ಶಿವಮೊಗ್ಗ: ಲವ್ ಮ್ಯಾರೇಜ್ ದುರಂತ ಅಂತ್ಯ; ವಿಷ ಸೇವಿಸಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ, ಕಾನ್ಸಟೇಬಲ್ ಸೇರಿ ನಾಲ್ವರ ವಿರುದ್ದ ಎಫ್ ಐಆರ್

ಅವಳು ಕರಾವಳಿಯ ಯುವತಿ ಹಾಗೂ ಮಲೆನಾಡಿನ ಯುವಕನ ಜೊತೆ ಪ್ರೇಮ ಚಿಗುರಿತ್ತು. ಅದರಂತೆ ಮೂರು ವರ್ಷದ ಹಿಂದೆ ಇಬ್ಬರು ಮದುವೆ ಮಾಡಿಕೊಂಡು ಸಾಗರ ನಗರದಲ್ಲಿ ಸಂಸಾರ ಮಾಡುತ್ತಿದ್ದರು. ಈ ನಡುವೆ ಇಬ್ಬರ ನಡುವೆ ಮನಸ್ತಾಪ ಬಂದಿದೆ. ಬಳಿಕ ಅನುಮಾನಸ್ಪದ ರೀತಿಯಲ್ಲಿ ವಿವಾಹಿತ ಮಹಿಳೆಯು ಮೃತಪಟ್ಟಿದ್ದಾಳೆ. ವಿವಾಹಿತೆಯ ಸಾವು ಸದ್ಯ ನೂರೆಂಟು ಅನುಮಾನ ಹುಟ್ಟುಹಾಕಿದೆ..

ಶಿವಮೊಗ್ಗ: ಲವ್ ಮ್ಯಾರೇಜ್ ದುರಂತ ಅಂತ್ಯ; ವಿಷ ಸೇವಿಸಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ, ಕಾನ್ಸಟೇಬಲ್ ಸೇರಿ ನಾಲ್ವರ ವಿರುದ್ದ ಎಫ್ ಐಆರ್
ಮೃತ ಮಹಿಳೆ
Follow us
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 07, 2024 | 7:33 PM

ಶಿವಮೊಗ್ಗ, ಜ.07: ಜಿಲ್ಲೆಯ ಸಾಗರ(Sagara) ನಗರದ ಕೆಳದಿ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಮೃತ ಶಾಲಿನಿ (33) ಹಾಗೂ ಜಯರಾಮ್ ದಂಪತಿ ವಾಸಿಸುತ್ತಿದ್ದರು. ಈ ನಡುವೆ ಇಬ್ಬರ ನಡುವೆ ಮನಸ್ತಾಪ ಬಂದಿದ್ದು, ಇದೀಗ ಅನುಮಾನಸ್ಪದ ರೀತಿಯಲ್ಲಿ ವಿವಾಹಿತ ಮಹಿಳೆಯು ಮೃತಪಟ್ಟಿದ್ದಾಳೆ. ಇನ್ನು ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆ(Love marriage)ಯಾಗಿದ್ದ ಇವರು, ಒಂದು ವರ್ಷದ ಹಿಂದೆ ಕಾನೂನು ಬದ್ಧವಾಗಿ ಸಬ್ ರಿಜಿಸ್ಟರ್ ಆಫೀಸ್​ನಲ್ಲಿ ಮದುವೆ ಆಗಿದ್ದರು. ಸಾಗರದಲ್ಲಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದ ಶಾಲನಿಗೆ ಇದು ಎರಡನೇ ಮದುವೆಯಾಗಿತ್ತು.ಪತಿ-ಪತ್ನಿ ಇಬ್ಬರು ಸಾಗರ ನಗರದಲ್ಲಿ ಮನೆ ಮಾಡಿಕೊಂಡಿದ್ದರು.

