AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ವಿಚಾರದಲ್ಲಿ ಯು-ಟರ್ನ್​ ತೆಗೆದುಕೊಂಡ ಕಂಗನಾ

ಕೊರೊನಾ ನಮಗೆ ಎಚ್ಚರಿಕೆಯ ಗಂಟೆ. ನಾವು ಜವಾಬ್ದಾರಿಯುತವಾಗಿ ಬದುಕದೆ ಇದ್ದರೆ ಮನುಷ್ಯ ಜನಾಂಗವು ಭವಿಷ್ಯದಲ್ಲಿ ತೊಂದರೆ ಅನುಭವಿಸಲಿದೆ ಎಂದು ಕಂಗನಾ ಹೇಳಿದ್ದರು.

ಕೊರೊನಾ ವಿಚಾರದಲ್ಲಿ ಯು-ಟರ್ನ್​ ತೆಗೆದುಕೊಂಡ ಕಂಗನಾ
ಕಂಗನಾ ರಣಾವತ್​
ರಾಜೇಶ್ ದುಗ್ಗುಮನೆ
|

Updated on:May 10, 2021 | 7:17 PM

Share

ಕಂಗನಾ ರಣಾವತ್​ಗೂ ವಿವಾದಕ್ಕೂ ಎಲ್ಲಿಲ್ಲದ ನಂಟು. ಕಂಗನಾ ಏನೇ ಮಾಡಿದರೂ ವಿವಾದ ಸೃಷ್ಟಿಯಾಗುತ್ತದೆ. ಕೆಲವೊಂದು ಕಣ್ತಪ್ಪಿನಿಂದ ಆದರೆ, ಇನ್ನೂ ಕೆಲವನ್ನು ಅವರು ಉದ್ದೇಶಪೂರ್ವಕವಾಗಿಯೇ ಮಾಡುತ್ತಾರೆ. ಕೊರೊನಾ ಸಣ್ಣ ಜ್ವರವಷ್ಟೇ ಎಂದು ಟೀಕೆಗೆ ಒಳಗಾಗಿದ್ದ ಕಂಗನಾ ಈಗ ಈ ವಿಚಾರದಲ್ಲಿ ಯು-ಟರ್ನ್​ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಅವರು ಗಿಡ ಬೆಳೆಸಿ ಎಂದು ಹೇಳಿದ ವಿಚಾರ ಸಾಕಷ್ಟು ಟ್ರೋಲ್​ ಆಗಿದೆ.

ಕೊರೊನಾ ನಮಗೆ ಎಚ್ಚರಿಕೆಯ ಗಂಟೆ. ನಾವು ಜವಾಬ್ದಾರಿಯುತವಾಗಿ ಬದುಕದೆ ಇದ್ದರೆ ಮನುಷ್ಯ ಜನಾಂಗವು ಭವಿಷ್ಯದಲ್ಲಿ ತೊಂದರೆ ಅನುಭವಿಸಲಿದೆ. ಹೆಚ್ಚೆಚ್ಚು ಗಿಡಗಳನ್ನು ನೆಡಿ. ಪ್ರತಿ ವ್ಯಕ್ತಿ ಒಂದು ವರ್ಷಕ್ಕೆ 8 ಮರಗಳನ್ನು ನೆಡಬೇಕು ಎಂದು ಕಂಗನಾ ಕೋರಿದ್ದಾರೆ. ಇತ್ತೀಚೆಗೆ ಕೊರೊನಾ ಬಗ್ಗೆ ಹಾಕಿದ್ದ ಪೋಸ್ಟ್​ಗೆ ಈ ಹೇಳಿಕೆ ತದ್ವಿರುದ್ಧವಾಗಿದೆ.

ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಎದುರಾಗಿದೆ. ಈ ಸಂದರ್ಭದಲ್ಲಿ ಅನೇಕರು ನಾವು ಗಿಡಗಳನ್ನು ಬೆಳೆಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದರು. ವೈದ್ಯಕೀಯ ಆಮ್ಲಜನಕ ಹಾಗೂ ಗಿಡಗಳು ನೀಡುವ ಆಮ್ಲಜನಕ ಎರಡೂ ಬೇರೆಬೇರೆ. ಹೀಗಾಗಿ, ಗಿಡ ಬೆಳೆಸುವುದಕ್ಕೂ ವೈದ್ಯಕೀಯ ಆಮ್ಲಜನಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಈ ವಿಚಾರವನ್ನು ಪ್ರಸ್ತಾಪ ಮಾಡಿ ಕಂಗನಾ ಟ್ರೋಲ್​ ಆಗಿದ್ದಾರೆ. ಅನೇಕರು ಕಂಗನಾಗೆ ಸಾಮಾನ್ಯ ಜ್ಞಾನವೇ ಇಲ್ಲ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಅವರು ಯು-ಟರ್ನ್​ ತೆಗೆದುಕೊಂಡ ಬಗ್ಗೆ ಬರೆದುಕೊಂಡಿದ್ದರು.

‘ನನ್ನ ದೇಹದೊಳಗೆ ಈ ವೈರಸ್​ ಇದೆ ಎಂಬುದು ತಿಳಿದಿರಲಿಲ್ಲ. ಈಗ ನಾನು ಇದನ್ನು ನಾಶ ಮಾಡುತ್ತೇನೆ. ಹೆದರಿಕೊಂಡರೆ ಇದು ಮತ್ತಷ್ಟು ಹೆದರಿಸುತ್ತದೆ. ಎಲ್ಲರೂ ಇದನ್ನು ನಾಶ ಮಾಡೋಣ. ಕೊವಿಡ್​-19 ಎಂದರೆ ಸಣ್ಣ ಜ್ವರವಲ್ಲದೇ ಮತ್ತೇನೂ ಅಲ್ಲ’ ಎಂದು ಕಂಗನಾ ಬರೆದುಕೊಂಡಿದ್ದರು. ನಂತರ ಈ ಪೋಸ್ಟ್​​ಅನ್ನು ಇನ್​ಸ್ಟಾಗ್ರಾಂ ಡಿಲೀಟ್​ ಮಾಡಿತ್ತು.

ಇದನ್ನೂ ಓದಿ: Kangana Ranaut: ಟ್ವಿಟರ್​ನಿಂದ ಹೊರದಬ್ಬಿಸಿಕೊಂಡ ಕಂಗನಾ ಇನ್​ಸ್ಟಾಗ್ರಾಮ್​ನಲ್ಲಿ ಒಂದು ವಾರ ಉಳಿಯೋದು ಕೂಡ ಅನುಮಾನ

Published On - 7:16 pm, Mon, 10 May 21

ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿದ ಇಶಾನ್ ಕಿಶನ್
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಊಟಿಯಂತಾದ ಕೋಲಾರ, ರಸ್ತೆ ಕಾಣದೇ ವಾಹನ ಸವಾರರು ಪರದಾಟ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
ಔಷಧಿ ಖರೀದಿಲಿ ಭಾರಿ ಭ್ರಷ್ಟಾಚಾರ: ಕಮಿಷನ್ ಬೇಡಿಕೆಯ ಸ್ಫೋಟಕ ಆಡಿಯೋ ಇಲ್ಲಿದೆ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ
2026 ಮಿಥುನ ರಾಶಿಯವರಿಗೆ ನಿರ್ಣಾಯಕ ವರ್ಷ; ವಾರ್ಷಿಕ ಭವಿಷ್ಯ ಇಲ್ಲಿದೆ
ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್, ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯ
ಸಿದ್ದರಾಮಯ್ಯ ಪರ ಯತ್ನಾಳ್ ಬ್ಯಾಟಿಂಗ್, ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯ
ಮೂರು ತಿಂಗಳ ಗರ್ಭಿಣಿಯ ಕಪಾಳಕ್ಕೆ ಹೊಡೆದ ಪೊಲೀಸ್ ಅಧಿಕಾರಿ
ಮೂರು ತಿಂಗಳ ಗರ್ಭಿಣಿಯ ಕಪಾಳಕ್ಕೆ ಹೊಡೆದ ಪೊಲೀಸ್ ಅಧಿಕಾರಿ
ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ: ಹಾಲಿಗೆ ಪ್ರೋತ್ಸಾಧನ ಏರಿಕೆ
ರೈತರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ: ಹಾಲಿಗೆ ಪ್ರೋತ್ಸಾಧನ ಏರಿಕೆ