ಆಗಿನ ಸೋವಿಯತ್ ಯೂನಿಯನ್ (ಯು ಎಸ್ ಎಸ್ ಆರ್) (USSR) ಭಾಗವಾಗಿದ್ದ ಉಕ್ರೇನ್ ನಲ್ಲಿ ಹುಟ್ಟಿದ ಸರಣಿ ಹಂತಕ ಆಂದ್ರೇಯಿ ಚಿಕಾಟಿಲೊ (Andrei Chikatilo) 50ಕ್ಕೂ ಹೆಚ್ಚು ಜನರನ್ನು ಕೊಂದಿದ್ದರೂ ಯುಎಸ್ ಎಸ್ ಆರ್ ಸರ್ಕಾರವೇ ಅವನ ರಕ್ಷಣೆಗೆ ಮುಂದಾಗಿತ್ತು ಅಂದರೆ ನೀವು ನಂಬಲೇಬೇಕು. ಸರ್ಕಾರದ ವಾದವೇನಾಗಿತ್ತೆಂದರೆ ಒಂದು ಕಮ್ಯುನಿಸ್ಟ್ ದೇಶದಲ್ಲಿ (Communist country) ವ್ಯಕ್ತಿಯೊಬ್ಬ ಅಷ್ಟೆಲ್ಲ ಕೊಲೆಗಳನ್ನು ಮಾಡುವುದು ಸಾಧ್ಯವೇ ಇಲ್ಲ ಅನ್ನೋದು. 1978ರಿಂದ 1990 ರ ನಡುವಿನ ಅವದಧಿಯಲ್ಲಿ ಚಿಕಾಟಿಲೊ ಕನಿಷ್ಠ 50 ಜನರನ್ನು ಕೊಂದಿದ್ದ. 1930ರ ದಶಕದಲ್ಲಿ ಯುಎಸ್ ಎಸ್ ಆರ್ ನ ಉಕ್ರೇನ್ ಪ್ರಾಂತ್ಯ ಭೀಕರ ಕ್ಷಾಮಕ್ಕೆ ತುತ್ತಾಗಿತ್ತು. ಬರಗಾಲ ಅದೆಷ್ಟು ಘೋರವಾಗಿತ್ತೆಂದರೆ, ಲಕ್ಷಾಂತರ ಜನ ಹಸಿವಿನಿಂದ ಸತ್ತುಹೋದರು ಮತ್ತು ಜನ ಜೀವಂತವಾಗಿರಲು ತಮ್ಮ ನೆರೆಹೊರೆಯವರನ್ನು ಕೊಂದು ಅವರ ಮಾಂಸ ಭಕ್ಷಿಸಲು ಪ್ರಾರಂಭಿಸಿದ್ದರು. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ ಆದೇ ಅವಧಿಯಲ್ಲಿ (1936) ಚಿಕಾಟಿಲೊ ಹುಟ್ಟಿದ್ದ. ಅವನು ಚಿಕ್ಕವನಾಗಿದ್ದಾಗ ಅವನಮ್ಮ ‘ನಿನಗೊಬ್ಬ ಅಣ್ಣ ಇದ್ದ ಆದರೆ ನೆರೆಮನೆಯವರು ಅವನನ್ನು ಅಪಹರಿಸಿ ಕೊಂದು ತಿಂದರು,’ ಎಂದು ಹೇಳುತ್ತಿದ್ದಳು.
ಚಿಕಾಟಿಲೊ ಅಮ್ಮ ಹೇಳುತ್ತಿದ್ದ ಸಂಗತಿ ನಿಜವೇ ಆಗಿರಬಹುದು, ಅದನ್ನು ಪರಿಶೀಲಿಸುವ ಪ್ರಯತ್ನ ಯಾರೂ ಮಾಡಲಿಲ್ಲ. ಆದರೆ ಆ ಕತೆ ಬಾಲಕ ಚಿಕಾಟಿಲೊ ಮೇಲೆ ಮಾತ್ರ ಗಾಢ ಪರಿಣಾಮ ಬೀರಿತ್ತು. ಹಾಗಾಗೇ ಅವನು ತನ್ನ ಆಹುತಿಗಳ ಪೈಕಿ ಕೆಲವರ ಮಾಂಸವನ್ನು ಬೇಯಿಸಿಕೊಂಡು ತಿಂದಿದ್ದ. ಅವನಿಗೆ ಓದಿನಲ್ಲಿ ಅಪಾರ ಆಸಕ್ತಿಯಿತ್ತು ಅದರಲ್ಲೂ ವಿಶೇಷವಾಗಿ ಎರಡನೇ ವಿಶ್ವಯುದ್ಧ ಸಮಯದಲ್ಲಿ ಸೆರೆಸಿಕ್ಕಿದ್ದ ಜರ್ಮನ್ ರನ್ನು ಸೋವಿಯತ್ ಅಧಿಕಾರಿಗಳು ನೀಡಿದ ಚಿತ್ರಹಿಂಸೆಯ ಕತೆಗಳನ್ನು ಬಹಳ ಆಸ್ಥೆಯಿಂದ ಓದುತ್ತಿದ್ದ.
