Kangana Ranaut: ಕಂಗನಾ ಬಾಡಿಗಾರ್ಡ್​ ಎನ್ನಲಾದ ಕರ್ನಾಟಕ ಮೂಲದವನ ಮೇಲೆ ರೇಪ್​ ಆರೋಪ; 50 ಸಾವಿರ ಹಣದೊಂದಿಗೆ ಪರಾರಿ

Kumar Hegde Rape Case: ಅನೇಕ ವಿಚಾರಗಳ ಬಗ್ಗೆ ಕಂಗನಾ ರಣಾವತ್​ ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಆದರೆ ಅವರ ಬಾಡಿ ಗಾರ್ಡ್​ ಎಂದು ಹೇಳಲಾದ ವ್ಯಕ್ತಿಯ ಮೇಲೆ ಇಂಥ ದೊಡ್ಡ ಆರೋಪ ಕೇಳಿಬಂದಿದ್ದರೂ ಕೂಡ ಅವರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Kangana Ranaut: ಕಂಗನಾ ಬಾಡಿಗಾರ್ಡ್​ ಎನ್ನಲಾದ ಕರ್ನಾಟಕ ಮೂಲದವನ ಮೇಲೆ ರೇಪ್​ ಆರೋಪ; 50 ಸಾವಿರ ಹಣದೊಂದಿಗೆ ಪರಾರಿ
ಕಂಗನಾ ರಣಾವತ್​
Follow us
| Updated By: Digi Tech Desk

Updated on:May 22, 2021 | 11:49 AM

ಕಂಗನಾ ರಣಾವತ್​ ಇದ್ದಲ್ಲಿ ಕಿರಿಕ್​ ಇದ್ದೇ ಇರುತ್ತದೆ ಎಂಬಷ್ಟರಮಟ್ಟಿಗೆ ಅವರು ಈಗಾಗಲೇ ವಿವಾದಗಳನ್ನು ಮಾಡಿಕೊಂಡಿದ್ದಾರೆ. ಈಗ ರೇಪ್​ ಪ್ರಕರಣವೊಂದರ ಕಾರಣಕ್ಕಾಗಿ ಕಂಗನಾ ರಣಾವತ್​ ಅವರ ಬಾಡಿ ಗಾರ್ಡ್​ ಎಂದು ಹೇಳಲಾದ ವ್ಯಕ್ತಿ ಸುದ್ದಿಯಾಗುತ್ತಿದ್ದಾನೆ. ಆತ ಕಂಗನಾಗೆ ಬಾಡಿ ಗಾರ್ಡ್​ ಆಗಿದ್ದ ಎಂಬ ಕಾರಣಕ್ಕೆ ಈ ಪ್ರಕರಣ ಹೆಚ್ಚು ಹೈಲೈಟ್​ ಆಗುತ್ತಿದೆ. ಮುಂಬೈನ ಡಿಎನ್​ ನಗರ್​ ಪೊಲೀಸ್​ ಠಾಣೆಯಲ್ಲಿ ಕುಮಾರ್​ ಹೆಗಡೆ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

ಐಪಿಸಿ ಸೆಕ್ಷನ್​ 376 ಮತ್ತು 377ರ ಅಡಿಯಲ್ಲಿ ಕುಮಾರ್​ ಹೆಗಡೆ ವಿರುದ್ಧ ದೂರು ದಾಖಲಾಗಿದೆ. ಯುವತಿಯೊಬ್ಬಳ ಜೊತೆ ಲಿವ್​ ಇನ್​ ರಿಲೇಷನ್​ಶಿಪ್​ನಲ್ಲಿ ಇದ್ದ ಆತ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಎಂಬ ಆರೋಪ ಕೂಡ ಕೇಳಿಬಂದಿದೆ. ಇತ್ತೀಚೆಗೆ ಇಬ್ಬರ ನಡುವೆ ಬ್ರೇಕಪ್​ ಆಗಿತ್ತು ಎಂಬ ಮಾಹಿತಿ ಇದೆ.

