ಜಾರ್ಖಂಡ್: ಧನ್‌ಬಾದ್ ಜೈಲಿನಲ್ಲಿ ಗ್ಯಾಂಗ್ಸ್ಟರ್ ಅಮನ್ ಸಿಂಗ್ ಹತ್ಯೆ
ಗ್ಯಾಂಗ್ಸ್ಟರ್ ಅಮನ್ಸಿಂಗ್ನಲ್ಲಿ ಜಾರ್ಖಂಡ್ನ ಧನ್‌ಬಾದ್ ಜೈಲಿನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಮಧ್ಯಾಹ್ನ ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದಿದೆ. ಇದೇ ವೇಳೆ ಮಾಜಿ ಉಪಮೇಯರ್ ನೀರಜ್ ಸಿಂಗ್ ಸೇರಿದಂತೆ ನಾಲ್ವರ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಅಮನ್ ಸಿಂಗ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಗ್ಯಾಂಗ್ಸ್ಟರ್(Gangster) ಅಮನ್ಸಿಂಗ್ನಲ್ಲಿ ಜಾರ್ಖಂಡ್ನ ಧನ್‌ಬಾದ್ ಜೈಲಿನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಮಧ್ಯಾಹ್ನ ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ ನಡೆದಿದೆ. ಇದೇ ವೇಳೆ ಮಾಜಿ ಉಪಮೇಯರ್ ನೀರಜ್ ಸಿಂಗ್ ಸೇರಿದಂತೆ ನಾಲ್ವರ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಅಮನ್ ಸಿಂಗ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಅಮನ್ ಸಿಂಗ್‌ಗೆ ಆರರಿಂದ ಏಳು ಬಾರಿ ಗುಂಡು ಹಾರಿಸಲಾಗಿದೆ ಎಂದು ಹೇಳಲಾಗಿದೆ. ಗುಂಡು ಹಾರಿಸಿದ ನಂತರ, ಅವರನ್ನು ಗಂಭೀರ ಸ್ಥಿತಿಯಲ್ಲಿ SNMMCH ಗೆ ಕರೆದೊಯ್ಯಲಾಯಿತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಅಮನ್ ಸಿಂಗ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಪಡೆದ ನಂತರ ಆಡಳಿತ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ತಂಡ ಧನ್‌ಬಾದ್ ಜೈಲಿಗೆ ಬಂದು ತನಿಖೆ ನಡೆಸಿತು.
ಮತ್ತಷ್ಟು ಓದಿ: Gangster Tillu Tajpuriya Murder: ತಿಹಾರ್ ಜೈಲಿನಲ್ಲಿ ಗ್ಯಾಂಗ್ಸ್ಟರ್ ತಿಲ್ಲು ತಾಜ್ಪುರಿಯಾ ಹತ್ಯೆ
ಧನ್‌ಬಾದ್ ಜೈಲಿನಲ್ಲಿದ್ದರೂ ಅಮನ್ ಸಿಂಗ್ ಮೇಲೆ ಗುಂಡಿನ ದಾಳಿ ನಡೆಸಿರುವುದು ಜೈಲಿನ ಭದ್ರತಾ ವ್ಯವಸ್ಥೆ ಮೇಲೆ ಪ್ರಶ್ನೆ ಮೂಡಿಸಿದೆ. ಆಯುಧ ಜೈಲಿಗೆ ಹೇಗೆ ತಲುಪಿತು ಎಂಬ ಬಗ್ಗೆ ಹಲವು ಪ್ರಶ್ನೆಗಳು ಎದ್ದಿವೆ.
ಮನ್ ಸಿಂಗ್ ಹೆಸರಲ್ಲಿ ಸುಲಿಗೆ ನಡೆಯುತ್ತಿತ್ತು, ಈತನ ವಿರುದ್ಧ 35ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಧನ್‌ಬಾದ್‌ನ ಅನೇಕ ಉದ್ಯಮಿಗಳಿಗೆ ಸುಲಿಗೆ ಬೇಡಿಕೆಗಳ ಬೆದರಿಕೆ ಹಾಕಿದ್ದ, ಮಾಜಿ ಉಪಮೇಯರ್ ನೀರಜ್ ಸಿಂಗ್ ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿದ ಆರೋಪದ ಮೇಲೆ 2017ರಲ್ಲಿ ಅಮನ್ ಸಿಂಗ್ ಅವರನ್ನು ಬಂಧಿಸಲಾಗಿತ್ತು. ಯುಪಿ ಪೊಲೀಸರು ಅಮನ್‌ನನ್ನು ಬಂಧಿಸಿದ್ದರು. ಅಮನ್ 2017 ರಿಂದ ಧನ್‌ಬಾದ್ ಜೈಲಿನಲ್ಲಿದ್ದ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