7 ರಾಜ್ಯಗಳಲ್ಲಿ 14 ಮದುವೆಯಾಗಿದ್ದ ಅಸಾಮಿ ಕೊನೆಗೂ ಸಿಕ್ಕಿ ಬಿದ್ದಿದ್ದಾದರೂ ಹೇಗೆ?

Crime News: ಮ್ಯಾಟ್ರಿಮೋನಿಯಲ್ ಸೈಟ್‌ ಮೂಲಕ ಮಹಿಳೆಯರನ್ನು ಪುಸಲಾಯಿಸಿ ನಕಲಿ ದಾಖಲೆಯೊಂದಿಗೆ ವಿವಾಹವಾಗುತ್ತಿದ್ದನು. ಆ ಬಳಿಕ ಕೆಲ ದಿನಗಳ ಕಾಲ ಜೊತೆಗಿದ್ದು ಹಣ, ಒಡವೆ ದೋಚಿ ಪರಾರಿಯಾಗುತ್ತಿದ್ದ.

7 ರಾಜ್ಯಗಳಲ್ಲಿ 14 ಮದುವೆಯಾಗಿದ್ದ ಅಸಾಮಿ ಕೊನೆಗೂ ಸಿಕ್ಕಿ ಬಿದ್ದಿದ್ದಾದರೂ ಹೇಗೆ?
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Feb 17, 2022 | 9:34 PM

ಯಾರಿಗೆ ಆಗಲಿ ಕಂಕಣ ಭಾಗ್ಯ ಕೂಡಿ ಬಂದರೆ ಅದು ಅದೃಷ್ಟ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಕಂಕಣ ಭಾಗ್ಯ ಕೂಡಿ ಬರಲು ಅನೇಕರು ಪೂಜೆ, ವೃತಗಳ ಮೊರೆ ಹೋಗುತ್ತಾರೆ. ಇನ್ನು ಕೆಲವರಿಗೆ ಮದುವೆ ವಯಸ್ಸು ದಾಟಿದರೂ ಕಂಕಣ ಭಾಗ್ಯ ಮಾತ್ರ ಕೂಡಿ ಬಂದಿರಲ್ಲ. ಆದರೆ ಇಲ್ಲೊಬ್ಬರಿದ್ದಾರೆ. ಇವರಿಗೆ ಕಂಕಣ ಭಾಗ್ಯ 7 ರಾಜ್ಯಗಳಲ್ಲಿ ಕೂಡಿ ಬಂದಿದೆ. ಅದು ಕೂಡ 14 ಬಾರಿ ಎಂದರೆ ನಂಬಲೇಬೇಕು. ಹೌದು, ಈ ಅಸಾಮಿಯ ಹೆಸರು ರಮೇಶ್ ಸ್ವೇನ್. ಒಡಿಶಾ ಮೂಲದ ರಮೇಶ್ ಅವರು ಇದೀಗ 7 ರಾಜ್ಯಗಳಲ್ಲಿ ವಿವಾಹವಾಗಿ ಪೊಲೀಸರ ಅತಿಥಿಯಾಗಿದ್ದಾನೆ.

ಒಡಿಶಾದ ಕೇಂದ್ರಪಾರ ಜಿಲ್ಲೆಯ ಪಟ್ಕುರಾ ಗ್ರಾಮದ ನಿವಾಸಿಯಾಗಿರುವ ರಮೇಶ್, ಮದುವೆಯಾದ ನಂತರ ಹೆಂಡತಿ ಒಡವೆ ಮತ್ತು ಹಣವನ್ನು ದೋಚಿ ಪರಾರಿಯಾಗುತ್ತಿದ್ದನು. ಹೀಗೆ 7 ರಾಜ್ಯಗಳಲ್ಲಿ ಒಟ್ಟು 14 ಮದುವೆಯಾಗಿರುವ ರಮೇಶ್ ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. 60 ವರ್ಷದ ರಮೇಶ್ ಮೊದಲು 1982 ರಲ್ಲಿ ವಿವಾಹವಾಗಿದ್ದರು. ಇದರ ನಂತರ, ಅವರು 2002 ರಲ್ಲಿ ಎರಡನೇ ಬಾರಿಗೆ ಮದುವೆಯಾದರು. ಈ ವಿವಾಹಗಳಿಂದ ಇವರಿಗೆ ಸುಮಾರು 5 ಮಕ್ಕಳಿದ್ದಾರೆ. ನಂತರ 2002 ರಿಂದ 2020 ರವರೆಗೆ ಮ್ಯಾಟ್ರಿಮೋನಿಯಲ್ ಸೈಟ್‌ಗಳ ಮೂಲಕ ಮಹಿಳೆಯರೊಂದಿಗೆ ಸ್ನೇಹ ಬೆಳೆಸಿ ಖತರ್ನಾಕ್ ಕೆಲಸಕ್ಕೆ ಮುಂದಾಗಿದ್ದಾನೆ.

