ಮಂಡ್ಯ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರ ಶವ ಪತ್ತೆ; ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಾಪ್ ಮೆಸೇಜ್
ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಭೇದಿಸಲು ಪೊಲೀಸರು 7 ಪ್ರತ್ಯೇಕ ತಂಡಗಳ ರಚನೆ ಮಾಡಿದ್ದಾರೆ.
ಮಂಡ್ಯ: ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಭೇದಿಸಲು ಪೊಲೀಸರು 7 ಪ್ರತ್ಯೇಕ ತಂಡಗಳ ರಚನೆ ಮಾಡಿದ್ದಾರೆ. ಎಎಸ್ಪಿ ವೇಣುಗೋಪಾಲ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. ಎರಡೂ ಮೃತದೇಹಗಳ ಅರ್ಧಭಾಗ ಮಾತ್ರ ಪತ್ತೆಯಾದ ಹಿನ್ನೆಲೆಯಲ್ಲಿ ದೇಹದ ಉಳಿದ ಭಾಗದ ಪತ್ತೆಗೆ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ. ಮಂಡ್ಯ ಹೆಚ್ಚುವರಿ ಎಸ್ಪಿ ವೇಣುಗೋಪಾಲ್ ತಿಳಿಸಿದ್ದಾರೆ.
ಜಿಲ್ಲೆಯ ಪಾಂಡವಪುರ (Pandavpur) ತಾಲ್ಲೂಕಿನ ಬೇಬಿಗ್ರಾಮ ಹಾಗೂ ಶ್ರೀರಂಗಪಟ್ಟಣ (Shrirangapattana) ತಾಲ್ಲೂಕಿನ ಅರಕೆರೆ ಗ್ರಾಮದ ನಾಲೆಯಲ್ಲಿ ಇಬ್ಬರು ಮಹಿಳೆಯರ ಶವ ಪತ್ತೆಯಾಗಿತ್ತು. ಎರಡೂ ಶವಗಳು ಸೋಂಟದ ಕೆಳಭಾಗ ಮಾತ್ರ ಪತ್ತೆಯಾಗಿತ್ತು. ಈ ಸಂಬಂಧ ಪೊಲೀಸರು ಒಂದೇ ಮಾದರಿಯಲ್ಲಿ ಕೊಲೆಗೈದಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಸಿಗರೇಟ್ಗಾಗಿ ಹಣಕೊಡಲು ನಿರಾಕರಣೆ, ನಡುರಸ್ತೆಯಲ್ಲೇ ಚೂರಿ ಇರಿದು ಅಪ್ರಾಪ್ತನ ಹತ್ಯೆ
ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ವಾಟ್ಸಾಪ್ ಮೆಸೇಜ್
ಯಾದಗಿರಿ: ಯಾದಗಿರಿ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರ ಹೆಸರಲ್ಲಿ ನಕಲಿ ವಾಟ್ಸಾಪ್ ಮೆಸೇಜ್ ರವಾನೆಯಾಗಿದೆ. ಈ ಸಂಬಂಧ ಯಾದಗಿರಿ ಸೈಬರ್ ಕ್ರೈಂ ಠಾಣೆಯಲ್ಲಿ ವಂಚನೆ ಪ್ರಕರ ದಾಖಲಾಗಿದೆ. ತಮಿಳುನಾಡಿನ ಆದಿತ್ಯ ಗೌತಮ್ ಎಂಬಾತನಿಂದ ಕೃತ್ಯ ಎಸಗಲಾಗಿದೆ. ಅಧಿಕಾರಿಗಳ ಹೆಸರಲ್ಲಿ ವಂಚಿಸುವವರ ಬಗ್ಗೆ ಎಚ್ಚರವಹಿಸಬೇಕು. ಡಿಸಿ ಹೆಸರಲ್ಲಿ ಮೆಸೇಜ್ ಬಂದರೆ ಪೊಲೀಸರ ಗಮನಕ್ಕೆ ತನ್ನಿ. ಇಂತಹ ಮೆಸೇಜ್ಗಳನ್ನ ನಂಬಿ ಹಣ ಹಾಕದಂತೆ ಯಾದಗಿರಿ ಎಸ್ಪಿ ಡಾ.ಸಿ.ಬಿ.ವೇದಮೂರ್ತಿಮನವಿ ಮಾಡಿದ್ದಾರೆ
ಹಾವು ಕಚ್ಚಿ 10 ವರ್ಷದ ಬಾಲಕ ಸಾವು
ಯಾದಗಿರಿ: ಯಾದಗಿರಿಯ ದುರ್ಗಾನಗರದಲ್ಲಿ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿ 10 ವರ್ಷದ ಬಾಲಕ ದರ್ಶನ್ ಸಾವನ್ನಪ್ಪಿದ್ದಾನೆ. ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: ನಿರ್ಭಯಾ ಮಾದರಿ ಕೇಸ್: ಬಿಹಾರದಲ್ಲಿ ಚಲಿಸುತ್ತಿದ್ದ ಬಸ್ನಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ
ಅಣ್ಣನಿಂದ ತಮ್ಮನ ಕೊಲೆ ಆರೋಪ ಕೇಸ್
ಬೆಂಗಳೂರು: ಅಣ್ಣನಿಂದ ತಮ್ಮನ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಶವವನ್ನು ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ನಂತರ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. ಪತ್ನಿ ಪುಷ್ಪರಾಣಿ ಆಕ್ರಂದನ ಮುಗಿಲು ಮುಟ್ಟಿದೆ. ಈ ವೇಳೆ ಪತ್ನಿ ಪುಷ್ಪರಾಣಿ ಪ್ರಜ್ಙೆ ತಪ್ಪಿ ಬಿದ್ದಿದ್ದಾರೆ. ಸಂಬಂಧಿಕರಿಂದ ಆರೈಕೆ ಮಾಡಿದ್ದಾರೆ.
ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