ಇದನ್ನೂ ಓದಿ: ಸೆನ್ಸೇಷನಲ್ ಕ್ರೈಮ್ ಕತೆಗಳು: ಬುರಾರಿ ಕುಟುಂಬದ ಒಟ್ಟು ಹನ್ನೊಂದು ಸದಸ್ಯರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?
ಸೇನೆಯಲ್ಲಿ ಸೇವೆ ಸಲ್ಲಿಸಿದ ನಂತರ ಚಿಕಾಟಿಲೊ, ರೊಸ್ತೋವ್-ನಾ-ಡೊನು ಹೆಸರಿನ ಸ್ಥಳದಲ್ಲಿ ಟೆಲಿಫೋನ್ ಇಂಜಿನೀಯರ್ ಆಗಿ ಕೆಲಸಕ್ಕೆ ಸೇರಿದ. 1963 ರಲ್ಲಿ ಆ ಸ್ಥಳದಲ್ಲೇ ಅವನು ಮದುವೆ ಮಾಡಿಕೊಂಡ. 1971ರಲ್ಲಿ ರೊಸ್ತೋವ್ ಲಿಬರಲ್ ಕಲಾ ವಿಶ್ವವಿದ್ಯಾಲಯದಿಂದ ಡಿಗ್ರಿ ಪಡೆದ ನಂತರ ಚಿಕಾಟಿಲೊ ಟೀಚರ್ ಆಗಿ ಕೆಲಸಕ್ಕೆ ಸೇರಿದ. ಆದರೆ ಕೆಲ ಪೋಷಕರು ಚಿಕಾಟಿಲೊ ತಮ್ಮ ಮಕ್ಕಳೊಂದಿಗೆ ಲೈಂಗಿಕ ದುರ್ವರ್ತನೆ ಪ್ರದರ್ಶಿಸುತ್ತಿದ್ದಾನೆ ಅಂತ ದೂರು ಸಲ್ಲಿಸಿದ ನಂತರ ಅವನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.
ಕೊಲ್ಲುವ ಸರಣಿಯನ್ನು ಚಿಕಾಟಿಲೊ 1978ರಲ್ಲಿ ಆರಂಭಿಸಿದ. ಬೇರೆ ಬೇರೆ ನಗರಗಳಿಗೆ ಕೆಲಸ ಹುಡುಕಿಕೊಂಡು ಹೋಗುವಾಗ ರೊಸ್ತೋವ್-ನಾ-ಡೊನು ರೇಲ್ವೇ ಸ್ಟೇಶನ್ ಮತ್ತು ಬಸ್ ನಿಲ್ದಣಗಳಲ್ಲಿ ಸಿಗುತ್ತಿದ್ದ ಬಾಲಕ ಬಾಲಕಿಯರನ್ನು ತನ್ನ ಬೇಟೆಯಾಗಿ ಆರಿಸಿಕೊಳ್ಳುತ್ತಿದ್ದ. ಕೆಲಸಕ್ಕೆಂದು ಬೇರೆ ನಗರಗಳಿಗೆ ಹೋದಾಗಲೂ ಅವನು ತನ್ನ ಬೇಟೆ ಮುಂದುವರಿಸುತ್ತಿದ್ದ.
ತನ್ಮೆಲ್ಲ ಬೇಟೆಗಳನ್ನು ಕೊಲ್ಲಲು ಅವನು ಒಂದೇ ತೆರನಾದ ವಿಧಾನ ಬಳಸುತ್ತಿದ್ದ. ಶವಗಳನ್ನು ನೋಡಿದ ಬಳಿಕ ಎಲ್ಲ ಕೊಲೆಗಳನ್ನು ಒಬ್ಬನೇ ಹಂತಕ ಮಾಡಿದ್ದು ಮತ್ತು ಸರಣಿ ಕೊಲೆಗಾರ ಅದೇ ಪ್ರಾಂತ್ಯದಲ್ಲಿ ಸಕ್ರಿಯನಾಗಿದ್ದಾನೆ ಅಂತ ಪೊಲೀಸರಿಗೆ ಮನವರಿಕೆಯಾಗಿತ್ತು.
