ಕಲಬುರಗಿ: ಕುಡಿತದ ಚಟಕ್ಕೆ ದಾಸನಾಗಿದ್ದ ಪತಿ, ಕೊನೆಗೂ ತನ್ನ ಪತ್ನಿಯನ್ನೇ ಪರಲೋಕಕ್ಕೆ ಕಳುಹಿಸಿದ

ಆಕೆಗೆ ದುಡಿದು ಬದಕುವ ಆಸೆ. ಆದರೆ ಆತನಿಗೆ ಪ್ರತಿನಿತ್ಯ ಕುಡಿಯೋದೆ ಕೆಲಸ. ದುಡಿದು ಸಂಸಾರ ನೋಡಿಕೊಳ್ಳಬೇಕಿದ್ದ ಪತಿ ಕುಡಿತದ ದಾಸನಾಗಿದ್ದ. ಇತ್ತ ಪತ್ನಿಯೇ ದುಡಿದು ಕುಟುಂಬವನ್ನು ನೋಡಿಕೊಳ್ಳುತ್ತಿದ್ದಳು. ಇದರ ಜೊತೆಗೆ ಪತಿ, ಪತ್ನಿ ದುಡಿದ ಹಣಕ್ಕಾಗಿ ಪ್ರತಿನಿತ್ಯ ದುಂಬಾಲು ಬೀಳುವುದು, ಜಗಳ ತಗೆಯುವುದು, ಹಲ್ಲೆ ಮಾಡುವದನ್ನು ಮಾಡುತ್ತಿದ್ದ. ಕೊನೆಗೆ ಪತ್ನಿಯನ್ನೇ ಪರಲೋಕಕ್ಕೆ ಕಳುಹಿಸಿದ್ದಾನೆ.

ಕಲಬುರಗಿ: ಕುಡಿತದ ಚಟಕ್ಕೆ ದಾಸನಾಗಿದ್ದ ಪತಿ, ಕೊನೆಗೂ ತನ್ನ ಪತ್ನಿಯನ್ನೇ ಪರಲೋಕಕ್ಕೆ ಕಳುಹಿಸಿದ
ಮೃತ ಮಹಿಳೆ
Follow us
ಕಿರಣ್ ಹನುಮಂತ್​ ಮಾದಾರ್
|

Updated on: Mar 15, 2023 | 7:00 AM

ಕಲಬುರಗಿ: ಅಲ್ಲಿ ನೂರಾರು ಮಹಿಳೆಯರು ಸೇರಿದ್ದರು. ಗುಂಪಾಗಿ ಸೇರಿದ್ದ ಮಹಿಳೆಯರ ಕಣ್ಣಲ್ಲಿ ಕಣ್ಣೀರು ಜೊತೆಗೆ ಆಕ್ರೋಶದ ನುಡಿಗಳು ಬರ್ತಿದ್ದವು. ಪಾಪ ಈರಮ್ಮನಿಗೆ ಹೀಗಾಗಬಾರದಿತ್ತು ಎನ್ನುವ ನೋವಿನ ನುಡಿಗಳ ಜೊತೆಗೆ, ಅದೊಬ್ಬ ವ್ಯಕ್ತಿಗೆ ಮಹಿಳೆಯರು ಹಿಡಿಶಾಪ ಹಾಕುತ್ತಿದ್ದರು. ಹೌದು ಈ ಮಹಿಳೆಯರ ಕಣ್ಣೀರು, ಆಕ್ರೋಶಕ್ಕೆ ಕಾರಣವಾಗಿದ್ದು ಮಹಿಳೆಯೋರ್ವಳ ಕೊಲೆ. ಜಿಲ್ಲೆಯ ಕಾಳಗಿ ತಾಲೂಕಿನ ಟೆಂಗಳಿ ಗ್ರಾಮದಲ್ಲಿ ಕಳೆದ ಪೆಬ್ರವರಿ 23 ರಂದು ಹಾಡಹಗಲೇ ನಡೆಯಬಾರದ ಘಟನೆ ನಡೆದು ಹೋಗಿತ್ತು. ಗ್ರಾಮದಲ್ಲಿ ನಡೆದ ಘಟನೆ ಇಡೀ ಟೆಂಗಳಿ ಗ್ರಾಮದ ಜನರನ್ನು ಶಾಕ್​ಗೆ ದೂಡಿತ್ತು. ಇದಕ್ಕೆ ಕಾರಣ ಹಾಡಹಗಲೇ ಗ್ರಾಮದಲ್ಲಿ ನಡೆದಿದ್ದ ಮಹಿಳೆಯೋರ್ವಳ ಬರ್ಬರ ಕೊಲೆ. ಟೆಂಗಳಿ ಗ್ರಾಮದಲ್ಲಿ ನಲವತ್ತು ವರ್ಷದ ಈರಮ್ಮ ಮಠಪತಿ ಎನ್ನುವ ಮಹಿಳೆಯನ್ನ ಆಕೆಯ ಪತಿಯೇ ಬರ್ಬರವಾಗಿ ಕೊಲೆ ಮಾಡಿದ್ದನು.

