ತನ್ನನ್ನು ತಾನೇ ಕಿಡ್ನಾಪ್ ಮಾಡಿಸಿಕೊಂಡು ಮನೆಯವರನ್ನು ನಂಬಿಸಿದ ಯುವಕ; ಕಾರಣ ಕೇಳಿದ್ರೆ ಶಾಕ್ ಆಗ್ತೀರ
ತನ್ನನ್ನು ತಾನೇ ಕಿಡ್ನಾಪ್ ಮಾಡಿಸಿಕೊಂಡ ವ್ಯಕ್ತಿ 112 ಸಹಾಯವಾಣಿಗೆ ಕರೆ ಮಾಡಿದ್ದಾನೆ. ಗೋಮತಿನಗರ ರೈಲ್ವೆ ನಿಲ್ದಾಣದ ಬಳಿ ತನ್ನ ಅಪಹರಣದ ಬಗ್ಗೆ ಸುಳ್ಳು ಸುದ್ದಿ ಹರಡಿಸಿದ್ದಾನೆ. ಪೊಲೀಸರು ಆತನ ಮೊಬೈಲ್ ನಂಬರ್ ಟ್ರೇಸ್ ಮಾಡಿ ಅವನನ್ನು ಪತ್ತೆಹಚ್ಚಿದ್ದಾರೆ. ಆಗ ಅವನು ತಾನು ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡಿದ್ದಾನೆ. ಇದರಿಂದ ಆತನನ್ನು ಬಂಧಿಸಲಾಯಿತು. ಆತ ಈ ರೀತಿ ನಾಟಕವಾಡಲು ಕಾರಣವೇನೆಂಬುದನ್ನು ಕೇಳಿದರೆ ನೀವು ಕೂಡ ಶಾಕ್ ಆಗೋದು ಗ್ಯಾರಂಟಿ.
ಲಕ್ನೋ: ಇದು ನೀವು ಕೇಳಿರದ ಘಟನೆ. 22 ವರ್ಷದ ಯುವಕನೊಬ್ಬ ತನ್ನನ್ನು ತಾನೇ ಕಿಡ್ನಾಪ್ ಆಗಿದ್ದೇನೆಂದು ಹೇಳಿಕೊಂಡು ಮನೆಯವರನ್ನು ನಂಬಿಸಿದ್ದಾನೆ. ತನ್ನ ಕುಟುಂಬದವರು ತಾನು ಕಾಣೆಯಾದರೆ ನಿಜಕ್ಕೂ ಬೇಸರಗೊಳ್ಳುತ್ತಾರಾ ಎಂದು ನೋಡಲು ಆತ ಈ ನಾಟಕವಾಡಿದ್ದಾನೆ. ತನ್ನನ್ನು ಮನೆಯವರು ಪ್ರೀತಿಸುತ್ತಾರಾ ಎಂದು ಪರೀಕ್ಷಿಸಲು ಆತ ಈ ರೀತಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಡಿಸೆಂಬರ್ 20ರಂದು 112 ಸಹಾಯವಾಣಿಗೆ ಪೊಲೀಸರಿಗೆ ಕಾಣೆಯಾಗಿರುವ ಬಗ್ಗೆ ಫೋನ್ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ.
ಕರೆ ಮಾಡಿದ ವ್ಯಕ್ತಿ ತನ್ನನ್ನು ಅನೂಪ್ ಪಟೇಲ್ ಎಂದು ಹೇಳಿಕೊಮಡಿದ್ದು, ಗೋಮತಿನಗರ ರೈಲ್ವೆ ನಿಲ್ದಾಣದ ಬಳಿ ತನ್ನನ್ನು ಯಾರೋ ಅಪಹರಿಸಿರುವುದಾಗಿ ಹೇಳಿಕೊಂಡಿದ್ದಾನೆ. ಅನೂಪ್ ತನ್ನನ್ನು ಆಟೋದಲ್ಲಿ ಬಂದವರು ಅಪಹರಣ ಮಾಡಿದರು ಎಂದಿದ್ದಾನೆ. ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕ ಕೆಲವೇ ನಿಮಿಷಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಪೊಲೀಸರು ಸುಳಿವಿಗಾಗಿ ಹುಡುಕಾಟ ನಡೆಸಿದರು. ಅನೂಪ್ ಪಟೇಲ್ ಒದಗಿಸಿದ ಮೊಬೈಲ್ ಸಂಖ್ಯೆಯನ್ನು ಬಳಸಿ, ಪೊಲೀಸರು ಆತನ ಸ್ಥಳವನ್ನು ಪತ್ತೆಹಚ್ಚಿದರು.
ಇದನ್ನೂ ಓದಿ: Crime News: ಕೊಲ್ಕತ್ತಾದ ಕಸದ ರಾಶಿಯಲ್ಲಿ ಮಹಿಳೆಯ ರುಂಡ ಪತ್ತೆ!
ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ, ಅನೂಪ್ ಯಾವುದೇ ಟೆನ್ಷನ್ ಇಲ್ಲದೆ ಶಾಂತವಾಗಿ ಕುಳಿತಿರುವುದನ್ನು ಕಂಡು ಆಶ್ಚರ್ಯಚಕಿತರಾದರು. ವಿಚಾರಣೆ ನಡೆಸಿದಾಗ ಇಡೀ ಕಥೆಯನ್ನು ತಾನೇ ಹೆಣೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ತಾನೇ ಮನೆಯಿಂದ ದೂರ ಬಂದಿರುವುದಆಗಿ ಹೇಳಿರುವ ಆತ ಮನೆಯವರಿಗೆ ತನ್ನ ಮೇಲೆ ಪ್ರೀತಿ ಇದೆಯೇ ಎಂದು ಪರೀಕ್ಷಿಸಲು ಕಿಡ್ನಾಪ್ ನಾಟಕವಾಡಿರುವುದಾಗಿ ಹೇಳಿಕೊಂಡಿದ್ದಾನೆ.
ಆದರೆ, ಆತ ಸುಳ್ಳು ದೂರು ದಾಖಲಿಸಿ ಅನಗತ್ಯ ಗಾಬರಿ ಸೃಷ್ಟಿಸುವ ಮೂಲಕ ಕಾನೂನು ಉಲ್ಲಂಘಿಸಿ ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