಕಿಸ್ತಾನದ ಲಾಹೋರ್ನಲ್ಲಿರುವ (Lahore) ತನ್ನ ಮನೆಯಲ್ಲಿ ಖ್ಯಾತ ರೂಪದರ್ಶಿ ನಯಾಬ್ ನದೀಮ್ (Nayab Nadeem) ನಿಗೂಢವಾಗಿ ಸಾವನ್ನಪ್ಪಿದ್ದಾರೆ. 29 ವರ್ಷದ ನದೀಂ ಏಕಾಂಗಿಯಾಗಿ ತಮ್ಮ ಮನೆಯಲ್ಲಿ ವಾಸಿಸುತ್ತಿದ್ದರು. ಅಪರಿಚಿತ ವ್ಯಕ್ತಿಗಳು ಮನೆಯೊಳಗೆ ನುಗ್ಗಿ ಕೊಲೆ ಮಾಡಿದ್ದು, ನಯಾಬ್ ನದೀಂ ಅವರ ಮೃತದೇಹ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಭಾನುವಾರ ರಾತ್ರಿ ಹಂತಕರು ನದೀಂ ಅವರಿದ್ದ ಮನೆಯೊಳಗೆ ನುಗ್ಗಿ, ಅವರ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನದೀಂ ಅವರ ಮಲ ಸಹೋದರ ಮೊಹಮ್ಮದ್ ಅಲಿ ನಾಸಿರ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ ಬಳಿಕ ಪ್ರಕರಣದ ಬೆಳಕಿಗೆ ಬಂದಿದೆ. ಇಂದು ಬೆಳಗ್ಗೆ ರೂಪದರ್ಶಿ ನದೀಂ ಅವರನ್ನು ಭೇಟಿಯಾಗಲು ನಾಸಿರ್ ಆಕೆಯ ಮನೆಗೆ ತೆರಳಿದ್ದರು. ಫ್ಲಾಟ್ನ ಬಾಗಿಲು ಲಾಕ್ ಆಗಿತ್ತು. ಆಕೆಗೆ ಫೋನ್ ಮಾಡಿದರೂ ರಿಸೀವ್ ಮಾಡಲಿಲ್ಲ. ಆಕೆಯ ಕಾರು ಮನೆಯ ಹೊರಗೆ ನಿಂತಿತ್ತು. ಹೀಗಾಗಿ, ಆಕೆ ಮನೆಯಿಂದ ಹೊರಗೆಲ್ಲೂ ಹೋಗಿಲ್ಲ ಎಂಬುದು ನಾಸಿರ್ಗೆ ಖಚಿತವಾಗಿತ್ತು. ಇದರಿಂದ ಅನುಮಾನಗೊಂಡ ಅವರು ಮನೆಯ ಹಿಂಬದಿಗೆ ಹೋಗಿ ನೋಡಿದ್ದರು.
ನದೀಂಳ ಮನೆಯ ಹಿಂಭಾಗದಲ್ಲಿದ್ದ ಬಾತ್ರೂಮಿನ ಕಿಟಕಿಯ ಗಾಜುಗಳು ಒಡೆದು, ಚೂರಾಗಿ ಬಿದ್ದಿದ್ದವು. ಇದರಿಂದ ಅನುಮಾನಗೊಂಡ ನಾಸಿರ್ ಅದೇ ಕಿಟಕಿಯಿಂದ ಆಕೆಯ ಮನೆಯೊಳಗೆ ಪ್ರವೇಶಿಸಿದ್ದಾರೆ. ಆಗ ತನ್ನ ಸಹೋದರಿಯ ನಗ್ನ ದೇಹ ಹಾಲ್ನಲ್ಲಿ ಬಿದ್ದಿರುವುದನ್ನು ಕಂಡು ಶಾಕ್ ಆಗಿದ್ದಾರೆ. ಬೆತ್ತಲಾಗಿ ಬಿದ್ದಿದ್ದ ಶವದ ಬಳಿ ಹೋಗಿ ನೋಡಿದಾಗ ಆಕೆ ಸಾವನ್ನಪ್ಪಿರುವುದು ಖಚಿತವಾಗಿತ್ತು. ಹೀಗಾಗಿ, ತಕ್ಷಣ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ರೂಪದರ್ಶಿ ನದೀಂ ಅವರ ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ. ಆಕೆಯ ಕೈ, ಕುತ್ತಿಗೆ, ಕಾಲಿನ ಮೇಲೆ ಗಾಯದ ಗುರುತುಗಳಿದ್ದು, ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಒಬ್ಬಂಟಿಯಾಗಿ ಮನೆಯಲ್ಲಿ ವಾಸಿಸುತ್ತಿದ್ದ ನದೀಂ ಅವರಿಗೆ ಇನ್ನೂ ಮದುವೆಯಾಗಿರಲಿಲ್ಲ. ಇತ್ತೀಚೆಗಷ್ಟೇ ಮಾಡೆಲಿಂಗ್ನಲ್ಲಿ ಉತ್ತಮ ಅವಕಾಶಗಳು ಸಿಗಲಾರಂಭಿಸಿದ್ದವು ಎನ್ನಲಾಗಿದೆ.
ಇದನ್ನೂ ಓದಿ: Crime News: ಜೈಲು ಸಿಬ್ಬಂದಿ ಮುಖಕ್ಕೆ ಖಾರದ ಪುಡಿ ಎರಚಿ 7 ಕೈದಿಗಳು ಪರಾರಿ; ಪೊಲೀಸರು ಕಂಗಾಲು!
ಇದನ್ನೂ ಓದಿ: Crime News: ಗಂಡನ ಮೇಲಿನ ಕೋಪಕ್ಕೆ 11 ತಿಂಗಳ ಕಂದಮ್ಮನ ಉಸಿರುಗಟ್ಟಿಸಿ ಕೊಂದ ತಾಯಿ!