ಅಂದು ಮುಂಜಾನೆ ಕೆಲಸ ಎಂದು ಹೇಳಿ ಮನೆಯ ಹೊರಗಡೆ ತೊಗರಿ ಒಣಗಿ ಹಾಕಿದ್ದಳು. ನಂತರ ತನ್ನ ದೈನಂದಿನ ಕೆಲಸ ಮಾಡುತ್ತಿದ್ದಳು. ಆದರೆ ಹನ್ನೊಂದು ಗಂಟೆಯ ನಂತರ ಮನೆಗೆ ಹೊರಗೆ ಬಾರದೇ ಇದ್ದಾಗ, ಅಕ್ಕಪಕ್ಕದ ಮನೆಯವರು ಕೂಡ ಈರಮ್ಮ ಮನೆ ಕೆಲಸದಲ್ಲಿ ಬ್ಯುಸಿಯಾಗಿರಬಹುದು ಎಂದು ಸುಮ್ಮನಾಗಿದ್ದರು. ಆದರೆ ಕೆಲವೇ ಹೊತ್ತಲ್ಲಿ ಈರಮ್ಮಳ ಮನೆಯಿಂದ ಮಾರಕಾಸ್ತ್ರ ಹಿಡಿದು ಆಕೆಯ ಪತಿ ಹೊರಬಂದಿದ್ದ. ಅವನನ್ನ ನೋಡಿ ಜನ ಶಾಕ್ ಆಗಿದ್ದರು. ಹೀಗಾಗಿ ಈರಮ್ಮಳ ಸಂಬಂಧಿಗಳು ಮತ್ತು ಸುತ್ತಮುತ್ತಲಿನ ಜನರು ಈರಮ್ಮಳ ಮನೆಗೆ ಹೋಗಿ ನೋಡಿದ್ದಾರೆ. ಈರಮ್ಮ ರಕ್ತದ ಮಡುವಿನಲ್ಲಿ ಬಿದ್ದು ಬಾರದ ಲೋಕಕ್ಕೆ ಹೋಗಿದ್ದಳು.

ಇದನ್ನೂ ಓದಿ:ಕಲಬುರಗಿ: ಕಂಠಪೂರ್ತಿ ಕುಡಿದು ರಾತ್ರಿ ಮನೆಗೆ ಹೊರಟವನು ಬೀದಿಯಲ್ಲಿ ಶವವಾಗಿ ಬಿದ್ದಿದ್ದ, ಕೊಲೆ ಎಂದು ಆರೋಪಿಸಿದ ತಾಯಿ

ನಿನ್ನನ್ನು ಜೀವನ ಪೂರ್ತಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದ ಪತಿ ಈರಮ್ಮಳನ್ನು ಬರ್ಬರವಾಗಿ ಕೊಲೆ ಮಾಡಿದ್ದ. ಪತ್ನಿಯನ್ನು ಕೊಲೆ ಮಾಡಿದ್ದ ಶಿವಯ್ಯ, ಮಚ್ಚು ಹಿಡಿದು ಗ್ರಾಮದಲ್ಲಿ ಹೊರಗಡೆ ಬಂದು ತನ್ನ ದರ್ಪವನ್ನು ತೋರಿದ್ದ. ಕೆಟ್ಟ ಕ್ರಿಮಿ ಯಾರಿಗೆ ಏನು ಮಾಡಿದ ಅನ್ನೋದು ಗೊತ್ತಾಗದೇ ಜನರು ಕಂಗಾಲಾಗಿದ್ದರು. ಕೊನೆಗೂ ಆತನ ಮನೆಗೆ ಹೋಗಿ ನೋಡಿದಾಗ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎನ್ನುವುದು ಗೊತ್ತಾಗಿದೆ. ಇನ್ನು ಈರಮ್ಮ ಮತ್ತು ಶಿವಯ್ಯ ಮದುವೆಯಾಗಿ ಇಪ್ಪತ್ತು ವರ್ಷವಾಗಿದೆ. ಇಬ್ಬರು ಗಂಡು ಮಕ್ಕಳು ಇದ್ದಾರೆ. ಆದರೂ ಕೂಡಾ ಶಿವಯ್ಯ, ದುಡಿಯೋದನ್ನು ಬಿಟ್ಟಿದ್ದನಂತೆ. ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುವುದು, ಪತ್ನಿಗೆ ಹೊಡೆಯುವದನ್ನು ಮಾಡುತ್ತಿದ್ದನಂತೆ. ಪತಿ ದುಡಿಯದೇ ಇದ್ರು ಚಿಂತೆಯಿಲ್ಲಾ ಎಂದು ಈರಮ್ಮಳೆ ಕೂಲಿ ಕೆಲಸ ಮಾಡಿಕೊಂಡು ಸಂಸಾರವನ್ನು ಸಾಗಿಸುತ್ತಿದ್ದಳಂತೆ.

