ಬೀದರ್: ಜಾತ್ರೆಗೆ ಬಂದಿದ್ದಕ್ಕೆ ದಲಿತರ ಮೇಲೆ ಸವರ್ಣೀಯರಿಂದ ಹಲ್ಲೆ, ಕೇಸ್ ಬುಕ್
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮದಲ್ಲಿ ಹನುಮಾನ್ ಜಾತ್ರೆಯ ಸಂದರ್ಭದಲ್ಲಿ ದಲಿತರ ಮೇಲೆ ಸವರ್ಣೀಯರಿಂದ ನಡೆದ ಹಲ್ಲೆ ಘಟನೆ ಬೆಳಕಿಗೆ ಬಂದಿದೆ. ಜಾತ್ರೆಯಲ್ಲಿ ಭಾಗವಹಿಸಿದ್ದಕ್ಕಾಗಿ ದಲಿತ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರು ದಾಖಲಾಗಿದೆ. ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಒತ್ತಾಯಿಸಲಾಗಿದೆ.
ಬೀದರ್, ನವೆಂಬರ್ 04: ಜಾತ್ರೆಗೆ ಬಂದಿದ್ದಕ್ಕೆ ದಲಿತರ ಮೇಲೆ ಸವರ್ಣೀಯರಿಂದ ಹಲ್ಲೆ (Assault) ಮಾಡಿರುವಂತಹ ಘಟನೆ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮದಲ್ಲಿ ನ.1ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯಲ್ಲಿ ದಲಿತ ಸಮುದಾಯದ ಹಲವು ಯುವಕರಿಗೆ ಗಾಯಗಳಾಗಿವೆ. ಕಟಕ ಚಿಂಚೋಳಿ ಪೊಲೀಸ್ ಠಾಣೆಗೆ ಯುವಕರು ದೂರು ನೀಡಿದ್ದು, ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕೇಸ್ ದಾಖಲಿಸುವಂತೆ ಮನವಿ ಮಾಡಲಾಗಿದೆ.
ನ.1ರಂದು ಹನುಮಾನ್ ದೇವರ ಜಾತ್ರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದಕ್ಕೆ ದಲಿತರು ಮತ್ತು ಸವರ್ಣೀಯರ ನಡುವೆ ವಾಗ್ವಾದ ನಡೆದಿದೆ. ಸವರ್ಣೀಯ ಯುವಕರು ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆಂದು ದಲಿತ ಯುವಕರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಿಂದ ಕೂಗಳತೆ ದೂರದಲ್ಲೇ ಅಸ್ಪೃಶ್ಯತೆ: ದಲಿತರಿಗೆ ದೇಗುಲ ಪ್ರವೇಶ ನಿರಾಕರಣೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಲ್ಲಾತಹಳ್ಳಿ ಗ್ರಾಮದಲ್ಲಿ ನಿನ್ನೆ ದಲಿತರನ್ನು ದೇವಸ್ಥಾನದ ಒಳಗೆ ಬಿಡದೆ ಹೊರಗೆ ಕೂರಿಸಿ ಪೂಜೆ ಮಾಡಲಾಗಿದೆ ಎಂದು ಸವರ್ಣಿಯರು ಮತ್ತು ದಲಿತರ ಮಧ್ಯೆ ವಾಗ್ವಾದ ಉಂಟಾಗಿತ್ತು.
ದೀಪಾವಳಿ ಹಬ್ಬದ ಪ್ರಯುಕ್ತ ಕಳೆದ ಶುಕ್ರವಾರ ಜಾತ್ರೆಯನ್ನ ಹಮ್ಮಿಕೊಂಡಿದ್ದರು. ಇನ್ನೂ ಜಾತ್ರೆಯನ್ನ ಗ್ರಾಮಸ್ಥರೆಲ್ಲ ಒಟ್ಟಾಗಿ ಜಾತಿ ಭೇದವನ್ನ ಮರೆತು ಮಾಡಿದ್ದು ಮಹಿಳೆಯರು ಸೀರೆಗಳನ್ನ ಉಟ್ಟು ತಲೆ ಮೇಲೆ ದೀಪಗಳನ್ನ ಹೊತ್ತು ದೇವಿಗೆ ಬೆಳಗಲು ದೇವಸ್ತಾನದ ಬಳಿ ಬಂದಿದ್ರಂತೆ. ಆದರೆ ಈ ವೇಳೆ ದಲಿತ ಕೇರಿಯವರು ದೇವಸ್ಥಾನದ ಬಳಿ ಬರುವುದು ಸ್ವಲ್ಪ ತಡವಾದ ಕಾರಣ ಸವರ್ಣಿಯರು ದೇವರಿಗೆ ಆರತಿ ಮಾಡಿ ದಲಿತ ಕೇರಿಯ ಹೆಣ್ಣು ಮಕ್ಕಳಿಗೆ ಹೊರಗಿನಿಂದಲೆ ದೀಪ ಬೆಳೆಗುವಂತೆ ಹೇಳಿದ್ದರಂತೆ.
ಇದನ್ನೂ ಓದಿ: ಹಬ್ಬದ ದಿನ ಸತ್ತರೆ ಸ್ವರ್ಗ ಪ್ರಾಪ್ತಿ ಭ್ರಮೆ, ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಜೊತೆಗೆ ಸವರ್ಣಿಯರು ದೇವಸ್ಥಾನದ ಒಳಗಡೆ ಹೋಗಿ ಆರತಿ ಪಡೆದರೆ ಉಳಿದವರನ್ನ ಹೊರಗಿನಿಂದಲೇ ದೀಪ ಬೆಳಗುವಂತೆ ಹೇಳಿ ಜಾತಿ ತಾರತಮ್ಯ ಅಸ್ಪ್ರಶ್ಯತೆ ಮಾಡಿದ್ದಾರೆ ಅಂತ ಗ್ರಾಮದ ದಲಿತ ಕೆರಿ ಯುವಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.