
ವಿಜಯಪುರ, ಏಪ್ರಿಲ್ 14: ನಗರದಲ್ಲಿ ಮತ್ತೆ ಗುಂಡಿನ ಸದ್ದು (Gun Fire) ಕೇಳಿ ಬಂದಿದೆ. 6 ಸುತ್ತು ಗುಂಡು ಹಾರಿಸಿದ್ದಲ್ಲದೆ ಕಲ್ಲು ಎತ್ತಿಹಾಕಿ ಗ್ರಾಮ ಪಂಚಾಯಿತಿ ಸದಸ್ಯನನ್ನು ದುರುಳರು ಭೀಕರವಾಗಿ ಹತ್ಯೆ ಮಾಡಿರುವಂತಹ ಘಟನೆ ವಿಜಯಪುರದ ಹೊರಭಾಗದ ಅಲಿಯಾಬಾದ್ ಬಳಿ ನಡೆದಿದೆ. ತಾಂಗರುನ ದೊಡ್ಡಿ ನಿವಾಸಿ ರಾಜು ಹತ್ಯೆಗೊಳಗಾದ ವ್ಯಕ್ತಿ. ಸದ್ಯ ಸ್ಥಳಕ್ಕೆ ವಿಜಯಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕ್ರೂಷರ್ ವಾಹನಲ್ಲಿ ಮಲಗಿದ್ದ ಬಾಲಕ ಬೆಂಕಿಗೆ ಆಹುತಿಯಾಗಿರುವ ದಾರುಣ ಘಟನೆ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ನಡೆದಿದೆ. ನಿನ್ನೆ ರಾತ್ರಿ ವಾಹದಲ್ಲಿ ಸೊಳ್ಳೆ ಬತ್ತಿ ಹಚ್ಚಿಕೊಂಡು ಮಲಗಿದ್ದ. ಗಾಢ ನಿದ್ದೆಗೆ ಜಾರಿದ್ದಾನೆ. ನೋಡು ನೋಡುತ್ತಿದ್ದ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿದ್ದು, ವಾಹನದಲ್ಲೇ ಬೆಂದು ಹೋಗಿದ್ದಾನೆ. ಸದಾನಂದ ಉಪ್ಪಾರ್ ( 14 ) ಮೃತ ಬಾಲಕ.
ಸೊಳ್ಳೆ ಬತ್ತಿ ಸೀಟ್ಗೆ ತಗುಲು ಹೊಗೆ ತುಂಬಿ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ನಂತರ ಬೆಂಕಿ ಕ್ರೂಷರ್ ವಾಹನಕ್ಕೆ ಹರಡಿ ಬಾಲಕ ಸುಟ್ಟು ಕರಕಲಾಗಿದ್ದಾನೆ. ಇನ್ನೂ ವಾಹನದ ಮೇಲೆ ಮಲಗಿದ್ದ ಅಣ್ಣ ಮೈಲಾರಿ ಉಪ್ಪಾರ್ (16) ಬಚಾವ್ ಆಗಿದ್ದಾನೆ. ಬಿಸಿ ಬಿಸಿ ಅನುಭವದಿಂದ ಹೌಹಾರಿ ಎದ್ದ ಸಹೋದರ ಮೈಲಾರಿ ಕೂಗಾಟ, ಚೀರಾಟ ನಡೆಸಿದ್ದಾನೆ. ಆಗ ಮನೆಯಲ್ಲಿದ್ದವರು ಓಡೋಡಿ ಬಂದು ನೀರು ಹಾಕಿ ಬೆಂಕಿ ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕ ವಾಹನದಲ್ಲೇ ಬೆಂದು ಹೋಗಿದ್ದು, ಕುಟುಂಬಸ್ಥರು ಕಂಗಾಲಾಗಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲೊಂದು ಅಮಾನವೀಯ ಘಟನೆ: ನೋಡಲು ತನ್ನಂತಿಲ್ಲ ಎಂದು ಮಗನನ್ನೇ ಕೊಂದ ತಂದೆ
ಬಾಲಕ ಸದಾನಂದ ಮೂಲತಃ ಹುಬ್ಬಳ್ಳಿ ತಾಲೂಕಿನ ತಾರಿಹಾಳ ಗ್ರಾಮ ನಿವಾಸಿ. ಅಜ್ಜ, ಅಜ್ಜಿ ಮನೆಯಲ್ಲಿ ಇದ್ದರು. ಬೇಸಿಗೆ ಬಿಸಿಲಿನ ಝಳಕ್ಕೆ ವಾಹನದಲ್ಲಿ ಮಲಗಿದ್ದ ಬಾಲಕ ಸೊಳ್ಳೆ ಕಾಟಕ್ಕೆ ಬತ್ತಿ ಹಚ್ಚಿ ಮಲಗಿದ್ದು ಈ ದೊಡ್ಡ ದುರಂತಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಗದಗ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:55 pm, Tue, 14 April 26