ಇನ್ನು ಇವರಿಗೆ ವಯಸ್ಸಿಗೆ ಬಂದ ಇಬ್ಬರು ಮಕ್ಕಳು ಇದ್ದಾರೆ. ಅವರಿಗಾದ್ರು ಕೂಡಾ ತಾನು ಬದುಕಬೇಕು. ಅವರ ಸಂಸಾರ ಚೆನ್ನಾಗಿರುವಂತೆ ನೋಡಿಕೊಳ್ಳಬೇಕು ಎಂದು ಈರಮ್ಮ ಪತಿಯ ಎಲ್ಲಾ ಕಿರುಕುಳವನ್ನು ಸಹಿಸಿಕೊಂಡು ಸಂಸಾರ ಸಾಗಿಸುತ್ತಿದ್ದಳಂತೆ. ಆದರೂ ಕೂಡ ಪತಿಗೆ ಸಹನೆ ಇರಲಿಲ್ಲವಂತೆ. ಪತ್ನಿಗೆ ಪ್ರತಿನಿತ್ಯ ಕುಡಿತ್ಕಕಾಗಿ ಹಣ ಕೇಳುತ್ತಿದ್ದನಂತೆ. ನಿನ್ನೆ ಕೂಡ ಕುಡಿತಕ್ಕೆ ಪತಿ ಹಣ ಕೇಳಿದ್ದನಂತೆ. ಇದೇ ಸಮಯದಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಕೊನೆಗೆ ಪಾಪಿ ಪತಿ ಮನೆಯಲ್ಲಿದ್ದ ಮಚ್ಚಿನಿಂದ ಈರಮ್ಮಳ ಕತ್ತು ಸೇರಿದಂತೆ ಅನೇಕ ಕಡೆ ಕೊಚ್ಚಿ ಕೊಲೆ ಮಾಡಿದ್ದಾನೆ. ಈ ಬಗ್ಗೆ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಶಿವಯ್ಯನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ಮಹಿಳೆ ಮೇಲಿನ ಅತ್ಯಾಚಾರ ಯತ್ನ-ಕೊಲೆ: 15 ವರ್ಷದಿಂದ ಜೈಲು ಹಕ್ಕಿಯಾಗಿದ್ದ ಆರೋಪಿ ಬಿಡುಗಡೆ! ಕಾನೂನು ಕುಣಿಕೆಯಿಂದ ಬಚಾವಾಗಿದ್ದು ಹೇಗೆ?

ಹತ್ತು ಜನರಿಗೆ ಬುದ್ದಿ ಹೇಳುವ ವಯಸ್ಸಲ್ಲಿದ್ದ ಶಿವಯ್ಯ ಕುಡಿತದ ಮತ್ತಲ್ಲಿ ಪತ್ನಿಯನ್ನೇ ಕೊಲೆ ಮಾಡಿ, ಇದೀಗ ಕಂಬಿ ಹಿಂದೆ ಹೋಗಿದ್ದಾನೆ. ಗ್ರಾಮೀಣ ಬಾಗದಲ್ಲಿ ಕುಡಿತದ ಚಟಕ್ಕೆ ಅನೇಕ ಕುಟುಂಬಗಳು ಬೀದಿಗೆ ಬೀಳುತ್ತಿರುವುದು ದುರಂತದ ವಿಚಾರವಾಗಿದೆ.

ವರದಿ: ಸಂಜಯ್ ಟಿವಿ9 ಕಲಬುರಗಿ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