ಪೊಲೀಸರು ಬೆನ್ನು ಬಿದ್ದಿದ್ದರೂ ಚಿಕಾಟೊಲೊ ಹಲವಾರು ವರ್ಷಗಳ ಕಾಲ ಅವರಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ಅವನು ನಡೆಸುತ್ತಿದ್ದ ಭೀಕರ ಅಪರಾಧ ಕೃತ್ಯಗಳು ಆಗಿನ ಸೋವಿಯಟ್ ಯೂನಿಯನ್ ಸಾಮಾಜಿಕ ವ್ಯವಸ್ಥೆಗೆ ತುಕ್ಕು ಹಿಡಿಯುತ್ತಿದ್ದುದನ್ನು ನಿದರ್ಶಿಸುತ್ತಿತ್ತು. ದೇಶದೆಲ್ಲೆಡೆ ಬಡತನ ತಾಂಡವಾಡುತ್ತಿದ್ದುದ್ದರಿಂದ ಯುವ ಜನರು ತಮ್ಮ ಮನೆ ಹಾಗೂ ಊರುಗಳನ್ನು ತೊರೆದು ದೊಡ್ಡದೊಡ್ಡ ನಗರಗಳತ್ತ ಮುಖಮಾಡಿದ್ದರು. ಆದರೆ ಗ್ರಾಮೀಣದ ಭಾಗದ ಜನರಿಗೆ ಪಟ್ಟಣಗಳಲ್ಲಿ ಸ್ನೇಹಿತರು ಎಲ್ಲಿ ಸಿಕ್ಕಾರು? ಜೇಬಲ್ಲಿ ಕಡಿಮೆ ದುಡ್ಡು ಇರುತ್ತಿದ್ದರಿಂದ ವಸತಿ ಮತ್ತು ಊಟಕ್ಕೆ ಬಹಳ ಕಷ್ಟವಾಗುತ್ತಿತ್ತು. ಚಿಕಾಟಿಲೊ ಅಂಥವರನ್ನು ಬೇಟೆಯಾಡುತ್ತಿದ್ದ. ಹಣದಾಸೆ ಮತ್ತು ವಸತಿಯ ಆಮಿಶಗಳಿಗೆ ಈಡಾಗುತ್ತಿದ್ದ ಯುವಕರು ಚಿಕಾಟೊಲೊ ಕರೆದಲ್ಲಿಗೆ ಹೋಗಿ ಮಸಣ ಸೇರುತ್ತಿದ್ದರು. ಅದೆಷ್ಟೋ ಜನ ಕಣ್ಮರೆಯಾದರೂ ಅದು ಯಾರ ಗಮನಕ್ಕೆ ಬರಲಿಲ್ಲ.
ಇದನ್ನೂ ಓದಿ: ಹುಬ್ಬಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಯುವಕರನ್ನು ಉದ್ದೇಶಿಸಿ ಮಾತಾಡಲಿದ್ದಾರೆ: ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ
1984ರಲ್ಲಿ ಚಿಕಾಟಿಲೊ ರೇಲ್ವೇ ಸ್ಟೇಷನೊಂದರಲ್ಲಿ ಒಬ್ಬ ಬಾಲಕಿಯನ್ನು ಲೈಂಗಿಕ ಪೀಡನೆಗೆ ಗುರಿ ಮಾಡಿದ್ದಾಗ ಪೊಲೀಸ್ ಅಧಿಕಾರಿಯೊಬ್ಬ ನೋಡಿ ಅವನನ್ನು ಬಂಧಿಸಿದ. ಅವನು ಸದಾ ಕ್ಯಾರಿ ಮಾಡುತ್ತಿದ್ದ ಬ್ರೀಫ್ ಕೇಸ್ ನಲ್ಲಿ ಒಂದು ಉದ್ದನೆಯ ಚಾಕು ಮತ್ತು ಇತರ ಅನುಮಾನಾಸ್ಪದ ವಸ್ತುಗಳು ಪತ್ತೆಯಾದರೂ ಅವನ ರಕ್ತದ ಗುಂಪನ್ನು ತಪ್ಪಾಗಿ ಗುರುತಿಸಿದ ಪೊಲೀಸರು ಆಪರಾಧ ನಡೆದ ಸ್ಥಳಗಳಲ್ಲಿ ಪತ್ತೆಯಾದ ವೀರ್ಯದ ಜೊತೆ ಅದು ಮ್ಯಾಚ್ ಆಗುವುದಿಲ್ಲವೆಂದು ಹೇಳಿ ಅವನು ಹಂತಕನಲ್ಲವೆಂದು ನಿರ್ಧರಿಸಿಬಿಟ್ಟರು.
