ಸ್ವಾಮಿ ಗಂಗೇಶಾನಂದರ ಮರ್ಮಾಂಗ ಕತ್ತರಿಸಿದ್ದ ಪ್ರಕರಣ; ಕೊನೆಗೂ ಬಯಲಾಯ್ತು 5 ವರ್ಷಗಳ ಹಿಂದಿನ ಸಂಚು!

Swami Gangeshananda: ಈ ಪ್ರಕರಣ ನಡೆದು 5 ವರ್ಷಗಳ ಬಳಿಕ ಪ್ರಕರಣದ ದೂರುದಾರ ಯುವತಿ ತನ್ನ ಸ್ನೇಹಿತನಾಗಿದ್ದ ಸ್ವಾಮಿಯ ಶಿಷ್ಯ ಅಯ್ಯಪ್ಪದಾಸ್ ಜತೆ ಸೇರಿ ಸ್ವಾಮಿ ಗಂಗೇಶಾನಂದ ಅವರ ಗುಪ್ತಾಂಗ ಕತ್ತರಿಸಲು ಸಂಚು ರೂಪಿಸಿದ್ದಳು ಎಂದು ತನಿಖೆಯಲ್ಲಿ ದೃಢಪಟ್ಟಿದೆ.

ಸ್ವಾಮಿ ಗಂಗೇಶಾನಂದರ ಮರ್ಮಾಂಗ ಕತ್ತರಿಸಿದ್ದ ಪ್ರಕರಣ; ಕೊನೆಗೂ ಬಯಲಾಯ್ತು 5 ವರ್ಷಗಳ ಹಿಂದಿನ ಸಂಚು!
ಸ್ವಾಮಿ ಗಂಗೇಶಾನಂದ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 22, 2022 | 7:22 PM

ತಿರುವನಂತಪುರಂ: ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿದ್ದ ಯುವತಿಯೊಬ್ಬರು 2017ರಲ್ಲಿ ಕೇರಳದ ತಿರುವನಂತಪುರದ ಸ್ವಾಮಿ ಗಂಗೇಶಾನಂದ (Swami Gangeshananda) ಅವರ ಮರ್ಮಾಂಗವನ್ನೇ (Genitals) ಕತ್ತರಿಸಿದ್ದಾಗಿ ಹೇಳಿಕೆ ನೀಡಿದ್ದರು. ಆದರೆ, ನಂತರ ಪ್ಲೇಟ್ ತಿರುವಿ ಹಾಕಿದ್ದರು. ಆ ಆಘಾತಕಾರಿ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಕೇರಳ ಪೊಲೀಸ್ ಕ್ರೈಂ ಬ್ರಾಂಚ್ ತಂಡ ಆತನ ಮೇಲೆ ಹಲ್ಲೆ ಆರೋಪ ಮಾಡಿದ ಯುವತಿಯೇ ಆತನ ಗುಪ್ತಾಂಗವನ್ನು ಕತ್ತರಿಸಿದ್ದಾಳೆ ಎಂದು ಬಹಿರಂಗಪಡಿಸಿದೆ. ಈ ಪ್ರಕರಣ ನಡೆದು 5 ವರ್ಷಗಳ ಬಳಿಕ ಪ್ರಕರಣದ ದೂರುದಾರ ಯುವತಿ ತನ್ನ ಸ್ನೇಹಿತನಾಗಿದ್ದ ಸ್ವಾಮಿಯ ಶಿಷ್ಯ ಅಯ್ಯಪ್ಪದಾಸ್ ಜತೆ ಸೇರಿ ಸ್ವಾಮಿ ಗಂಗೇಶಾನಂದ ಅವರ ಗುಪ್ತಾಂಗ ಕತ್ತರಿಸಲು ಸಂಚು ರೂಪಿಸಿದ್ದಳು ಎಂದು ತನಿಖೆಯಲ್ಲಿ ದೃಢಪಟ್ಟಿದೆ.

ಸ್ವಾಮಿ ಗಂಗೇಶಾನಂದ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾಗಿ ಯುವತಿ ಆರೋಪಿಸಿದ್ದು, ಅದರಿಂದಲೇ ಆತನ ಗುಪ್ತಾಂಗವನ್ನು ಕತ್ತರಿಸಿದ್ದೇನೆ ಎಂದಿದ್ದಳು. ಬಳಿಕ, ಇದ್ದಕ್ಕಿದ್ದಂತೆ ಗಂಗೇಶಾನಂದರ ಪರ ಹೇಳಿಕೆ ನೀಡಿದ್ದ ಆಕೆ ಆತ ಮಲಗಿದ್ದ ವೇಳೆ ಯಾರೋ ಅವರ ಮೇಲೆ ಹಲ್ಲೆ ನಡೆಸಿ ಗುಪ್ತಾಂಗವನ್ನು ಕತ್ತರಿಸಿದ್ದಾರೆ ಎಂದು ಆರೋಪಿಸಿದ್ದಳು. ಆದರೆ, ಇದೀಗ ಗಂಗೇಶಾನಂದ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿರುವ ಯುವತಿಯೇ ಆತನ ಗುಪ್ತಾಂಗವನ್ನು ಕತ್ತರಿಸಿದ ವ್ಯಕ್ತಿ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ.

