ಬೆಂಗಳೂರು: ನಗರದ ಬನಶಂಕರಿ 6ನೇ ಹಂತದ ಚಿಕ್ಕೇಗೌಡನಪಾಳ್ಯದ ಬಳಿ ತುರಹಳ್ಳಿ ಫಾರೆಸ್ಟ್ನಲ್ಲಿ ಅರೆಸುಟ್ಟ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆಯಾಗಿದೆ. ಕೊಲೆ ಮಾಡಿ ಮೃತ ದೇಹಕ್ಕೆ ಬೆಂಕಿ ಹಚ್ಚಿರುವ ಶಂಕೆ ಮೂಡಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ 20 ಲೀಟರ್ ಡೀಸೆಲ್ ಕ್ಯಾನ್ ಪತ್ತೆಯಾಗಿದೆ. ಮೇಲ್ನೋಟಕ್ಕೆ ಪುರುಷ ದೇಹ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ. 35 ರಿಂದ 40 ವರ್ಷದ ಪುರುಷ ಎಂದು ಗುರುತಿಸಲಾಗಿದೆ. ತುರಹಳ್ಳಿ ಫಾರೆಸ್ಟ್ ಬಳಿ ಮದ್ಯದ ಬಾಟಲ್, ಸಿಗರೇಟ್ ತುಂಡುಗಳು ಪತ್ತೆಯಾಗಿರುವ ಕಾರಣ ನಿನ್ನೆ(ಮಾರ್ಚ್ 27) ತಡರಾತ್ರಿಯವರೆಗೂ ಫಾರೆಸ್ಟ್ನಲ್ಲಿ ಪಾರ್ಟಿ ಮಾಡಿರುವುದು ಪರಿಶೀಲನೆಯಲ್ಲಿ ತಿಳಿದು ಬಂದಿದೆ. ಸದ್ಯ ಮೃತದೇಹ ಯಾರದ್ದು ಎಂಬ ಬಗ್ಗೆ ಮಾಹಿತಿ ಇಲ್ಲದ ಕಾರಣ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಆರ್.ಟಿ. ನಗರದಲ್ಲಿ ಬಾರ್ ಡ್ಯಾನ್ಸರ್ ಬರ್ಬರ ಹತ್ಯೆ; ಕೊಲೆಯ ಹಿಂದಿನ ಕಾರಣ ನಿಗೂಢ
Bangalore Crime: ದಂಪತಿ ಜಗಳದ ವೇಳೆ ಮಧ್ಯಪ್ರವೇಶಿಸಿದ ಅತ್ತೆ ಮೇಲೆ ಹಲ್ಲೆಗೈದ ಸೊಸೆ
Published On - 5:15 pm, Sun, 28 March 21