ಅದರಂತೆ ಮ್ಯಾಟ್ರಿಮೋನಿಯಲ್ ಸೈಟ್‌ ಮೂಲಕ ಮಹಿಳೆಯರನ್ನು ಪುಸಲಾಯಿಸಿ ನಕಲಿ ದಾಖಲೆಯೊಂದಿಗೆ ವಿವಾಹವಾಗುತ್ತಿದ್ದನು. ಆ ಬಳಿಕ ಕೆಲ ದಿನಗಳ ಕಾಲ ಜೊತೆಗಿದ್ದು ಹಣ, ಒಡವೆ ದೋಚಿ ಪರಾರಿಯಾಗುತ್ತಿದ್ದ. ಹೀಗೆ ದೆಹಲಿಯಲ್ಲಿ ಶಾಲಾ ಶಿಕ್ಷಕಿಯಾಗಿದ್ದ ತನ್ನ 14 ನೇ ಪತ್ನಿಯೊಂದಿಗೆ ಭುವನೇಶ್ವರದಲ್ಲಿ ವಾಸಿಸುತ್ತಿದ್ದ. ಇದೇ ವೇಳೆ ಈತನ ನಕಲಿ ಪತ್ರಗಳು ಹಾಗೂ ಇತರೆ ಮಾಹಿತಿಗಳು ಆಕೆಗೆ ಸಿಕ್ಕಿದೆ. ಇದರಿಂದ ಸಂಶಯಗೊಂಡ ಮಹಿಳೆಯು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾಳೆ. ಅದರಂತೆ ಬಂಧಿಸಿದ ಭುವನೇಶ್ವರ ಪೊಲೀಸರು ವಿಚಾರಣೆಗೊಳಪಡಿಸಿದಾಗ ದೆಹಲಿ, ಪಂಜಾಬ್, ಅಸ್ಸಾಂ, ಜಾರ್ಖಂಡ್ ರಾಜ್ಯಗಲ್ಲೂ ಕೂಡ ಮದುವೆ ಆಗಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ ಹೀಗೆ ಮದುವೆಯಾಗಲು 4 ನಕಲಿ ಆಧಾರ್ ಕಾರ್ಡ್‌ಗಳು ಮತ್ತು ಇತರ ಕೆಲವು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡಿದ್ದ. ಇದೀಗ 14 ಹೆಂಡ್ತಿರ ಮುದ್ದಿನ ಗಂಡ ರಮೇಶ್ ಸ್ವೇನ್ ಪೊಲೀಸರ ಅತಿಥಿಯಾಗಿದ್ದಾನೆ.

ಇದನ್ನೂ ಓದಿ: IPL 2022 ನಲ್ಲಿ ಕೋಟಿ ಸಿಗುತ್ತಿದ್ದಂತೆ ಪಾಕಿಸ್ತಾನ ಸೂಪರ್ ಲೀಗ್ ತೊರೆದ ಸ್ಟಾರ್ ಆಟಗಾರ

ಇದನ್ನೂ ಓದಿ: IPL 2022: RCB ತಂಡ ಕಟ್ಟಿದೆ…ಆದರೆ ಆರಂಭಿಕ ಯಾರು ಎಂಬುದೇ ಈಗ ಪ್ರಶ್ನೆ..?

ಇದನ್ನೂ ಓದಿ: IPL 2022: RCB ತಂಡದಲ್ಲಿ ಇಬ್ಬರು ಕನ್ನಡಿಗರು..! 

(Man Who Married 14 Women In 7 States Arrested In Odisha)

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?