ಆದರೆ ಅವನು ಬ್ರೀಫ್ ಕೇಸಲ್ಲಿ ಅವನು ಕೆಲಸ ಮಾಡುತ್ತಿದ್ದ ಸ್ಥಳದಿಂದ ಕದ್ದ ಸಾಮಾನುಗಳು ಪತ್ತೆಯಾಗಿದ್ದರಿಂದ ಅವನಿಗೆ ಒಂದು ವರ್ಷ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. ಅದರೆ ಕೇವಲ ಮೂರು ತಿಂಗಳು ಸೆರೆವಾಸದ ಬಳಿಕ ಅವನನ್ನು ಬಿಡುಗಡೆ ಮಾಡಲಾಗಿತ್ತು.
ಇದನ್ನೂ ಓದಿ: RSS ವೇಷಧರಿಸಿ ಲಾಠಿ ಹಿಡಿದು ಫೋಸ್ ಕೊಟ್ಟ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು; ಫೋಟೋ ವೈರಲ್
ಜೈಲಿನಿಂದ ಹೊರಬಿದ್ದ ಬಳಿಕ ಚಿಕಾಟಿಲೊ ಕೊಲ್ಲುವ ಕಾಯಕವನ್ನು ಪುನರಾರಂಭಿಸಿದ. ರೇಲ್ವೇ ಮತ್ತು ಬಸ್ ನಿಲ್ದಾಣಗಳಲ್ಲಿ ಪೊಲೀಸರು ಕಾವಲನ್ನು ಹೆಚ್ಚಿಸಿದ್ದರು ಮತ್ತು ಅವನ ಚಲನವಲಗಳ ಮೇಲೂ ಒಂದು ಕಣ್ಣಿಡಲಾಗಿತ್ತು. ಅಂತಿಮವಾಗಿ, 1990 ರಲ್ಲಿ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಎಲ್ಲ ಕೊಲೆ ಮತ್ತು ಆತ್ಯಾಚಾರ ಪ್ರಕರಣಗಳಲ್ಲಿ ಚಿಕಾಟಿಲೊ ಪ್ರಮುಖ ಶಂಕಿತ ಅಂತ ಖಚಿತಪಡಿಸಿಕೊಂಡ ಪೋಲಿಸರು ಅವನನ್ನು ಬಂಧಿಸಿದರು. ಈ ಬಾರಿ ಬಂಧಿಸಿದಾಗಲೂ ಅವನಲ್ಲಿ 6 ವರ್ಷಗಳ ಹಿಂದೆ ಬಂಧನಾವಾದಾಗ ಇದ್ದ ಬ್ರೀಫ್ ಕೇಸಿತ್ತು ಮತ್ತು ಅದರಲ್ಲಿದ್ದ ವಸ್ತುಗಳು ಸಹ ಹೆಚ್ಚು ಕಡಿಮೆ ಅವೇ ಆಗಿದ್ದವು.
ಪೊಲೀಸರ ಕಸ್ಟಡಿಯಲ್ಲಿದ್ದಾಗ ಅವನು ತಾನು ಎಸಗಿದ ಎಲ್ಲ ಅಪರಾಧ ಕೃತ್ಯಗಳನ್ನು ಒಪ್ಪಿಕೊಂಡ ಮತ್ತು ಹತ್ಯೆ ಮಾಡಿದ ಸ್ಥಳಗಳಿಗೆ ಪೊಲೀಸರನ್ನು ಕರೆದೊಯ್ದು ಕೊಲೆಗಳನ್ನು ಮಾಡಿದ ರೀತಿ ವಿವರಿಸಿದ. ಚಿಕಾಟಿಲೊ 52 ಕೊಲೆಗಳನ್ನು ಮಾಡಿದ್ದು ನ್ಯಾಯಾಲಯದಲ್ಲಿ ಸಾಬೀತಾಗಿ ಅವನಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಮಾಸ್ಕೋದ ಕಾರಾಗೃಹವೊಂದರಲ್ಲಿ ಅವನಿಗೆ ನೇಣುಗಂಬಕ್ಕೇರಿಸಲಾಯಿತು.
ಅವನ ಜೀವನಕತೆ ಆಧರಿಸಿ ತಯಾರಾದ ‘ಸಿಟಿಜನ್ ಎಕ್ಸ್’ ಸಿನಿಮಾ 1995ರಲ್ಲಿ ಬಿಡುಗಡೆಯಾಗಿತ್ತು.
ಮತ್ತಷ್ಟು ಕ್ರೈಮ್ ಕತೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