AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ: ಅನೈತಿಕ ಸಂಬಂಧ ಪ್ರಶ್ನಿಸಿದ ಅಜ್ಜಿಯನ್ನೇ ಕೊಂದ ಪಾಪಿಗಳು

ಅಜ್ಜಿ ಮನೆಯಲ್ಲಿರುವ ಸಮಯದಲ್ಲಿ ಚಾಕುವಿನಿಂದ ಇರಿದು ಮರ್ಡರ್ ಮಾಡಿದ್ದಾರೆ. ಅಜ್ಜಿಯ ಕೊಲೆ ಮಾಡಿದ ಹಂತಕರು ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಷ್ಟಕ್ಕೂ ಈ ಅಜ್ಜಿಯನ್ನು ಇವರು ಕೊಲೆ ಮಾಡಿದ್ದು ಯಾಕೆ? ಇದರ ಹಿಂದಿರುವ ಕಾರಣವೇನು ಅಂತೀರಾ ಈ ಸ್ಟೋರಿ ನೋಡಿ.

ಶಿವಮೊಗ್ಗ: ಅನೈತಿಕ ಸಂಬಂಧ ಪ್ರಶ್ನಿಸಿದ ಅಜ್ಜಿಯನ್ನೇ ಕೊಂದ ಪಾಪಿಗಳು
ಅಜ್ಜಿಯನ್ನ ಕೊಂದ ಆರೋಪಿಗಳು
ಕಿರಣ್ ಹನುಮಂತ್​ ಮಾದಾರ್
|

Updated on:Mar 24, 2023 | 7:16 AM

Share

ಶಿವಮೊಗ್ಗ: ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ರತ್ನಾಬಾಯಿ ಎನ್ನುವ ಅಜ್ಜಿ ಕೊಲೆ ಆಗಿದೆ. ರತ್ನಾ ಬಾಯಿ ಮತ್ತು ರಾಮಾ ನಾಯ್ಕ ದಂಪತಿಗಳು ಗ್ರಾಮದಲ್ಲಿ ವಾಸವಾಗಿದ್ದರು. ಇಬ್ಬರು ಗಂಡು ಮಕ್ಕಳು ಅನಾರೋಗ್ಯದ ಹಿನ್ನಲೆಯಲ್ಲಿ ಮೃತಪಟ್ಟಿದ್ದಾರೆ. ಹೀಗಾಗಿ ದಂಪತಿಗಳಿಬ್ಬರೆ ಮನೆಯಲ್ಲಿ ವಾಸವಿದ್ದರು. ಮೊನ್ನೆ(ಮಾ.20) ಸಂಜೆ ಗ್ರಾಮದ ಶಾಲೆಯೊಳಗೆ ಕಟ್ಟಿರುವ ಆಕಳನ್ನು ಬಿಚ್ಚಿಕೊಂಡು ಬರಲು ರತ್ನಾಬಾಯಿ ಹೋಗಿದ್ದಳು. ಆದರೆ ಅಜ್ಜಿಯು ವಾಪಸ್ ಮನೆಗೆ ಬರಲೇ ಇಲ್ಲ. ಮರುದಿನ ನಿನ್ನೆ(ಮಾ.21) ಬೆಳಗ್ಗೆ ಅಜ್ಜಿಯ ಮೃತದೇಹವು ಗ್ರಾಮದ ಹನುಮಂತ ನಾಯ್ಕ ಮನೆ ಸಮೀಪದಲ್ಲಿ ಪತ್ತೆಯಾಗಿತ್ತು. ಈ ವಿಷಯವನ್ನು ರತ್ನಾಬಾಯಿ ಮೈದುನ ಮೃತ ಹಾಲೇಶ್ ನಾಯ್ಕ ಪತ್ನಿ ಜ್ಯೋತಿಬಾಯಿ ಗ್ರಾಮಸ್ಥರಿಗೆ ತಿಳಿಸುತ್ತಾರೆ. ಗ್ರಾಮಸ್ಥರು ಎಲ್ಲರೂ ಹೋಗಿ ನೋಡಿದಾಗ ಅಜ್ಜಿ ಕತ್ತು ಕೋಯ್ದು ಮರ್ಡರ್ ಮಾಡಿರುವುದು ಕಂಡು ಬಂದಿತ್ತು.