ಇಂಥ ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಕುಮಾರ್​ ಹೆಗಡೆ ಎಂಬಾತನು ಬಾಲಿವುಡ್​ ನಟಿ ಕಂಗನಾ ರಣಾವತ್​ಗೆ ಪರ್ಸನಲ್​ ಬಾಡಿಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದ ಎಂಬ ಸುದ್ದಿ ಹರಡಿದೆ. ಆದರೆ ಈ ಬಗ್ಗೆ ಪೊಲೀಸರು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ಕುಮಾರ್​ ಹೆಗಡೆ ಹಿನ್ನೆಲೆ ಬಗ್ಗೆ ಇನ್ನಷ್ಟೇ ತನಿಖೆ ನಡೆಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಸಂತ್ರಸ್ತ ಯುವತಿಯ ಜೊತೆ ಕುಮಾರ್​ ಹೆಗಡೆಗೆ ಕಳೆದ 8 ವರ್ಷಗಳ ಹಿಂದೆ ಪರಿಚಯ ಬೆಳೆದಿತ್ತು. ಕಳೆದ ವರ್ಷ ಜೂನ್​ನಲ್ಲಿ ಆತ ಮದುವೆ ಪ್ರಪೋಸ್​ ಕೂಡ ಮಾಡಿದ್ದ. ಅದಕ್ಕೆ ಯುವತಿಯಿಂದ ಸಮ್ಮತಿ ಸಿಕ್ಕಿತ್ತು. ಬಳಿಕ ಆತ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಲು ಶುರುಮಾಡಿದ್ದ. ಏ.27ರಂದು ಅವನು ತನ್ನ ತಾಯಿ ನಿಧನರಾಗಿದ್ದಾರೆ ಎಂದು ಹೇಳಿ ಯುವತಿಯಿಂದ 50 ಸಾವಿರ ರೂ. ಹಣ ಪಡೆದು ಅಪಾರ್ಟ್​ಮೆಂಟ್​ನಿಂದ ಪರಾರಿ ಆಗಿದ್ದ. ಮೂಲತಃ ಕರ್ನಾಟಕದವನಾದ ಕುಮಾರ್​ ಹೆಗಡೆ ತನ್ನ ಊರು ತಲುಪಿದ ಬಳಿಕ ಫೋನ್​ ಸ್ವಿಚ್​ ಆಫ್​ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಯುವತಿ ಹೇಳಿಕೆ ನೀಡಿದ್ದಾಳೆಂದು ಹಲವೆಡೆ ವರದಿ ಆಗಿದೆ.

ಕಂಗನಾ ರಣಾವತ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಸದಾಕಾಲ ಆ್ಯಕ್ಟೀವ್​ ಆಗಿರುತ್ತಾರೆ. ತಮಗೆ ಸಂಬಂಧ ಇರಲಿ, ಇಲ್ಲದಿರಲಿ ಅನೇಕ ವಿಚಾರಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಆದರೆ ಅವರ ಬಾಡಿ ಗಾರ್ಡ್​ ಎಂದು ಹೇಳಲಾದ ವ್ಯಕ್ತಿಯ ಬಗ್ಗೆ ಇಂಥ ದೊಡ್ಡ ಆರೋಪ ಕೇಳಿಬಂದಿದ್ದರೂ ಕೂಡ ಅವರು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆತ ತಮ್ಮ ಬಾಡಿ ಗಾರ್ಡ್​ ಹೌದೋ ಅಲ್ಲವೋ ಎಂಬುದನ್ನೂ ಅವರು ಈವರಗೆ ಖಚಿತಪಡಿಸಿಲ್ಲ.

ಇದನ್ನೂ ಓದಿ:

ಕೊರೊನಾ ವಿಚಾರದಲ್ಲಿ ಯು-ಟರ್ನ್​ ತೆಗೆದುಕೊಂಡ ಕಂಗನಾ

Kangana Ranaut: ಟ್ವಿಟರ್​ನಿಂದ ಹೊರದಬ್ಬಿಸಿಕೊಂಡ ಕಂಗನಾ ಇನ್​ಸ್ಟಾಗ್ರಾಮ್​ನಲ್ಲಿ ಒಂದು ವಾರ ಉಳಿಯೋದು ಕೂಡ ಅನುಮಾನ

Published On - 11:43 am, Sat, 22 May 21

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