ಈ ನಡುವೆ ಡಿಸೆಂಬರ್​. 31 ರ ರಾತ್ರಿ ವಿಷಸೇವಿಸಿದ ಶಾಲಿನಿ, ನಂತರ ಕುಂದಾಪುರದಲ್ಲಿರುವ ಅಕ್ಕ ಅಂಬಿಕಾಗೆ ಕಾಲ್ ಮಾಡಿ ತಿಳಿಸಿದ್ದರು. ನನ್ನ ಜೊತೆ ಯಾರು ಇಲ್ಲ, ನನ್ನನ್ನು ಬದುಕಿಸು ಎಂದು ನೋವಿನಿಂದ ಹೇಳಿದ್ದಾರೆ. ಕೂಡಲೇ ಪರಿಚಯಸ್ಥರ ಸಹಾಯದಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕುಟುಂಬಸ್ಥರು ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿ ಆಗದೇ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ:ಹೆಲ್ಮೆಟ್‌ನಿಂದ ಹೊಡೆದು ಗರ್ಭಿಣಿ ಪತ್ನಿಯನ್ನು ಕೊಂದಿದ್ದ ಪತಿ ಬಂಧನ; ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಿದ್ದ

ಕುಟುಂಬಸ್ಥರಿಂದ ಕೊಲೆ ಆರೋಪ

ಈ ಕುರಿತು ಮೃತ ಶಾಲಿನಿ ಅಕ್ಕ ಅಂಬಿಕಾ ಜ. 2 ರಂದು ಸಾಗರ ನಗರ ಠಾಣೆಗೆ ದೂರು ನೀಡಿದ್ದಾರೆ. ಶಾಲನಿ ಮೃತಪಟ್ಟ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿತ್ತು. ಅದರಲ್ಲಿ ಅವಳ ಸಾವಿಗೆ ಗಂಡ ಜಯರಾಮ್ ಮತ್ತು ಆತನ ಅಕ್ಕ ವೀಣಾ, ತಂಗಿ ವಾಣಿ, ಸಂಬಂಧಿ ಹಾಗೂ ಸಾಗರ ಗ್ರಾಮಾಂತರ ಠಾಣೆಯ ಪೊಲೀಸ್ ಪೇದೆ ರವಿ ಎಂಬುವವರು ತನ್ನ ಸಾವಿಗೆ ಕಾರಣ ಎಂದು ಬರೆದಿದ್ದಳು. ಈ ಡೆತ್ ನೋಟ್ ಆಧರಿಸಿ ನಾಲ್ವರ ಮೇಲೆ ದೂರು ನೀಡಿದ ಅಕ್ಕ ಅಂಬಿಕಾ. ಸದ್ಯ ನಾಲ್ವರ ಮೇಲೆ ಎಫ್ ಐಆರ್ ದಾಖಲಾಗಿದೆ. ಆದರೆ, ಪ್ರಕರಣ ದಾಖಲು ಆಗಿ ಐದು ದಿನ ಕಳೆದ್ರೂ ಇನ್ನೂ ಯಾವುದೇ ಆರೋಪಿ ಬಂಧನವಾಗಿಲ್ಲ. ಪ್ರಕರಣದ ತನಿಖೆ ಸರಿಯಾಗಿ ನಡೆಸುತ್ತಿಲ್ಲ. ಇದೊಂದು ಅನುಮಾನಸ್ಪದ ಸಾವು ಆಗಿದೆ. ಮೇಲ್ನೋಟಕ್ಕೆ ಕೊಲೆ ರೀತಿಯಲ್ಲಿ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಸೂಕ್ತ ಕ್ರಮ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಹೊಸ ವರ್ಷದ ಸಂಭ್ರಮಾಚರಣೆಗೆ ಹೊಸ ಬಟ್ಟೆ, ಚಪ್ಪಲಿ ಖರೀದಿ ಮಾಡಿದ್ದ ಶಾಲಿನಿ. ಡಿ.31 ರ ಬೆಳಗ್ಗೆ 9 ಘಂಟೆಗೆ ಮನೆಯಿಂದ ಹೋಗಿದ್ದರು. ಬಳಿಕ ವರದಾ ನದಿ ದಂಡೆಯ ಮೇಲೆ ವಿಷಸೇವಿಸಿ ಬಿದ್ದಿದ್ದಾಳೆ ಎನ್ನುವ ಮಾಹಿತಿ ಬಂದಿದೆ. ಕೂಡಲೇ ಸ್ಥಳೀಯರು ಶಾಲಿನಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಡಿ. 29 ರಂದು ಪತಿಗೆ ತಾನು ಸಾಯುತ್ತೇನೆಂದು ವಿಷದ ಬಾಟಲ್ ಹೆಸರು ಸಮೇತ ಮೆಸೇಜ್ ಮಾಡಿದ್ದಳು. ಆದ್ರೆ, ಪತಿಯು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಈ ನಡುವೆ ಶಾಲನಿ ಬ್ಯಾಗ್​ನಲ್ಲಿ ಡೆತ್ ನೋಟ್ ಕೂಡಾ ಪತ್ತೆಯಾಗಿದೆ. ಅದರಲ್ಲಿ ತನ್ನ ನೋವಿನ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಯಿಟ್ಟಿದ್ದಾಳೆ. ಮಂದಾರ್ತಿ ದುರ್ಗಾಪರಮೇಶ್ವರಿಗೆ ಬುಕ್ ನಲ್ಲಿ ಪತ್ರ ಬರೆಯುತ್ತಿದ್ದಳು. ಆ ದೇವರಿಗೆ ಬರೆದ ಪತ್ರದಲ್ಲಿ ತನ್ನ ಪತಿ ಮತ್ತು ಆತನ ಕುಟುಂಬಸ್ಥ ಕೊಟ್ಟಿರುವ ಚಿತ್ರಹಿಂಸೆ ಕೊಟ್ಟಿರುವುದನ್ನು ಪ್ರಸ್ತಾಪ ಮಾಡಿದ್ದಾಳೆ.

