ಬಾಲಕಿಯ ದುಪಟ್ಟಾ ಎಳೆದು ಆಕೆಯ ಸಾವಿಗೆ ಕಾರಣವಾಗಿದ್ದ ಆರೋಪಿಗಳ ಕಾಲಿಗೆ ಪೊಲೀಸರ ಗುಂಡೇಟು

ಬಾಲಕಿಯ ದುಪಟ್ಟಾ ಎಳೆದು ಆಕೆಯ ಸಾವಿಗೆ ಕಾರಣವಾಗಿದ್ದ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ವಿದ್ಯಾರ್ಥಿನಿಯೊಬ್ಬಳು ಶಾಲೆಯಿಂದ ಹಿಂದಿರುಗುತ್ತಿದ್ದ ವೇಳೆ ಬೈಕ್​ನಲ್ಲಿ ಬಂದ ಆರೋಪಿ ಆಕೆ ದುಪಟ್ಟಾವನ್ನು ಎಳೆದಿದ್ದ ಆಕೆ ಆ ರಭಸಕ್ಕೆ ಕೆಳಗೆ ಬಿದ್ದಿದ್ದಳು ಮತ್ತೊಂದು ಬೈಕ್​ನಲ್ಲಿ ಬಂದ ಇನ್ನೋರ್ವ ಆರೋಪಿ ಆಕೆಯ ಮೇಲೆ ಬೈಕ್ ಹತ್ತಿಸಿ ಹತ್ಯೆ ಮಾಡಿದ್ದ.

ಬಾಲಕಿಯ ದುಪಟ್ಟಾ ಎಳೆದು ಆಕೆಯ ಸಾವಿಗೆ ಕಾರಣವಾಗಿದ್ದ ಆರೋಪಿಗಳ ಕಾಲಿಗೆ ಪೊಲೀಸರ ಗುಂಡೇಟು
ಪೊಲೀಸ್
Image Credit source: India Today

Updated on: Sep 17, 2023 | 3:32 PM

ಬಾಲಕಿಯ ದುಪಟ್ಟಾ ಎಳೆದು ಆಕೆಯ ಸಾವಿಗೆ ಕಾರಣವಾಗಿದ್ದ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ನಡೆದಿತ್ತು.  ವಿದ್ಯಾರ್ಥಿನಿಯೊಬ್ಬಳು ಶಾಲೆಯಿಂದ ಹಿಂದಿರುಗುತ್ತಿದ್ದ ವೇಳೆ ಬೈಕ್​ನಲ್ಲಿ ಬಂದ ಆರೋಪಿ ಆಕೆ ದುಪಟ್ಟಾವನ್ನು ಎಳೆದಿದ್ದ ಆಕೆ ಆ ರಭಸಕ್ಕೆ ಕೆಳಗೆ ಬಿದ್ದಿದ್ದಳು ಮತ್ತೊಂದು ಬೈಕ್​ನಲ್ಲಿ ಬಂದ ಇನ್ನೋರ್ವ ಆರೋಪಿ ಆಕೆಯ ಮೇಲೆ ಬೈಕ್ ಹತ್ತಿಸಿ ಹತ್ಯೆ ಮಾಡಿದ್ದ.

ಇಬ್ಬರು ಆರೋಪಿಗಳಾದ ಶಹಬಾಜ್ ಮತ್ತು ಫೈಸಲ್ ಓಡಿ ಹೋಗಲು ಪ್ರಯತ್ನಿಸಿದರು ಹಾಗಾಗಿ ಅವರ ಕಾಲಿಗೆ ಗುಂಡು ಹಾರಿಸಲಾಗಿದೆ. ಅಪ್ರಾಪ್ತ ವಯಸ್ಸಿನ ಮೂರನೇ ಆರೋಪಿ ಓಡುತ್ತಿರುವಾಗ ಕಾಲಿಗೆ ಮೂಳೆ ಮುರಿತವಾಗಿದೆ ಎಂದು ಎಸ್​ಪಿ ಅಜಿತ್ ಸಿನ್ಹಾ ತಿಳಿಸಿದ್ದಾರೆ.

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಘಟನೆಯ ವಿಡಿಯೋದಲ್ಲಿ, ದುಪಟ್ಟಾ ಎಳೆದ ತಕ್ಷಣ ಬಾಲಕಿ ಸೈಕಲ್​ನಿಂದ ನಿಯಂತ್ರಣ ಕಳೆದುಕೊಂಡು ಬಿದ್ದಿದ್ದಾಳೆ, ಆಗ ಆರೋಪಿ ಆಕೆಯ ಮೇಲೆ ಬೈಕ್ ಹತ್ತಿಸಿದ್ದಾನೆ.

ಮತ್ತಷ್ಟು ಓದಿ: ಬೆಂಗಳೂರು: ಪ್ರೀತಿಸಿ ಮದುವೆಯಾದ ನಂತರ ವಂಚಿಸಿ ಪರಾರಿಯಾದ ಮಹಿಳೆ, ಠಾಣೆ ಮೆಟ್ಟಿಲೇರಿದ ಪತಿ

ತಕ್ಷಣ ಬಾಲಕಿಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದು, ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ನಂತರ ಸಂತ್ರಸ್ತೆಯ ತಂದೆಯಿಂದ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಲಾಗಿದೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us