2017ರ ಮೇ 30ರಂದು 19 ವರ್ಷದವಳಾಗಿದ್ದ ಕಾನೂನು ವಿದ್ಯಾರ್ಥಿನಿಯ ಮನೆಯಲ್ಲಿ ಗಂಗೇಶಾನಂದ ಅತಿಥಿಯಾಗಿ ತಂಗಿದ್ದ ವೇಳೆ ಈ ಘಟನೆ ನಡೆದಿತ್ತು. ಆರಂಭದಲ್ಲಿ, ಆ ಯುವತಿ ತನ್ನ ಅತ್ಯಾಚಾರಕ್ಕೆ ಯತ್ನಿಸಿದಾಗ ಆತನ ಗುಪ್ತಾಂಗವನ್ನು ಕತ್ತರಿಸಿದ್ದೇನೆ ಎಂದು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಳು. ಇದರಿಂದಾಗಿ ಸ್ವಾಮಿ ಗಂಗೇಶಾನಂದರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು.

ಬಳಿಕ, ಗಂಗೇಶಾನಂದ ಅವರೇ ತಮ್ಮ ಜನನಾಂಗವನ್ನು ಕತ್ತರಿಸಿಕೊಂಡಿದ್ದಾರೆ ಎಂದು ಹೇಳಿದ್ದರು. ಆದರೆ, ಬಳಿಕ ತಾನು ಮಲಗಿದ್ದಾಗ ಬೇರೊಬ್ಬರು ಅವರ ಗುಪ್ತಾಂಗವನ್ನು ಕತ್ತರಿಸಿದ್ದಾರೆ ಎಂದು ತಿದ್ದುಪಡಿ ಮಾಡಿದ್ದರು. ಗಂಗೇಶಾನಂದ ತನ್ನ ಮೇಲೆ ಹಲ್ಲೆಗೆ ಪ್ರಯತ್ನಿಸಲಿಲ್ಲ ಅಥವಾ ಕೊಲ್ಲಲು ಪ್ರಯತ್ನಿಸಲಿಲ್ಲ ಎಂದು ಆ ಯುವತಿ ತನ್ನ ಹೇಳಿಕೆಯನ್ನು ಬದಲಾಯಿಸಿದ್ದರು. ಗಂಗೇಶಾನಂದ ಅವರ ಶಿಷ್ಯ ಅಯ್ಯಪ್ಪದಾಸ್ ಅವರೇ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧವೂ ದೂರು ದಾಖಲಿಸಿದ್ದರು.

ಬಳಿಕ, ಗಂಗೇಶಾನಂದ ಅವರು ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ವೇಳೆ ಗಂಗೇಶಾನಂದ ಪರವಾಗಿ ಆ ಯುವತಿ ಹೇಳಿಕೆ ನೀಡಿದ್ದರು. ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸಲು ಪೊಲೀಸ್ ಇಲಾಖೆಯ ಉನ್ನತಾಧಿಕಾರಿಗಳು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಡಿಜಿಪಿಗೆ ದೂರು ಸಲ್ಲಿಸಿದ್ದರು. ಇದರಿಂದಾಗಿ ಆ ಪ್ರಕರಣ ಹೊಸ ತಿರುವು ಪಡೆದುಕೊಂಡಿತ್ತು.

ಇದರ ಬೆನ್ನಲ್ಲೇ ಅಪರಾಧ ವಿಭಾಗದ ಪೊಲೀಸರು ಒಂದು ವರ್ಷದಿಂದ ಪ್ರಕರಣದ ತನಿಖೆ ನಡೆಸಿದ್ದು, ಮಹಿಳೆಯೇ ಅಯ್ಯಪ್ಪದಾಸ್ ಸಹಾಯದಿಂದ ಗಂಗೇಶಾನಂದನ ಗುಪ್ತಾಂಗವನ್ನು ಕತ್ತರಿಸಿದ್ದಾಳೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಆ ಯುವತಿ ಅಯ್ಯಪ್ಪ ದಾಸ್​ನನ್ನು ಪ್ರೀತಿ ಮಾಡುತ್ತಿದ್ದಳು. ತಮ್ಮಿಬ್ಬರ ಮದುವೆಗೆ ಸ್ವಾಮಿ ಗಂಗೇಶಾನಂದ ತೊಂದರೆ ಮಾಡುತ್ತಾರೆ ಎಂಬ ಭಯದಲ್ಲಿ ಅವರನ್ನು ಕೊಲೆ ಮಾಡಲು ಇಬ್ಬರೂ ಸಂಚು ರೂಪಿಸಿದ್ದರು. ಗುಪ್ತಾಂಗವನ್ನು ಕತ್ತರಿಸುವುದು ಹೇಗೆಂದು ವಿಡಿಯೋದಲ್ಲಿ ನೋಡಿದ್ದ ಅವರು ಅದೇ ರೀತಿ ಗಂಗೇಶಾನಂದ ರಾತ್ರಿ ಮಲಗಿದ್ದಾಗ ಅವರ ಮರ್ಮಾಂಗವನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ: Shocking News: ಗರ್ಲ್​ಫ್ರೆಂಡ್ ಜೊತೆ ಗುಟ್ಟಾಗಿ ಮದುವೆಯಾಗಿದ್ದಕ್ಕೆ ಯುವಕನ ಗುಪ್ತಾಂಗವೇ ಕಟ್!

Shocking News: ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬದಲು ಗುಪ್ತಾಂಗಕ್ಕೆ ಗಮ್ ಅಂಟಿಸಿಕೊಂಡ ಯುವಕ ಸಾವು!

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