ಇನ್ನು ಶಾಲಿನಿಯ ಎರಡು ಸ್ಮಾರ್ಟ್ ಫೋನ್ ಮಿಸ್ಸಿಂಗ್ ಆಗಿದೆ.  ಹೀಗಾಗಿ ಶಾಲನಿ ಕುಟುಂಬಸ್ಥರು ಇದೊಂದು ಕೊಲೆ ಎಂದಿದ್ದಾರೆ. ಪ್ರಕರಣದ ಮೇಲೆ ಪ್ರಭಾವ ಬೀರಿ ಗಂಡನ ಮನೆಯವರು ಪ್ರಕರಣವನ್ನು ಮುಚ್ಚಿ ಹಾಕುವುದಕ್ಕೆ ಯತ್ನಿಸುತ್ತಿದ್ದಾರೆ ಎನ್ನುವುದು ಮೃತಳ ಕುಟುಂಬಸ್ಥರ ಆರೋಪವಾಗಿದೆ. ವಿವಾಹಿತೆ ಮಹಿಳೆಯು ಮೃತಪಟ್ಟು ಆರು ದಿನಗಳು ಕಳೆದಿವೆ. ಪತಿ ಸೇರಿ ನಾಲ್ವರ ವಿರುದ್ದ ಎಫ್ ಐಆರ್ ದಾಖಲು ಆಗಿದೆ. ಆದ್ರೆ, ಪೊಲೀಸರು ಇಲ್ಲಿಯ ವರೆಗೂ ಯಾರನ್ನು ಬಂಧಿಸಿಲ್ಲ, ಸೂಕ್ತ ತನಿಖೆ ಮಾಡಿಲ್ಲ. ಶಾಲಿನಿ ಸಾವಿನ ಹಿಂದಿನ ರಹಸ್ಯವನ್ನು ಸಾಗರ ನಗರ ಪೊಲೀಸರು ತನಿಖೆಯಿಂದ ಬಯಲು ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