ಕೂಡಲೇ ಗ್ರಾಮಸ್ಥರು ಮೃತಳ ಸಂಬಂಧಿಕರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಾರೆ. ಬಳಿಕ ಅಜ್ಜಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ರವಾನಿಸುತ್ತಾರೆ. ಅಜ್ಜಿಯ ಮೇಲೆ ಏನು ದ್ವೇಷವಿತ್ತು ಕೊಲೆ ಮಾಡಿದ್ದು ಯಾರು ಎನ್ನುವ ನೂರೆಂಟು ಅನುಮಾನಗಳು ಶುರುವಾಗಿದ್ದವು. ಈ ನಡುವೆ ಮೈದುನ ಪತ್ನಿ ಜ್ಯೋತಿ ಬಾಯಿ ಮೇಲೆ ಗ್ರಾಮಸ್ಥರಿಗೆ ಮತ್ತು ಸಂಬಂಧಿಕರಿಗೆ ಸಂಶಯವಿತ್ತು. ಕೊಲೆ ಆಗಿರುವ ಮಾಹಿತಿ ಮೊದಲು ಕೊಟ್ಟಿದ್ದೇ ಮೈದುನನ ಪತ್ನಿ ಆಗಿದ್ದಳು. ಹೀಗಾಗಿ ಅವಳ ಮೇಲೆ ಅನುಮಾನಗಳು ಶುರುವಾಗಿದ್ದವು. ಗ್ರಾಮಾಂತರ ಪೊಳೀಸರು ಮರ್ಡರ್ ಕೇಸ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದರು. ಕೊಲೆ ಮಾಡಿರುವ ಆರೋಪಿಗಳ ಪತ್ತೆಗೆ ಎಸ್ಪಿ ಒಂದು ಟೀಂ ಕೂಡ ರೆಡಿ ಮಾಡಿದ್ದರು.

ಇದನ್ನೂ ಓದಿ:ಕೋಲಾರ: ಕೌಟುಂಬಿಕ ಕಲಹ, ಚಾಕುವಿನಿಂದ ಇರಿದು ಮೈದುನನ ಕೊಲೆ

ಅಜ್ಜಿ ಕೊಲೆಗೆ ಅನೈತಿಕ ಸಂಬಂಧವೇ ಕಾರಣ

ಅಜ್ಜಿಯು ಕೊಲೆ ಪ್ರಕರಣ ನಡೆಯುತ್ತಿದ್ದಂತೆ ಗ್ರಾಮದಲ್ಲಿ ಗುಸು ಗುಸು ಶುರುವಾಗಿತ್ತು. ಅಜ್ಜಿಯ ಕೊಲೆ ಯಾರು ಮಾಡಿದ್ದರು ಹಿನ್ನಲೆ ನೋಡಿದಾಗ ಅಲ್ಲೊಂದು ಅನೈತಿಕ ಸಂಬಂಧದ ಪ್ರಭಲ ಕಾರಣವೆನ್ನುವುದು ಕಂಡು ಬರುತ್ತದೆ. ಆ ದಿನ ಅಜ್ಜಿಯು ಹಸು ಬಿಚ್ಚಿಕೊಂಡು ಬರಲು ಹೋಗಿದ್ದಾಗ ಸಂಜೆ ಹೊತ್ತು. ಅಲ್ಲಿಗೆ ಎಂಟ್ರಿಕೊಟ್ಟಿದ್ದು ಅದೇ ಗ್ರಾಮದ ಹನುಮಂತ ನಾಯ್ಕ ಮತ್ತು ಜ್ಯೋತಿ ಬಾಯಿ. ಅಜ್ಜಿಯನ್ನು ನೋಡಿದ ಹನುಮಂತ ನಾಯ್ಕ ಚಾಕುವಿನಿಂದ ಕತ್ತು ಕೊಯ್ದು ಮರ್ಡರ್ ಮಾಡುತ್ತಾನೆ. ಕೊಲೆ ಮಾಡಿದ ಬಳಿಕ ಶವವನ್ನು ಸಮೀಪ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗುತ್ತಾರೆ.

ಅಷ್ಟಕ್ಕೂ ಇಬ್ಬರು ಸೇರಿ ಅಜ್ಜಿಯ ಮರ್ಡರ್ ಮಾಡಿದ್ದು ಯಾಕೆ?

ಹೌದು ಅಲ್ಲೊಂದು ಅನೈತಿಕ ಸಂಬಂಧ ಸ್ಟೋರಿ ಶುರುವಾಗುತ್ತದೆ. ಜ್ಯೋತಿ ಬಾಯಿ ಮತ್ತು ಹನುಮಂತ ನಾಯ್ಕ ನಡುವೆ ಅನೈತಿಕ ಸಂಬಂಧವಿತ್ತು. ಈ ಅನೈತಿಕ ಸಂಬಂಧವನ್ನು ರತ್ನಾಬಾಯಿ ವಿರೋಧಿಸಿದ್ದಳು. ಜ್ಯೋತಿಬಾಯಿಗೆ ವಾರ್ನ್ ಕೂಡಾ ಅಜ್ಜಿಯು ಮಾಡಿದ್ದಳು. ಈ ಹಿನ್ನಲೆಯಲ್ಲಿ ಜ್ಯೋತಿ ಬಾಯಿ ಹನುಮಂತನಾಯ್ಕ ಮೂಲಕ ತಮ್ಮ ಅನೈತಿಕ ಸಂಬಂಧಕ್ಕೆ ಅಜ್ಜಿ ಅಡ್ಡ ಬರುತ್ತಿದೆ. ಹೀಗಾಗಿ ಅವಳ ಕಥೆ ಮುಗಿಸಬೇಕೆಂದು ಒತ್ತಾಯಿಸಿದ್ದಳು. ಜ್ಯೋತಿ ಬಾಯಿಯ ಪಿತೂರಿ ಮಾತು ಕೇಳಿದ ಹನುಂತ ನಾಯ್ಕ್​ನು ಅಜ್ಜಿಯನ್ನು ಚಾಕುವಿನಿಂದ ಇರಿದು ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದನು. ಸದ್ಯ ಗ್ರಾಮಾಂತರ ಪೊಲೀಸರು ಜ್ಯೋತಿ ಬಾಯಿ ಮತ್ತು ಹನುಮಂತ ನಾಯ್ಕ್ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:ಕಾರು ಪಾರ್ಕಿಂಗ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಕಿರಿಕ್; ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಯುವಕನ ಬರ್ಬರ ಕೊಲೆ

ಮಕ್ಕಳು ಇಲ್ಲದೆ ಪತಿ ಜೊತೆ ವಾಸವಾಗಿದ್ದ ಅಜ್ಜಿಯು ವಿನಾಕಾರಣವಾಗಿ ಕೊಲೆಯಾಗಿದ್ದಾಳೆ. ಅನೈತಿಕ ಸಂಬಂಧವನ್ನು ಪ್ರಶ್ನೆಸಿದ್ದೇ ಅಜ್ಜಿಯ ದೊಡ್ಡ ತಪ್ಪಾಗಿತ್ತು. ತಮ್ಮ ಅನೈತಿಕ ಸಂಬಂಧ ಮತ್ತು ವೈಯಕ್ತಿಕ ದ್ವೇಷ ಇಟ್ಟುಕೊಂಡು ಮೈದುನನ ಪತ್ನಿಯು ಅಜ್ಜಿಯ ಮರ್ಡರ್ ಮಾಡಿಸಿದ್ದು ಮಾತ್ರ ವಿಪರ್ಯಾಸ.

ವರದಿ: ಬಸವರಾಜ್ ಯರಗಣವಿ ಟವಿ9 ಶಿವಮೊಗ್ಗ

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:15 am, Fri, 24 March 23